ಕೊರೊನಾ ಕಾಲದಲ್ಲಿ ರೈತರಿಗೆ ಅಂಚೆ ಇಲಾಖೆ ಸಾಥ್​​; ಕೋಲಾರದ ಮಾವಿನ ಹಣ್ಣನ್ನು ಆನ್​ಲೈನ್ ಮೂಲಕ ಕೊಳ್ಳಲು ಅವಕಾಶ

ತಮ್ಮ ಜಮೀನುಗಳಲ್ಲಿ ಬೆಳೆದಿರುವ ಮಾವಿನ ತಳಿಗಳು, ಬೆಲೆ ಮತ್ತು ಮೊಬೈಲ್‌ ಸಂಖ್ಯೆಯ ವಿವರವನ್ನು ವೆಬ್‌ಸೈಟ್‌ನಲ್ಲಿ ದಾಖಲಿಸಿದ್ದಾರೆ. ಮಾವು ಪ್ರಿಯರು ಈ ವೆಬ್‌ಸೈಟ್‌ ವಿಳಾಸಕ್ಕೆ ಲಾಗಿನ್‌ ಆಗಿ ತಮ್ಮ ಮನೆಯ ವಿಳಾಸ ನಮೂದಿಸಿ ತಮ್ಮಿಷ್ಟದ ಹಣ್ಣಿಗೆ ಬೇಡಿಕೆ ಸಲ್ಲಿಸಬಹುದು.

ಕೊರೊನಾ ಕಾಲದಲ್ಲಿ ರೈತರಿಗೆ ಅಂಚೆ ಇಲಾಖೆ ಸಾಥ್​​; ಕೋಲಾರದ ಮಾವಿನ ಹಣ್ಣನ್ನು ಆನ್​ಲೈನ್ ಮೂಲಕ ಕೊಳ್ಳಲು ಅವಕಾಶ
ಅಂಚೆ ಇಲಾಖೆ ಜತೆಗೆ ಕೆಎಸ್‌ಎಂಡಿಎಂಸಿ ಒಪ್ಪಂದ
Follow us
TV9 Web
| Updated By: preethi shettigar

Updated on:Jun 11, 2021 | 9:23 AM

ಕೋಲಾರ: ಲಾಕ್​ಡೌನ್ ಕಾಲದಲ್ಲಿ ಮಾವಿನ ಬೆಳೆಗಾರರು ನಷ್ಟ ಅನುಭವಿಸಬಾರದು ಎಂಬ ಕಾರಣಕ್ಕೆ ಕೋಲಾರ ಜಿಲ್ಲಾಡಳಿತ ಶ್ರೀನಿವಾಸಪುರದಲ್ಲಿ ಮಾವಿನ ಮಾರುಕಟ್ಟೆ ಆರಂಭಿಸಲು ಅವಕಾಶ ಮಾಡಿಕೊಟ್ಟಿದೆ. ಜತೆಗೆ ಮಾವು ವಹಿವಾಟು ಕೂಡ ಈಗ ಆರಂಭವಾಗಿದೆ. ಈ ಮಧ್ಯೆ ಕೊವಿಡ್​ ಹಿನ್ನೆಲೆಯಲ್ಲಿ ಮಾವು ಬೆಳೆಗಾರರಿಗೆ ಹಾಗೂ ಗ್ರಾಹಕರಿಗೆ ತಮಗಿಷ್ಟ ಬಂದಿರುವ ಗುಣಮಟ್ಟದ ಮಾವಿನ ಹಣ್ಣುಗಳನ್ನು ಖರೀದಿ ಮಾಡಲು ಆನ್​ಲೈನ್​ ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ವೆಬ್​ಸೈಟ್​ ಜತೆಗೆ ಅಂಚೆ ಇಲಾಖೆ ಆನ್​ಲೈನ್​ ವ್ಯಾಪಾರ ವಹಿವಾಟು ಮಾಡಲು ಅನುವು ಮಾಡಿಕೊಟ್ಟಿದೆ.

ಮಾವು ಪ್ರಿಯರಿಗೆ ಅಡ್ಡಿಯಾಗುತ್ತಿಲ್ಲ ಲಾಕ್​ಡೌನ್​ ಪ್ರತಿ ವರ್ಷ ಮಾವಿನ ಋತು ಬಂದಾಗ ಕೆಜಿಗಟ್ಟಲೇ ಹಣ್ಣು ಖರೀದಿಸಿ ಸವಿಯುವ ಮಂದಿಗೆ ಈ ಬಾರಿ ಕೊವಿಡ್‌ ಅಡ್ಡಿಯಾಗಿದೆ. ಲಾಕ್‌ಡೌನ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಜನ ಮನೆಯಿಂದ ಹೊರ ಬಂದು ಮಾವು ಖರೀದಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು (ಕೆಎಸ್‌ಎಂಡಿಎಂಸಿ) ಅಂಚೆ ಇಲಾಖೆ ನೆರವಿನೊಂದಿಗೆ ಜನರ ಮನೆ ಬಾಗಿಲಿಗೆ ಇಷ್ಟದ ಮಾವಿನ ಹಣ್ಣು ತಲುಪಿಸಲು ಮುಂದಾಗಿದೆ. ಹಿಂದಿನ ವರ್ಷ ಮೊದಲ ಲಾಕ್‌ಡೌನ್‌ ಸಂದರ್ಭದಲ್ಲೂ ಅಂಚೆ ಮೂಲಕ ಜನರಿಗೆ ಮಾವಿನ ಹಣ್ಣು ರವಾನಿಸಿ ಯಶಸ್ಸು ಕಂಡಿದ್ದ ಕೆಎಸ್‌ಎಂಡಿಎಂಸಿ ಮತ್ತೊಮ್ಮೆ ಆ ಪ್ರಯತ್ನ ಆರಂಭಿಸಿದೆ.

ಮಾವು ಮಾರುಕಟ್ಟೆ ಬಿಟ್ಟು ಆನ್​ಲೈನ್​ ಮಾರುಕಟ್ಟೆ ಮೊರೆ ಹೋದ ಮಾವು ಬೆಳೆಗಾರರು ಕೋಲಾರ ಜಿಲ್ಲೆಯು ಮಾವು ಬೆಳೆಗೆ ರಾಜ್ಯದಲ್ಲೇ ಹೆಸರುವಾಸಿಯಾಗಿದ್ದು, ಶ್ರೀನಿವಾಸಪುರ ತಾಲ್ಲೂಕು ಮಾವಿನ ನಗರಿ ಎಂದೇ ಖ್ಯಾತಿ ಪಡೆದಿದೆ. ಜಿಲ್ಲೆಯಲ್ಲಿ ಸುಮಾರು 48 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆದಿದ್ದು, ರಸಪುರಿ, ಆಲ್ಫಾನ್ಸೊ, ಬಂಗನಪಲ್ಲಿ, ಕೇಸರ್, ಸೆಂಧೂರ, ದಶಹರಿ, ಮಲ್ಲಿಕಾ, ತೋತಾಪುರಿ, ರಾಜ್‌ಗಿರಾ, ಮಲಗೋವಾ, ನೀಲಂ, ಶುಗರ್ ಬೇಬಿ, ಜಿಲ್ಲೆಯಲ್ಲಿ ಬೆಳೆಯುವ ಪ್ರಮುಖ ಮಾವಿನ ತಳಿಗಳಿವೆ.

ಪ್ರಸಕ್ತ ಹಂಗಾಮಿನಲ್ಲಿ ಸುಮಾರು 2.75 ಲಕ್ಷ ಟನ್‌ ಮಾವಿನ ಫಸಲು ನಿರೀಕ್ಷಿಸಲಾಗಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ಈಗಾಗಲೇ ಮಾವು ವಹಿವಾಟು ಆರಂಭವಾಗಿದೆ. ಆದರೆ, ಕೊವಿಡ್‌ ಮತ್ತು ಲಾಕ್‌ಡೌನ್‌ ಕಾರಣಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ವಹಿವಾಟು ನಡೆಯುತ್ತಿಲ್ಲ. ಹೀಗಾಗಿ ಮಾವಿನ ಬೆಲೆ ಇಳಿಕೆಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಈಗ ಜಾರಿಗೆ ತಂದ ಈ ವ್ಯವಸ್ಥೆ ಕೊವಿಡ್‌ ಸಂಕಷ್ಟದಲ್ಲಿ ಆನ್‌ಲೈನ್‌ ಮೂಲಕ ನಡೆಯುವ ಮಾವು ವಹಿವಾಟು ರೈತರಿಗೆ ಲಾಭದಾಯಕವಾಗಿದೆ. ಮತ್ತೊಂದೆಡೆ ಗ್ರಾಹಕರಿಗೂ ಅನುಕೂಲವಾಗಿದೆ.

ಅಂಚೆ ಇಲಾಖೆ ಜತೆಗೆ ಕೆಎಸ್‌ಎಂಡಿಎಂಸಿ ಒಪ್ಪಂದ ಕೆಎಸ್‌ಎಂಡಿಎಂಸಿ ಜತೆ ಒಪ್ಪಂದ ಮಾಡಿಕೊಂಡಿರುವ ಅಂಚೆ ಇಲಾಖೆಯು ವಾರದಲ್ಲಿ 2 ದಿನ (ಮಂಗಳವಾರ ಮತ್ತು ಶುಕ್ರವಾರ) ಪಾರ್ಸೆಲ್‌ ಸೇವೆ ಮೂಲಕ ಜನರಿಗೆ ಮಾವಿನ ಹಣ್ಣು ತಲುಪಿಸಲು ಸಿಬ್ಬಂದಿ ವ್ಯವಸ್ಥೆ ಮಾಡಿಕೊಂಡಿದೆ. ಈ ಸೇವೆ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿದೆ. ಅಂಚೆ ಸೇವೆ ಮೂಲಕ ಮಾವು ಮಾರಾಟ ಮಾಡಲು ಜಿಲ್ಲೆಯ 100ಕ್ಕೂ ಹೆಚ್ಚು ರೈತರು ಕೆಎಸ್‌ಎಂಡಿಎಂಸಿಯ www.karsirimangoes.karnataka.gov.in ವೆಬ್‌ಸೈಟ್‌ ವಿಳಾಸದಲ್ಲಿ ಹೆಸರು ನೋಂದಾಯಿಸಿದ್ದಾರೆ.

ಗ್ರಾಹಕರು ಹೇಗೆ ಆನ್​ಲೈನ್​ ಖರೀದಿ ಮಾಡುತ್ತಾರೆ ? ಈ ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿರುವ ಮಾವಿನ ತಳಿಗಳು, ಬೆಲೆ ಮತ್ತು ಮೊಬೈಲ್‌ ಸಂಖ್ಯೆಯ ವಿವರವನ್ನು ವೆಬ್‌ಸೈಟ್‌ನಲ್ಲಿ ದಾಖಲಿಸಿದ್ದಾರೆ. ಮಾವು ಪ್ರಿಯರು ಈ ವೆಬ್‌ಸೈಟ್‌ ವಿಳಾಸಕ್ಕೆ ಲಾಗಿನ್‌ ಆಗಿ ತಮ್ಮ ಮನೆಯ ವಿಳಾಸ ನಮೂದಿಸಿ ತಮ್ಮಿಷ್ಟದ ಹಣ್ಣಿಗೆ ಬೇಡಿಕೆ ಸಲ್ಲಿಸಬಹುದು. ಕನಿಷ್ಠ 3 ಕೆಜಿ ಮಾವು ಖರೀದಿಸಬೇಕಿದ್ದು, ಒಂದೊಂದು ತಳಿಯ ಹಣ್ಣಿನ ಬೆಲೆ ಬೇರೆ ಬೇರೆಯಾಗಿದೆ.

ಗ್ರಾಹಕರು ಆಯ್ಕೆ ಮಾಡುವ ತಳಿ ಮತ್ತು ತೂಕದ ಪ್ರಮಾಣದ ಆಧಾರದಲ್ಲಿ ಬೆಲೆ ನಿಗದಿಯಾಗುತ್ತದೆ. ಇದರಲ್ಲಿ ಪಾರ್ಸಲ್‌ ಸೇವಾ ಶುಲ್ಕವೂ ಸೇರಿರುತ್ತದೆ. ಗ್ರಾಹಕರು ಆನ್‌ಲೈನ್‌ನಲ್ಲೇ ಹಣ ಪಾವತಿಸಬೇಕು. ಗ್ರಾಹಕರು ತಮ್ಮ ಇಷ್ಟದ ಹಣ್ಣು ಆಯ್ಕೆ ಮಾಡಿದಾಗ ಅದರ ದರ ಮತ್ತು ಅಂಚೆ ಸೇವಾ ಶುಲ್ಕದ ಮಾಹಿತಿ ಲಭ್ಯವಾಗುತ್ತದೆ. ಹೀಗೆ ಗ್ರಾಹಕರು ಆಯ್ಕೆ ಮಾಡಿದ ಹಣ್ಣಿನ ತಳಿ, ತೂಕ ಮತ್ತು ಮನೆ ವಿಳಾಸದ ವಿವರವು ಇಮೇಲ್‌ ಮೂಲಕ ಅಂಚೆ ಇಲಾಖೆ ಹಾಗೂ ಸಂಬಂಧಪಟ್ಟ ರೈತರಿಗೆ ರವಾನೆಯಾಗುತ್ತದೆ.

ಬಳಿಕ ರೈತರು ಮಾವಿನ ಹಣ್ಣುಗಳನ್ನು ಪ್ಯಾಕ್‌ ಮಾಡಿ ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಗೆ ರವಾನಿಸುತ್ತಾರೆ. ಅಲ್ಲಿಂದ ಅಂಚೆಯಣ್ಣನ ಮೂಲಕ ಹಣ್ಣುಗಳು ಗ್ರಾಹಕರ ಕೈ ಸೇರುತ್ತೇವೆ. ಹೀಗೆ ಕೋಲಾರ ಜಿಲ್ಲೆಯ ಮಾವು ಬೆಳೆಗಾರರ ಹಿತದೃಷ್ಟಿಯಿಂದ ಕೆಎಸ್​ಎಂಡಿಎಂಸಿ ಅಂಚೆ ಇಲಾಖೆ ಜೊತೆಗೆ ಒಪ್ಪಂದ ಮಾಡಿಕೊಂಡು ಮಾಡಿದ ಆನ್​ಲೈನ್​ ವಹಿವಾಟು ಮಾವು ಬೆಳೆಗಾರರಿಗೆ ಸಾಕಷ್ಟು ಅನುಕೂವಾಗಿದೆ ಎಂದು ಕೋಲಾರ ತೋಟಗಾರಿಕಾ ಉಪನಿರ್ದೇಶಕಿ ಗಾಯತ್ರಿ ತಿಳಿಸಿದ್ದಾರೆ.

ಇದನ್ನೂ ಓದಿ:

Noor Jahan Mango: ಒಂದು ಮಾವಿನ ಹಣ್ಣಿಗೆ 500ರಿಂದ ಸಾವಿರ ರೂಪಾಯಿ! ಅಬ್ಬಬ್ಬಾ, ಎಲ್ಲಿ ಸಿಗುತ್ತದೆ ಈ ಮಾವು?

ಕೊರೊನಾ ಆತಂಕದ ನಡುವೆಯೂ ವ್ಯಾಪಾರಕ್ಕೆ ಅವಕಾಶ; ಕೋಲಾರದ ವಿಶ್ವ ಪ್ರಸಿದ್ಧ ಮಾವಿನ ಮಾರುಕಟ್ಟೆ ಆರಂಭ

Published On - 8:31 am, Fri, 11 June 21

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ