AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Noor Jahan Mango: ಒಂದು ಮಾವಿನ ಹಣ್ಣಿಗೆ 500ರಿಂದ ಸಾವಿರ ರೂಪಾಯಿ! ಅಬ್ಬಬ್ಬಾ, ಎಲ್ಲಿ ಸಿಗುತ್ತದೆ ಈ ಮಾವು?

ಪಕ್ಕದ ರಾಜ್ಯ ಗುಜರಾತ್​ನಿಂದಲೂ ಗ್ರಾಹಕರು ಮುಂಗಡ ಬುಕಿಂಗ್ ಮಾಡಿದ್ದಾರೆ ಎನ್ನುತ್ತಾರವರು. ಅಂದಹಾಗೆ ಒಂದು ನೂರ್​ಜಹಾನ್ ಮಾವಿನ ಹಣ್ಣು 2ರಿಂದ 3.5ಕೆಜಿಯವರೆಗೂ ತೂಗುತ್ತದಂತೆ. 2.75 ಕೆಜಿ ತೂಕ ಬಂದಿದ್ದ ಒಂದು ಮಾವಿನಹಣ್ಣಿಗೆ ₹1200ವರೆಗೂ ಪಾವತಿಸಿ ಗಿರಾಕಿಗಳು ಖರೀದಿಸಿದ್ದರು.

Noor Jahan Mango: ಒಂದು ಮಾವಿನ ಹಣ್ಣಿಗೆ 500ರಿಂದ ಸಾವಿರ ರೂಪಾಯಿ! ಅಬ್ಬಬ್ಬಾ, ಎಲ್ಲಿ ಸಿಗುತ್ತದೆ ಈ ಮಾವು?
ಸಾಂಕೇತಿಕ ಚಿತ್ರ
TV9 Web
| Edited By: |

Updated on: Jun 06, 2021 | 9:45 PM

Share

ಇಂದೋರ್: ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಏನೇ ಮೂಗಿನ ಮೇಲೆ ಕುತೂಹಲದ ಬೆರಳಿಡುವಂತೆ ಮಾಡುವ ಈ ಸುದ್ದಿಯಂತೂ ಸತ್ಯ. ಮಧ್ಯಪ್ರದೇಶದ ಅಲಿರಾಜ್​ಪುರ್ ಜಿಲ್ಲೆಯ ಈ ತಳಿಯ ಒಂದು ಮಾವಿನ ಹಣ್ಣಿಗೆ ಬರೋಬ್ಬರಿ 500ರಿಂದ 1,000 ಸಾವಿರ. ಅಬ್ಬಾ! ಅನಿಸಿತಾ? ಹೌದು, ನೂರ್​ಜಹಾನ್ ತಳಿಯ ಈ ಮಾವಿನ ಹಣ್ಣಿಗೆ ಇಷ್ಟೊಂದು ಬೆಲೆ.

ನೂರ್​ಜಹಾನ್ ತಳಿ ಅಫ್ಘಾನಿಸ್ತಾನ ಮೂಲದ್ದೆಂದೂ, ಅಲಿರಾಜ್​ಪುರ್ ಜಿಲ್ಲೆಯ ಕಾಥಿವಾಡ ಪ್ರಾಂತ್ಯದಲ್ಲೊಂದೇ ಬೆಳೆಯಲಾಗುವುದು ಎಂದು ತಿಳಿಸುತ್ತಾರೆ ಇಲ್ಲಿನ ರೈತರು. ಹಿಂದಿನ ವರ್ಷಕ್ಕಿಂತ ಈ ವರ್ಷ ಇನ್ನೂ ತ್ತಮ ಬೆಳೆ ಕೈಗೆ ದೊರೆತಿದೆ. ಆದರೂ ಬೆಲೆ ತುಂಬಾ ಚೆನ್ನಾಗಿದೆ ನೂರ್​ಜಹಾನ್ ಮಾವನ್ನು ಬೆಳೆದ ರೈತರು ತಿಳಿಸಿದ್ದಾರೆ. ಓರ್ವ ರೈತನ ಜಮೀನಿನಲ್ಲಿ ಇರುವುದು ಕೇವಲ ಮೂರು ಮಾವಿನ ಮರವಷ್ಟೇ. ಮೂರು ಮರಗಳಿಂದ ಒಟ್ಟು 250 ಮಾವಿನ ಕಾಯಿಗಳು. ಆದರೆ ಒಂದು ಮಾವಿನ ಕಾಯಿಗೆ 500ರಿಂದ ಸಾವಿರದವರೆಗೂ ಬೆಲೆಯಿದೆ. ಈಗಾಗಲೇ ಎಲ್ಲಾ ಕಾಯಿಗಳನ್ನೂ ಗ್ರಾಹಕರು ಮುಂಗಡವಾಗಿ ಕಾಯ್ದಿರಿಸಿದ್ದಾರೆ.ಹೀಗಾಗಿ ಈ ವರ್ಷ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಶಿವ್ರಾನ್ ಸಿಂಗ್ ಜಾಧವ್.

ಪಕ್ಕದ ರಾಜ್ಯ ಗುಜರಾತ್​ನಿಂದಲೂ ಗ್ರಾಹಕರು ಮುಂಗಡ ಬುಕಿಂಗ್ ಮಾಡಿದ್ದಾರೆ ಎನ್ನುತ್ತಾರವರು. ಅಂದಹಾಗೆ ಒಂದು ನೂರ್​ಜಹಾನ್ ಮಾವಿನ ಹಣ್ಣು 2ರಿಂದ 3.5ಕೆಜಿಯವರೆಗೂ ತೂಗುತ್ತದಂತೆ. 2.75 ಕೆಜಿ ತೂಕ ಬಂದಿದ್ದ ಒಂದು ಮಾವಿನಹಣ್ಣಿಗೆ ₹1200ವರೆಗೂ ಪಾವತಿಸಿ ಗಿರಾಕಿಗಳು ಖರೀದಿಸಿದ್ದರು.

ಹೀಗೆ ಎಲ್ಲರಿಗೂ ಇಷ್ಟವಾದ ಮಾವಿನಲ್ಲೂ ಬಹು ವೈವಿಧ್ಯತೆಯನ್ನು ಕಾಣಬಹುದು. ಒಂದಕ್ಕಿಮತ ಒಂದು ಸಿಹಿ, ಒಂದಕ್ಕಿಂತ ಇನ್ನೊಂದು ರುಚಿ ಎಂದು ನಾವು ಇಲ್ಲಿಂದಲೇ ನೂರ್​ಜಹಾನ್ ತಳಿಯ ಮಾವಿನ ಹಣ್ಣಿನ ಕನಸು ಕಾಣಬಹುದು. ಕೊವಿಡ್ ಪಿಡುಗು ಸಂಪೂರ್ಣವಾಗಿ ಕಡಿಮೆಯಾದ ನಂತರ ಮಧ್ಯ ಪ್ರದೇಶದ ಪ್ರವಾಸಕ್ಕೆ ತೆರಳಿ, ಅದರಲ್ಲೂ ಮಾವಿನ ಹಣ್ಣಿನ ಈ ಸೀಸನ್​ನಲ್ಲೇ ಪ್ರವಾಸ ಮಾಡಿ ನೂರ್​ಜಹಾನ್ ಮಾವಿನಹಣ್ಣನ್ನು ಸವಿಯಬಹುದು.

ಇದನ್ನೂ ಓದಿ: ನಾಯಕತ್ವ ಬದಲಾವಣೆ ಚರ್ಚೆಗೆ ಇತಿಶ್ರೀ ಹಾಡಲೇಬೇಕು: ಸಿಎಂ ಯಡಿಯೂರಪ್ಪ ಆಪ್ತರಿಂದ ನಿರ್ಧಾರ

Shah Rukh Khan: ಈ ಶಾರುಖ್​ ಖಾನ್​ ಅಸಲಿಯೋ ನಕಲಿಯೋ? ಫ್ಯಾನ್ಸ್​ಗೆ ದಂಗು ಬಡಿಸಿದ ಫೋಟೋ, ವಿಡಿಯೋಗಳು ವೈರಲ್​

(Noor Jahan Mango from Madhya Pradesh rate up to 1 thousand for on one piece)

‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ