Viral Video: ಇದ್ದಕ್ಕಿದ್ದಂತೇ ಕಾಣಿಸಿಕೊಂಡ ದೈತ್ಯಾಕಾರದ ಗುಂಡಿ; ಏನಿರಬಹುದು ಇದರ ಹಿಂದಿನ ಕಥೆ?

Viral Video: ಇದ್ದಕ್ಕಿದ್ದಂತೇ ಕಾಣಿಸಿಕೊಂಡ ದೈತ್ಯಾಕಾರದ ಗುಂಡಿ; ಏನಿರಬಹುದು ಇದರ ಹಿಂದಿನ ಕಥೆ?
ಇದ್ದಕ್ಕಿದ್ದಂತೇ ಕಾಣಿಸಿಕೊಂಡ ದೈತ್ಯಾಕಾರದ ಗುಂಡಿ

ಶನಿವಾರ ನೋಡಿದಾಗ ಸಿಂಕ್​ಹೋಲ್​ ತುಂಬಾ ಚಿಕ್ಕದಾಗಿತ್ತು. ಆದರೆ ಕ್ರಮೇಣವಾಗಿ 70,000 ಚದರ ಅಡಿಯಷ್ಟು ವಿಸ್ತಾರಗೊಂಡಿದೆ. ಆದರೆ ಅದೃಷ್ಟವಶಾತ್​ ಯಾರಿಗೂ ಕೂಡಾ ಹಾನಿಯಾಗಿಲ್ಲ.

TV9kannada Web Team

| Edited By: shruti hegde

Jun 06, 2021 | 4:38 PM

ಕೃಷಿಭೂಮಿಯೊಂದರಲ್ಲಿ ಇದ್ದಕ್ಕಿದ್ದಂತೆಯೇ ದೈತ್ಯಾಕಾರದ ಗುಂಡಿಯೊಂದು ಕಂಡು ಬಂದಿದೆ. ಪ್ರಾರಂಭದಲ್ಲಿ ಚಿಕ್ಕದಾಗಿದ್ದ ಗುಂಡಿ ಸಮಯ ಕಳೆಯುತ್ತಿದ್ದಂತೆಯೇ ದೈತ್ಯಾಕಾರದಲ್ಲಿ ವಿಸ್ತಾರಗೊಂಡಿದೆ. ಅಕ್ಕ-ಪಕ್ಕದಲ್ಲಿರುವ ಮನೆಗಳನ್ನೂ ನುಂಗುವಷ್ಟರ ಮಟ್ಟಿಗೆ ಗುಂಡಿ ವಿಸ್ತಾರಗೊಳ್ಳುತ್ತಲೇ ಇದೆ. ಒಂದು ಕ್ಷಣ ವಿಡಿಯೋ ನೋಡುತ್ತಿದ್ದಂತೆಯೇ ಆಶ್ಚರ್ಯದ ಜೊತೆಗೆ ಮೈ ಜುಂ ಅನ್ನುವುದಂತೂ ಸತ್ಯ.

ಮೆಕ್ಸಿಕೊದ ಪ್ಯೂಬ್ಲಾ ರಾಜ್ಯದ ಕೃಷಿಭೂಮಿಯಲ್ಲಿ ಸುಮಾರು 300 ಅಡಿ ವಿಸ್ತಾರದ ಬೃಹತ್​ ಸಿಂಕ್​ಹೋಲ್​ ಕಂಡು ಬಂದಿದೆ. ಅಧಿಕಾರಿಗಳು ಸ್ಥಳದ ಪರಿಶೀಲನೆಗೆ ಬಂದಿದ್ದು ಈ ಸಿಂಕ್​ಹೋಲ್​ ಸುಮಾರು 60 ಅಡಿ ಆಳವಾಗಿದೆ ಎಂದು ಪರಿಶೀಲಿಸಿದ್ದಾರೆ. ಯಾರೂ ಕೂಡಾ ಸಿಂಕ್​ಹೋಲ್​ನ ಹತ್ತಿರಕ್ಕೆ ಹೋಗದಂತೆ ಸೂಚನೆ ನೀಡಿದ್ದಾರೆ.

ಶನಿವಾರ ನೋಡಿದಾಗ ಸಿಂಕ್​ಹೋಲ್​ ತುಂಬಾ ಚಿಕ್ಕದಾಗಿತ್ತು. ಆದರೆ ಕ್ರಮೇಣವಾಗಿ 70,000 ಚದರ ಅಡಿಯಷ್ಟು ವಿಸ್ತಾರಗೊಂಡಿದೆ. ಆದರೆ ಅದೃಷ್ಟವಶಾತ್​ ಯಾರಿಗೂ ಕೂಡಾ ಹಾನಿಯಾಗಿಲ್ಲ. ಇದೀಗ ಆ ಗುಂಡಿ ಅಂತರ್ಜಲದಿಂದ ಆವೃತವಾಗಿದೆ. ಸುತ್ತಲಿನ ಜನರನ್ನು ಸುರಕ್ಷಿತವಾಗಿರಿಸಲು ಬೇರೆ ಸ್ಥಳಗೆ ಕರೆದೊಯ್ಯಲಾಗಿದೆ ಎಂದು ನ್ಯೂಯಾರ್ಕ್​ ಪೋಸ್ಟ್​ ವರದಿ ಮಾಡಿದೆ.

ಸಿಂಕ್​ಹೋಲ್​ ಕಾಣಿಸಿಕೊಳ್ಳುವ ಮೊದಲು ಜೋರಾದ ಗುಡುಗಿನ ಶಬ್ದ ಕೇಳಿದೆ. ಸುಮಾರು 6 ಗಂಟೆಯ ವೇಳೆಗೆ ಗುಡುಗಿನ ಶಬ್ದ ಕೇಳಿದ್ದೇವೆ. ಏನಾಯಿತು ಎಂದು ಹೊರಗಡೆ ಬಂದಾಕ್ಷಣ ಸಿಂಕ್​ಹೋಲ್​ ಕಾಣಿಸಿಕೊಂಡಿದೆ. ಸಮಯವಾಗುತ್ತಿದ್ದಂತೆ ವಿಸ್ತರಿಸುತ್ತಾ ದೊಡ್ಡದಾಗಿದೆ. ಇಂದರಿಂದ ಒಂದು ಕ್ಷಣ ಭಯಭೀತರಾದೆವು ಎಂದು ಸ್ಥಳೀಯರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: 

Viral Video: ಕಾಲಡಿ ಸಿಕ್ಕಿ ನರಳಾಡುತ್ತಿದ್ದ ಜಿರಳೆಯನ್ನು ಆಸ್ಪತ್ರೆಗೆ ಕರೆದೊಯ್ದ ವ್ಯಕ್ತಿ! ಮುಂದೇನಾಯ್ತು?

Viral Video: ಪಾನಿಪುರಿ ಮಹಿಮೆಯೆ ಹೀಗೆ.. ನೋಡಿದಾಕ್ಷಣ ಹಸುಗಳ ಬಾಯಲ್ಲೂ ನೀರು! ವಿಡಿಯೋ ನೋಡಿ

Follow us on

Related Stories

Most Read Stories

Click on your DTH Provider to Add TV9 Kannada