Viral Video: ಪಾನಿಪುರಿ ಮಹಿಮೆಯೆ ಹೀಗೆ.. ನೋಡಿದಾಕ್ಷಣ ಹಸುಗಳ ಬಾಯಲ್ಲೂ ನೀರು! ವಿಡಿಯೋ ನೋಡಿ
ಹಸು ಮತ್ತು ಕರು ಪಾನಿ ಪುರಿ ಸವಿಯುತ್ತಾ ನಿಂತಿರುವುದು ನಿಮ್ಮ ಬಾಯಲ್ಲೂ ನೀರು ತರಿಸುತ್ತಿರಬಹುದು.. ಮಸಾಲೆಯುಕ್ತ ಪಾನಿಪುರಿ ತಿನ್ನುತ್ತಿರುವ ವಿಡಿಯೋ ನೋಡಿ ನೆಟ್ಟಿಗರು ‘ಮಿಸ್ ಯು ಪಾನಿಪುರಿ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಆಹಾ.. ಪಾನಿಪುರಿ.. ಹೆಸರು ಕೇಳುತ್ತಿದ್ದಂತೆಯೇ ಬಾಯಲ್ಲಿ ನೀರು. ಲಾಕ್ಡೌನ್ ಜಾರಿಯಾದಾಗಿನಿಂದ ಪಾನಿಪುರಿ ಆಸೆ ಕನಸಾಗಿಯೇ ಉಳಿದಿದೆ. ರಸ್ತೆಯ ಪಕ್ಕದಲ್ಲಿ ನಿಂತು ಒಂದಾದ ಮೇಲೊಂದು ಪಾನಿಪುರಿ ಇಳಿಸುತ್ತಿದ್ದರೆ ಬೇರೆ ಲೋಕವೇ ಬೇಡ. ಅದೆಷ್ಟೋ ಜನರು ಪಾನಿಪುರಿಯನ್ನು ಮಿಸ್ ಮಾಡಿಕೊಳ್ಳುತ್ತಿರಬಹುದು. ಕೇವಲ ಮನುಷ್ಯರೊಂದೇ ಅಲ್ಲ ಹಸು ಮತ್ತು ಕರು ಕೂಡಾ ಪೈಪೋಟಿಯಲ್ಲಿ ಪಾನಿಪುರಿ ರುಚಿ ಸವಿಯುತ್ತಿದೆ. ವಿಡಿಯೋ ಇದೆ ನೋಡಿ ಒಮ್ಮೆ.. ಹಸು ಕೂಡಾ ಅಂಗಡಿಗೆ ಪಾನಿ ಪುರಿ ಸವಿಯಲು ಬಂದಿದೆ.
ವಡಾಪಾವ್, ಪಾವ್ಬಾಜಿ, ಪಾನಿಪುರಿ, ಮಸಾಲ್ಪುರಿ ಹೆಸರು ಕೇಳುತ್ತಿದ್ದಂತೆಯೇ ಬಾಯಲ್ಲಿ ನೀರುರುತ್ತಿರಬೇಕಲ್ವೇ? ಸಾಮಾನ್ಯವಾಗಿ ಇತ್ತೀಚೆಗೆ ಪಾನಿಪುರಿ ಸವಿಯುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಕಡಿಮೆಯಾಗಿ ಬಿಟ್ಟಿದೆ. ಈ ಮಧ್ಯೆ, ಹಸು ಮತ್ತು ಕರು ಪಾನಿ ಪುರಿ ಸವಿಯುತ್ತಾ ನಿಂತಿರುವುದು ನಿಮ್ಮ ಬಾಯಲ್ಲೂ ನೀರು ತರಿಸುತ್ತಿರಬಹುದು.. ಮಸಾಲೆಯುಕ್ತ ಪಾನಿಪುರಿ ತಿನ್ನುತ್ತಿರುವ ವಿಡಿಯೋ ನೋಡಿ ನೆಟ್ಟಿಗರು ‘ಮಿಸ್ ಯು ಪಾನಿಪುರಿ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಹಾರ್ಟ್ ಇಮೋಜಿ ಕಳುಹಿಸುವ ಮೂಲಕ ಪ್ರೀತಿಯನ್ನು ಹೊರಹಾಕಿದ್ದಾರೆ. ಪಾನಿಪುರಿ ಸಿಗದ ಸಮಯದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ ಈ ವಿಡಿಯೋ.
ವಿಡಿಯೋದಲ್ಲಿ ನೀವು ಗಮನಿಸುವಂತೆ, ಅಂಗಡಿಯವನು ಒಂದಾದ ಮೇಲೊಂದು ಪಾನಿಪುರಿಯನ್ನು ಗ್ರಾಹಕರಿಗಾಗಿ ನೀಡುತ್ತಿದ್ದಾನೆ. ಗ್ರಾಹಕ ಅವೆಲ್ಲ ಪಾನಿಪುರಿಗನ್ನು ಹಸು ಮತ್ತು ಕರುವಿಗೆ ತಿನ್ನಿಸುತ್ತಿದ್ದಾನೆ. ಹಸು ಮತ್ತು ಕರು ತಿನ್ನುವುದರಲ್ಲಿ ಮಗ್ನರಾ, ನಾಲಿಗೆಯಿಂದ ಬಾಯಿ ಸವರಿಕೊಳ್ಳುತ್ತಾ ಪೈಪೋಟಿಯಲ್ಲಿ ಪಾನಿಪುರಿ ಸವಿಯುತ್ತಿವೆ.
View this post on Instagram
ವಿಡಿಯೋವನ್ನು ಲಖನೌ ರೆಡ್ ಹಿಲ್ ಕಾನ್ವೆಂಟ್ ಶಾಲೆಯ ಬಳಿ ಸೆರೆ ಹಿಡಿಯಲಾಗಿದೆ. ಹಸುಗಳಿಗೆ ಹೆಚ್ಚು ಹಣ್ಣುಗಳನ್ನು ಅಥವಾ ಮನೆಯಲ್ಲಿ ಉಳಿದ ಇನ್ನಿತರ ಪದಾರ್ಥಗಳನ್ನು ನೀಡುವುದನ್ನು ನೋಡಿರುತ್ತೇವೆ. ಆದರೆ ಪಾನಿಪುರಿಯ ಸವಿಯುತ್ತಿರುವ ಹಸುವಿನ ವಿಡಿಯೋ ನೋಡಿ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಾರೀ ಸುದ್ದಿಯಲ್ಲಿದೆ.
ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು 6 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಹಾಗೂ 58,000ಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದಿದೆ. ಈ ದಿನದ ಅತ್ಯತ್ತಮ ವಿಡಿಯೋ ಎಂದು ಬಂಕೆದಾದರು ವಿಡಿಯೋ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
ಪಾನಿಪುರಿ ಹುಡುಗ ತೆಂಡೂಲ್ಕರ್ ಕೊಟ್ಟ ಬ್ಯಾಟಿಂದ ಬಾರಿಸಿದ ಶತಕ!
Viral Video: ‘ಎಲೆಯೊಳಗೊಂದು ಹಕ್ಕಿ ಗೂಡು’ ಕ್ಯಾಮರಾದಲ್ಲಿ ಸೆರೆಯಾದ ಅಪರೂಪದ ದೃಶ್ಯ