Viral Video: ಅಪಹರಿಸಲು ಬಂದ ಕಿಡ್ನಾಪರ್​ಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ​ 11 ವರ್ಷದ ಬಾಲಕಿ!

30 ವರ್ಷದ ಜೇರೆಡ್​ ಪಾಲ್​ ಸ್ಟಂಗಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಈ ಹಿಂದೆಯೂ ಕೆಲವು ಅಪರಾಧಗಳನ್ನು ಮಾಡಿರುವುದು ಬೆಳಕಿಗೆ ಬಂದಿದೆ. ಬಾಲಕಿಗೆ ಯಾವುದೇ ಗಂಭೀರವಾದ ಗಾಯವಾಗಿಲ್ಲ ಎಂಬುದು ತಿಳಿದು ಬಂದಿದೆ.

Viral Video: ಅಪಹರಿಸಲು ಬಂದ ಕಿಡ್ನಾಪರ್​ಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ​ 11 ವರ್ಷದ ಬಾಲಕಿ!
ಬಾಲಕಿಯನ್ನು ಅಪಹರಿಸುತ್ತಿರುವ ದೃಶ್ಯ
Follow us
TV9 Web
| Updated By: shruti hegde

Updated on: Jun 07, 2021 | 10:26 AM

ಅಮೆರಿಕದಲ್ಲಿ ಅಪಹರಿಸಲು ಯತ್ನಿಸುತ್ತಿದ್ದ ಕಿಡ್ನಾಪರ್​ ವಿರುದ್ಧ 11 ವರ್ಷದ ಬಾಲಕಿಯು ಹೋರಾಡುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಬಾರೀ ಸುದ್ದಿಯಲ್ಲಿದೆ. ಇಂತಹ ಭಯಾನಕ ದೃಶ್ಯ ನೋಡಿನ ನೆಟ್ಟಿಗರು ಚಿಕ್ಕ ಬಾಲಕಿಯನ್ನು ಹಾಡಿ ಹೊಗಳಿದ್ದಾರೆ. ಬಾಲಕಿಗೆ ಆ ಸಮಯದಲ್ಲಿದ್ದ ಧೈರ್ಯವನ್ನು ಮೆಚ್ಚಲೇ ಬೇಕು ಎಂದು ಶ್ಲಾಘಿಸಿದ್ದಾರೆ.

ಬಾಲಕಿ ಶಾಲೆಗೆ ಹೊರಡಲು ಸಿದ್ಧಳಾಗಿ ರಸ್ತೆಯಲ್ಲಿ ಬಸ್​ಗಾಗಿ ಕಾಯುತ್ತಾ ನಿಂತಿದ್ದಳು. ಎದುರಿಗೆ ಬಂದ ಕಾರೊಂದು ರಸ್ತೆಯ ಪಕ್ಕದಲ್ಲಿ ನಿಂತಿತು. ಕೈಯಲ್ಲಿ ಚಾಕು ಹಿಡಿದ ಓರ್ವ ಬಾಲಕಿಯ ಹತ್ತಿರ ಬಂದು ಅವಳನ್ನು ಕಿಡ್ನಾಪ್​ ಮಾಡಲು ಪ್ರಯತ್ನಿಸುತ್ತಾನೆ. ಹಾಗೂ ಅವಳನ್ನು ಕೈಯಲ್ಲಿ ಎತ್ತಿಕೊಂಡು ಕಾರಿನೆಡೆಗೆ ಕರೆದೊಯ್ಯಲು ಪ್ರಯತ್ನಿಸುತ್ತಾನೆ. ಆದರೆ ಬಾಲಕಿಯು ಅವನಿಂದ ಹೇಗೋ ತಪ್ಪಿಸಿಕೊಂಡು ದೂರದಲ್ಲಿ ಬಿದ್ದಿದ್ದ ಶಾಲೆಯ ಬ್ಯಾಗ್​ ಹಿಡಿದು ಮನೆಯತ್ತ ಓಡುತ್ತಾಳೆ. ಇಂತಹ ಭಯಾನಕ ದೃಶ್ಯವೊಂದು ಸೆರೆಯಾಗಿದೆ.

30 ವರ್ಷದ ಜೇರೆಡ್​ ಪಾಲ್​ ಸ್ಟಂಗಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಈ ಹಿಂದೆಯೂ ಕೆಲವು ಅಪರಾಧಗಳನ್ನು ಮಾಡಿರುವುದು ಬೆಳಕಿಗೆ ಬಂದಿದೆ. ಬಾಲಕಿಗೆ ಯಾವುದೇ ಗಂಭೀರವಾದ ಗಾಯವಾಗಿಲ್ಲ ಎಂಬುದರ ಕುರಿತಾಗಿ ದಿ ವಾಷಿಂಗಟನ್​ ಪೋಸ್ಟ್​ ವರದಿ ಮಾಡಿದೆ.

ಬಾಲಕಿಯ ಹತ್ತಿರ ಬಂದ ವ್ಯಕ್ತಿಯನ್ನು ನೋಡಿ ಅವಳು ಹೆದರಿ ಸುಮ್ಮನಾಗಿ ಬಿಟ್ಟಿದ್ದರೆ ಅಥವಾ ಬಿಟ್ಟುಕೊಡಲು ಪ್ರಯತ್ನಿಸಿದ್ದರೆ ಘಟನೆ ಭಯಂಕರವಾಗಿರುತ್ತಿತ್ತು ಎಂದು ಮೂಲಗಳು ತಿಳಿಸಿವೆ.

ನಾನು ತಪ್ಪಿಸಿಕೊಳ್ಳುವಾಗ ವ್ಯಕ್ತಿಯ ಕೈಗಳ ತೋಳಿನ ಮೇಲೆ ಗುರುತನ್ನು ಹಾಕಿದೆ. ಹಾಗಾಗಿ ವ್ಯಕ್ತಿಯನ್ನು ಹುಡುಕಲು ಸಾಕ್ಷಿ ಸಿಕ್ಕಂತಾಯಿತು ಎಂದು 11 ವರ್ಷದ ಬಾಲಕಿ ಅಲಿಸಾ ಸಂದರ್ಶನವೊಂದರಲ್ಲಿ ಹೇಳಿದ್ದಾಳೆ.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಬಾಲಕಿಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಮಗು ತುಂಬಾ ಧೈರ್ಯವಂತೆ, ಅಂತಹ ಗಾಬರಿಯ ಸಮಯದಲ್ಲಿ ಏನು ಮಾಡಬೇಕೆಂದ ಯೋಚನೆ ಯಾರಿಗೂ ಬಾರದು. ಭಯಾನಕ ಸಂದರ್ಭದಲ್ಲಿಯೂ ಅಷ್ಟು ಚಿಕ್ಕ ಬಾಲಕಿ ಭಯಗೊಳ್ಳದೇ ಬಚಾವ್​ ಆಗಲು ಪ್ರಯತ್ನಿಸಿದ್ದಾಳೆ ಎಂದು ಅನಿಕೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: 

Shah Rukh Khan: ಈ ಶಾರುಖ್​ ಖಾನ್​ ಅಸಲಿಯೋ ನಕಲಿಯೋ? ಫ್ಯಾನ್ಸ್​ಗೆ ದಂಗು ಬಡಿಸಿದ ಫೋಟೋ, ವಿಡಿಯೋಗಳು ವೈರಲ್​

Viral Video: ಗರ್ಭಪಾತ ವಿರೋಧಿ ಕಾನೂನಿನ ವಿರುದ್ಧ ವೈರಲ್ ಆದ 18ರ ಹರೆಯದ ಯುವತಿಯ ಭಾಷಣ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್