ಕೊರೊನಾ ಆತಂಕದ ನಡುವೆಯೂ ವ್ಯಾಪಾರಕ್ಕೆ ಅವಕಾಶ; ಕೋಲಾರದ ವಿಶ್ವ ಪ್ರಸಿದ್ಧ ಮಾವಿನ ಮಾರುಕಟ್ಟೆ ಆರಂಭ

ಹೊರ ರಾಜ್ಯದಿಂದ ಬರುವ ಲಾರಿ ಡ್ರೈವರ್‌ಗಳು ಮತ್ತು ಕ್ಲೀನರ್‌ಗಳಿಗೆ, ವ್ಯಾಪಾರಸ್ಥರುಗಳಿಗೆ ಊಟ ತಿಂಡಿ ವ್ಯವಸ್ಥೆ ಮತ್ತು ಲಾರಿಗಳನ್ನು ನಿಲ್ಲಿಸಲು ಪ್ರತ್ಯೇಕ ಸ್ಥಳ ಮಾಡಲಾಗಿದೆ. ಇನ್ನು ಮಾವಿನ ಮಾರುಕಟ್ಟೆಯಲ್ಲಿ ಜನ ಜಂಗುಳಿಯಾಗದಂತೆ ಕನಿಷ್ಠ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡುವಂತೆ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ವಹಿಸಲು ತಿಳಿಸಲಾಗಿದೆ ಎಂದು ಕೋಲಾರ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹೇಳಿದ್ದಾರೆ.

ಕೊರೊನಾ ಆತಂಕದ ನಡುವೆಯೂ ವ್ಯಾಪಾರಕ್ಕೆ ಅವಕಾಶ; ಕೋಲಾರದ ವಿಶ್ವ ಪ್ರಸಿದ್ಧ ಮಾವಿನ ಮಾರುಕಟ್ಟೆ ಆರಂಭ
ಶ್ರಿನಿವಾಸಪುರದ ಮಾವಿನ ಮಾರುಕಟ್ಟೆ
Follow us
preethi shettigar
|

Updated on: May 28, 2021 | 8:17 AM

ಕೋಲಾರ: ದಿನದಿಂದ ದಿನಕ್ಕೆ ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿದ್ದು, ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಡುಬಂದಿದೆ. ಈ ನಿಟ್ಟಿನಲ್ಲಿ ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರ ಲಾಕ್​ಡೌನ್ ಮೊರೆ ಹೋಗಿದೆ. ಆದರೆ ಇದರಿಂದಾಗಿ ದಿನಗೂಲಿ ಮಾಡುವವರು, ವ್ಯಾಪಾರಿಗಳಿಗೆ ತೊಂದರೆಯಾಗಿದೆ. ಅದರಲ್ಲೂ ಈಗ ಮಾವಿನ ವ್ಯಾಪಾರದ ಸಮಯ, ಮಾವು ಬೆಳೆದ ರೈತರು ಮಾವು ಮಾರಾಟ ಮಾಡಲಾಗದೆ ಕಂಗಾಲಾಗಿದ್ದರು. ಹೀಗಿರುವಾಗ ವಿಶ್ವ ಪ್ರಸಿದ್ಧ ಮಾವಿನ ಮಾರುಕಟ್ಟೆ ಕೊರೊನಾ ಆತಂಕದ ನಡುವೆಯೂ ಆರಂಭವಾಗುತ್ತಿದೆ. ಮೇ 30 ರಿಂದ ಈ ಮಾರುಕಟ್ಟೆ ಆರಂಭಕ್ಕೆ ಕೋಲಾರ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಕೊರೊನಾ ಆತಂಕದ ನಡುವೆಯೂ ಮಾವಿನ ತವರು ಕೋಲಾರ ಜಿಲ್ಲೆ ಶ್ರಿನಿವಾಸಪುರದ ಮಾವಿನ ಮಾರುಕಟ್ಟೆಯನ್ನು ಆರಂಭ ಮಾಡಲು ಕೋಲಾರ ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ಕೊಟ್ಟಿದೆ. ಈ ಬೆನ್ನಲ್ಲೇ ಶ್ರೀನಿವಾಸಪುರದ ಮಾವಿನ ಮಾರುಕಟ್ಟೆ ಮಾವಿನ ಸುಗ್ಗಿಕಾಲಕ್ಕೆ ಸಿದ್ಧವಾಗುತ್ತಿದೆ. ವಿಶ್ವ ಪ್ರಸಿದ್ಧ ಮಾವಿನ ಮಾರುಕಟ್ಟೆ ಹೊಂದಿರುವ ಶ್ರೀನಿವಾಸಪುರ ಮಾವಿನ ತವರು ಎಂದೇ ಹೆಸರುವಾಸಿ. ಇಲ್ಲಿ ವಿಶ್ವದಲ್ಲೇ ಅತಿ ಉತ್ಕೃಷ್ಟ ತಳಿಯ ಹಲವು ಬಗೆಯ ಮಾವಿನ ಹಣ್ಣುಗಳನ್ನು ಬೆಳೆಯಲಾಗುತ್ತದೆ.

ಕೋಲಾರ ಜಿಲ್ಲೆಯಲ್ಲಿ ಸರಾಸರಿ 45000 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಈ ಕಾರಣಕ್ಕೆ ಕೋಲಾರದ ಈ ಮಾರುಕಟ್ಟೆಗೆ ದೇಶದ ಬಹುತೇಕ ಎಲ್ಲಾ ರಾಜ್ಯಗಳಿಂದ ವ್ಯಾಪಾರಸ್ಥರು ಬರುತ್ತಾರೆ. ಹೀಗಿರುವಾಗ ಕೊರೊನಾ ಆತಂಕದ ನಡುವೆ ಈ ವರ್ಷದ ಮಾವಿನ ಮಾರುಕಟ್ಟೆಯನ್ನು ಬಂದ್ ಮಾಡಬೇಕು ಎಂಬ ಕೂಗು ಕೇಳಿಬಂದಿತ್ತು. ಈ ಮಾರುಕಟ್ಟೆಗೆ ಹಲವು ರಾಜ್ಯಗಳಿಂದ ಜನರು ಬರುತ್ತಾರೆ. ಹಾಗಾಗಿ ಮಾರುಕಟ್ಟೆಯಿಂದ ಕೊರೊನಾ ಸೋಂಕು ಹೆಚ್ಚಾಗಿ ಹರಡುವ ಸಾಧ್ಯತೆ ಇದೆ ಎಂದು ಮಾರುಕಟ್ಟೆಯನ್ನು ಈ ಬಾರಿ ತೆರೆಯುವುದೇ ಬೇಡ ಎನ್ನುವ ನಿರ್ಧಾರ ಮಾಡಲಾಗಿತ್ತು. ಆದರೆ ಮಾವು ಬೆಳೆಗಾರರು ಹಾಗೂ ವ್ಯಾಪಾರಸ್ಥರ ಹಿತದೃಷ್ಟಿಯಿಂದ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಂಡು ಮಾರುಕಟ್ಟೆ ಆರಂಭ ಮಾಡಲು ಜಿಲ್ಲಾಡಳಿತ ಸಮ್ಮತಿ ನೀಡಿದೆ

ಶ್ರೀನಿವಾಸಪುರ ಎಪಿಎಂಸಿ ಮಾರುಕಟ್ಟೆ ಬೃಹತ್ ವಿಸ್ತಾರವನ್ನು ಹೊಂದಿರುವ ಮಾರುಕಟ್ಟೆ, ಇಲ್ಲಿಗೆ ಹೆಚ್ಚಾಗಿ ತಮಿಳುನಾಡು, ಉತ್ತರಪ್ರದೇಶ, ಗುಜರಾತ್, ಹರಿಯಾಣ, ದೆಹಲಿ, ಪಂಜಾಬ್, ಹೀಗೆ ದೇಶದ ಎಲ್ಲಾ ರಾಜ್ಯಗಳಿಂದ ವ್ಯಾಪಾರಸ್ಥರು ಬರುತ್ತಾರೆ. ಅಷ್ಟೇ ಅಲ್ಲದೆ ಮಾವಿನ ಮಾರುಕಟ್ಟೆಯಲ್ಲಿ ಕೆಲಸ ಮಾಡಲು ಕೂಡಾ ಹೊರ ರಾಜ್ಯಗಳಿಂದ ಕೂಲಿ ಕಾರ್ಮಿಕರು ಬರುತ್ತಾರೆ. ಹೀಗಾಗಿ ಅವರಿಂದ ಸೋಂಕು ಹರುಡುವ ಸಾಧ್ಯತೆ ಹೆಚ್ಚಿರುವ ಕಾರಣ ಹೊರ ರಾಜ್ಯದ ಕಾರ್ಮಿಕರನ್ನು ಬಳಸಿಕೊಳ್ಳದೆ, ಸ್ಥಳೀಯರನ್ನ ಬಳಕೆ ಮಾಡಿಕೊಳ್ಳಬೇಕು. ಹೊರ ರಾಜ್ಯದಿಂದ ಬರುವ ಲಾರಿ ಡ್ರೈವರ್‌ಗಳು ಮತ್ತು ಕ್ಲೀನರ್‌ಗಳಿಗೆ, ವ್ಯಾಪಾರಸ್ಥರುಗಳಿಗೆ ಊಟ ತಿಂಡಿ ವ್ಯವಸ್ಥೆ ಮತ್ತು ಲಾರಿಗಳನ್ನು ನಿಲ್ಲಿಸಲು ಪ್ರತ್ಯೇಕ ಸ್ಥಳ ಮಾಡಲಾಗಿದೆ. ಇನ್ನು ಮಾರುಕಟ್ಟೆಯಲ್ಲೂ ಜನ ಜಂಗುಳಿಯಾಗದಂತೆ ಕನಿಷ್ಠ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡುವಂತೆ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ವಹಿಸಲು ತಿಳಿಸಲಾಗಿದೆ ಎಂದು ಕೋಲಾರ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹೇಳಿದ್ದಾರೆ.

ಈ ಮಧ್ಯೆ ಕ್ಷೇತ್ರದ ಮಾವು ಬೆಳೆಗಾರರ ಪರವಾಗಿ ರಮೇಶ್ ಕುಮಾರ್ 70 ಸಾವಿರ ಪ್ರೋತ್ಸಾಹ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಲ್ಲದೆ ಮಾವು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಮಾವು ಬೆಳೆಗಾರರ ಸಂಘದ ಅಧ್ಯಕ್ಷರಾದ ಚಿನ್ನಪ್ಪ ರೆಡ್ಡಿ ಕೂಡಾ ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ ಹಲವು ನಿಭಂದನೆಗಳ ನಡುವೆಯೂ ಮಾವಿನ ಮಾರುಕಟ್ಟೆ ಒಲ್ಲದ ಮನಸ್ಸಿನಿಂದಲೇ ಆರಂಭವಾಗಿದೆ. ಆದರೆ ಕೊರೊನಾ ಮಾರುಕಟ್ಟೆ ಪ್ರವೇಶ ಮಾಡದಂತೆ ತಡೆಯುವುದಕ್ಕೆ ಸಾಧ್ಯನಾ, ಇಲ್ಲಾ ಮಾವು ಮಾರುಕಟ್ಟೆ ಕೊರೊನಾ ಮಾರುಕಟ್ಟೆಯಾಗುತ್ತಾ ಎನ್ನುವ ಆತಂಕ ಜಿಲ್ಲೆಯ ಜನರಲ್ಲಿದೆ.

ಇದನ್ನೂ ಓದಿ:

ತೋಟದಲ್ಲೇ ಬಾಡುತ್ತಿದೆ ಮಾವು; 1983 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಹಣ್ಣಿಗೆ ಬೆಲೆ ಸಿಗದೆ ರೈತರು ಕಂಗಾಲು

3 ಎಕರೆಯಲ್ಲಿ ವಿವಿಧ ತಳಿಯ ಮಾವು ಬೆಳೆದು ಕೃಷಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದ ಯಾದಗಿರಿ ರೈತ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ