ಮಂಡ್ಯದ ಡಾ.ಅಸ್ರಣ್ಣ ಬೇಜವಾಬ್ದಾರಿತನದಿಂದ 15 ಜನ ಅಮಾಯಕರ ಸಾವು: ಪಾಂಡವಪುರ ಎಸಿ ಶಿವಾನಂದ್
ಕೆ. ಆರ್. ಪೇಟೆಯಲ್ಲೂ ಖಾಸಗಿ ಕ್ಲಿನಿಕ್ಗಳನ್ನ ಮುಚ್ಚಿಸಿ. ಆ ಮೂಲಕ ಕೊವಿಡ್ ಲಕ್ಷಣಗಳಿರುವ ವ್ಯಕ್ತಿಗಳಿಗೆ ಚಿಕಿತ್ಸೆ ನೀಡದಂತೆ ಕ್ರಮ ವಹಿಸಿ ಎಂದು ನೋಡಲ್ ಅಧಿಕಾರಿಗಳಿಗೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ ನಡೆದ ಸಭೆಯಲ್ಲಿ ಪಾಂಡವಪುರ ಎಸಿ ಶಿವಾನಂದ್ ತಿಳುವಳಿಕೆ ನೀಡಿದ್ದಾರೆ.
ಮಂಡ್ಯ: ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿದ್ದಂತೆ, ಇಂಜೆಕ್ಷನ್, ಇನ್ನಿತರ ಔಷಧಿಗಳ ಬಗೆಗಿನ ಕಳ್ಳ ಪ್ರಕರಣಗಳು ಕೂಡ ಹೆಚ್ಚಾಗುತ್ತಿದೆ. ಹೀಗಿರುವಾಗಲೇ ಮಂಡ್ಯದಲ್ಲಿ ವೈದರ ವಿರುದ್ಧ ಆರೋಪ ಕೇಳಿ ಬಂದಿದ್ದು, ಡಾ. ಅಸ್ರಣ್ಣ ಕ್ಲಿನಿಕ್ ವೈದ್ಯನ ಯಡವಟ್ಟಿಗೆ ಪಾಂಡವಪುರ ತಾಲೂಕಿನಲ್ಲಿ 15 ಜನ ಅಮಾಯಕರು ಸಾವನ್ನಪ್ಪಿದ್ದಾರೆ ಎಂದು ಕೆ. ಆರ್. ಪೇಟೆಯಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಪಾಂಡವಪುರ ಎಸಿ ಶಿವಾನಂದ್ ಹೇಳಿಕೆ ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಕೆ. ಆರ್.ಪೇಟೆ ಪಟ್ಟಣದಲ್ಲಿ ಕೊವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳ ಸಭೆ ನಡೆಸಿದ ಎಸಿ ಶಿವಾನಂದ್, ಪಾಂಡವಪುರ ಪಟ್ಟಣದಲ್ಲಿ ಒಬ್ಬ ಡಾ. ಅಸ್ರಣ್ಣ ಎಂಬಾತ ಕ್ಲಿನಿಕ್ ನಡೆಸುತ್ತಿದ್ದ. ಕೊವಿಡ್ ಲಕ್ಷಣಗಳಿರುವ ರೋಗಿಗಳು ಆತನ ಕ್ಲಿನಿಕ್ಗೆ ಬಂದರೆ 1 ರಿಂದ 2 ಸಾವಿರ ರೂಪಾಯಿ ಮಾತ್ರೆ ಬರೆದು ಕೊಡುತ್ತಿದ್ದ. ಹೀಗೆ ಆತನ ಬಳಿ ಮಾತ್ರೆ ತೆಗೆದುಕೊಳ್ಳುತ್ತಿದ್ದ 15 ಜನ ಸಾವಿಗೀಡಾಗಿದ್ದಾರೆ. ಈ ವಿಚಾರ ತಿಳಿದ ಕೂಡಲೇ ನಾವು ಆತನ ಕ್ಲಿನಿಕ್ ಬಂದ್ ಮಾಡಿಸಿದ್ದೀವಿ ಎಂದು ತಿಳಿಸಿದ್ದಾರೆ.
ಕೆ. ಆರ್. ಪೇಟೆಯಲ್ಲೂ ಖಾಸಗಿ ಕ್ಲಿನಿಕ್ಗಳನ್ನ ಮುಚ್ಚಿಸಿ. ಆ ಮೂಲಕ ಕೊವಿಡ್ ಲಕ್ಷಣಗಳಿರುವ ವ್ಯಕ್ತಿಗಳಿಗೆ ಚಿಕಿತ್ಸೆ ನೀಡದಂತೆ ಕ್ರಮ ವಹಿಸಿ ಎಂದು ನೋಡಲ್ ಅಧಿಕಾರಿಗಳಿಗೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ ನಡೆದ ಸಭೆಯಲ್ಲಿ ಪಾಂಡವಪುರ ಎಸಿ ಶಿವಾನಂದ್ ತಿಳುವಳಿಕೆ ನೀಡಿದ್ದಾರೆ.
ಇದನ್ನೂ ಓದಿ:
ಭೀಕರ ಮಹಾಮಾರಿ ನಡುವೆ ವೈದ್ಯರ ನಿರ್ಲಕ್ಷ್ಯ.. ಕೊರೊನಾ ದೃಢವಾಗುತ್ತಿದ್ದಂತೆ ಡಿಸ್ಚಾರ್ಜ್, ಆಸ್ಪತ್ರೆಗಳ ಮುಂದೆ ನರಳಾಟ