AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನಃ ಪರಿವರ್ತನಾ ಕೇಂದ್ರದ ಮೇಲೆ ಪೊಲೀಸರ ದಾಳಿ; ಬೆಂಗಳೂರಿನಲ್ಲಿ ಜೂಜಾಡುತ್ತಿದ್ದ 14 ಜನರ ಬಂಧನ

ಶ್ರೀ ಮಹದೇಶ್ವರ ಡಿ ಅಡಿಕ್ಷನ್ ಸೆಂಟರ್ ಮೇಲೆ ಬ್ಯಾಡರಹಳ್ಳಿ ಇನ್ಸ್​ಪೆಕ್ಟರ್ ರಾಜೀವ್ ನೇತೃತ್ವದ ತಂಡ ದಾಳಿ ಮಾಡಿದ್ದು, 28 ಸಾವಿರ ರೂಪಾಯಿ ವಶಪಡಿಸಿಕೊಂಡಿದ್ದಾರೆ.

ಮನಃ ಪರಿವರ್ತನಾ ಕೇಂದ್ರದ ಮೇಲೆ ಪೊಲೀಸರ ದಾಳಿ; ಬೆಂಗಳೂರಿನಲ್ಲಿ ಜೂಜಾಡುತ್ತಿದ್ದ 14 ಜನರ ಬಂಧನ
ಪ್ರಾತಿನಿಧಿಕ ಚಿತ್ರ
preethi shettigar
|

Updated on: May 28, 2021 | 10:40 AM

Share

ಬೆಂಗಳೂರು: ಮನಃ ಪರಿವರ್ತನಾ ಕೇಂದ್ರದ ಮೇಲೆ ದಾಳಿ ಮಾಡಿದ ಪೊಲೀಸರು, ಜೂಜಾಡುತ್ತಿದ್ದ 14 ಜನರನ್ನು ಬಂಧಿಸಿದ್ದಾರೆ. ಬೆಂಗಳೂರಿನ ತುಂಗಾನಗರದಲ್ಲಿರುವ ಶ್ರೀ ಮಹದೇಶ್ವರ ಡಿ ಅಡಿಕ್ಷನ್ ಸೆಂಟರ್ ಮೇಲೆ ಬ್ಯಾಡರಹಳ್ಳಿ ಇನ್ಸ್​ಪೆಕ್ಟರ್ ರಾಜೀವ್ ನೇತೃತ್ವದ ತಂಡ ದಾಳಿ ಮಾಡಿದ್ದು, 28 ಸಾವಿರ ರೂಪಾಯಿ ವಶಪಡಿಸಿಕೊಂಡಿದ್ದಾರೆ. ಹೊನ್ನಪ್ಪ ಎಂಬಾತನಿಗೆ ಸೇರಿದ ಡಿ ಅಡಿಕ್ಷನ್ ಸೆಂಟರ್​ ಇದಾಗಿದ್ದು, ಸಂಬಂಧಿ ಅಶೋಕ್ ಈ ಸೆಂಟರ್​ನ ಮ್ಯಾನೇಜರ್ ಆಗಿ ಕೆಲಸ ಮಾಡುತಿದ್ದರು.

ಸದ್ಯ ಅಶೋಕ್ ಮತ್ತು ಹೊನ್ನಪ್ಪರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಗ್ಯಾಂಬಲಿಂಗ್​ನಲ್ಲಿ ತೊಡಗಿದ್ದ 14 ಮಂದಿ ಪತ್ತೆಯಾಗಿದ್ದು, ಕೆಪಿ ಆ್ಯಕ್ಟ್ ಹಾಗೂ ಎನ್​ಡಿಎಂಎ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅಕ್ರಮ ಗುಟ್ಕಾ ತಯಾರಿಕೆ: ಪರವಾನಗಿ ಇಲ್ಲದೇ ಗುಟ್ಕಾ ತಯಾರಿಸುತ್ತಿದ್ದ ಇಬ್ಬರನ್ನು ಜಿಲ್ಲೆಯ ಹಿಪ್ಪರಗಿ‌ ಪಟ್ಟಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಖಾದರ್​ ಬಾಷಾ, ಬಸವರಾಜ್ ಆವಟಿ ಎಂಬುವವರೇ ಬಂಧಿತ ವ್ಯಕ್ತಿಗಳಾಗಿದ್ದು, ಉಳಿದ ಆರೋಪಿಗಳಾದ ಮುಬಾರಕ್, ಸಂಗಮೇಶ್​ ಪರಾರಿಯಾಗಿದ್ದಾರೆ. ಅಕ್ರಮವಾಗಿ ತಯಾರಿಸಿದ್ದ 60 ಸಾವಿರಕ್ಕೂ ಹೆಚ್ಚು ಮೌಲ್ಯದ ಗುಟ್ಕಾ ವಸ್ತುಗಳನ್ನು ಬಂಧಿತ ವ್ಯಕ್ತಿಗಳಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ವ್ಯಕ್ತಿಗಳು ಪರವಾನಿಗೆ ಇಲ್ಲದೆ ಮಾವಾ ತಯಾರಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ದಾಳಿ ವೇಳೆ 35 ಕೆಜಿ ಮಾವಾ, 80ಕೆ.ಜಿ‌ ಅಡಿಕೆ, 2ಕೆ‌ಜಿ‌ ತಂಬಾಕು,23 ಕೆ.ಜಿ ಸುಣ್ಣ 2 ಮೊಬೈಲ್ ಸೇರಿ 60 ಸಾವಿರಕ್ಕೂ ಹೆಚ್ಚು ಬೆಲೆ‌ ಬಾಳುವ ಗುಟಖಾ ಜಫ್ತಿ ಮಾಡಿಕೊಳ್ಳಲಾಗಿದೆ.

ಲಾಕ್​ಡೌನ್​ ಇದ್ದರೂ ಸರ್ಕಾರಿ ಕಾರು ದುರ್ಬಳಕೆ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ರಾಜ್ಯ ಸರ್ಕಾರ ಲಾಕ್​ಡೌನ್ ವಿಧಿಸಿದೆ. ಬೇಕಾಬಿಟ್ಟಿಯಾಗಿ ಓಡಾಡಿದರೆ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಅನಗತ್ಯವಾಗಿ ಓಡಾಡುವ ಜನರಿಗೆ ದಂಡವನ್ನು ಹಾಕಿ, ವಾಹನಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ಪೊಲೀಸ್ ಸಿಬ್ಬಂದಿ ಯಾರಿಗೂ ಮುಲಾಜೇ ಮಾಡದೆ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ. ಹೀಗೆ ಅನಗತ್ಯವಾಗಿ ಸರ್ಕಾರಿ ಕಾರು ದುರ್ಬಳಕೆ ಮಾಡಿಕೊಂಡು ಓಡಾಡುತ್ತಿದ್ದ ಚಾಲಕನಿಗೆ ಪೊಲೀಸರು ಶಾಕ್ ನೀಡಿದ್ದಾರೆ.

ರಾಜ್ಯಾದ್ಯಂತ ಲಾಕ್​ಡೌನ್​ ಜಾರಿಯಾಗಿದೆ. ಹೀಗಿದ್ದೂ ಸರ್ಕಾರಿ ಸೇವೆಯಲ್ಲಿದ್ದ ಕಾರನ್ನು ದುರ್ಬಳಕೆ ಮಾಡಿಕೊಂಡು ಚಾಲಕನೊಬ್ಬ ಓಡಾಡುತ್ತಿದ್ದರು. ಅನಗತ್ಯವಾಗಿ ಕುಟುಂಬಸ್ಥರ ಜೊತೆ ಓಡಾಟ ನಡೆಸಿದ ಹಿನ್ನೆಲೆ ಪಿಡಬ್ಲೂಡಿಗೆ ಸೇರಿದ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಘಟನೆ ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ನಡೆದಿದೆ. ಲೋಕೋಪಯೋಗಿ ಇಲಾಖೆ ಸೇವೆಯಲ್ಲಿದ್ದ ಕಾರಿನಲ್ಲಿ ಕುಟುಂಬದವರನ್ನು ಕರೆದುಕೊಂಡು ಚಾಲಕ ಹೋಗುತ್ತಿದ್ದರು. ಸರ್ಕಾರಿ ಸೇವೆಯಲ್ಲಿ ಅಂತ ಬೋರ್ಡ್ ಇದ್ದಿದ್ದರಿಂದ ಪೊಲೀಸರು ಹಿಡಿಯಲ್ಲಾ ಅಂತ ಚಾಲಕ ಓಡಾಡುತ್ತಿದ್ದರು. ಆದರೆ ಚಾಲಕನ ದುರ್ಬಳಕೆಯನ್ನು ಗಮನಿಸಿದ ಪೊಲೀಸರು ಕಾರ್ನ ಸೀಜ್ ಮಾಡಿದ್ದಾರೆ.

ಇದನ್ನೂ ಓದಿ:

ಮನೆ ಮಾರಿ ಆನ್‌ಲೈನ್ ಜೂಜಾಟ: ಎಲ್ಲವನ್ನೂ ಕಳೆದುಕೊಂಡವ ಸಾವಿಗೂ ಮುನ್ನ ಏನು ಬರೆದಿಟ್ಟ?

BJP ಮುಖಂಡನ ಜೊತೆ ‘ಖಾಕಿ’ ಜೂಜಾಟ.. ದಾಳಿ ಬೀಳ್ತಿದ್ದಂತೆ ಜೂಜಾಡ್ತಿದ್ದ ಪೊಲೀಸರು ಎಸ್ಕೇಪ್!

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್