BJP ಮುಖಂಡನ ಜೊತೆ ‘ಖಾಕಿ’ ಜೂಜಾಟ.. ದಾಳಿ ಬೀಳ್ತಿದ್ದಂತೆ ಜೂಜಾಡ್ತಿದ್ದ ಪೊಲೀಸರು ಎಸ್ಕೇಪ್!
ಧಾರವಾಡ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆಯಂತೆ ಬಿಜೆಪಿ ಮುಖಂಡನೊಬ್ಬನ ಜೊತೆ ಸೇರಿ ಪೊಲೀಸರೇ ಜೂಜಾಡಿರುವ ಘಟನೆ ಜಿಲ್ಲೆಯ ಮುಮ್ಮಿಗಟ್ಟಿಯ ಬಳಿ ನಡೆದಿದೆ. ಜಿಲ್ಲೆಯ ವಿವಿಧ ಠಾಣೆಯ ಪೊಲೀಸ್ ಸಿಬ್ಬಂದಿ ಬಿಜೆಪಿ ಮುಖಂಡ ಅನಿಲ ಉಳವಣ್ಣವರ್ ಜೊತೆ ಸೇರಿ ಮುಮ್ಮಿಗಟ್ಟಿಯ ಹೋಟೆಲ್ವೊಂದರ ಹಿಂಬದಿಯಲ್ಲಿ ಜೂಜಾಡುತ್ತಿದ್ದರು ಎಂದು ತಿಳಿದುಬಂದಿದೆ. ಈ ವೇಳೆ ಜೂಜು ಅಡ್ಡೆಯ ಮೇಲೆ ಗರಗ ಠಾಣೆಯ ಪೊಲೀಸರು ದಾಳಿ ನಡೆಸಿದರು. ಸುತ್ತಮುತ್ತಲ ಮೂರು ಠಾಣೆಗಳ ಪೊಲೀಸರು ಜೂಜಾಟಕ್ಕೆ ಕುಳಿತಿದ್ದರು! DySP ರವಿ ನಾಯ್ಕ್ ನೇತೃತ್ವದಲ್ಲಿ […]
ಧಾರವಾಡ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆಯಂತೆ ಬಿಜೆಪಿ ಮುಖಂಡನೊಬ್ಬನ ಜೊತೆ ಸೇರಿ ಪೊಲೀಸರೇ ಜೂಜಾಡಿರುವ ಘಟನೆ ಜಿಲ್ಲೆಯ ಮುಮ್ಮಿಗಟ್ಟಿಯ ಬಳಿ ನಡೆದಿದೆ.
ಜಿಲ್ಲೆಯ ವಿವಿಧ ಠಾಣೆಯ ಪೊಲೀಸ್ ಸಿಬ್ಬಂದಿ ಬಿಜೆಪಿ ಮುಖಂಡ ಅನಿಲ ಉಳವಣ್ಣವರ್ ಜೊತೆ ಸೇರಿ ಮುಮ್ಮಿಗಟ್ಟಿಯ ಹೋಟೆಲ್ವೊಂದರ ಹಿಂಬದಿಯಲ್ಲಿ ಜೂಜಾಡುತ್ತಿದ್ದರು ಎಂದು ತಿಳಿದುಬಂದಿದೆ. ಈ ವೇಳೆ ಜೂಜು ಅಡ್ಡೆಯ ಮೇಲೆ ಗರಗ ಠಾಣೆಯ ಪೊಲೀಸರು ದಾಳಿ ನಡೆಸಿದರು.
ಸುತ್ತಮುತ್ತಲ ಮೂರು ಠಾಣೆಗಳ ಪೊಲೀಸರು ಜೂಜಾಟಕ್ಕೆ ಕುಳಿತಿದ್ದರು! DySP ರವಿ ನಾಯ್ಕ್ ನೇತೃತ್ವದಲ್ಲಿ ರೇಡ್ ನಡೆಸಲಾಯಿತು. ಅಡ್ಡೆ ಮೇಲೆ ದಾಳಿ ಬೀಳುತ್ತಿದ್ದಂತೆ ಜೂಜಾಡುತ್ತಿದ್ದ ಕೆಲ ಪೊಲೀಸರು ಸಿಕ್ಕಿಬಿದ್ದಿದ್ದಾರೆ. ಮತ್ತೆ ಕೆಲವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ನಡುವೆ, ಪೊಲೀಸರು ಬಿಜೆಪಿ ಮುಖಂಡ ಅನಿಲ ಉಳವಣ್ಣವರ್ನ ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ, ಸ್ಥಳದಲ್ಲಿದ್ದ 35,050 ರೂಪಾಯಿ ನಗದು ಹಾಗೂ 5 ಬೈಕ್‌ಗಳನ್ನು ಸಹ ವಶಕ್ಕೆ ಪಡೆದಿದ್ದಾರೆ.
ದಾಳಿಯಲ್ಲಿ ಸಿಕ್ಕ ಸಿಬ್ಬಂದಿಯೆಲ್ಲಾ ಗರಗ ಠಾಣೆ, ಧಾರವಾಡ ಗ್ರಾಮೀಣ ಠಾಣೆ ಹಾಗೂ DAR ಪಡೆಯ ಪೊಲೀಸರು ಎಂದು ಹೇಳಲಾಗಿದೆ. ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.