ಮನೆ ಮಾರಿ ಆನ್‌ಲೈನ್ ಜೂಜಾಟ: ಎಲ್ಲವನ್ನೂ ಕಳೆದುಕೊಂಡವ ಸಾವಿಗೂ ಮುನ್ನ ಏನು ಬರೆದಿಟ್ಟ?
ಸಾವಿಗೂ ಮೊದಲು ಡೆತ್ನೋಟು ಬರೆದಿರುವ ಜಗದೀಶ್ ಜೂಜಾಟದಲ್ಲಿ ಹಣ ಕಳೆದುಕೊಂಡ ಬಗ್ಗೆ ಉಲ್ಲೇಖ ಮಾಡಿದ್ದು, ತನ್ನ ಸಾವಿಗೆ ಕಾರಣವೇನೆಂಬುದನ್ನು ವಿವರಿಸಿದ್ದಾನೆ.

ಮೃತ ಜಗದೀಶ್
ನೆಲಮಂಗಲ: ಆನ್‌ಲೈನ್ ಜೂಜಾಟಾದಲ್ಲಿ ಹಣ ಕಳೆದುಕೊಂಡ ವ್ಯಕ್ತಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬೆಂಗಳೂರಿನ ಕೆಂಗೇರಿ ಬಳಿಯ ಉಲ್ಲಾಳದ ಜಗದೀಶ್ (28) ಮೃತ ದುರ್ದೈವಿ. ಬ್ಯಾಡರಹಳ್ಳಿ ಗ್ರಾಮದ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾವಿಗೂ ಮೊದಲು ಡೆತ್ನೋಟ್ ಬರೆದಿರುವ ಜಗದೀಶ್ ಜೂಜಾಟದಲ್ಲಿ ಹಣ ಕಳೆದುಕೊಂಡ ಬಗ್ಗೆ ಉಲ್ಲೇಖ ಮಾಡಿದ್ದು, ತನ್ನ ಸಾವಿಗೆ ಕಾರಣವೇನೆಂಬುದನ್ನು ವಿವರಿಸಿದ್ದಾನೆ.
ನೆಲಮಂಗಲ ಗ್ರಾಮಾಂತರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
Published On - 4:31 pm, Mon, 21 December 20