How to | ಇನ್​​ಸ್ಟಾ​ಗ್ರಾಮ್ ಖಾತೆ ಹ್ಯಾಕ್ ಆಗದಂತೆ ಕಾಪಾಡುವುದು ಹೇಗೆ?

ಇನ್​​ಸ್ಟಾ​ಗ್ರಾಮ್ ಖಾತೆಯಲ್ಲಿ two-factor authentication ಎನೇಬಲ್ ಮಾಡಿಕೊಳ್ಳುವ ಮೂಲಕ ನೀವು ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಬಹುದು.

How to | ಇನ್​​ಸ್ಟಾ​ಗ್ರಾಮ್ ಖಾತೆ ಹ್ಯಾಕ್ ಆಗದಂತೆ ಕಾಪಾಡುವುದು ಹೇಗೆ?
ಇನ್​​ಸ್ಟಾಗ್ರಾಂ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Feb 05, 2021 | 9:50 PM

ಇನ್​​ಸ್ಟಾ​ಗ್ರಾಮ್ ಖಾತೆಯಲ್ಲಿ ಬದುಕಿನ ಕ್ಷಣಗಳನ್ನು ಹಂಚಿಕೊಳ್ಳುವ ಯುವಜನರ ಸಂಖ್ಯೆ ಹೆಚ್ಚು. ಹೆಚ್ಚುಹೆಚ್ಚು ಲೈಕ್ ಗಿಟ್ಟಿಸುವ ಹಪಾಹಪಿ ಮತ್ತು ಫಾಲೋವರ್​ಗಳ ಸಂಖ್ಯೆ ಜಾಸ್ತಿ ಮಾಡಿಕೊಳ್ಳುವ ಧಾವಂತದಲ್ಲಿ ಇನ್​​ಸ್ಟಾ​ಗ್ರಾಮ್​ನಲ್ಲಿ ಸೆಲೆಬ್ರಿಟಿಗಳೇ ಪೈಪೋಟಿಗೆ ಬೀಳುತ್ತಾರೆ. ಯಾವುದೇ ಸಾಮಾಜಿಕ ಮಾಧ್ಯಮ ಆಗಿರಲಿ, ಬಳಕೆದಾರರು ತಮ್ಮ ಖಾತೆಗಳನ್ನು ಸುರಕ್ಷಿತವಾಗಿಡಲು ಕಾಳಜಿ ವಹಿಸಲೇಬೇಕು.

ಖಾತೆಯನ್ನು ಸುರಕ್ಷಿತವಾಗಿಡುವುದು ಹೇಗೆ?

ಯಾವುದೇ ಖಾತೆ ಇರಲಿ, Strong Password ಮುಖ್ಯ. ಅದೆಷ್ಟೇ ಆಪ್ತರಿರಲಿ ಸಾಮಾಜಿಕ ಮಾಧ್ಯಮಗಳ ಪಾಸ್​ವರ್ಡ್ ಯಾರ ಜತೆಯೂ ಶೇರ್ ಮಾಡದೇ ಇದ್ದರೆ ಒಳ್ಳೆಯದು. ಎಲ್ಲ ಖಾತೆಗಳಿಗೂ ಒಂದೇ ಪಾಸ್​ವರ್ಡ್ ಕೊಡುವುದು ಅಥವಾ ನೆನೆಪಿಡಲು ಸುಲಭ ಎಂದು ಫೋನ್ ಸಂಖ್ಯೆಯನ್ನೇ ಪಾಸ್​ವರ್ಡ್ ಮಾಡುವುದು ಸರಿಯಲ್ಲ. ಅದೇ ರೀತಿ ಕೆಲವು ವೆಬ್​ಸೈಟ್​ಗಳಿಗೆ ಇನ್​ಸ್ಟಾಗ್ರಾಂ ಖಾತೆ ಮೂಲಕ ಲಾಗಿನ್ ಆಗಿ ಎಂಬ ಆಯ್ಕೆ ಇದ್ದರೆ ಆ ವೆಬ್​ಸೈಟ್​ನ ಪೂರ್ವಾಪರ ತಿಳಿದುಕೊಂಡನಂತರವೇ ಲಾಗಿನ್ ಆಗಿ.

ಸುರಕ್ಷೆ ಖಾತ್ರಿಪಡಿಸಿಕೊಳ್ಳುವುದು ಹೇಗೆ?

ಇನ್​​ಸ್ಟಾ​ಗ್ರಾಮ್ ಖಾತೆಗೆ two-factor authentication ಎನೇಬಲ್ ಮಾಡಿಕೊಳ್ಳುವ ಮೂಲಕ ಹೆಚ್ಚಿನ ಸುರಕ್ಷೆ ಪಡೆಯಬಹುದು. two-factor authentication ಎನೇಬಲ್  ಮಾಡುವುದರಿಂದ ನಿಮ್ಮ ಖಾತೆಗೆ ಯಾರಾದರೂ ಲಾಗಿನ್ ಆಗಲು ಪ್ರಯತ್ನಪಟ್ಟರೆ ಅಲರ್ಟ್ ಬರುತ್ತದೆ. ಲಾಗಿನ್ ಮಾಡುವ ವ್ಯಕ್ತಿ ಒಂದಕ್ಕಿಂತ ಹೆಚ್ಚು ಬಾರಿ ಲಾಗಿನ್ ಆಗಲು ಪ್ರಯತ್ನಿಸಿದಾಗ ಸ್ಪೆಷಲ್ ಲಾಗಿನ್ ಕೋಡ್ ಅಥವಾ ಲಾಗಿನ್ ಮಾಡಿದ್ದು ನೀವೇ ಎಂದು ಖಾತರಿಪಡಿಸಲು ಸಂದೇಶವೊಂದು ಬರುತ್ತದೆ. ನೀವು ತಕ್ಷಣ ಅಲರ್ಟ್ ಅಗಲು ಇದು ಅನುಕೂಲ.

ಮೊಬೈಲ್​​ನಲ್ಲಿ two-factor authentication (TFA) ಎನೇಬಲ್ ಮಾಡುವುದು ಹೇಗೆ? 1. ನಿಮ್ಮ ಫೋನ್​​ನಲ್ಲಿ ಇನ್​​ಸ್ಟಾ​ಗ್ರಾಮ್ ಓಪನ್ ಮಾಡಿ ಪ್ರೊಫೈಲ್​ಗೆ ಹೋಗಿ. ಬಲ ಮೇಲ್ತುದಿಯಲ್ಲಿ (Upper Right Corner) ಕಾಣುವ ಮೂರು ಗೆರೆಯ ಐಕಾನ್ ಕ್ಲಿಕ್ ಮಾಡಿ 2. ಐಕಾನ್ ಕ್ಲಿಕ್ ಮಾಡಿದ ಕೂಡಲೇ ಬಲಭಾಗದಲ್ಲಿ ಕೆಳಗಡೆ ಸೆಟ್ಟಿಂಗ್ಸ್ ಒತ್ತಿ 3. ಸೆಟ್ಟಿಂಗ್ಸ್​ನಲ್ಲಿ Security ಕ್ಲಿಕ್ ಮಾಡಿದರೆ Two-Factor Authentication ಎಂಬ ಆಯ್ಕೆ ಕಾಣುತ್ತದೆ. ಎನೇಬಲ್ ಮಾಡಿಕೊಳ್ಳಿ. 4. Text Message ಎನೇಬಲ್ ಮಾಡಿಕೊಂಡು ನಿಮ್ಮ ಫೋನ್ ಸಂಖ್ಯೆಯನ್ನು ನಮೂದಿಸಿ ನೆಕ್ಸ್ಟ್ ಬಟನ್ ಒತ್ತಿ. ಸೆಕ್ಯುರಿಟಿ ಕೋಡ್ ಲಭಿಸಲು ಸ್ಕ್ರೀನ್​ನಲ್ಲಿ ತೋರಿಸಿದ ಸಲಹೆಗಳನ್ನು ಪಾಲಿಸಿ.

ತಪ್ಪು ಮಾಹಿತಿ ಟ್ವೀಟ್‌ ಮಾಡಿದರೆ ‘Manipulated media’ ಲೇಬಲ್ ಹಾಕಲಿದೆ ಟ್ವಿಟರ್

Published On - 5:35 pm, Mon, 21 December 20