ಭೀಕರ ಮಹಾಮಾರಿ ನಡುವೆ ವೈದ್ಯರ ನಿರ್ಲಕ್ಷ್ಯ.. ಕೊರೊನಾ ದೃಢವಾಗುತ್ತಿದ್ದಂತೆ ಡಿಸ್ಚಾರ್ಜ್, ಆಸ್ಪತ್ರೆಗಳ ಮುಂದೆ ನರಳಾಟ
ಹೆಮ್ಮಾರಿ ಕೊರೊನಾದಿಂದಾಗಿ ತಡರಾತ್ರಿ ಆಸ್ಪತ್ರೆ ಮುಂಭಾಗ 45 ವರ್ಷದ ಕೊವಿಡ್ ರೋಗಿ ಹಾಗೂ ಆತನ ಸಂಬಂಧಿಕರು ಆಸ್ಪತ್ರೆಯಲ್ಲಿ ಬೆಡ್ ಸಿಗದೆ ನರಳಾಡಿದ್ದಾರೆ. ಆಸ್ಪತ್ರೆ ಆವರಣಲ್ಲೇ ಗಂಟೆ ಗಟ್ಟಲೇ ಆಂಬುಲೆನ್ಸ್ ನಿಲ್ಲಿಸಿ ಕಾದಿದ್ದಾರೆ. ಆದ್ರೆ ವಿಪರ್ಯಾಸವೆಂದರೆ ತಡರಾತ್ರಿ ಎಷ್ಟೇ ಕಾದರೂ ಸೋಂಕಿತನನ್ನು ದಾಖಲಿಸಿಕೊಳ್ಳದೇ ವೈದ್ಯರು ನಿರ್ಲಕ್ಷ್ಯವಹಿಸಿದ್ದಾರೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನಿಂದ ಆಗುತ್ತಿರುವ ಅನಾಹುತಗಳು ಒಂದೆರೆಡಲ್ಲ. ಕೆಲವು ಕಡೆ ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆಗಳು ಎದುರಾಗುತ್ತಿವೆ. ಕೆಲವೆಡೆ ಆಕ್ಸಿಜನ್ ಕೊರತೆ ಇದ್ದು ಸೋಂಕಿತರು ಜೀವ ಕೈಯಲ್ಲಿ ಹಿಡಿದು ಒದ್ದಾಡುವಂತ ಪರಿಸ್ಥಿತಿ ಇದೆ. ಮತ್ತೊಂದೆಡೆ ರೋಗಿಗಳು ಆಸ್ಪತ್ರೆ ಮುಂದೆ ಆಂಬ್ಯುಲೆನ್ಸ್ನಲ್ಲೆ ಪ್ರಾಣ ಬಿಡುತ್ತಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಮಹಾಮಾರಿಯಿಂದ ಅನೇಕ ಸಮಸ್ಯೆಗಳು, ಸಾವು-ನೋವುಗಳು ಸಂಭವಿಸುತ್ತಿವೆ. ಈಗ ಇದೇ ರೀತಿಯ ಮತ್ತೊಂದು ಘಟನೆ ನಡೆದಿದೆ.
ಹೆಮ್ಮಾರಿ ಕೊರೊನಾದಿಂದಾಗಿ ತಡರಾತ್ರಿ ಆಸ್ಪತ್ರೆ ಮುಂಭಾಗ 45 ವರ್ಷದ ಕೊವಿಡ್ ರೋಗಿ ಹಾಗೂ ಆತನ ಸಂಬಂಧಿಕರು ಆಸ್ಪತ್ರೆಯಲ್ಲಿ ಬೆಡ್ ಸಿಗದೆ ನರಳಾಡಿದ್ದಾರೆ. ಆಸ್ಪತ್ರೆ ಆವರಣಲ್ಲೇ ಗಂಟೆ ಗಟ್ಟಲೇ ಆಂಬುಲೆನ್ಸ್ ನಿಲ್ಲಿಸಿ ಕಾದಿದ್ದಾರೆ. ಆದ್ರೆ ವಿಪರ್ಯಾಸವೆಂದರೆ ತಡರಾತ್ರಿ ಎಷ್ಟೇ ಕಾದರೂ ಸೋಂಕಿತನನ್ನು ದಾಖಲಿಸಿಕೊಳ್ಳದೇ ವೈದ್ಯರು ನಿರ್ಲಕ್ಷ್ಯವಹಿಸಿದ್ದಾರೆ. ವೆಂಟಿಲೇಟರ್ನಲ್ಲಿ ಸಾವು-ಬದುಕಿನ ನಡುವೆ ವ್ಯಕ್ತಿ ನರಳಾಡುವಂತ ಪರಿಸ್ಥಿತಿಗೆ ದೂಡಿದ್ದಾರೆ. ಹೀಗಾಗಿ ಇಂತಹ ಕೊರೊನಾ ಭೀಕರತೆಯ ಸಮಯದಲ್ಲಿ ಕೆಲ ಆಸ್ಪತ್ರೆ ಸಿಬ್ಬಂದಿ ಮಾನವೀಯತೆ ಮರೆತರಾ? ಎಂಬ ನೋವು ಕಾಡುತ್ತಿದೆ.
ಕೊರೊನಾ ದೃಢಪಡುತ್ತಿದ್ದಂತೆ ಏಕಾಏಕಿ ಡಿಸ್ಚಾರ್ಜ್ ಶೇಷಾದ್ರಿಪುರಂನ ಅಪೋಲೊ ಆಸ್ಪತ್ರೆ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಕೊವಿಡ್ ಸೋಂಕಿತನ ಕುಟುಂಬಸ್ಥರು ಆರೋಪಿಸಿದ್ದಾರೆ. ಅಪೋಲೊ ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮೊದಲಿಗೆ ರೋಗಿಯನ್ನು ಆಕ್ಸಿಜನ್ ವಾರ್ಡ್ಗೆ ಹಾಕಿದ್ದ ವೈದ್ಯರು ಕೊರೊನಾ ದೃಢಪಡುತ್ತಿದ್ದಂತೆ ಏಕಾಏಕಿ ಡಿಸ್ಚಾರ್ಜ್ ಮಾಡಿದ್ದಾರೆ. ಒತ್ತಾಯ ಪೂರ್ವಕವಾಗಿ ಸಂಬಂಧಿಕರಿಂದ ಸಹಿ ಪಡೆದು ನಿನ್ನೆ ಮಧ್ಯಾಹ್ನದಿಂದ ರೋಗಿ ಕರೆದೊಯ್ಯುವಂತೆ ಒತ್ತಾಯಿಸಿದ್ದಾರೆ. ಬಳಿಕ ಏಕಾಏಕಿ ಡಿಸ್ಚಾರ್ಜ್ ಮಾಡಿ ಹೊರದಬ್ಬಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇನ್ನು ಅಪೋಲೊ ಆಸ್ಪತ್ರೆಯಿಂದ ಇಂದಿರಾನಗರದ ಇಎಸ್ಐ ಆಸ್ಪತ್ರೆಗೆ ಸೋಂಕಿತನನ್ನು ಕರೆದುಕೊಂಡು ಬರಲಾಗಿದೆ. ಆದ್ರೆ ಇಲ್ಲೂ ಕೂಡ ಇದೇ ರೀತಿಯ ಧೋರಣೆಯಾಗಿದೆ.
ತಡರಾತ್ರಿ ಇಎಸ್ಐಗೆ ಬಂದ ಸೋಂಕಿತನನ್ನು ದಾಖಲಿಸಿಕೊಳ್ಳದೆ ಬೆಡ್ ನೀಡದೇ ಆಸ್ಪತ್ರೆ ಗೇಟ್ ಬಳಿಯೇ ಸೋಂಕಿತ ನರಳಾಡಿದ್ದಾನೆ. ಆಕ್ಸಿಜನ್ ಖಾಲಿಯಾಗುವ ಸ್ಥಿತಿಯಿದೆ ಅಂತ ಕುಟುಂಬಸ್ಥರು ಕಣ್ಣೀರು ಹಾಕ್ತಿದ್ದು ಬೆಳಿಗ್ಗೆಯಿಂದ ಒಂದು ತುತ್ತು ಅನ್ನ ತಿನ್ನದೇ, ರೋಗಿ ಜೊತೆ ಓಡಾಡುತ್ತಿದ್ದೇವೆ ಸಾರ್, ಪ್ರಾಣ ಹೋದ್ರೆ ಇಲ್ಲೆ ಹೋಗ್ಲಿ. ಖಾಸಗಿ ಆಸ್ಪತ್ರೆಯವ್ರು ಕೇಳೊವಷ್ಟು ಹಣ ನಮ್ಮಲ್ಲಿಲ್ಲ. ನಮ್ಮಲ್ಲಿ ಹಣವಿಲ್ಲದ್ದಕ್ಕೆ ಹೊರ ಹಾಕಿದ್ದಾರೆ. ಸುಮಾರು 2 ಗಂಟೆಗೆ ಕೊವಿಡ್ ಧೃಡಪಡಿಸಲು 20 ಸಾವಿರ ಹಣ ಪಡೆದಿದ್ದಾರೆ. ಹೆಚ್ಚುವರಿ ಹಣ ಇಲ್ಲವೆಂದಿದ್ದಕ್ಕೆ ಆಸ್ಪತ್ರೆಯಿಂದ ಏಕಾಏಕಿ ಡಿಸ್ಚಾರ್ಜ್ ಮಾಡಿದ್ದಾರೆ ಎಂದು ಮಾಧ್ಯಮಗಳ ಎದುರು ಸೋಂಕಿತನ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಬಳಿಕ ಸುಮಾರು 5 ಗಂಟೆಗಳ ಕಾಲ ಇಎಸ್ಐ ಆಸ್ಪತ್ರೆ ಮುಂದೆ ಸೋಂಕಿತ ಕಾದರೂ ಆಸ್ಪತ್ರೆ, ಸಿಬ್ಬಂದಿ ಯಾರು ದಾಖಲಿಸಿಕೊಳ್ಳದೆ ನಿರ್ಲಕ್ಷ್ಯವಹಿಸಿದ್ದಾರೆ. ಕೊನೆಗೆ ಮಾಧ್ಯಮದ ಸಹಾಯದಿಂದ ಕೆಸಿ ಜನರಲ್ ಆಸ್ಪತ್ರೆಗೆ 45 ವರ್ಷದ ಸೋಂಕಿತನನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಆಕ್ಸಿಜನ್, ರೆಮ್ಡಿಸಿವಿರ್ ಔಷಧಗಳ ತೀವ್ರ ಕೊರತೆ: ಆತಂಕ ವ್ಯಕ್ತಪಡಿಸಿದ ಸಿಎಂ ಅರವಿಂದ್ ಕೇಜ್ರಿವಾಲ್