ದೆಹಲಿಯಲ್ಲಿ ಆಕ್ಸಿಜನ್​, ರೆಮ್​ಡಿಸಿವಿರ್ ಔಷಧ​​ಗಳ ತೀವ್ರ ಕೊರತೆ: ಆತಂಕ ವ್ಯಕ್ತಪಡಿಸಿದ ಸಿಎಂ ಅರವಿಂದ್ ಕೇಜ್ರಿವಾಲ್​

ದೆಹಲಿಯಲ್ಲಿ ಆಕ್ಸಿಜನ್​, ರೆಮ್​ಡಿಸಿವಿರ್ ಔಷಧ​​ಗಳ ತೀವ್ರ ಕೊರತೆ: ಆತಂಕ ವ್ಯಕ್ತಪಡಿಸಿದ ಸಿಎಂ ಅರವಿಂದ್ ಕೇಜ್ರಿವಾಲ್​
ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​

ದೆಹಲಿಯಲ್ಲಿ ಸೀಮಿತ ಸಂಖ್ಯೆಯಲ್ಲಿ ಐಸಿಯು ಬೆಡ್​ಗಳಿವೆ. ಈಗಂತೂ ಕೊವಿಡ್​ ರೋಗಿಗಳು ಹೆಚ್ಚುತ್ತಿರುವುದರಿಂದ ಆಕ್ಸಿಜನ್​, ಐಸಿಯು ಬೆಡ್​ಗಳು, ರೆಮ್​ಡಿಸಿವಿರ್ ಔಷಧಗಳು ಶೀಘ್ರವಾಗಿ ಕಡಿಮೆಯಾಗುತ್ತಿವೆ ಎಂದು ಅರವಿಂದ್ ಕೇಜ್ರಿವಾಲ್​ ತಿಳಿಸಿದ್ದಾರೆ.

Lakshmi Hegde

|

Apr 18, 2021 | 9:27 AM

ದೆಹಲಿ: ಆಸ್ಪತ್ರೆಗಳಲ್ಲಿ ಆಕ್ಸಿಜನ್​ ಕೊರತೆ ವಿಷಯ ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಮಧ್ಯೆ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್ ಕೂಡ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಕೊರೊನಾ ರೋಗಿಗಳ ಚಿಕಿತ್ಸೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಆಕ್ಸಿಜನ್​ ಮತ್ತು ರೆಮ್​ಡಿಸಿವಿರ್ ಔಷಧ​​ಗಳ ತೀವ್ರ ಕೊರತೆ ಎದುರಾಗಿದೆ ಎಂದು ಹೇಳಿದ್ದಾರೆ. ದೆಹಲಿಯಲ್ಲಿಯೂ ಸಹ ಕೊರೊನಾ ದಿನೇದಿನೆ ಹೆಚ್ಚಾಗುತ್ತಿದ್ದು, ಒಂದು ದಿನದಲ್ಲಿ 24ಸಾವಿರದ ಆಸುಪಾಸು ಕೇಸ್​ಗಳು ದಾಖಲಾಗುತ್ತಿವೆ ಎಂದು ತಿಳಿಸಿದ್ದಾರೆ.

ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅರವಿಂದ್ ಕೇಜ್ರಿವಾಲ್​, ದೆಹಲಿಯಲ್ಲಿ ಒಂದೇ ದಿನ 24 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್​ಗಳು ದಾಖಲಾಗುತ್ತಿವೆ. ಆದರೆ ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ಆಕ್ಸಿಜನ್​, ರೆಮ್​ಡಿಸಿವಿರ್ ಔಷಧಗಳು ಸಾಕಾಗುತ್ತಿಲ್ಲ. ತೀವ್ರತರನಾದ ಕೊರತೆ ಎದುರಾಗಿದೆ. ಇನ್ನು ಬ್ಲಾಕ್​ ಮಾರ್ಕೆಟ್​​ನಲ್ಲಿ ಔಷಧ ಮಾರಾಟ ಮಾಡುವ ದಂಧೆಯೂ ಶುರುವಾಗಿದ್ದು, ಅವರ ವಿರುದ್ಧ ಕ್ರಮಕ್ಕೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.

ದೆಹಲಿಯಲ್ಲಿ ಸೀಮಿತ ಸಂಖ್ಯೆಯಲ್ಲಿ ಐಸಿಯು ಬೆಡ್​ಗಳಿವೆ. ಈಗಂತೂ ಕೊವಿಡ್​ ರೋಗಿಗಳು ಹೆಚ್ಚುತ್ತಿರುವುದರಿಂದ ಆಕ್ಸಿಜನ್​, ಐಸಿಯು ಬೆಡ್​ಗಳು, ರೆಮ್​ಡಿಸಿವಿರ್ ಔಷಧಗಳು ಶೀಘ್ರವಾಗಿ ಕಡಿಮೆಯಾಗುತ್ತಿವೆ. ಇನ್ನು 2-3ದಿನಗಳಲ್ಲಿ 6000 ಬೆಡ್​ಗಳನ್ನು ಹೆಚ್ಚಿಸುತ್ತೇವೆ. ಈ ಕೊರೊನಾ ಇನ್ನೆಷ್ಟು ಉತ್ತುಂಗಕ್ಕೆ ಹೋಗುತ್ತದೆ ಎಂಬ ಅಂದಾಜು ಮಾಡಲು ಸಾಧ್ಯವಾಗುತ್ತಿಲ್ಲ ಎಂದರು. ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅರವಿಂದ್ ಕೇಜ್ರಿವಾಲ್, ಕಳೆದ ನವೆಂಬರ್​ನಲ್ಲಿ ಕೇಂದ್ರ ಸರ್ಕಾರ 4100 ಬೆಡ್​ಗಳನ್ನು ನೀಡಿತ್ತು. ಆದರೆ ಈ ಬಾರಿ ಕೇವಲ 1800 ಹಾಸಿಗೆಗಳ ವ್ಯವಸ್ಥೆ ಮಾಡಿದೆ. ಶೇ.50ರಷ್ಟು ಬೆಡ್​ಗಳನ್ನು ಕೊವಿಡ್ ರೋಗಿಗಳಿಗೆ ಮೀಸಲಿಡಿ ಎಂದು ಆರೋಗ್ಯ ಸಚಿವ ಹರ್ಷವರ್ಧನ್​ ಅವರಿಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ದೆಹಲಿಯಲ್ಲಿ ಕೆಲವು ಲ್ಯಾಬ್​ಗಳು ಕೊವಿಡ್ 19 ರಿಪೋರ್ಟ್ ನೀಡಲು 2-3ದಿನ ವಿಳಂಬ ಮಾಡುತ್ತಿವೆ. ಈ ಬಗ್ಗೆ ದೂರು ಬಂದಿದ್ದು ಅದರ ಬಗ್ಗೆ ಗಮನ ಹರಿಸುತ್ತೇವೆ. ಅಂಥ ಪ್ರಯೋಗಾಲಯಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ಭಾರತದಲ್ಲಿ ಇಂದು 2 ಲಕ್ಷದ 60 ಸಾವಿರ ಮಂದಿಗೆ ಸೋಂಕು, 1,495 ಮಂದಿ ಬಲಿ

ಆಳಂಗಾ ಗ್ರಾಮದ 60 ಜನರಿಗೆ ಕೊರೊನಾ, ಭಾಗವತ ಪುರಾಣ ಓದಲು ಮಹಾರಾಷ್ಟ್ರದಿಂದ ಬಂದವರ ಮೇಲೆ ಶಂಕೆ

Follow us on

Related Stories

Most Read Stories

Click on your DTH Provider to Add TV9 Kannada