ಭಾರತದಲ್ಲಿ ಇಂದು 2 ಲಕ್ಷದ 60 ಸಾವಿರ ಮಂದಿಗೆ ಸೋಂಕು, 1,495 ಮಂದಿ ಬಲಿ

ಭಾರತದಲ್ಲಿ ಇಂದು ಹೊಸದಾಗಿ 2,60,533 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸತತ ನಾಲ್ಕನೇ ದಿನವೂ ಎರಡು ಲಕ್ಷಕ್ಕೂ ಅಧಿಕ ಕೊರೊನಾ ಪಾಸಿಟಿವ್ ಕೇಸ್​ಗಳು ಪತ್ತೆಯಾಗುತ್ತಿದ್ದು ಹಳೇ ದಾಖಲೆಗಳನ್ನು ಮುರಿದು ಇಂದೂ ಸಹ ಮತ್ತೊಂದು ಹೊಸ ದಾಖಲೆಯನ್ನು ಬರೆದಿದೆ.

ಭಾರತದಲ್ಲಿ ಇಂದು 2 ಲಕ್ಷದ 60 ಸಾವಿರ ಮಂದಿಗೆ ಸೋಂಕು, 1,495 ಮಂದಿ ಬಲಿ
ಜಲಂದರ್​ನಲ್ಲಿ ಕೊವಿಡ್ ಪರೀಕ್ಷೆ
Follow us
ಆಯೇಷಾ ಬಾನು
|

Updated on:Apr 18, 2021 | 12:23 PM

ದೆಹಲಿ: ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದೆ. ಹಳೇ ದಾಖಲೆಗಳನ್ನೆಲ್ಲ ಮುರಿಯುತ್ತ ಓಡುತ್ತಿದೆ. ಭಾರತದಲ್ಲಿ ಇಂದು ಹೊಸದಾಗಿ 2,60,533 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸತತ ನಾಲ್ಕನೇ ದಿನವೂ ಎರಡು ಲಕ್ಷಕ್ಕೂ ಅಧಿಕ ಕೊರೊನಾ ಪಾಸಿಟಿವ್ ಕೇಸ್​ಗಳು ಪತ್ತೆಯಾಗುತ್ತಿದ್ದು ಹಳೇ ದಾಖಲೆಗಳನ್ನು ಮುರಿದು ಇಂದೂ ಸಹ ಮತ್ತೊಂದು ಹೊಸ ದಾಖಲೆಯನ್ನು ಬರೆದಿದೆ.

ಕಳೆದ 24 ಗಂಟೆಯ ಅವಧಿಯಲ್ಲಿ 2,60,533 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 1,495 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯ ವರೆಗೆ ಒಟ್ಟು 1,47,82,461 ಸೋಂಕಿತರು ಪತ್ತೆಯಾಗಿದ್ದಾರೆ. ಹಾಗೂ 1,77,167 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸತತ ನಾಲ್ಕನೇ ದಿನವೂ ಎರಡು ಲಕ್ಷಕ್ಕೂ ಅಧಿಕ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ನೆನ್ನೆಗಿಂತ ಇಂದು 26 ಸಾವಿರ ಕೊರೊನಾ ಪಾಸಿಟಿವ್ ಕೇಸ್​ಗಳು ಹೆಚ್ಚಳವಾಗಿವೆ. ಕೇವಲ ಹತ್ತೇ ದಿನದಲ್ಲಿ ಕೊವಿಡ್ ಕೇಸ್​ಗಳು ದುಪ್ಪಟ್ಟು ಆಗುತ್ತಾ ಸಾಗುತ್ತಿದೆ. ಏಪ್ರಿಲ್‌ 4- ಒಂದು ಲಕ್ಷ ಕೊರೊನಾ ಕೇಸ್ ಏಪ್ರಿಲ್ 14- ಎರಡು ಲಕ್ಷ ಕೊರೊನಾ ಕೇಸ್ ಏಪ್ರಿಲ್ 18- ಎರಡು ಲಕ್ಷದ ಅರವತ್ತು‌ ಸಾವಿರ ಕೊರೊನಾ ಪಾಸಿಟಿವ್ ಕೇಸ್​ಗಳು ಪತ್ತೆಯಾಗಿವೆ.

ಇನ್ನು ಉತ್ತರ ಪ್ರದೇಶದಲ್ಲಿ 27,334 ಹೊಸ ಪ್ರಕರಣಗಳು ಪತ್ತೆಯಾಗಿವೆ. ದೆಹಲಿಯಲ್ಲಿ ಹೊಸದಾಗಿ 24,375 ಮಂದಿಗೆ ಕೊರೊನಾ ತಗುಲಿದೆ. ಮಹಾರಾಷ್ರವು ಶನಿವಾರ ಅತಿ ಹೆಚ್ಚು ಸಾವುಗಳನ್ನು ವರದಿ ಮಾಡಿದೆ. ಶನಿವಾರ 419 ಮಂದಿ ಕೊರೊನಾಗೆ ಬಲಿಯಾಗಿದ್ದರು. ದೆಹಲಿಯಲ್ಲಿ ಹೊಸದಾಗಿ ಇಂದು 167 ಮಂದಿ ಮೃತಪಟ್ಟಿದ್ದಾರೆ. ಹಾಗೂ ಛತ್ತಿಸ್​ಘಡದಲ್ಲಿ 138 ಸೋಂಕಿತರು ಮೃತಪಟ್ಟಿದ್ದಾರೆ. ಅಮೆರಿಕಾ ಮತ್ತು ಮೆಕ್ಸಿಕೋಗಳಿಗಿಂತ ಭಾರತ ಎರಡನೇ ಅತಿ ಹೆಚ್ಚಿನ ಸರಾಸರಿ ದೈನಂದಿನ ಸಾವುಗಳನ್ನು ವರದಿ ಮಾಡಿದೆ.

ಕೊರೊನಾ ಸೋಂಕಿನಿಂದ 1,28,09,643 ಜನರು ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳು 18,01,316. ಹಾಗೂ ಭಾರತದಲ್ಲಿ 12,26,22,590 ಜನರಿಗೆ ಕೊವಿಡ್ ಲಸಿಕೆ ನೀಡಲಾಗಿದೆ. ದೇಶದಲ್ಲಿ ನಿನ್ನೆ 15,66,394 ಕೊವಿಡ್ ಸ್ಯಾಂಪಲ್ಸ್ ಟೆಸ್ಟ್ ಮಾಡಲಾಗಿದೆ. ಏ.17ರವರೆಗೆ ಒಟ್ಟು 26,65,38,416 ಸ್ಯಾಂಪಲ್ಸ್ ಟೆಸ್ಟ್ ಆಗಿದೆ ಎಂದು ಕೊವಿಡ್-19 ಟೆಸ್ಟ್ ಬಗ್ಗೆ ಐಸಿಎಂಆರ್‌ನಿಂದ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ಆಳಂಗಾ ಗ್ರಾಮದ 60 ಜನರಿಗೆ ಕೊರೊನಾ, ಭಾಗವತ ಪುರಾಣ ಓದಲು ಮಹಾರಾಷ್ಟ್ರದಿಂದ ಬಂದವರ ಮೇಲೆ ಶಂಕೆ

Published On - 9:19 am, Sun, 18 April 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ