AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಳಂಗಾ ಗ್ರಾಮದ 60 ಜನರಿಗೆ ಕೊರೊನಾ, ಭಾಗವತ ಪುರಾಣ ಓದಲು ಮಹಾರಾಷ್ಟ್ರದಿಂದ ಬಂದವರ ಮೇಲೆ ಶಂಕೆ

ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿಯಲ್ಲಿರುವ ಆಳಂಗಾ ಗ್ರಾಮ ಒಂದರಲ್ಲೇ ಏಕಾ ಏಕಿ 60 ಜನರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಹಾಗೂ ಇಬ್ಬರು ಬಲಿಯಾಗಿರುವುದು ಗ್ರಾಮದ ಜನರಿಗೆ ಮತ್ತಷ್ಟು ಆತಂಕ ಹುಟ್ಟಿಸುವಂತೆ ಮಾಡಿದೆ. ಇನ್ನು ಕೆಲವು ದಿನಗಳ ಹಿಂದೆ ಗ್ರಾಮದ ವ್ಯಕ್ತಿಯೊಬ್ಬರ ಮನೆಗೆ ಭಾಗವತ ಪುರಾಣ ಓದಲು ಮಹಾರಾಷ್ಟ್ರದವರು ಬಂದಿದ್ದರು.

ಆಳಂಗಾ ಗ್ರಾಮದ 60 ಜನರಿಗೆ ಕೊರೊನಾ, ಭಾಗವತ ಪುರಾಣ ಓದಲು ಮಹಾರಾಷ್ಟ್ರದಿಂದ ಬಂದವರ ಮೇಲೆ ಶಂಕೆ
ಕೊರೊನಾ ತಪಾಸಣೆ ಪ್ರಾತಿನಿಧಿಕ ಚಿತ್ರ
ಆಯೇಷಾ ಬಾನು
|

Updated on:Apr 18, 2021 | 7:50 AM

Share

ಕಲಬುರಗಿ: ಕಿಲ್ಲರ್ ಕೊರೊನಾದ ಎರಡನೇ ಅಲೆ ಭಾರಿ ಅನಾಹುತಗಳನ್ನು ಮಾಡುತ್ತಿದೆ. ದಿನದಿಂದ ದಿನಕ್ಕೆ ಇದರ ಆರ್ಭಟ ಜೊರಾಗುತ್ತಿದ್ದು ಸಾವು ನೋವುಗಳ ಸಂಖ್ಯೆ ಏರುತ್ತಿದೆ. ಇನ್ನು ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆಯ ಅಬ್ಬರ ಹೆಚ್ಚಾಗಿದೆ. ಜಿಲ್ಲೆಯ ಆಳಂದ ತಾಲೂಕಿನ ಆಳಂಗಾ ಗ್ರಾಮದ 60 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು ಈ ಇಬ್ಬರು ಮೃತಪಟ್ಟಿದ್ದಾರೆ.

ಭಾಗವತ ಪುರಾಣ ಓದಲು ಮಹಾರಾಷ್ಟ್ರದಿಂದ ಬಂದವರಿಂದ ತಗುಲ್ತಾ ಸೋಂಕು ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿಯಲ್ಲಿರುವ ಆಳಂಗಾ ಗ್ರಾಮ ಒಂದರಲ್ಲೇ ಏಕಾ ಏಕಿ 60 ಜನರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಹಾಗೂ ಇಬ್ಬರು ಬಲಿಯಾಗಿರುವುದು ಗ್ರಾಮದ ಜನರಿಗೆ ಮತ್ತಷ್ಟು ಆತಂಕ ಹುಟ್ಟಿಸುವಂತೆ ಮಾಡಿದೆ. ಇನ್ನು ಕೆಲವು ದಿನಗಳ ಹಿಂದೆ ಗ್ರಾಮದ ವ್ಯಕ್ತಿಯೊಬ್ಬರ ಮನೆಗೆ ಭಾಗವತ ಪುರಾಣ ಓದಲು ಮಹಾರಾಷ್ಟ್ರದವರು ಬಂದಿದ್ದರು. ಅವರು ಬಂದು ಹೋದ ಮೇಲೆಯೇ 60 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಹೀಗಾಗಿ ಅವರಿಂದಲೇ ಇಡೀ ಗ್ರಾಮಕ್ಕೆ ಸೋಂಕು ಹರಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಆಳಂಗಾ ಗ್ರಾಮದ ಜನ ಕೊರೊನಾ ಸೋಂಕಿನಿಂದಾಗಿ ಭಯದಲ್ಲೇ ಕಾಲ ಕಳೆಯುವಂತಾಗಿದೆ.

ನಿನ್ನೆ ಕರ್ನಾಟಕ ರಾಜ್ಯದಲ್ಲಿ ಒಂದೇ ದಿನ 17,489 ಜನರಲ್ಲಿ ಸೋಂಕು ದೃಢಪಟ್ಟಿತ್ತು. ಹಾಗೂ 80 ಜನ ಕೊರೊನಾಗೆ ಬಲಿಯಾಗಿದ್ದರು. ಕಲಬುರಗಿಯಲ್ಲಿ 560 ಮಂದಿಯಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ಹಾಗೂ ಮೂವರು ಮೃತಪಟ್ಟಿದ್ದರು. ಈಗ ದಿನದಿಂದ ದಿನಕ್ಕೆ ಕೊರೊನಾ ಆರ್ಭಟ ಹೆಚ್ಚಾಗುತ್ತಿದೆ. ಜನರ ಆದಷ್ಟು ಮುಂಜಾಗ್ರತೆವಹಿಸಿದರೆ ಒಳಿತು. ಇಲ್ಲದಿದ್ದರೆ ಯಾವ ಕ್ಷಣದಲ್ಲಾದರೂ ಕೊರೊನಾ ಜನರ ದೇಹ ಸೇರಬಹುದು.

ಇದನ್ನೂ ಓದಿ: ಕೊರೊನಾ ಸೋಂಕಿತರನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಒತ್ತಡ; ಕೊವಿಡ್ ತುರ್ತು ಸಹಾಯವಾಣಿಯಿಂದಲೂ ಸಿಗದ ನೆರವು

Published On - 7:48 am, Sun, 18 April 21