AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Remdesivir injection: ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆ ಇಳಿಸಿದ 7 ಫಾರ್ಮಾ ಕಂಪೆನಿಗಳು; ಯಾವ ಕಂಪೆನಿಯಿಂದ ಎಷ್ಟು ಬೆಲೆ ನಿಗದಿ?

ಕೊರೊನಾ ರೋಗಿಗಳ ಚಿಕಿತ್ಸೆಗೆ ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆಯನ್ನು 7 ಫಾರ್ಮಾಸ್ಯುಟಿಕಲ್ ಕಂಪೆನಿಗಳು ಕಡಿಮೆ ಮಾಡಿವೆ. ಯಾವ ಕಂಪೆನಿ ಎಷ್ಟು ಬೆಲೆ ಇಳಿಸಿವೆ ಎಂಬ ಮಾಹಿತಿ ಇಲ್ಲಿದೆ.

Remdesivir injection: ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆ ಇಳಿಸಿದ 7 ಫಾರ್ಮಾ ಕಂಪೆನಿಗಳು; ಯಾವ ಕಂಪೆನಿಯಿಂದ ಎಷ್ಟು ಬೆಲೆ ನಿಗದಿ?
ರೆಮ್​ಡೆಸಿವಿರ್ ಇಂಜೆಕ್ಷನ್ (ಪ್ರಾತಿನಿಧಿಕ ಚಿತ್ರ)
Srinivas Mata
|

Updated on: Apr 17, 2021 | 8:14 PM

Share

ನವದೆಹಲಿ: ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆಯನ್ನು ಏಳು ಫಾರ್ಮಾಸ್ಯುಟಿಕಲ್ ಕಂಪೆನಿಗಳು ‌ಸ್ವಪ್ರೇರಣೆಯಿಂದ ಇಳಿಕೆ ಮಾಡಿವೆ. ಕೊರೊನಾ ರೋಗಿಗಳ ಚಿಕಿತ್ಸೆಗೆ ಈ ರೆಮ್​ಡಿಸಿವಿರ್ ನೀಡಲಾಗುತ್ತದೆ. ಹಾಗಿದ್ದರೆ ಯಾವ ಫಾರ್ಮಾಸ್ಯುಟಿಕಲ್ ಕಂಪೆನಿಯ ಇಂಜೆಕ್ಷನ್ ಎಷ್ಟಕ್ಕೆ ಇಳಿಕೆಯಾಯಿತು ಎಂಬ ವಿವರ ಹೀಗಿದೆ: ಕ್ಯಾಡಿಲಾ ಹೆಲ್ತ್‌ಕೇರ್- 2,800 ರೂ.ನಿಂದ ರೂ. 899ಕ್ಕೆ ಇಳಿಕೆ, ಬಯೋಕಾನ್- 3,950ರೂ.ನಿಂದ 2,450ರೂ.ಗೆ, ಡಾಕ್ಟರ್ ರೆಡ್ಡೀಸ್ ಲ್ಯಾಬ್- ರೂ. 5,400ನಿಂದ ರೂ. 2,700ಕ್ಕೆ, ಸಿಪ್ಲಾ- 4 ಸಾವಿರ ರೂ.ನಿಂದ 3,000 ರೂ.ಗೆ, ಮೈಲಾನ್ ಫಾರ್ಮಸಿ-4,800ರೂ.ನಿಂದ 3,400ರೂ.ಗೆ, ಜ್ಯುಬಿಲೆಂಟ್ ಜೆನೆರಿಕ್ಸ್- 4,700ರೂ. ನಿಂದ 3,400ರೂ.ಗೆ, ಹೆಟೆರೋ ಹೆಲ್ತ್‌ಕೇರ್- ರೂ. 5,400ರಿಂದ ರೂ. 3,490ಕ್ಕೆ ಇಳಿಕೆ ಆಗಿದೆ.

ಈ ಏಳು ಉತ್ಪಾದಕರನ್ನು ಹೊರತುಪಡಿಸಿ, ಭಾರತದ ಅತಿ ದೊಡ್ಡ ಔಷಧ ತಯಾರಕ ಸನ್ ಫಾರ್ಮಾಸ್ಯುಟಿಕಲ್ಸ್ ಕಂಪೆನಿಯು ಸಿನ್​ಜೀನ್ ಜತೆಗೂಡಿ ರೆಮ್​ಡಿಸಿವಿರ್ ಉತ್ಪಾದನೆ ಮಾಡುತ್ತದೆ. ಸನ್ ಫಾರ್ಮಾದಿಂದ ಔಷಧ ಉತ್ಪಾದನೆಯ ಪ್ರಮಾಣ ಹೆಚ್ಚಿಸುತ್ತಿದೆ. ಸಿನ್​ಜೀನ್ ಬ್ರ್ಯಾಂಡ್ ಅಡಿಯಲ್ಲಿ ರೆಮ್​ವಿನ್ ಮಾರಾಟ ಮಾಡುತ್ತಿದೆ. ಅಂದ ಹಾಗೆ ಕೇಂದ್ರ ಸರ್ಕಾರದ ಮಧ್ಯಪ್ರವೇಶದಿಂದ ಈ ಇಂಜೆಕ್ಷನ್ ಬೆಲೆಯಲ್ಲಿ ಇಳಿಕೆ ಆಗಿದೆ. ವಿದೇಶಗಳಿಗೆ ರೆಮ್​ಡಿಸಿವಿರ್ ಇಂಜೆಕ್ಷನ್ ರಫ್ತು ನಿಷೇಧ ಮಾಡಲಾಗಿದ್ದು, ಇಂಜೆಕ್ಷನ್ ಉತ್ಪಾದನೆಯನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಡಿ.ವಿ. ಸದಾನಂದ ಗೌಡ ಅವರ ಮೇಲೆ ಕೇಂದ್ರ ಔಷಧ ಇಲಾಖೆ ಜವಾಬ್ದಾರಿ ಇದೆ.

ಕೋವಿಡ್- 19 ಎರಡನೇ ಅಲೆಯಲ್ಲಿ ಭಾರತದ ಹಲವು ಭಾಗಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳು ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಆಸ್ಪತ್ರೆಗಳಲ್ಲಿ ಬೆಡ್​ಗಳಿಗೆ ಕೊರತೆ ಎದುರಾಗಿದೆ. ಇಂಥ ಸನ್ನಿವೇಶದಲ್ಲಿ ಇಂಜೆಕ್ಷನ್ ಉತ್ಪಾದನೆಯನ್ನು ಹೆಚ್ಚು ಮಾಡಿ, ಬೆಲೆ ಇಳಿಕೆಗೆ ಮುಂದಾಗಲಾಗಿದೆ. ಶುಕ್ರವಾರದಂದು ಭಾರತದಲ್ಲಿ 2,34,000 ಹೊಸ ಪ್ರಕರಣಗಳು ವರದಿ ಆಗಿವೆ. ಆ ಪೈಕಿ ಮಹಾರಾಷ್ಟ್ರವೊಂದರಲ್ಲೇ 64,000ದಷ್ಟು ಕೊರೊನಾ ಸೋಂಕಿತರು ಸೇರ್ಪಡೆ ಆಗಿದ್ದಾರೆ. ಉತ್ತರಪ್ರದೇಶದಲ್ಲಿ 27,000ಕ್ಕೂ ಹೆಚ್ಚು ಮತ್ತು ದೆಹಲಿಯಲ್ಲಿ 19,000ಕ್ಕೂ ಹೆಚ್ಚು ಪ್ರಕರಣಗಳು ಬಂದಿವೆ.

ಇದನ್ನೂ ಓದಿ: ಕರ್ನಾಟಕದಲ್ಲಿ ರೆಮ್​ಡಿಸಿವಿರ್ ಔಷಧ ಕೊರತೆ ಇಲ್ಲ: ಹೈಕೋರ್ಟ್​ಗೆ ರಾಜ್ಯ ಸರ್ಕಾರ ಮಾಹಿತಿ

(Remdesivir injection price decreased by 7 pharmaceutical companies in India)

ದೇವೇಗೌಡರ ಈ ನಿರ್ಧಾರದ ಹಿಂದಿರುವ ರಾಜಕೀಯ ಲೆಕ್ಕಾಚಾರವೇನು ಗೊತ್ತಾ?
ದೇವೇಗೌಡರ ಈ ನಿರ್ಧಾರದ ಹಿಂದಿರುವ ರಾಜಕೀಯ ಲೆಕ್ಕಾಚಾರವೇನು ಗೊತ್ತಾ?
ರಾಯರ ಮಠಕ್ಕೂ ತಟ್ಟಿದ ಭಾಷಾ ವಿವಾದ: ತೆಲುಗು ಭಾಷಿಕರ ವಿರೋಧ
ರಾಯರ ಮಠಕ್ಕೂ ತಟ್ಟಿದ ಭಾಷಾ ವಿವಾದ: ತೆಲುಗು ಭಾಷಿಕರ ವಿರೋಧ
ಡಬಲ್ ಎಲಿಮಿನೇಷನ್​​: ಮನೆ ಮಂದಿಗೆ ಶಾಕ್ ಕೊಟ್ಟ ಬಿಗ್​​ಬಾಸ್
ಡಬಲ್ ಎಲಿಮಿನೇಷನ್​​: ಮನೆ ಮಂದಿಗೆ ಶಾಕ್ ಕೊಟ್ಟ ಬಿಗ್​​ಬಾಸ್
ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು
ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!