ಹಣ್ಣುಗಳ ರಾಜನ ಸಾಗಣೆಗೆ ವಿಶೇಷ ರೈಲು; 200 ಟನ್​ ಮಾವಿನ ಹಣ್ಣುಗಳನ್ನು ಆಂಧ್ರದಿಂದ ದೆಹಲಿಗೆ ಸಾಗಿಸಿದ ಮೊದಲ ಟ್ರೇನ್​

ಹೀಗೆ ಹಣ್ಣುಗಳ ಸಾಗಣೆ ಸೇವೆಯನ್ನು ಮೊದಲು ಪ್ರಾರಂಭಿಸಿದ್ದು, ಪೂರ್ವ ಕರಾವಳಿ ರೈಲ್ವೆಯ ವಾಲ್ಟೇರ್ ವಿಭಾಗ. ಅಗತ್ಯ ಸೇವೆಗಳ ನಿರಂತರ ಪೂರೈಕೆ ಮಾಡುವ ಉದ್ದೇಶದಿಂದ ಈ ಸೇವೆ ಶುರುವಾಗಿದೆ.

ಹಣ್ಣುಗಳ ರಾಜನ ಸಾಗಣೆಗೆ ವಿಶೇಷ ರೈಲು; 200 ಟನ್​ ಮಾವಿನ ಹಣ್ಣುಗಳನ್ನು ಆಂಧ್ರದಿಂದ ದೆಹಲಿಗೆ ಸಾಗಿಸಿದ ಮೊದಲ ಟ್ರೇನ್​
ಇಂದು ಸಾಗಿಸಲಾದ ಮಾವಿನ ಹಣ್ಣು

ಹೆಚ್ಚುತ್ತಿರುವ ಕೊರೊನಾ ವೈರಸ್​ ಆತಂಕದ ನಡುವೆಯೂ ಈ ಸೀಸನ್​​ನ ಮೊದಲ ಮ್ಯಾಂಗೋ ವಿಶೇಷ ರೈಲು ಇಂದು ಆಂಧ್ರಪ್ರದೇಶದ ವಿಜಯನಗರಂನಿಂದ ದೆಹಲಿಯ ಆದರ್ಶನಗರ ರೈಲ್ವೆ ಸ್ಟೇಶನ್​ ತಲುಪಿದೆ. ಈ ರೈಲಿನಲ್ಲಿ ಒಟ್ಟು 200 ಟನ್​ ಹಣ್ಣುಗಳ, 11, 600 ಬಾಕ್ಸ್​ಗಳನ್ನು ತರಲಾಗಿದೆ. ಆಂಧ್ರಪ್ರದೇಶದ ಉತ್ತರದಲ್ಲಿರುವ ವಿಜಯನಗರಂ ಮಾವಿನ ಹಣ್ಣು ಸಾಗಣೆಯ ಪ್ರಮುಖ ಕೇಂದ್ರವಾಗಿದೆ.

ಆಂಧ್ರಪ್ರದೇಶದಿಂದ ಮಾವಿನ ಹಣ್ಣು ಸಾಗಣೆಯ ಬಗ್ಗೆ ಮಾತನಾಡಿದ ದೆಹಲಿ ಆಝಾದ್​​ಪುರ ಮಂಡಿಯ ತೇಜಿಂದರ್​ ಸಿಂಗ್​, ಬರೀ ಮಾವಿನಹಣ್ಣಷ್ಟೇ ಅಲ್ಲ, ಹೀಗೆ ರೈಲಿನ ಮೂಲಕ ಚಿಕ್ಕು, ಬಾಳೆಹಣ್ಣು, ಕಿತ್ತಳೆ ಹಣ್ಣುಗಳನ್ನೂ ಸಾಗಣೆ ಮಾಡಲಾಗುತ್ತದೆ ಎಂದು ತಿಳಿಸಿದರು. ವಾಸ್ತವದಲ್ಲಿ ಮೊದಲು ಶುರುವಾಗಿದ್ದು ಕಿತ್ತಳೆ ಹಣ್ಣುಗಳ ಸಾಗಣೆ. ನಂತರ ಬಾಳೆಹಣ್ಣು, ಮಾವಿನ ಹಣ್ಣುಗಳ ಟ್ರಾನ್ಸ್​ಪೋರ್ಟ್​ಗೂ ಅದನ್ನು ವಿಸ್ತರಿಸಲಾಯಿತು ಎಂದು ಅವರು ತಿಳಿಸಿದ್ದಾರೆ.

ಹೀಗೆ ಹಣ್ಣುಗಳ ಸಾಗಣೆ ಸೇವೆಯನ್ನು ಮೊದಲು ಪ್ರಾರಂಭಿಸಿದ್ದು, ಪೂರ್ವ ಕರಾವಳಿ ರೈಲ್ವೆಯ ವಾಲ್ಟೇರ್ ವಿಭಾಗ. ಅಗತ್ಯ ಸೇವೆಗಳ ನಿರಂತರ ಪೂರೈಕೆ ಮಾಡುವ ಉದ್ದೇಶದಿಂದ ಈ ಸೇವೆ ಶುರುವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಎ.ಕೆ.ತ್ರಿಪಾಠಿ, ಮಾವು ಸೇರಿ ಇತರ ಹಣ್ಣು ವ್ಯಾಪಾರಿಗಳ ಅಗತ್ಯತೆಯನ್ನು ಪರಿಗಣಿಸಿ, ವಾಲ್ಟೇರ್​ ವಿಭಾಗೀಯ ರೈಲ್ವೆ ವಿಶೇಷ ಪಾರ್ಸೆಲ್​ ರೈಲುಗಳ ಸಂಚಾರ ಮಾಡಿಸುತ್ತಿದೆ. ಕೊವಿಡ್​ 19 ಸಂದರ್ಭದ ಹೊರತಾಗಿಯೂ, ಈ ರೈಲು ಅಗತ್ಯ ವಸ್ತುಗಳ ನಿರಂತರವಾಗಿ ಪೂರೈಕೆ ಮಾಡಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು. ಕಳೆದ ಆರ್ಥಿಕ ವರ್ಷದಲ್ಲಿ ಒಟ್ಟು 4350 ಟನ್​ ಮಾವಿನ ಹಣ್ಣುಗಳ ಸಾಗಣೆಗಾಗಿ 20 ವಿಶೇಷ ರೈಲುಗಳು ಸಂಚಾರ ಮಾಡಿದ್ದವು. ಪ್ರಸಕ್ತ ವರ್ಷದ ಮೊದಲ ರೈಲು ಇಂದು ದೆಹಲಿಗೆ ತೆರಳಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಟ್ರೇನ್​ಗಳನ್ನು ಇದಕ್ಕೆ ಬಳಸಲಾಗುತ್ತದೆ.

ಇದನ್ನೂ ಓದಿ:  Explainer: ಭಾರತದಲ್ಲಿ ಕೊವಿಡ್​ ಲಸಿಕೆ ಕೊರತೆ: ನಮ್ಮ ಸರ್ಕಾರ ಎಡವಿದ್ದು ಎಲ್ಲಿ? ಏನು ಪರಿಹಾರ?

Immunity Boosters: ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಯಾವೆಲ್ಲಾ ಜ್ಯೂಸ್ ಕುಡಿಯಬೇಕು?

Click on your DTH Provider to Add TV9 Kannada