AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Immunity Boosters: ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಯಾವೆಲ್ಲಾ ಜ್ಯೂಸ್ ಕುಡಿಯಬೇಕು?

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುವ ಜ್ಯೂಸ್, ಮಣ್ಣಿ ಅಥವಾ ಬೀಜಗಳಿಂದ ತೆಗೆದ ಹಾಲನ್ನು ಮುಂಜಾನೆ ಎದ್ದ ಕೂಡಲೆ ಸೇವಿಸುವ ಅಭ್ಯಾಸ ಮಾಡಿಕೊಳ್ಳುವುದು ಮುಖ್ಯ.

Immunity Boosters: ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಯಾವೆಲ್ಲಾ ಜ್ಯೂಸ್ ಕುಡಿಯಬೇಕು?
ಹಣ್ಣಿನ ಜ್ಯೂಸ್
Follow us
preethi shettigar
| Updated By: ganapathi bhat

Updated on: Apr 17, 2021 | 4:44 PM

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಾಮಾನ್ಯವಾಗಿ ಒಂದಷ್ಟು ಆರೋಗ್ಯಕರವಾದ ಆಹಾರ ಅಭ್ಯಾಸವನ್ನು ಮಾಡಿಕೊಳ್ಳುವುದು ಬಹಳ ಮುಖ್ಯ. ಆ ಮೂಲಕ ದೇಹಕ್ಕೆ ಒಗ್ಗುವ ಮತ್ತು ದೈಹಿಕವಾಗಿ ಒಂದಷ್ಟು ಸದೃಢತೆಯನ್ನು ತಂದುಕೊಡುವ ವಿಟಮಿನ್ ಮತ್ತು ಖನಿಜಾಂಶಗಳನ್ನು ಸೇವಿಸುವುದು ಅಗತ್ಯ. ಈ ಕೆಳಗಿನ ಒಂದಷ್ಟು ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕವಾಗಿದ್ದು, ಇದು ಜ್ವರ ಮತ್ತು ಇನ್ನಿತರ ಸೋಂಕಿನಿಂದ ರಕ್ಷಣೆ ಪಡೆಯಲು ಅಗತ್ಯವಿರುವ ಪೋಷಕಾಂಶವನ್ನು ದೇಹಕ್ಕೆ ಒದಗಿಸಲು ಸಹಾಯಕವಾಗಿದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುವ ಜ್ಯೂಸ್, ಮಣ್ಣಿ ಅಥವಾ ಬೀಜಗಳಿಂದ ತೆಗೆದ ಹಾಲನ್ನು ಮುಂಜಾನೆ ಎದ್ದ ಕೂಡಲೆ ಸೇವಿಸುವ ಅಭ್ಯಾಸ ಮಾಡಿಕೊಳ್ಳುವುದು ಮುಖ್ಯ. ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಹಾಗೂ ದೇಹದ ನೈಸರ್ಗಿಕ ರಕ್ಷಣೆಗೆ ಅನುಕೂಲಕಾರಿಯಾಗಿದೆ.

ಕಿತ್ತಳೆ, ದ್ರಾಕ್ಷಿ ಮತ್ತು ಇನ್ನಿತರ ಸಿಟ್ರಸ್ ಹಣ್ಣುಗಳು ಸಿಟ್ರಸ್ ಅಂಶಗಳನ್ನು ಒಳಗೊಂಡ ಹಣ್ಣುಗಳಿಂದ ವಿಟಮಿನ್​ ಸಿ ದೊರೆಯುತ್ತದೆ. ವಿಟಮಿನ್ ಸಿ ರೋಗ ನಿರೋಧಕ ಗುಣಗಳನ್ನು ಹೊಂದಿದ್ದು, ಇದು ದೇಹಕ್ಕೆ ಹಾನಿ ಮಾಡುವ ವಸ್ತುಗಳಿಂದ ಜೀವಕೋಶಗಳನ್ನು ರಕ್ಷಿಸುತ್ತದೆ. ವಿಟಮಿನ್​ ಸಿ ಕೊರತೆಯು ಗಾಯವನ್ನು ಗುಣಪಡಿಸುವಲ್ಲಿ ಹಿಂದೇಟು ಹಾಕುತ್ತದೆ. ಇದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ.

ಕೊರೊನಾ ಸೋಂಕು (SARS-CoV-2) ಹರಡುವುದನ್ನು ತಡೆಗಟ್ಟಲು ಅಥವಾ ಅದು ಉಂಟುಮಾಡುವ ಕಾಯಿಲೆಗೆ ಚಿಕಿತ್ಸೆ ನೀಡಲು ವಿಟಮಿನ್ ಸಿ ಪರಿಣಾಮಕಾರಿಯಾಗಿದೆ ಎಂಬುದಕ್ಕೆ ಪ್ರಸ್ತುತ ಯಾವುದೇ ಪುರಾವೆಗಳಿಲ್ಲ. ಆದಾಗ್ಯೂ, ಕೊವಿಡ್ 19 ಚಿಕಿತ್ಸೆಗಾಗಿ ವಿಟಮಿನ್ ಸಿ ಯ ಇಂಟ್ರಾವೆನಸ್ ಥೆರಪಿ ಸಂಶೋಧನೆ ಭರವಸೆಯನ್ನು ತೋರಿಸಿದೆ.

ಗ್ರೀನ್ ಆ್ಯಪಲ್, ಕ್ಯಾರೆಟ್ ಮತ್ತು ಕಿತ್ತಳೆ ಕ್ಯಾರೆಟ್, ಸೇಬು ಮತ್ತು ಕಿತ್ತಳೆ ಹಣ್ಣುಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದ್ದು, ಸೇಬು ಮತ್ತು ಕಿತ್ತಳೆ ಹಣ್ಣುಗಳು ವಿಟಮಿನ್ ಸಿ ಯನ್ನು ಒದಗಿಸುತ್ತದೆ. ಕ್ಯಾರೆಟ್‌ಗಳಲ್ಲಿ ವಿಟಮಿನ್ ಎ ಇದ್ದು, ರೋಗನಿರೋಧಕ ವ್ಯವಸ್ಥೆಗೆ ನಿರ್ಣಾಯಕವಾಗಿದೆ. ವಿಟಮಿನ್ ಬಿ -6 ಕೂಡ ಕ್ಯಾರೆಟ್​ನಲ್ಲಿ ಇದ್ದು, ಇದು ಪ್ರತಿರಕ್ಷಣಾ ಕೋಶ ಪ್ರಸರಣ ಮತ್ತು ಪ್ರತಿಕಾಯ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಬಿಟ್​ರೂಟ್, ಕ್ಯಾರೆಟ್ ಮತ್ತು ಶುಂಠಿ ಈ ಮೂರು ತರಕಾರಿಗಳಿಂದ ಮಾಡಿದ ಜ್ಯೂಸ್​ಗಳು ರೋಗನಿರೋಧ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಉರಿಯೂತದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಈ ಮೂರು ತರಕಾರಿಯಿಂದ ಮಾಡಿದ ಜ್ಯೂಸ್​ಗಳು ಸೋಂಕು ಅಥವಾ ಬ್ಯಾಕ್ಟೀರಿಯಾದಿಂದ ಹುಟ್ಟುವ ಶೀತ ಅಥವಾ ಜ್ವರ, ಕೆಮ್ಮು ಮತ್ತು ದೇಹದಲ್ಲಿ ಕಾಣಿಸಿಕೊಳ್ಳುವ ನೋವನ್ನು ಕಡಿಮೆ ಮಾಡುತ್ತದೆ. ಸಂಧಿವಾತ ಹೊಂದಿರುವ ಜನರಿಗೆ ಇದು ಹೆಚ್ಚು ಉಪಕಾರಿಯಾಗಿದೆ.

ಟೊಮೆಟೊ  ತಾಜಾ ಟೊಮೆಟೊ ರಸ ಮತ್ತು ಯಾವುದೇ ಅಪಾಯಕಾರಿ ಅಂಶಗಳು ಇದರಲ್ಲಿ ಮಿಶ್ರಣವಾಗಿಲ್ಲ ಎನ್ನುವುದನ್ನು ಯೋಚಿಸುವ ನಿಟ್ಟಿನಲ್ಲಿ ಹೇಳುವುದಾದರೆ ಸತಃ ನಾವೇ ಮನೆಯಲ್ಲಿ ಸರಳ ವಿಧಾನದ ಮೂಲಕ ಟೊಮೆಟೊ ಜ್ಯೂಸ್ ಮಾಡಬಹುದಾಗಿದೆ. ಯಾವುದೇ ಜ್ಯೂಸರ್ ಅಥವಾ ಬ್ಲೆಂಡರ್ ಬಳಸದೆ ಟೊಮೆಟೊ ಹಣ್ಣಿನ ಬೀಜವನ್ನು ತೆಗೆದು ಜ್ಯೂಸ್ ಮಾಡಬಹುದಾಗಿದೆ. ಟೊಮೆಟೊನಲ್ಲಿ ವಿಟಮಿನ್ ಬಿ -9 ಸಮೃದ್ಧವಾಗಿದ್ದು, ಇದನ್ನು ಸಾಮಾನ್ಯವಾಗಿ ಫೋಲೇಟ್ ಎಂದು ಕರೆಯಲಾಗುತ್ತದೆ. ಇದು ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಎಲೆಕೋಸು, ಟೊಮೆಟೊ ಮತ್ತು ಗುಡ್ಡ ಸೋಂಪು ಎಲೆಕೋಸು ಹಸಿರು ತರಕಾರಿಗಳಲ್ಲಿ ಪ್ರಧಾನವಾದದ್ದು. ಎಲೆಕೋಸು ಜ್ಯೂಸ್​ನೊಂದಿಗೆ ಸಿಹಿ ಹಣ್ಣುಗಳನ್ನು ಸೇರಿಸುವ ಬದಲು ಕ್ಯಾರೆಟ್ ಸೇರಿಸಿ ಅದನ್ನು ಕುಡಿಯುವುದರಿಂದ ವಿಟಮಿನ್ ಎ ಸಿಗುತ್ತದೆ. ಈ ಜ್ಯೂಸ್​ನಲ್ಲಿ ಮೂಲಂಗಿ ಸೇರಿಸುವುದರಿಂದ ಕೆಲವು ಸಂಶೋಧನೆಗಳ ಪ್ರಕಾರ ಉರಿಯೂತದ ಸಮಸ್ಯೆ ಸಹ ಕಡಿಮೆ ಮಾಡಬಹುದು. ಇಂದ್ರಿಯಗಳನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಕೂಡ ಈ ಜ್ಯೂಸ್​ ಸೇವಿಸಲಾಗುತ್ತದೆ.

vegitable juice

ತರಕಾರಿಯಿಂದ ತಯಾರಿಸಿದ ಜ್ಯೂಸ್

ಸ್ಟ್ರಾಬೆರಿ ಮತ್ತು ಕಿವಿ ಹಣ್ಣು ವಿಟಮಿನ್ ಸಿ ಯನ್ನು ಹೆಚ್ಚಿಸಿಕೊಳ್ಳಲು ಸ್ಟ್ರಾಬೆರಿ ಮತ್ತು ಕಿವಿ ಹಣ್ಣು ಸಹಾಯಕವಾಗಿದೆ. 1 ಕಪ್ ಜ್ಯೂಸ್ ತಯಾರಿಸಲು ಸುಮಾರು 4 ಕಪ್ ಸ್ಟ್ರಾಬೆರಿಗಳನ್ನು ತೆಗೆದುಕೊಳ್ಳಲಾಗುತ್ತದೆ. ಇದನ್ನೂ ಜ್ಯೂಸ್ ಬದಲು ದಪ್ಪವಾದ ಮಣ್ಣಿಯಂತೆ ತಯಾರಿಸಿದರೆ ಹೆಚ್ಚು ಉಪಯುಕ್ತವಾಗಿರುತ್ತದೆ. ಈ ಸ್ಟ್ರಾಬೆರಿ ರಸಕ್ಕೆ ಕೆನೆರಹಿತ ಹಾಲನ್ನು ಹಾಕಿದರೆ ಇನ್ನೂ ಉತ್ತಮ. ಏಕೆಂದರೆ ಹಾಲು ಪ್ರೋಟೀನ್ ಮತ್ತು ವಿಟಮಿನ್ ಡಿ ಯನ್ನು ಒದಗಿಸುತ್ತದೆ. ವಿಟಮಿನ್​ ಡಿ ಯ ಕೊರತೆಯೂ ಕೂಡ ಕೊರೊನಾ ಸೋಂಕಿಗೆ ತುತ್ತಾಗಲು ಕಾರಣ ಎಂದು ಕೆಲವು ಸಂಶೋಧನೆ ತಿಳಿಸಿದೆ. ಇನ್ನು ಸ್ಟ್ರಾಬೆರಿ, ಮಾವು, ಬಾದಮಿಯನ್ನು ಕೂಡ ಒಟ್ಟಿಗೆ ಸೇರಿಸಿ ಜ್ಯೂಸ್ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಕಲ್ಲಂಗಡಿ ಕಲ್ಲಂಗಡಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಸ್ನಾಯುಗಳ ನೋವನ್ನು ನಿವಾರಿಸಲು ಕೂಡ ಸಹಾಯ ಮಾಡುತ್ತದೆ. ಸ್ನಾಯುಗಳ ನೋವು ಜ್ವರಕ್ಕೆ ಸಾಮಾನ್ಯ ಲಕ್ಷಣವಾಗಿದೆ, ವಿಶೇಷವಾಗಿ ವಯಸ್ಸಾದವರಲ್ಲಿ ಇದು ಹೆಚ್ಚು ಕಾಣಿಸಿಕೊಳ್ಳುತ್ತದೆ. ಕಲ್ಲಂಗಡಿ ಹಣ್ಣನ್ನು ಸೇಬು ಮತ್ತು ಕಿತ್ತಳೆಯಂತಹ ಇತರ ಹಣ್ಣುಗಳ ಜೊತೆ ಕೂಡ ಸೇವಿಸಬಹುದು.

ಕುಂಬಳಕಾಯಿ ಬೀಜ ಕುಂಬಳಕಾಯಿ ಬೀಜದಿಂದ ತಯಾರಿಸಿದ ಜ್ಯೂಸ್ ಹೆಚ್ಚು ಉಪಯುಕ್ತಕರವಾಗಿದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮೂಳೆಯ ಆರೋಗ್ಯವನ್ನು ಹೆಚ್ಚಿಸುತ್ತದೆ. ಮೂತ್ರದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಹಾಗೂ ಕೂದಲು ಮತ್ತು ಚರ್ಮದ ಹೊಳಪಿಗೆ ಕಾರಣವಾಗುತ್ತದೆ.

ಸೊಪ್ಪು ವಿವಿಧ ಸೊಪ್ಪುಗಳನ್ನು ಬಳಸಿಕೊಂಡು ಜ್ಯೂಸ್ ಮಾಡಿ ಕುಡಿಯುವುದರಿಂದ ಕೂಡ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ಹೆಚ್ಚು ಶಕ್ತಿಯನ್ನು ಕೂಡ ನೀಡುತ್ತದೆ. ಜೊತೆಗೆ ಸೊಪ್ಪಿನ ರಸ ಕುಡಿಯುವುದರಿಂದ ಉತ್ಸಾಹ ಕೂಡ ಹೆಚ್ಚುತ್ತದೆ.

ಇದನ್ನೂ ಓದಿ: Immunity Booster Foods: ಕೊರೊನಾ ಕಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು 5 ಆಹಾರ ಪದಾರ್ಥಗಳು ಇಲ್ಲಿವೆ

(Simplest Immunity boosters you can prepare at home during covid pandemic)