Immunity Booster Foods: ಕೊರೊನಾ ಕಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು 5 ಆಹಾರ ಪದಾರ್ಥಗಳು ಇಲ್ಲಿವೆ

ಕೊವಿಡ್ 19 ನಿಂದ ನಿಮ್ಮ ಮನೆಯ ಮಂದಿಯನ್ನು ಕಾಪಾಡಿಕೊಳ್ಳಲು ಅಥವಾ ರಕ್ಷಿಸಲು ಲಸಿಕೆ ಲಭ್ಯವಿದ್ದರೂ ಆಹಾರದಲ್ಲಿ ತೆಗೆದುಕೊಳ್ಳಬೇಕಾದ ಪೌಷ್ಟಿಕತೆ ಮತ್ತು ಕೆಲವು ಜೀವಸತ್ವಗಳು ಅಗತ್ಯವಾಗಿದೆ.

Immunity Booster Foods: ಕೊರೊನಾ ಕಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು 5 ಆಹಾರ ಪದಾರ್ಥಗಳು ಇಲ್ಲಿವೆ
ಸಂಗ್ರಹ ಚಿತ್ರ
Follow us
preethi shettigar
| Updated By: Skanda

Updated on: Apr 17, 2021 | 1:16 PM

ನಿಯಮಿತವಾಗಿ ಪೌಷ್ಠಿಕ ಆಹಾರ ಸೇವಿಸಿದರೆ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುವ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿದ್ದರೆ ಯಾವುದೇ ರೀತಿಯ ಕಾಯಿಲೆಗಳು ನಮ್ಮ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಬಹುದಾಗಿದೆ. ಅದರಲ್ಲೂ ಈಗಿನ ಕಾಲಘಟ್ಟದಲ್ಲಿ ಅತಿ ಹೆಚ್ಚು ಕಾಡುತ್ತಿರುವ ಕೊರೊನಾ ಸೋಂಕಿನಿಂದಲೂ ಕೂಡ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಈ ನಿಯಮಿತ ಆರೋಗ್ಯ ಪದ್ಧತಿ ಸಹಕಾರಿಯಾಗಿದೆ. ಕೊವಿಡ್ 19 ರಿಂದ ನಿಮ್ಮ ಮನೆಯ ಮಂದಿಯನ್ನು ಕಾಪಾಡಿಕೊಳ್ಳಲು ಲಸಿಕೆ ಲಭ್ಯವಿದ್ದರೂ ಆಹಾರದಲ್ಲಿ ತೆಗೆದುಕೊಳ್ಳಬೇಕಾದ ಪೌಷ್ಠಿಕತೆ ಮತ್ತು ಕೆಲವು ಜೀವಸತ್ವಗಳು ಅಗತ್ಯವಾಗಿದೆ. ಇದು ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತವೆ ಮತ್ತು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತದೆ ಎನ್ನುವುದನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಅಗತ್ಯ.

ಪೌಷ್ಠಿಕ ಆಹಾರ ತಜ್ಞ ಲೊವ್ನೀತ್ ಬಾತ್ರಾ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರ ಪದಾರ್ಥಗಳ ಕುರಿತಾದ ಮಾಹಿತಿಯನ್ನು ಈ ರೀತಿಯಾಗಿ ಹಂಚಿಕೊಂಡಿದ್ದಾರೆ.

ಮೊಸರು ಸಾಮಾನ್ಯವಾಗಿ ನಾವು ಮುಟ್ಟುವ ಪ್ರತಿಯೊಂದು ವಸ್ತುವಿನ ಮೇಲೆ ಗಮನ ಹರಿಸುವುದು ಮುಖ್ಯವಾಗಿರುತ್ತದೆ. ಅದರಲ್ಲೇ ಹೆಚ್ಚು ಕಾಯಿಲೆ ಹರಡುವ ಕೀಟಾಣುಗಳು ಇರುತ್ತದೆ. ಆ ಮೂಲಕ ಕೈಯಿಂದ ನೈರ್ಮಲ್ಯಗಳು ದೇಹವನ್ನು ಸೇರುತ್ತದೆ. ಹೀಗಾಗಿ ಸೋಪಿನಿಂದ ಅಥವಾ ಸ್ಯಾನಿಟೈಜರ್​ನಿಂದ ಕೈಗಳನ್ನು ತೊಳೆಯಬೇಕು ಎಂದು ತಜ್ಞರು ಮತ್ತು ವೈದ್ಯರು ಶಿಫಾರಸು ಮಾಡುತ್ತಾರೆ.

ಮೊಸರು ನೈಸರ್ಗಿಕ ಪ್ರೋಬಯಾಟಿಕ್ ಆಗಿದ್ದು, ನಮ್ಮ ದೇಹದಲ್ಲಿ ಉತ್ತಮ ಬ್ಯಾಕ್ಟೀರಿಯಾಗಳ ರಚನೆಗೆ ಸಹಾಯ ಮಾಡುತ್ತದೆ. ಆದರೆ ಇಲ್ಲಿ ನೆನಪಿಡಬೇಕಾದ ಅಂಶವೆಂದರೆ ಮೊಸರನ್ನು ಹೊಸದಾಗಿ ತಯಾರಿಸಬೇಕು. ಇಲ್ಲವಾದಲ್ಲಿ ನೋವಿರುವ ಗಂಟಲನ್ನು ಮತ್ತಷ್ಟು ಹದಗೆಡಿಸುವ ಸಾಧ್ಯತೆ ಇದೆ. ಆದರೆ ಉತ್ತಮ ರೋಗನಿರೋಧಕ ಶಕ್ತಿಗಾಗಿ, ನಿಮಗೆ ಪ್ರೋಬಯಾಟಿಕ್‌ಗಳು ಬೇಕಾಗುತ್ತವೆ ಈ ನಿಟ್ಟಿನಲ್ಲಿ ಪೂರಕ ಅಂಶಗಳನ್ನು ಆಶ್ರಯಿಸಬಹುದು ಎಂದು ಪೌಷ್ಠಿಕ ಆಹಾರ ತಜ್ಞ ಲೊವ್ನೀತ್ ಬಾತ್ರಾ ಹೇಳಿದ್ದಾರೆ.

ಅರಿಶಿಣ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳಿಗೆ ರಾಮಬಾಣ ಎಂದೇ ಹೆಸರುವಾಸಿಯಾಗಿರುವುದು ಅರಿಶಿಣ. ಇದರಲ್ಲಿ ಇರುವ ರೋಗನಿರೋಧಕ ಶಕ್ತಿ ಗಾಯ ಮತ್ತು ಇನ್ನಿತರ ಸೋಂಕಿತ ಅಂಶಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಈ ಕಾರಣಕ್ಕಾಗಿಯೇ ಜನರು ಹೆಚ್ಚಾಗಿ ಅರಿಶಿಣವನ್ನು ಹಾಲಿನಲ್ಲಿ ಬೆರೆಸಿ ಕುಡಿಯುತ್ತಾರೆ.

ಆದರೆ ಹಲವರಿಗೆ ಅರಿಶಿಣದ ಮೇಲೆ ತಪ್ಪು ಅಭಿಪ್ರಾಯಗಳಿದೆ. ನೀವು ಅರಿಶಿಣವನ್ನು ಸೇವಿಸುವುದಾದರೆ ಅದನ್ನು ನೀರಿನೊಂದಿಗೆ ಬೆರಸಬೇಡಿ ಬದಲಿಗೆ ಅದನ್ನು ಹಾಲಿನಲ್ಲಿ ಕುದಿಸಿ ಸೇವಿಸುವುದು ಉತ್ತಮ. ಇನ್ನು ಅರಿಶಿಣವನ್ನು ನೀವು ತೆಂಗಿನ ಎಣ್ಣೆ ಮತ್ತು ಕರಿಮೆಣಸಿನೊಂದಿಗೆ ಕೂಡ ಉಪಯೋಗಿಸಬಹುದು ಎಂದು ಬಾತ್ರಾ ತಿಳಿಸಿದ್ದಾರೆ.

ನೈಸರ್ಗಿಕ ಸೋಂಕು ನಿವಾರಕ ಆಹಾರಗಳು ತುಳಸಿ ಎಲೆಗಳು, ಚಕ್ರ ಮೊಗ್ಗು, ಬೆಳ್ಳುಳ್ಳಿ ಮತ್ತು ಶುಂಠಿ ನೈಸರ್ಗಿಕ ಸೋಂಕು ನಿವಾರಕ ಆಹಾರ ಪದಾರ್ಥಗಳಾಗಿವೆ. ಈ ಪದಾರ್ಥಗಳು ಜ್ವರದಿಂದಲೂ ರಕ್ಷಣೆ ನೀಡುತ್ತವೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ದೇಹದಲ್ಲಿನ ಬ್ಯಾಕ್ಟೀರಿಯಾಗಳನ್ನು ಹೊರಹಾಕಲು ಇದು ಸಹಾಯಕವಾಗಿದೆ. ಮೂರರಿಂದ ನಾಲ್ಕು ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಬಾತ್ರಾ ಹೇಳಿದ್ದಾರೆ.

ಇನ್ನು ಚಕ್ರ ಮೊಗ್ಗುಗಳನ್ನು ಮೂರರಿಂದ ನಾಲ್ಕು ತುಂಡುಗಳನ್ನಾಗಿ ಮಾಡಿ ನೀರಿನಲ್ಲಿ ಕುದಿಸಿ ಸೇವಿಸಬೇಕು, ಅದೇ ರೀತಿ ಶುಂಠಿ, ನೆಲ್ಲಿಕಾಯಿಯನ್ನು ಕುದಿಸಿ ರಸವನ್ನು ಸೇವಿಸಬೇಕು. ಇನ್ನು ಬೆಳ್ಳುಳ್ಳಿಯನ್ನು ಲವಂಗದ ಜೊತೆಗೆ ಮಿಶ್ರಣ ಮಾಡಿ ಕುದಿಸಿದರೆ ಆಲಿಸಿನ್ ಎಂಬ ಸಂಯುಕ್ತವನ್ನು ಹೊಂದಿರುವ ಪ್ರಬಲವಾದ ಔಷಧೀಯ ಗುಣಗಳನ್ನು ಹೊಂದಿರುವ ಅಂಶ ಹೊರಬರುತ್ತದೆ ಇದನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

AMLA NELLIKAYI

ನೆಲ್ಲಿಕಾಯಿ

ಜೀವಸತ್ವಗಳು ಎಲ್ಲಾ ರೀತಿಯ ವಿಟಮಿನ್‌ಗಳಲ್ಲಿ, ವಿಟಮಿನ್ ಸಿ ಮತ್ತು ವಿಟಮಿನ್ ಡಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದಕ್ಕಾಗಿ, ನೆಲ್ಲಿಕಾಯಿ, ನಿಂಬೆಹಣ್ಣು, ಕಿತ್ತಳೆ ಮತ್ತು ಇತರ ಸಿಟ್ರಸ್ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದು ಒಳಿತು. ಅಲ್ಲದೆ, ಮೊಟ್ಟೆಯ ಹಳದಿ ಮತ್ತು ಅಣಬೆ ವಿಟಮಿನ್ ಡಿ ಯ ಉತ್ತಮ ಮೂಲವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಕೊವಿಡ್ 19 ಸೋಂಕಿಗೆ ಒಳಗಾದ ಜನರಿಗೆ ಇಂಟ್ರಾವೆನಸ್ ಥೆರಪಿ ಮೂಲಕ ವಿಟಮಿನ್ ಸಿ ನೀಡಲಾಗುತ್ತಿದೆ ಇದು ದ್ರವಗಳನ್ನು ನೇರವಾಗಿ ರಕ್ತನಾಳಕ್ಕೆ ತಲುಪಿಸುತ್ತದೆ ಎಂದು ಬಾತ್ರಾ ಹೇಳಿದ್ದಾರೆ. ಇನ್ನು ಬಾತ್ರ ಅವರು ಪ್ರತಿದಿನ ತಾಜಾ ನೆಲ್ಲಿಕಾಯಿ ರಸವನ್ನು (30 ಮಿಲಿ) ಕುಡಿಯಲು ಸೂಚಿಸಿದ್ದಾರೆ.

ಇದನ್ನೂ ಓದಿ:

World Health Day 2021: ಬೇಸಿಗೆ ಹೊಟ್ಟೆ ಸಮಸ್ಯೆಗಳನ್ನು ತರಬಹುದು; ಸಾಮಾನ್ಯವಾಗಿ ಕಾಡುವ ಅಜೀರ್ಣ, ವಾಕರಿಕೆಯಿಂದ ಪಾರಾಗಲು ಹೀಗಿರಲಿ ನಿಮ್ಮ ಆಹಾರ

(Eat These Healthy Foods during Covid Pandemic to Boost your Immunity)

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್