AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips During Covid Pandemic: ಕೊರೊನಾ ಕಾಲದಲ್ಲಿ ಆರೋಗ್ಯ ರಕ್ಷಣೆಗೆ 9 ಸೂತ್ರಗಳು

ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯು 9 ಸಲಹೆಗಳನ್ನು ನೀಡಿದೆ. ಈ ಸಲಹೆಗಳನ್ನು ಇತರ ಸಾಮಾನ್ಯ ಸಂದರ್ಭಗಳಲ್ಲೂ ಅನುಸರಿಸಿದರೆ ಉತ್ತಮ.

Health Tips During Covid Pandemic: ಕೊರೊನಾ ಕಾಲದಲ್ಲಿ ಆರೋಗ್ಯ ರಕ್ಷಣೆಗೆ 9 ಸೂತ್ರಗಳು
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: Apr 17, 2021 | 6:52 PM

ಕೊರೊನಾ ವೈರಸ್ ತಾಂಡವವಾಡುತ್ತಿರುವ ಈ ಸನ್ನಿವೇಶದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು (WHO) ಹೊಸ ಆವಿಷ್ಕಾರ, ಸಂಶೋಧನೆ, ಅಧ್ಯಯನ ವರದಿ ಮತ್ತು ಕಲಿಕೆ ಮೊದಲಾದವುಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿರುತ್ತದೆ. ಆರೋಗ್ಯ ವಲಯದ ಬಗ್ಗೆ ವಿಶ್ವಸಂಸ್ಥೆಯು ಹಂಚಿಕೊಳ್ಳುವ ಮಾಹಿತಿಗಳನ್ನು ನೀವು ಗಮನಿಸಬಹುದು. ಅದರಲ್ಲೂ ಈಗ ಕೊರೊನಾ ವೈರಾಣು ಜಾಗತಿಕ ಮಟ್ಟದಲ್ಲಿ ವ್ಯಾಪಿಸಿರುವಾಗ ಎಲ್ಲರಿಗೂ ಆರೋಗ್ಯದ ಬಗ್ಗೆಯೇ ಆತಂಕ ಇದ್ದೇ ಇದೆ. ಅದು ಲಸಿಕೆ ಹಾಕುವ ಮೂಲಕ ಇರಬಹುದು ಮತ್ತು ರೋಗನಿರೋಧಕದ ಮೂಲಕ ಅಥವಾ ವೈರಾಣು ನಿರ್ಮೂಲನವೇ ಇರಬಹುದು. ಎಲ್ಲರೂ ಸುರಕ್ಷಿತವಾಗುವ ತನಕ ಯಾರೂ ಸುರಕ್ಷಿತರಲ್ಲ ಎಂಬುದು ತಿಳಿದುಕೊಳ್ಳಬೇಕಾದ ಸತ್ಯ. ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ, ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಇರುವ 9 ಮಂತ್ರಗಳು ಇಲ್ಲಿವೆ.

1. ಆರೋಗ್ಯಪೂರ್ಣವಾದ ಆಹಾರ ಪಥ್ಯ ಪಾಲಿಸಿ ನಾವು ಏನನ್ನು ಸೇವಿಸುತ್ತೇವೋ ಅದೇ ನಾವಾಗಿರುತ್ತೇವೆ. ಒಂದು ವೇಳೆ ಪೋಷಕಾಂಶ ಕೊರತೆಯ ಆಹಾರ ಸೇವಿಸಿದರೆ ನಮ್ಮ ದೇಹ ದುರ್ಬಲ ಆಗುತ್ತದೆ. ಬಲಶಾಲಿ ವೈರಾಣುವಿನಂಥ ಶತ್ರು ವಿರುದ್ಧ ದುರ್ಬಲ ದೇಹ ಹೋರಾಡಲು ಹೇಗೆ ಸಾಧ್ಯ? ಸರಿಯಾದ ರೀತಿಯಲ್ಲಿ ಆಹಾರ ಸೇವನೆ ಮಾಡುವುದರಿಂದ ಆರೋಗ್ಯವಂತರಾಗಿ ಮತ್ತು ಸೋಂಕಿನ ವಿರುದ್ಧ ಹೋರಾಡಲು ಶಕ್ತರಾಗಿ ಇರುವುದಕ್ಕೆ ಸಾಧ್ಯ.

2. ನಿಮ್ಮದೇ ರೀತಿಯಲ್ಲಿ ಪ್ರತಿ ನಿತ್ಯ ದೈಹಿಕವಾಗಿ ಚಟುವಟಿಕೆಯಿಂದ ಇರಿ ಕೋವಿಡ್- 19 ಬಿಕ್ಕಟ್ಟಿನ ಕಾರಣಕ್ಕೆ ನಮ್ಮಲ್ಲಿ ಬಹುತೇಕರು ಸಾಮಾನ್ಯ ಸಂದರ್ಭಕ್ಕಿಂತ ಹೆಚ್ಚಿನ ಅವಧಿ ಮನೆಯಲ್ಲಿ ಕೂತಿರುತ್ತೇವೆ. ಸಾಮಾನ್ಯವಾಗಿ ನಾವು ಮಾಡುವ ವ್ಯಾಯಾಮಗಳನ್ನು ಮಾಡಲು ಸಹ ಕಷ್ಟ ಆಗುತ್ತದೆ. ಇನ್ನು ಸಾಮಾನ್ಯ ದಿನಗಳಲ್ಲೇ ವ್ಯಾಯಾಮ ಮಾಡದವರ ಪಾಲಿಗಂತೂ ಇದು ಇನ್ನೂ ಕಷ್ಟದ ದಿನಗಳು. ಆದರೆ ಇಂಥ ಸಮಯದಲ್ಲೇ ಎಲ್ಲ ವಯಸ್ಸಿನವರು, ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಕ್ರಿಯರಾಗಿ ಇರಬೇಕು. ವಿಶ್ವ ಆರೋಗ್ಯ ಸಂಸ್ಥೆಯಿಂದ ಸಕ್ರಿಯರಾಗಿ ಇರುವಂತೆ ಅಭಿಯಾನ ನಡೆಯುತ್ತಿದೆ. ಕೂತಲ್ಲೇ ಕೂತಿರುವುದಕ್ಕಿಂತ 3-4 ನಿಮಿಷದ ಬಿಡುವು ತೆಗೆದುಕೊಂಡು, ಸಣ್ಣ ಪ್ರಮಾಣದ ದೈಹಿಕ ಚಟುವಟಿಕೆ, ನಡೆದಾಡುವುದರಿಂದ ಮಾಂಸಖಂಡಗಳು ಆರಾಮವಾಗಿರಲು ಸಹಾಯ ಆಗುತ್ತದೆ ಮತ್ತು ರಕ್ತದ ಚಲನೆ ವೃದ್ಧಿ ಆಗುವಂತೆ ಮಾಡುತ್ತದೆ.

3. ಲಸಿಕೆ ಹಾಕಿಸಿಕೊಳ್ಳಿ ಕೋವಿಡ್- 19 ಲಸಿಕೆ ಸದ್ಯಕ್ಕೆ ಭಾರತದಲ್ಲಿ ಲಭ್ಯ ಇದೆ. ಅದು ಕೊರೊನಾ ತಡೆಗಟ್ಟಲು ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬುದನ್ನು ತೋರಿಸಿದೆ. ವಿವಿಧ ಕೋವಿಡ್- 19 ಲಸಿಕೆಗಳ ಬಗ್ಗೆ ತಿಳಿದುಕೊಳ್ಳಿ. ಎಲ್ಲ ಕೋವಿಡ್- 19 ಲಸಿಕೆಗಳನ್ನು ಕ್ಲಿನಿಕ್ ಟ್ರಯಲ್​ಗಳಲ್ಲಿ ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಲಾಗುತ್ತದೆ. ಮತ್ತೆ ಕೋವಿಡ್- 19 ಬರುವುದಿಲ್ಲ ಎಂಬುದು ಖಾತ್ರಿಯಾದಲ್ಲಿ ಮಾತ್ರ ಅನುಮತಿ ನೀಡಲಾಗುತ್ತದೆ. ತಜ್ಞರು ಹೇಳುವ ಪ್ರಕಾರ, ಕೋವಿಡ್-19 ಲಸಿಕೆ ಹಾಕಿಸಿಕೊಂಡಲ್ಲಿ ಗಂಭೀರವಾಗಿ ಅಸ್ವಸ್ಥರಾಗುವುದರಿಂದ ರಕ್ಷಣೆ ಪಡೆಯಬಹುದು. ಕೊರೊನಾ ಲಸಿಕೆ ಹಾಕಿಸಿಕೊಳ್ಳುವುದರಿಂದ ನಿಮ್ಮ ಸುತ್ತಲ ಜನರನ್ನೂ ರಕ್ಷಿಸಿದಂತಾಗುತ್ತದೆ. ಅದರಲ್ಲೂ ಯಾರಿಗೆ ಗಂಭೀರ ಸ್ವರೂಪದ ಕೋವಿಡ್- 19 ಅಪಾಯದ ರಕ್ಷಣೆ ಅಗತ್ಯ ಇರುತ್ತದೋ ಅಂಥವರಿಗೆ ಮತ್ತೂ ಸಹಾಯ ಮಾಡಿದಂತಾಗುತ್ತದೆ.

4. ಯಾವುದೇ ಸ್ವರೂಪದ ತಂಬಾಕನ್ನು ಬಳಸಬೇಡಿ ತಂಬಾಕು ಬಳಸದಿರುವುದು ಆರೋಗ್ಯ ವಿಚಾರದಲ್ಲಿ ಎಷ್ಟು ಮುಖ್ಯ ಎಂಬ ಬಗ್ಗೆ ಉಪದೇಶ ನೀಡುವ ಅಗತ್ಯ ಇಲ್ಲ ಎನಿಸುತ್ತದೆ. ಸಿಗರೇಟ್ ಸೇವನೆ ಬಿಡುವುದಕ್ಕೆ ಪ್ರಬಲವಾದ, ವೈಯಕ್ತಿಕ ಕಾರಣ ಬೇಕು. ಇದರಿಂದ ನಿಮ್ಮ ಕುಟುಂಬಕ್ಕೆ ಸೆಕೆಂಡ್ ಹ್ಯಾಂಡ್ ಸ್ಮೋಕ್​ನಿಂದ ಆಗುವ ಅಪಾಯವೂ ತಪ್ಪಿಸಬಹುದು. ಶ್ವಾಸಕೋಶ ಕ್ಯಾನ್ಸರ್, ಹೃದಯ ಕಾಯಿಲೆ ಅಥವಾ ಇತರ ಸಮಸ್ಯೆಗಳು ಬರುವ ಸಾಧ್ಯತೆ ಕಡಿಮೆ ಮಾಡಬಹುದು. ವಯಸ್ಸಿನಲ್ಲಿ ಚಿಕ್ಕವರಂತೆ ಕಾಣುತ್ತೀರಿ. ಆದ್ದರಿಂದ ನಿಮ್ಮ ಬದುಕಿನಿಂದ ಸಿಗರೇಟ್ ಹೊರಹಾಕಿ.

5 ಆಲ್ಕೋಹಾಲ್ ಬಳಕೆ ನಿಯಂತ್ರಿಸಿ ಅಥವಾ ಕಡಿಮೆ ಮಾಡಿ ಒಂದು ಯೋಜನೆ ರೂಪಿಸಿ. ಮದ್ಯ ಸೇವನೆ ಆರಂಭಿಸುವ ಮುನ್ನ ಮಿತಿಯನ್ನು ಹಾಕಿಕೊಳ್ಳಿ. ಜತೆಗೆ ಆಲ್ಕೋಹಾಲ್ ಮೇಲೆ ಇಷ್ಟೇ ಹಣ ಖರ್ಚು ಮಾಡುವುದಾಗಿ ಬಜೆಟ್ ಹಾಕಿಕೊಳ್ಳಿ. ನಿಮ್ಮ ಬಜೆಟ್ ವಿಚಾರವನ್ನು ಕುಟುಂಬದವರು, ಸ್ನೇಹಿತರಿಗೂ ತಿಳಿಸಿ. ನಿಮಗೆ ಅವರ ಬೆಂಬಲ ಸಿಗಬಹುದು. ದಿನದಿನಕ್ಕೂ ಖರ್ಚು ಕಡಿಮೆ ಮಾಡಿಕೊಳ್ಳುತ್ತಾ ಹೋಗಿ.

6. ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಒತ್ತಡದ ನಿರ್ವಹಣೆ ಮಾಡಿ ಕೆಲಸ, ಕುಟುಂಬ ಇತರ ಜವಾಬ್ದಾರಿಗಳ ಮಧ್ಯೆ ಒಂದೊಂದು ಸಲ ಒತ್ತಡಕ್ಕೆ ಸಿಲುಕಿದಂತೆ ಆಗುತ್ತದೆ. ಆದ್ದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ಸಮಯವನ್ನು ಎತ್ತಿಡಬೇಕು. ಚೆನ್ನಾಗಿ ವ್ಯಾಯಾಮ ಮಾಡುವುದು, ಸಮತೋಲಿತ ಆಹಾರ ಸೇವನೆ, ಉಸಿರಾಟದ ವ್ಯಾಯಾಮಗಳು ಇತ್ಯಾದಿ ಬಗೆಯಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕು.

7. ಉತ್ತಮ ಸ್ವಚ್ಛತೆ ಕಾಪಾಡಿಕೊಳ್ಳಿ ಆಲ್ಕೋಹಾಲ್ ಅಂಶಗಳನ್ನು ಒಳಗೊಂಡ ಸೋಪ್ ಮತ್ತು ನೀರನ್ನು ಬಳಸಿ ನಿಯಮಿತವಾಗಿ ಹಾಗೂ ಸಂಪೂರ್ಣವಾಗಿ ಕೈ ತೊಳೆಯಿರಿ. ಇದರಿಂದ ನಿಮ್ಮ ಕೈಲಿರುವ ಕೀಟಾಣುಗಳು ಹಾಗೂ ವೈರಾಣುಗಳು ನಾಶವಾಗುತ್ತವೆ. ನಿಮ್ಮ ಬಾಯಿ, ಕಣ್ಣು ಹಾಗೂ ಮೂಗನ್ನು ಮುಟ್ಟಿಕೊಳ್ಳುತ್ತಿರಬೇಡಿ. ನಾನಾ ಕಡೆ ಮುಟ್ಟಿದ ಕೈಗಳ ಮೂಲಕವಾಗಿ ವೈರಾಣುಗಳ ಸಮಸ್ಯೆ ಎದುರಾಗಬಹುದು. ಅಂಥ ಕಡೆ ಕೈಯಿಟ್ಟಲ್ಲಿ ಅಲ್ಲಿಂದ ಕಣ್ಣು, ಮೂಗು ಅಥವಾ ಬಾಯಿಗೆ ವೈರಾಣು ವರ್ಗಾವಣೆ ಆಗುತ್ತದೆ. ಆ ಮೂಲಕ ದೇಹದೊಳಗೆ ಪ್ರವೇಶಿಸಿ, ಸೋಂಕಿಗೆ ಕಾರಣವಾಗುತ್ತದೆ. ಸೀನುವಾಗ ಮೂಗು ಮತ್ತು ಬಾಯಿಗೆ ಅಡ್ಡವಾಗಿ ಕೈ, ಬಟ್ಟೆ ಅಥವಾ ಟಿಶ್ಯೂ ಪೇಪರ್ ಇಟ್ಟುಕೊಳ್ಳಿ. ಉತ್ತಮ ಶ್ವಾಸಕೋಶ ಸ್ವಚ್ಛತೆ ಕಾಪಾಡಿಕೊಳ್ಳುವುದರಿಂದ ನಿಮ್ಮ ಸುತ್ತಲ ಜನರನ್ನು ವೈರಾಣುವಿನಿಂದ ರಕ್ಷಿಸಬಹುದು. ಆ ವೈರಾಣು ಶೀತ, ಜ್ವರ ಹಾಗೂ ಕೋವಿಡ್- 19ಗೆ ಕಾರಣ ಆಗಬಹುದು. ಪದೇ ಪದೇ ಮುಟ್ಟುವ ಅಂಚೆ ಹ್ಯಾಂಡಲ್​ಗಳು, ಫೋನ್ ಸ್ಕ್ರೀನ್​ಗಳನ್ನು ಪದೇಪದೇ ಸ್ವಚ್ಛಗೊಳಿಸಿ.

8. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೂ ನಿಯಮಿತವಾದ ಚೆಕ್ ಅಪ್ ಮೂಲಕ ಚೇತರಿಕೆ ಕಾಣುತ್ತದೆ. ಜೀವಿತಾವಧಿ ಹೆಚ್ಚಾಗುವುದಕ್ಕೂ ಕಾರಣ ಆಗುತ್ತದೆ. ನಿಯಮಿತವಾಗಿ ಆರೋಗ್ಯ ಪರಿಶೀಲನೆ ಮಾಡಿಸಿಕೊಳ್ಳುವುದರಿಂದ ನಿಮ್ಮ ದೈಹಿಕ ಸ್ಥಿತಿ ಹೇಗಿದೆ ಎಂದು ಗೊತ್ತಿರುತ್ತದೆ. ಅನಾರೋಗ್ಯ ಸಮಸ್ಯೆಗಳನ್ನು ಆರಂಭದಲ್ಲೇ ಗುರುತಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳಬಹುದು.

9. ಮಕ್ಕಳಿಗೆ ತಾಯಿಯ ಎದೆಹಾಲು ಊಡಿಸುವುದಕ್ಕಿಂತ ಉತ್ತಮ ಆಹಾರ ಮತ್ತೊಂದಿಲ್ಲ ತಾಯಿಯ ಎದೆಹಾಲು ಮಗುವಿನ ಪಾಲಿಗೆ ಅತ್ಯುತ್ತಮ ಆಹಾರ. ಇದರಿಂದ ತಾಯಿ- ಮಗುವಿನ ಬಾಂಧವ್ಯ ಗಟ್ಟಿಯಾಗುತ್ತದೆ. ಇದರಲ್ಲಿ ರೋಗನಿರೋಧಕ ಶಕ್ತಿ ಇರುತ್ತದೆ. ಜತೆಗೆ ಮಗುವಿಗೆ ಹಲವು ಅನಾರೋಗ್ಯ ಸಮಸ್ಯೆಗಳಿಂದ ರಕ್ಷಣೆ ನೀಡುತ್ತದೆ.

ಇದನ್ನೂ ಓದಿ: Tips to Reduce Stress During Covid: ಕೊರೊನಾದ ಒತ್ತಡ ನಿವಾರಣೆಗೆ ಇಲ್ಲಿವೆ 7 ಮಾರ್ಗಗಳು

(World Health Organisation (WHO) 9 tips to follow during corona pandemic to stay fit)

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ