AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Malaria Day 2025: ಮಲೇರಿಯಾ ಬರದಂತೆ ತಡೆಯಲು ಈ ಸಲಹೆಯನ್ನು ತಪ್ಪದೆ ಪಾಲಿಸಿ

ವಿಶ್ವ ಮಲೇರಿಯಾ ದಿನ: ಮಲೇರಿಯಾ ರೋಗದ ಹರಡುವಿಕೆಯನ್ನು ನಿಯಂತ್ರಿಸಲು ಪ್ರತಿವರ್ಷ ಎ. 25 ರಂದು ಈ ದಿನವನ್ನು ಆಚರಿಸಲಾಗುತ್ತದೆ. ಇದು ತಡೆಗಟ್ಟಬಹುದಾದ ರೋಗವಾಗಿದ್ದರೂ ಕೂಡ ಜನರ ಜೀವನದ ಮೇಲೆ ಪರಿಣಾಮ ಬೀರುತ್ತಲೇ ಇದೆ. ಹಾಗಾಗಿ ಇದನ್ನು ನಿಯಂತ್ರಿಸುವ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿದೆ. ಜೊತೆಗೆ ಪ್ರತಿಯೊಬ್ಬರಿಗೂ ಈ ರೋಗದ ಬಗ್ಗೆ ಸರಿಯಾದ ಮಾಹಿತಿ ನೀಡಬೇಕಾಗಿದೆ. ಈ ವಿಷಯದ ಕುರಿತು ಮತ್ತಷ್ಟು ಮಾಹಿತಿ ಇಲ್ಲಿದೆ.

World Malaria Day 2025: ಮಲೇರಿಯಾ ಬರದಂತೆ ತಡೆಯಲು ಈ ಸಲಹೆಯನ್ನು ತಪ್ಪದೆ ಪಾಲಿಸಿ
World Malaria DayImage Credit source: Getty Images
Follow us
ಪ್ರೀತಿ ಭಟ್​, ಗುಣವಂತೆ
|

Updated on: Apr 24, 2025 | 7:55 PM

ವಿಶ್ವ ಮಲೇರಿಯಾ ದಿನವು (World Malaria Day) ರೋಗದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮಾರಣಾಂತಿಕ ಕಾಯಿಲೆಯನ್ನು ತಡೆಯಲು ಮಾಡಿರುವ ಪ್ರಯತ್ನವಾಗಿದೆ. ರೋಗದ ಪರಿಣಾಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ರೋಗದ ಹರಡುವಿಕೆಯನ್ನು ನಿಯಂತ್ರಿಸಲು ಹಾಗೂ ತಡೆಗಟ್ಟಲು ಎ. 25 ರಂದು ಈ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ (World Health Organization) ಪ್ರಕಾರ ಮಲೇರಿಯಾವು (Malaria) ತಡೆಗಟ್ಟಬಹುದಾದ ರೋಗವಾಗಿದ್ದರೂ ಕೂಡ ಪ್ರಪಂಚದಾದ್ಯಂತದ ಜನರ ಆರೋಗ್ಯ (Health) ಮತ್ತು ಜೀವನದ ಮೇಲೆ ಪರಿಣಾಮ ಬೀರುತ್ತಲೇ ಇರುವುದು ಸಮಸ್ಯೆಯಾಗಿದೆ. ಆದ ಕಾರಣ ಇದನ್ನು ನಿಯಂತ್ರಿಸುವ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿದೆ. ಜೊತೆಗೆ ಪ್ರತಿಯೊಬ್ಬರಿಗೂ ಈ ರೋಗದ ಬಗ್ಗೆ ಸರಿಯಾದ ಮಾಹಿತಿ ನೀಡಬೇಕಾಗಿದೆ.

ಈ ದಿನದ ಇತಿಹಾಸವೇನು?

ವರ್ಲ್ಡ್‌ ಹೆಲ್ತ್‌ ಅಸೆಂಬ್ಲಿಯು 2007ರಲ್ಲಿ ಏಪ್ರಿಲ್ 25 ಅನ್ನು ವಿಶ್ವ ಆರೋಗ್ಯ ದಿನವೆಂದು ಗೊತ್ತುಪಡಿಸಿತು. ಬಳಿಕ 2008ರ ಎ. 25 ರಂದು ಮೊದಲ ಬಾರಿಗೆ ವಿಶ್ವ ಮಲೇರಿಯಾದ ದಿನವನ್ನು ಆಚರಣೆ ಮಾಡಲಾಯಿತು. ಪ್ರತಿ ವರ್ಷವೂ ಈ ರೋಗವನ್ನು ನಿರ್ಮೂಲನೆ ಮಾಡಲು ನಿಗದಿಪಡಿಸಿದ ಗುರಿಗಳು ಮತ್ತು ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಆಚರಣೆ ನಡೆಯುತ್ತದೆ.

ಈ ದಿನದ ಮಹತ್ವವೇನು?

ವಿಶ್ವ ಮಲೇರಿಯಾ ದಿನವು ರೋಗದ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಈ ರೋಗದ ಹರಡುವಿಕೆಯನ್ನು ನಿಯಂತ್ರಿಸಲು ಹಾಗೂ ಅದನ್ನು ತಡೆಗಟ್ಟುವ ಪ್ರಯತ್ನಗಳ ಬಗ್ಗೆ ಜಾಗೃತಿ ಮೂಡಿಸಲು ಒಂದು ಅವಕಾಶವಾಗಿದೆ. ಮಲೇರಿಯಾ ವಿರುದ್ಧದ ಈ ಹೋರಾಟದಲ್ಲಿ ಸರ್ಕಾರ ಮತ್ತು ಸಂಸ್ಥೆಗಳು ಒಗ್ಗೂಡಲು ಅವಕಾಶ ಮಾಡಿಕೊಡುತ್ತದೆ. ಹಾಗಾಗಿ ಈ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡುವ ಮೂಲಕ ಈ ರೋಗವನ್ನು ನಿಯಂತ್ರಣ ಮಾಡಬೇಕಿದೆ. ಅದಲ್ಲದೆ ಈ ದಿನದ ಜಾಗೃತಿಗಾಗಿ ಅಲ್ಲಲ್ಲಿ ಆರೋಗ್ಯ ಅಭಿಯಾನಗಳು, ಶೈಕ್ಷಣಿಕ ಕಾರ್ಯಕ್ರಮಗಳು ಜೊತೆಗೆ ಈ ರೋಗವನ್ನು ತಡೆಗಟ್ಟಲು ವಿವಿಧ ರೀತಿಯ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ.

ಇದನ್ನೂ ಓದಿ
Image
ಗೋಡಂಬಿ ತಿಂದರೆ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ತಿನ್ನಬೇಕು
Image
ಅಂಗೈನಲ್ಲಿ ತುರಿಕೆ ಕಂಡು ಬಂದರೆ ದುಡ್ಡು ಬರಲ್ಲ ರೋಗ ಬರುತ್ತೆ!
Image
ಸೂರ್ಯಾಸ್ತ ಆಗುವುದರೊಳಗೆ ರಾತ್ರಿಯ ಊಟ ಮಾಡುವ ಅಭ್ಯಾಸ ಒಳ್ಳೆಯದೇ?
Image
ಎಷ್ಟು ಮಾಡಿದರೂ ಸಣ್ಣ ಆಗುತ್ತಿಲ್ಲವಾ? ಚಿಂತೆ ಬೇಡ ಈ ರೀತಿ ಮಾಡಿ

ಇದನ್ನೂ ಓದಿ: Natural sleep remedies: ರಾತ್ರಿ ಬಾಳೆಹಣ್ಣು ತಿಂದರೆ ನಿದ್ದೆ ಚೆನ್ನಾಗಿ ಬರುತ್ತದೆ ಎಂಬುದು ನಿಜವೇ?

ರೋಗ ಬರದಂತೆ ತಡೆಯುವುದು ಹೇಗೆ?

  • ಮಲೇರಿಯಾ ರೋಗವನ್ನು ಗುಣಪಡಿಸುವುದಕ್ಕಿಂತ ತಡೆಗಟ್ಟುವುದು ಉತ್ತಮ. ಹಾಗಾಗಿ ರಾತ್ರಿಯಲ್ಲಿ ಹೊರಗೆ ಬರುವಾಗ ಉದ್ದನೆಯ ತೋಳು, ಪ್ಯಾಂಟ್ ಇರುವ ಉಡುಪುಗಳನ್ನೇ ಧರಿಸಿ.
  • ರಾತ್ರಿ ಸಮಯದಲ್ಲಿ ಮಲುಗುವ ಜಗದಲ್ಲಿ ಸೊಳ್ಳೆ ಪರದೆಗಳನ್ನು ಬಳಸಿ.
  • ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ನೀರು ನಿಲ್ಲಲು ಅವಕಾಶ ಕೊಡಬೇಡಿ.’
  • ಯಾವಾಗಲೂ ನೀರಿನ ತೊಟ್ಟಿಗಳಿಗೆ ಮುಚ್ಚಳ ಮುಚ್ಚುವುದನ್ನು ಮರೆಯಬೇಡಿ.
  • ಮಾನ್ಸೂನ್ ಅಥವಾ ಬೇಸಿಗೆಯಲ್ಲಿ ನಿಮ್ಮನ್ನು ಚೆನ್ನಾಗಿ ಹೈಡ್ರೇಟ್ ಆಗಿರಿಸಿಕೊಳ್ಳಿ ಇದರಿಂದ ಮಲೇರಿಯಾ ರೋಗವನ್ನು ತಡೆಯಬಹುದು.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ