AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ 959 ಮಂದಿಯಲ್ಲಿ ಕಾಣಿಸಿಕೊಂಡ ಬ್ಲ್ಯಾಕ್ ಫಂಗಸ್, ಜೀವ ಉಳಿಸಲು ಆಸ್ಪತ್ರೆಗಳಲಿಲ್ಲ ಔಷಧಿ

ಮನುಷ್ಯನ ರೂಪವನ್ನೇ ಬದಲಾಯಿಸಿ, ಸೂಚನೆಯೇ ಕೊಡದೆ ದೇಹದಲ್ಲಿ ಬೆಳೆದು, ಜೀವಗಳನ್ನೇ ಹಿಂಡಿ ಹಾಕುತ್ತಿರೋ ಬ್ಲ್ಯಾಕ್ ಫಂಗಸ್ಗೆ ಬ್ರೇಕ್ ಬೀಳುತ್ತಿಲ್ಲ.. ಫ್ರೀ ಟ್ರೀಟ್ಮೆಂಟ್ ಅಂತಾ ಬಿಟ್ಟಿ ಡೈಲಾಗ್ ಹೊಡೆಯೋ ಸರ್ಕಾರದಿಂದ್ಲೂ ಔಷಧಿ ತರಿಸಲು ಆಗುತ್ತಿಲ್ಲ. ಇದ್ರಿಂದ ರಾಜ್ಯದಲ್ಲಿ ಕರಿ ಮಾರಿ ಅಟ್ಟಹಾಸ ಮೆರೀತಿದೆ.

ಕರ್ನಾಟಕದಲ್ಲಿ 959 ಮಂದಿಯಲ್ಲಿ ಕಾಣಿಸಿಕೊಂಡ ಬ್ಲ್ಯಾಕ್ ಫಂಗಸ್, ಜೀವ ಉಳಿಸಲು ಆಸ್ಪತ್ರೆಗಳಲಿಲ್ಲ ಔಷಧಿ
ಬ್ಲ್ಯಾಕ್ ಫಂಗಸ್
ಆಯೇಷಾ ಬಾನು
|

Updated on:May 28, 2021 | 8:02 AM

Share

ಬೆಂಗಳೂರು: ರಾಜ್ಯದ ಯಾವುದೇ ಆಸ್ಪತ್ರೆಗೋದ್ರು.. ಸರ್ಕಾರವೇ ಅಲಾಟ್ ಮಾಡಿರೋ ಹಾಸ್ಪಿಟಲ್ಗೆ ಓಡೋಡಿ ಹೋದ್ರೂ.. ವೈದ್ಯರ ಬಳಿ ಗೋಳಾಡಿದ್ರೂ ಸಿಗೋದೇ ಒಂದೇ ಉತ್ತರ. ಮೆಡಿಸಿನ್ ಇಲ್ಲ, ಮೆಡಿಸಿನ್ ಇಲ್ಲ ಅನ್ನೋದು. ರಾಜಧಾನಿಯಂತಹ ದೊಡ್ಡ ನಗರ ಬೆಂಗಳೂರಿನಲ್ಲೂ ಇದೇ ದುಃಸ್ಥಿತಿ ಎದುರಾಗಿದೆ. ಇಷ್ಟಕ್ಕೂ ಎಲ್ಲೆಲ್ಲಿ ಬ್ಲ್ಯಾಕ್ ಫಂಗಸ್ ಅಟ್ಟಹಾಸ ಮೆರೀತಿದೆ. ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಕೇಸ್ ಎಷ್ಟಿದೆ? ಎಷ್ಟು ಮೆಡಿಸಿನ್ ಬೇಕು? ಇಲ್ಲಿದೆ ಮಾಹಿತಿ.

20,000 ವಯಲ್ ಬೇಕಿದ್ರೂ ಸರ್ಕಾರದ ಬಳಿ ಸ್ಟಾಕ್ ಇಲ್ಲ! ಕೊರೊನಾ ಗೆದ್ರೂ ಅದೆಷ್ಟೋ ಜನ ನರಕಯಾತನೆಯಿಂದ ಹೊರ ಬಂದಿಲ್ಲ. ವೈರಸ್ನ ಸುಳಿಯಿಂದ ಗೆದ್ದು ಬಂದ್ರೂ ಆಸ್ಪತ್ರೆ ಸೇರಿದ್ದಾರೆ. ಹೀಗಿದ್ರೂ ರಾಜ್ಯದಲ್ಲಿ ತಡಕಾಡಿದ್ರೂ ಒಂದೇ ಒಂದು ಇಂಜೆಕ್ಷನ್ ಸಿಗುತ್ತಿಲ್ಲ. ಸದ್ಯ ಬ್ಲ್ಯಾಕ್ ಫಂಗಸ್ನಿಂದ ಬಳಲುತ್ತಿರೋರಿಗೆ ಆಂಫೊಟೆರಿಸಿನ್ ಬಿ ಅನ್ನೋ ಇಂಜೆಕ್ಷನ್ ನೀಡಲಾಗ್ತಿದೆ. ಒಬ್ಬ ಬ್ಲಾಕ್ ಫಂಗಸ್ ರೋಗಿಗೆ ಪ್ರತಿದಿನ 4ರಿಂದ 8 ಡೋಸ್ ಇಂಜೆಕ್ಷನ್ ಬೇಕು. ರಾಜ್ಯದಲ್ಲಿ ಸುಮಾರು 959 ಜನ ಬ್ಲಾಕ್ ಫಂಗಸ್ ರೋಗಿಗಳಿದ್ದು, ಇಪ್ಪತ್ತು ಸಾವಿರ ವೈಯಲ್ ಇಂಜೆಕ್ಷನ್ ಬೇಕಿದೆ. ಆದ್ರೆ ಸರ್ಕಾರದ ಬಳಿ‌ ಒಂದೇ ಒಂದು ಡೋಸ್ ಕೂಡ ಸ್ಟಾಕ್ ಇಲ್ಲ.

ಬೆಂಗಳೂರಿನಲ್ಲೇ 450ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಕೇಸ್ ಪತ್ತೆ ವಿಪರ್ಯಾಸ ಅಂದ್ರೆ, ಬೆಂಗಳೂರಿನಲ್ಲಿ ಮಾತ್ರವೇ 450 ಕ್ಕೂ ಅಧಿಕ ಬ್ಲ್ಯಾಕ್ ಫಂಗಸ್ ಕೇಸ್ಗಳಿವೆ. ಪ್ರತಿದಿನವೂ ಕರಿ ಮಾರಿ ಬಲೆಯಲ್ಲಿ ಸಿಲುಕುತ್ತಿರುವವರು ಪತ್ತೆ ಆಗುತ್ತಿದ್ದಾರೆ. ಇತ್ತ, ರಾಜ್ಯ ಸರ್ಕಾರ ಆಂಪೋಟೆರಿಸಿನ್ ಬಿ ಇಂಜೆಕ್ಷನ್ಗಾಗಿ ಕಾದು ಕೂತಿದೆ. ಆದ್ರೆ, ಕೇಂದ್ರದಿಂದ ಸಿಂಗಲ್ ಡೋಸ್ ಕೂಡಾ ಇಂಜೆಕ್ಷನ್ ಬಂದಿಲ್ಲ. ಈಗಿರುವ ರೋಗಿಗಳಿಗೆ ಪ್ರತಿದಿನ ನಾಲ್ಕರಿಂದ ಐದು ಸಾವಿರ ಡೋಸ್ ಇಂಜೆಕ್ಷನ್ ಬೇಕು. ಆದ್ರೆ ಸರ್ಕಾರದ ಉಗ್ರಾಣದಲ್ಲಿ ಬ್ಲಾಕ್ ಫಂಗಸ್ ಚಿಕಿತ್ಸೆಗೆ ನೀಡಬೇಕಿರೋ ಇಂಜೆಕ್ಷನ್ ಇಲ್ವೆ ಇಲ್ಲ.

ಇನ್ನು ರಾಜ್ಯದ ಜಿಲ್ಲೆಗಳಲ್ಲಿ ಕರಿ ಮಾರಿಯೇ ಕೇಕೆ ಹೇಗಿದೆ. ಎಲ್ಲೆಲ್ಲಿ ಎಷ್ಟು ಕೇಸ್ ಇದೆ ಅಂತಾ ನೋಡೋದಾದ್ರೆ,

black fungus in karnataka

ಸದ್ಯ, ಈ ಬ್ಲ್ಯಾಕ್ ಫಂಗಸ್ ಡಬಲ್ ಮ್ಯೂಟೆಂಟ್ ವೈರಸ್ ನಿಂದ ಬರ್ತಿದೆಯೋ. ಅಥವಾ ಬೇರೆ ರೀಸನ್ ಇದ್ಯೋ ಗೊತ್ತಿಲ್ಲ. ಆದ್ರೆ, ಕರಿ ಹೆಮ್ಮಾರಿಯ ಅವತಾರಕ್ಕೆ ಕರುನಾಡು ಕಂಗಾಲಾಗಿ ಹೋಗಿದೆ. ಯಾವಾಗ ಚಿಕಿತ್ಸೆ ಸಿಗುತ್ತೆ. ಸರ್ಕಾರ ಯಾವಾಗ ಇಂಜೆಕ್ಷನ್ ತರಿಸುತ್ತೆ ಅಂತಾ ರೋಗಿಗಳು ದಿಕ್ಕು ನೋಡ್ತಿದ್ದಾರೆ.

ಇದನ್ನೂ ಓದಿ: ಬ್ಲ್ಯಾಕ್ ಫಂಗಸ್ ನಿರ್ವಹಣೆ: ಕೋವಿಡ್ ಸೋಂಕಿನಿಂದ ಗುಣಮುಖರಾದವರಿಗೆ ಚಿಕಿತ್ಸೆ ನಂತರದ ಆರೈಕೆಯನ್ನು ಬದಲಾಯಿಸಲು ಸರ್ಕಾರ ನಿರ್ಧಾರ

Published On - 7:41 am, Fri, 28 May 21