ಬೆಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಮೃತದೇಹ ಪತ್ತೆಯಾಗಿದ್ದು, ಈ ಘಟನೆ ಬೆಂಗಳೂರಿನ ಚಿಕ್ಕಸಂದ್ರದಲ್ಲಿ ನಡೆದಿದೆ. 17 ವರ್ಷದ ರಕ್ಷಿತಾ ಎಂಬ ಯುವತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಯುವತಿ ರಕ್ಷಿತಾ ವರಮಹಾಲಕ್ಷ್ಮೀ, ಕೃಷ್ಣಪ್ಪ ದಂಪತಿಯ ಪುತ್ರಿ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಯುವತಿ ಸಾವನ್ನಪ್ಪಿದ್ದಾಳೆ. ಯುವತಿಯ ಟಿಕ್ ಟಾಕ್ ವಿಡಿಯೋ ವೈರಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಪ್ರತಿಷ್ಠಿತ ಕಾಲೇಜಿನಲ್ಲಿ ಯುವತಿ ರಕ್ಷಿತಾ ದ್ವಿತೀಯ ಪಿಯುಸಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಳು. ಅಪ್ಪ-ಅಮ್ಮ ಮದುವೆಗೆಂದು ತೆರಳಿದ್ದಾಗ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ ಎಂದು ಹೇಳಲಾಗುತ್ತಿದೆ. ಸದ್ಯ ಮರಣೋತ್ತರ ಪರೀಕ್ಷೆಗೆ ಯುವತಿ ಮೃತದೇಹವನ್ನು ಸಪ್ತಗಿರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಪ್ರಿಯತಮೆ ಆತ್ಮಹತ್ಯೆ ಸುದ್ದಿ ಕೇಳಿ ಪ್ರಿಯಕರನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಹನಿಯೂರು ಗ್ರಾಮ ತನ್ನ ಮನೆಯಲ್ಲಿ ಮನೋಜ್(21) ಎಂಬಾತ ನೇಣಿಗೆ ಶರಣಾಗಿದ್ದಾನೆ. ಬೆಳಿಗ್ಗೆ ಪ್ರೇಯಸಿಗೆ ಕರೆ ಮಾಡಿದ್ದಾಗ ಆತ್ಮಹತ್ಯೆ ಮಾಹಿತಿ ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಮನೋಜ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಲಾಗುತ್ತಿದೆ. =
ಮಂಡ್ಯ: ಪತ್ನಿಯ ಹತ್ಯೆ ಮಾಡಿ ಕುಂದೂರು ನಾಲೆಗೆ ಹಾಕಿ ಬಂದಿದ್ದ ಪತಿರಾಯ ವಾರದ ಬಳಿಕ ಅರೆಸ್ಟ್
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದ್ಯಾವಪಟ್ಟಣ ಗ್ರಾಮದಲ್ಲಿ ನಡೆದಿದ್ದ ಮಹಿಳೆಯ ನಿಗೂಢ ಹತ್ಯೆಯ ರಹಸ್ಯ ವಾರದ ಬಳಿಕ ಬಯಲಾಗಿದೆ. ಪತ್ನಿಯನ್ನು ಪತಿರಾಯನೇ ಕೊಂದು, ವಿಷ ಸೇವಿಸಿ ತಾನೇ ಆಸ್ಪತ್ರೆ ಸೇರಿದ್ದು ಪ್ರಕರಣದ ರಹಸ್ಯಯವಾಗಿದೆ. 23 ವರ್ಷದ ಸಂಧ್ಯಾ ಗಂಡನಿಂದಲೇ ಕೊಲೆಯಾಗಿರುವವರು. ಪ್ರಕರಣ ಏನೆಂದರೆ ಒಂದೂವರೆ ವರ್ಷದ ಹಿಂದಷ್ಟೇ ಮದ್ದೂರು ತಾಲೂಕಿನ ಹಾಗಲಹಳ್ಳಿ ಗ್ರಾಮದ ಷಡಕ್ಷರಿ ಎಂಬಾತನನ್ನು ಸಂಧ್ಯಾ ಮದುವೆಯಾಗಿದ್ದರು. ದಾಂಪತ್ಯದಲ್ಲಿ ಬಿರುಕು ಸೃಷ್ಟಿಯಾಗಿ ಇತ್ತೀಚೆಗೆ ಗಂಡ ಮತ್ತು ಹೆಂಡತಿ ದೂರವಾಗಿದ್ದರು. ಸಂಧ್ಯಾ ತಮ್ಮ ತವರಿನಲ್ಲಿ, ತಂದೆಯ ಮನೆಯಲ್ಲಿದ್ದುಕೊಂಡು ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದರು.
ನವೆಂಬರ್ 16ರಂದು ಕಂಪ್ಯೂಟರ್ ಕ್ಲಾಸ್ ಗೆ ಹೋಗಿದ್ದ ಸಂಧ್ಯಾ ನಿಗೂಢವಾಗಿ ನಾಪತ್ತೆಯಾಗಿದ್ದರು. ಮನೆಗೆ ಮಗಳು ಬಾರದಿದ್ದಕ್ಕೆ ಬೆಳಕವಾಡಿ ಪೊಲೀಸ್ ಗೆ ತಂದೆ ನಾಪತ್ತೆ ದೂರು ನೀಡಿದ್ದರು. ಮತ್ತೊಂದೆಡೆ, ಪತಿ ಷಕಡ್ಷರಿ ವಿಷ ಸೇವಿಸಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಸೇರಿದ್ದ.
ಆಸ್ಪತ್ರೆಯಿಂದ ಬಿಡುಗಡೆಯಾಗುವರೆಗೂ ಕಾದಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರಂಭದಲ್ಲಿ ತನಗೇನೂ ಗೊತ್ತಿಲ್ಲ ಎನ್ನುತ್ತಿದ್ದ ಹಂತಕ, ಪೊಲೀಸರ ಟ್ರಿಟ್ಮೆಂಟ್ ಬಳಿಕ ತಪ್ಪೊಪ್ಪಿಗೆ ನೀಡಿದ್ದಾನೆ.
ಪತಿ ಷಕಡ್ಷರಿ, ಕಂಪ್ಯೂಟರ್ ಕ್ಲಾಸ್ ನಿಂದ ಪತ್ನಿಯನ್ನು ಕರೆದುಕೊಂಡು ಬಂದು ಕೊಲೆ ಮಾಡಿದ್ದ. ಕುಂದೂರು ಬಳಿಯ ಬೆಟ್ಟದಲ್ಲಿ ಕೊಲೆ ಮಾಡಿ ನಾಲೆಗೆ ಹಾಕಿದ್ದ. ಮರ್ಡರ್ ಬಳಿಕ, ವಿಷ ಸೇವಿಸಿ ತಾನೇ ಆಸ್ಪತ್ರೆಗೆ ದಾಖಲಾಗಿದ್ದ. ಪ್ರಕರಣದಿಂದ ತಪ್ಪಿಸಿಕೊಳ್ಳಲು ಪ್ಲಾನ್ ಮಾಡಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ ಹಂತಕ ಪತಿ. ಪೊಲೀಸರು ಆರೋಪಿಯನ್ನು ಬಂಧಿಸಿ, ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:
ಮಹಾಂತ ನರೇಂದ್ರ ಗಿರಿ ಆತ್ಮಹತ್ಯೆ ಪ್ರಕರಣ; ಮೂವರು ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ ಸಿಬಿಐ
ಬೆಂಗಳೂರು: ಮಾಜಿ ಕಾರ್ಪೊರೇಟರ್ ಶಿವಪ್ಪ ಆತ್ಮಹತ್ಯೆ ಪ್ರಕರಣ; ಐವರ ವಿರುದ್ಧ ಎಫ್ಐಆರ್ ದಾಖಲು
Published On - 12:16 pm, Mon, 22 November 21