ನಾಯಿಗಳ ಸಂತಾನ ನಿಯಂತ್ರಣ ಕಾನೂನು ಜಾರಿಗೆ ಮೀನಮೇಷ; ಸರ್ಕಾರದ ವಿಳಂಬ ನೀತಿಗೆ ಹೈಕೋರ್ಟ್ ಅಸಮಾಧಾನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 05, 2023 | 3:10 PM

ಬೀದಿ ನಾಯಿಗಳ (Street Dogs) ಸಂತಾನ ನಿಯಂತ್ರಣ ಕಾನೂನು ಜಾರಿಗೆ ಸರ್ಕಾರ ಮೀನಮೇಷ ಮಾಡುತ್ತಿದೆ. ಈ ಹಿನ್ನಲೆ ಸರ್ಕಾರದ ವಿಳಂಬ ನೀತಿಗೆ ಹೈಕೋರ್ಟ್ (High Court) ಅಸಮಾಧಾನ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರ ತನ್ನ ನಡತೆ ಸರಿಪಡಿಸಿಕೊಳ್ಳಬೇಕು. ಜೊತೆಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಶೀಘ್ರವಾಗಿ ಉತ್ತರಿಸಬೇಕಿದೆ. 3 ವಾರದಲ್ಲಿ ಉತ್ತರಿಸದಿದ್ರೆ, ಸರ್ಕಾರದ ವಿರುದ್ಧ ಸೂಕ್ತ ಆದೇಶದ ಎಚ್ಚರಿಕೆ ನೀಡಿದೆ.

ನಾಯಿಗಳ ಸಂತಾನ ನಿಯಂತ್ರಣ ಕಾನೂನು ಜಾರಿಗೆ ಮೀನಮೇಷ; ಸರ್ಕಾರದ ವಿಳಂಬ ನೀತಿಗೆ ಹೈಕೋರ್ಟ್ ಅಸಮಾಧಾನ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಅ.05: ಬೀದಿ ನಾಯಿಗಳ (Street Dogs) ಸಂತಾನ ನಿಯಂತ್ರಣ ಕಾನೂನು ಜಾರಿಗೆ ಸರ್ಕಾರ ಮೀನಮೇಷ ಮಾಡುತ್ತಿದೆ. ಈ ಹಿನ್ನಲೆ ಸರ್ಕಾರದ ವಿಳಂಬ ನೀತಿಗೆ ಹೈಕೋರ್ಟ್ (High Court) ಅಸಮಾಧಾನ ವ್ಯಕ್ತಪಡಿಸಿದ್ದು, ಪಿಐಎಲ್​ಗೆ ಉತ್ತರಿಸಲು ಸರ್ಕಾರ ಕಾಲಾವಕಾಶ ಕೋರಿದೆ. ‘ಸರ್ಕಾರ ತಂತ್ರಜ್ಞಾನ ಬಳಕೆಯಲ್ಲಿ‌ ಮುಂಚೂಣಿಯಲ್ಲಿದೆ ಎಂದು ಭಾವಿಸಿದ್ದೆವು. ಆದರೆ, ಖಾತಾ ಎಂಟ್ರಿಗೂ ಜನ ಕೋರ್ಟ್​​ಗೆ ಬರಬೇಕಾದ ಪರಿಸ್ಥಿತಿ ಇದೆ. ಸರ್ಕಾರದ ಐಟಿ, ಬರಿ ತೋರಿಕೆನಾ, ಪರಿಣಾಮಕಾರಿನಾ? ಎಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ S.ದೀಕ್ಷಿತ್​ರಿದ್ದ ಪೀಠ ಅಸಮಾಧಾನ ತೋರಿದೆ.

3 ವಾರದಲ್ಲಿ ಉತ್ತರಿಸದಿದ್ರೆ ಸರ್ಕಾರ ವಿರುದ್ಧ ಸೂಕ್ತ ಆದೇಶದ ಎಚ್ಚರಿಕೆ

ರಾಜ್ಯ ಸರ್ಕಾರ ತನ್ನ ನಡತೆ ಸರಿಪಡಿಸಿಕೊಳ್ಳಬೇಕು. ಜೊತೆಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಶೀಘ್ರವಾಗಿ ಉತ್ತರಿಸಬೇಕಿದೆ. 3 ವಾರದಲ್ಲಿ ಉತ್ತರಿಸದಿದ್ರೆ, ಸರ್ಕಾರದ ವಿರುದ್ಧ ಸೂಕ್ತ ಆದೇಶದ ಎಚ್ಚರಿಕೆ ನೀಡಿದೆ. ಹೌದು,
ಪ್ರಾಣಿ ಕಲ್ಯಾಣ ಮಂಡಳಿಯ ಮಾರ್ಗಸೂಚಿ ಅನುಷ್ಠಾನ ಪಿಐಎಲ್ ಕೋರಿದ್ದು, ವಿಧಾನಸೌಧದ ಗೇಟ್ ಬಳಿ ನಾಯಿ,‌ ಪಕ್ಷಿಗಳಿಗೆ ಆಹಾರ ಹಾಕಲಾಗುತ್ತಿದೆ. ಬೀದಿ ನಾಯಿಗಳಿಗೆ ಆಹಾರ ನೀಡಲು ನಿಗದಿತ ಸ್ಥಳವಿಲ್ಲದಿರುವುದರಿಂದ ಪಾದಚಾರಿಗಳಿಗೆ,‌ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ. ಜೊತೆಗೆ ನಾಯಿಗಳಿಗೆ ವ್ಯಾಕ್ಸಿನ್, ಸಂತಾನಶಕ್ತಿ ಹರಣದ ಬಗ್ಗೆ ಕ್ರಮಕ್ಕೆ ಮುಂದಾಗುತ್ತಿಲ್ಲ. ಈ ಕುರಿತು ನವೆಂಬರ್ 15ರೊಳಗೆ ಸಮಗ್ರ ಪ್ರತಿಕ್ರಿಯೆ ಸಲ್ಲಿಸಲು ಹೈಕೋರ್ಟ್ ಸೂಚನೆ ನೀಡಿದೆ.

ಇದನ್ನೂ ಓದಿ:ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೀದಿ ನಾಯಿಗಳ ಕಾಟ: ಕಳೆದ 9 ತಿಂಗಳಲ್ಲಿ 5507 ಜನರಿಗೆ ಕಚ್ಚಿದ ಶ್ವಾನಗಳು

ಬೀದಿ ನಾಯಿಗಳ ಸಮೀಕ್ಷೆ ಮಾಡಿದ್ದ ಬಿಬಿಎಂಪಿ

ಇತ್ತೀಚೆಗೆ ಬಿಬಿಎಂಪಿ ಬೀದಿ ನಾಯಿಗಳ ಸಮೀಕ್ಷೆಗೆ ಒಟ್ಟು 50 ತಂಡಗಳನ್ನು ರಚಿಸಿ, ಬೀದಿ ನಾಯಿಗಳ ಸಮೀಕ್ಷೆ ನಡೆಸಿದ್ದರು. ಬೆಂಗಳೂರಲ್ಲಿ ಒಟ್ಟು 2,79,335 ಬೀದಿ ನಾಯಿಗಳನ್ನು ಪಾಲಿಕೆ ಗುರುತಿಸಿತ್ತು. 2019ರ ಸಮೀಕ್ಷೆ ಪ್ರಕಾರ ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಆಗಿದ್ದು, ಸುಮಾರು 32 ಸಾವಿರ ಬೀದಿ ನಾಯಿಗಳು ಕಾಲಕ್ರಮೇಣವಾಗಿ ಕಡಿಮೆಯಾಗಿದೆ. ಹೌದು, ಬೆಂಗಳೂರು ಜನರು ಬೀದಿ ನಾಯಿಗಳ ದಾಳಿಗೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆ ಮೂರು ತಿಂಗಳ ಹಿಂದೆ ಸಮೀಕ್ಷೆ ನಡೆಸುವುದಾಗಿ ಬಿಬಿಎಂಪಿ ಹೇಳಿತ್ತು. ಹಾಗಾಗಿ ಇದೀಗ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಬೀದಿ ನಾಯಿಗಳ ಸಮೀಕ್ಷೆ ಮಾಡಿ ಮುಗಿಸಿ, ವಲಯವಾರು ಬೀದಿ ನಾಯಿಗಳ ಪಟ್ಟಿಯನ್ನು ಪಾಲಿಕೆ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಬಿಡುಗಡೆ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ