ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೀದಿ ನಾಯಿಗಳ ಕಾಟ: ಕಳೆದ 9 ತಿಂಗಳಲ್ಲಿ 5507 ಜನರಿಗೆ ಕಚ್ಚಿದ ಶ್ವಾನಗಳು
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ 9 ತಿಂಗಳಲ್ಲಿ ಒಂದಲ್ಲ ಎರಡಲ್ಲಿ ಬರೋಬ್ಬರಿ 5507 ಜನರಿಗೆ ನಾಯಿಗಳು ಕಚ್ಚಿದ್ದು, ಅದರಲ್ಲಿ ಮೂವರು ನಾಯಿಗಳಿಗೆ ಬಲಿಯಾಗಿದ್ದಾರೆ. ಸಂತಾನ ಹರಣಕ್ಕೆ ಯಾವುದೆ ಸಂಸ್ಥೆ ಮುಂದೆ ಬರ್ತಿಲ್ಲ ಎಂದು ನಗರಸಭೆ ಆಯುಕ್ತರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಬೀದಿ ನಾಯಿಗಳಿಂದ ಜನರು ಹುಷಾರಾಗಿರುವಂತೆ ಮನವಿ ಮಾಡಲಾಗಿದೆ.
ಚಿಕ್ಕಬಳ್ಳಾಪುರ, ಅಕ್ಟೋಬರ್ 01: ಜಿಲ್ಲೆಯಲ್ಲಿ ಕಳೆದ 9 ತಿಂಗಳಲ್ಲಿ ಒಂದಲ್ಲ ಎರಡಲ್ಲಿ ಬರೋಬ್ಬರಿ 5507 ಜನರಿಗೆ ನಾಯಿಗಳು (dogs) ಕಚ್ಚಿದ್ದು, ಅದರಲ್ಲಿ ಮೂವರು ನಾಯಿಗಳಿಗೆ ಬಲಿಯಾಗಿದ್ದಾರೆ. ನಗರ ಪ್ರದೇಶದಲ್ಲಿ ಕುರಿಗಳನ್ನು ನೋಡುವುದು ಕಷ್ಟ ಆದರೆ ಕುರಿಗಳ ಹಿಂಡಿನಂತೆ ನಾಯಿಗಳು ಇವೆ. ಯಾವ ಗಲ್ಲಿಗೆ ಹೋದರು ಯಾವ ಕಡೆ ತಿರುಗಿ ನೋಡಿದ್ರೂ ನಾಯಿಗಳ ಹಿಂಡೆ ಕಾಣಿಸುತ್ತದೆ. ಹಾಗಾಗಿ ನಾಯಿಗಳಿಂದ ಹುಷಾರು ಆಗಿ ಇರುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ನಗರದ ದರ್ಗಾ ಮೊಹಲ್ಲದಲ್ಲಿ ಅಂತೂ ಮಹಿಳೆಯರು, ಮಕ್ಕಳು ಮನೆಯಿಂದ ಆಚೆ ಬರಲು ಹೆದರುತ್ತಿದ್ದಾರೆ. ಮನೆಯಿಂದ ಆಚೆ ಬಂದರೆ ಸಾಕು ನಾಯಿಗಳ ಹಿಂಡು ಅಟ್ಯಾಕ್ ಮಾಡುತ್ತಿವೆ. ಇದರಿಂದ ಮಕ್ಕಳನ್ನು ಮನೆಯಿಂದ ಆಚೆ ಕಳುಹಿಸಲಾಗುತ್ತಿಲ್ಲ. ಹಾಗಾಗಿ ಮೊದಲು ಬೀದಿ ನಾಯಿಗಳಿಗೆ ಏನಾದರೂ ಮಾಡಿ ಅಂತ ಸ್ಥಳೀಯರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಪ್ರವಾಸಿ ತಾಣಗಳಿಗೂ ತಟ್ಟಿದ ಬಂದ್ ಬಿಸಿ, ಮೈಸೂರು ಅರಮನೆ, ನಂದಿ ಹಿಲ್ಸ್ ಖಾಲಿ ಖಾಲಿ
ನಗರ ಪ್ರದೇಶದಲ್ಲಿ ಕುರಿಗಳ ಬದಲು ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ನಾಯಿಗಳನ್ನು ಹಿಡಿದು ಸಂತಾನ ಹರಣ ಮಾಡಿಸಲು ನಗರಸಭೆಗಳು ಪರದಾಡುತ್ತಿದೆ. ನಾಯಿ ಸಂತಾನ ಹರಣಕ್ಕೆ ಯಾವುದೆ ಸಂಸ್ಥೆ ಮುಂದೆ ಬರ್ತಿಲ್ಲ. ನಾಲ್ಕು ಭಾರಿ ಟೆಂಡರ್ ಕರೆಯಲಾಗಿದೆ, ಆದರೂ ಯಾರು ಬರ್ತಿಲ್ಲವೆಂದು ಚಿಕ್ಕಬಳ್ಳಾಪುರ ನಗರಸಭೆ ಆಯುಕ್ತರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಬೀದಿ ನಾಯಿಗಳಿಂದ ಜನರು ಹುಷಾರು ಆಗಿರಬೇಕು.
ಬೀದಿ ನಾಯಿಗಳ ಹೆಚ್ಚಳ
ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಇದರಿಂದಾಗಿ ಜನರು ಜೀವ ಭಯದಲ್ಲೇ ಓಡಾಡುವಂತಾಗಿದೆ. ಧಾರವಾಡದ ಮಾಳಾಪುರ, ಗಾಂಧಿ ನಗರ, ರಾಜೀವ್ ಗಾಂಧಿ ನಗರ, ಗೊಲ್ಲರ ಓಣಿ, ಹುಬ್ಬಳ್ಳಿಯ ಹಳೇ ಹುಬ್ಬಳ್ಳಿ, ನೇಕಾರ ನಗರ, ಅರವಿಂದ ನಗರ, ಶಾಂತಿ ನಗರ, ಮಂಟೂರು ರಸ್ತೆ, ಕಾಟನ್ ಮಾರ್ಕೆಟ್, ಆನಂದ ನಗರ, ಹೆಗ್ಗೇರಿ, ಗೋಪನಕೊಪ್ಪ, ಕೇಶ್ವಾಪುರ, ಅಯೋಧ್ಯಾ ನಗರಗಳಲ್ಲಿ ಮಕ್ಕಳು, ಮಹಿಳೆಯರು, ಪಾದಚಾರಿಗಳು ಹಾಗೂ ವಾಹನ ಸವಾರರ ಮೇಲೆ ನಾಯಿಗಳ ದಾಳಿ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ.
ಹುಬ್ಬಳ್ಳಿ-ಧಾರವಾಡದಲ್ಲಿ 40 ಸಾವಿರಕ್ಕೂ ಹೆಚ್ಚು ಬೀದಿ ನಾಯಿಗಳಿವೆ ಎಂದು ಅಂದಾಜಿಸಲಾಗಿದೆ. ಪ್ರತಿ ವರ್ಷ ನಾಯಿಗಳ ಸಮೀಕ್ಷೆ ಮಾಡಬೇಕು. ನಾಯಿಗಳ ನಿಯಂತ್ರಣ ಹಾಗೂ ಸಂತಾನ ಶಕ್ತಿಹರಣಕ್ಕಾಗಿ ಮಹಾನಗರ ಪಾಲಿಕೆಯಿಂದ ಕಳೆದ 4 ತಿಂಗಳ ಹಿಂದೆ ಕಾವಾ ಸಂಸ್ಥೆಗೆ ಹಾಗೂ ಬೆಳಗಾವಿಯ ಡಾ. ವೀರೇಶ ಕೌಜಲಗಿ ಸಂಸ್ಥೆಗೆ ಟೆಂಡರ್ ನೀಡಲಾಗಿದೆ. ಆದಾಗ್ಯೂ ನಾಯಿಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಜನರು ಆತಂಕದಿಂದ ಜೀವನ ನಡೆಸಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:56 pm, Sun, 1 October 23