ಪ್ರವಾಸಿ ತಾಣಗಳಿಗೂ ತಟ್ಟಿದ ಬಂದ್ ಬಿಸಿ, ಮೈಸೂರು ಅರಮನೆ, ನಂದಿ ಹಿಲ್ಸ್ ಖಾಲಿ ಖಾಲಿ
ರಾಜ್ಯಾದ್ಯಂತ ನಡೆಯುತ್ತಿರುವ ಕಾವೇರಿ ಹೋರಾಟಕ್ಕೆ ವಿವಿಧ ಸಂಘಟನೆಗಳು ಉತ್ತಮ ಬೆಂಬಲ ನೀಡಿದೆ. ಇನ್ನು ಕರ್ನಾಟಕ ಬಂದ್ (Karnataka Bandh) ಎಫೆಕ್ಟ್ ಪ್ರವಾಸಿ ತಾಣ(Tourist Place)ಗಳಿಗೂ ತಟ್ಟಿದ್ದು, ಪ್ರವಾಸಿಗರಿಲ್ಲದೆ ಮೈಸೂರು ಅರಮನೆ ಭಣಗುಡುತ್ತಿದೆ.
ಮೈಸೂರು, ಸೆ.29: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಇಂದು(ಸೆ.29) ಕರ್ನಾಟಕ ಬಂದ್ಗೆ ಕರೆ ನೀಡಿದ್ದು, ಪ್ರತಿಭಟನೆ ತೀವ್ರತೆ ಹೆಚ್ಚುತ್ತಿದೆ. ರಾಜ್ಯಾದ್ಯಂತ ನಡೆಯುತ್ತಿರುವ ಕಾವೇರಿ ಹೋರಾಟಕ್ಕೆ ವಿವಿಧ ಸಂಘಟನೆಗಳು ಉತ್ತಮ ಬೆಂಬಲ ನೀಡಿದೆ. ಇನ್ನು ಕರ್ನಾಟಕ ಬಂದ್ (Karnataka Bandh) ಎಫೆಕ್ಟ್ ಪ್ರವಾಸಿ ತಾಣ(Tourist Place)ಗಳಿಗೂ ತಟ್ಟಿದ್ದು, ಪ್ರವಾಸಿಗರಿಲ್ಲದೆ ಮೈಸೂರು ಅರಮನೆ ಭಣಗುಡುತ್ತಿದೆ. ಹೌದು, ಯಾವಾಗಲೂ ಸಾವಿರಾರು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಮೈಸೂರು ಅರಮನೆ, ಇಂದು ಕೇವಲ ಬೆರಳೆಣಿಕೆಯಷ್ಟು ಪ್ರವಾಸಿಗರ ಭೇಟಿಯಿಂದ ಭಣಗುಡುತ್ತಿದೆ. ಹೌದು, ಪ್ರತಿಭಟನಾಕಾರರು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿದ ಹಿನ್ನೆಲೆ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಿಲ್ಲ.
ನಂದಿಗಿರಿಧಾಮಕ್ಕೂ ತಟ್ಟಿದ ಕರ್ನಾಟಕ ಬಂದ್ ಬಿಸಿ
ಚಿಕ್ಕಬಳ್ಳಾಪುರ : ಇನ್ನು ಕರ್ನಾಟಕ ಬಂದ್ ಬಿಸಿ ಚಿಕ್ಕಬಳ್ಳಾಪುರದ ನಂದಿಗಿರಿಧಾಮಕ್ಕೂ ತಟ್ಟಿದೆ. ಪ್ರವಾಸಿಗರಿಲ್ಲದೆ ನಂದಿಗಿರಿಧಾಮ ಬಿಕೋ ಎನ್ನುತ್ತಿದೆ. ಪ್ರತಿದಿನ ಸಾವಿರಾರು ಜನ ಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ, ಇಂದು ಚಿಕ್ಕಬಳ್ಳಾಪುರ ತಾಲ್ಲೂಕಿನ ವಿಶ್ವ ವಿಖ್ಯಾತ ಪ್ರವಾಸಿ ತಾಣ ನಂದಿಗಿರಿಧಾಮಕ್ಕೆ ಪ್ರವಾಸಗರೇ ಇಲ್ಲದೆ ಭಣಗುಡುತ್ತಿದೆ.
ಹೌದು, ನಂದಿ ಬೆಟ್ಟ ಅಥವಾ ನಂದಿ ದುರ್ಗ ಎಂದ ಕರೆಯಲ್ಪಡುವ ಗಿರಿಧಾಮವಾಗಿದ್ದು, ಇಲ್ಲಿ ಒಂದು ಪುರಾತನ ಕಾಲದ ಕೋಟೆಯಿದೆ. ಇದು ಚಿಕ್ಕಬಳ್ಳಾಪುರ ಪಟ್ಟಣದಿಂದ 10 ಕಿ.ಮಿ ದೂರದಲ್ಲಿ ಹಾಗೂ ಬೆಂಗಳೂರು ನಗರದಿಂದ ಸುಮಾರು 45 ಕಿ.ಮಿ ದೂರದಲ್ಲಿದೆ. ಈ ಬೆಟ್ಟವು ಮೂರು ಪಟ್ಟಣಗಳ ಮಧ್ಯೆ ಇರುವುದರಿಂದ ಇಲ್ಲಿಗೆ ಪ್ರವಾಸಿಗರ ದಂಡೆ ಹರಿದು ಬರುತ್ತದೆ. ಆದರೆ, ಇಂದು ಬಂದ್ ಎಫೆಕ್ಟ್ ಹಿನ್ನಲೆ ಯಾರು ಕೂಡ ಆಗಮಿಸಿಲ್ಲ. ಇನ್ನು ರಾಜ್ಯದ ಅನೇಕ ಪ್ರವಾಸಿ ತಾಣಗಳು ಕೂಡ ಹೀಗೆ ಪ್ರವಾಸಿಗರಲ್ಲಿದೆ ಬಿಕೋ ಎನ್ನುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ