Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ: ಬಸ್ ಟಾಪ್ ಕಿತ್ತುಹೋಗುವಂತೆ ಸೀಟಿಗಾಗಿ ಮಹಿಳೆಯರ ಕಿತ್ತಾಟ -ಉಚಿತ ಪ್ರಯಾಣದ ಶಕ್ತಿ ಯೋಜನೆ ಎಫೆಕ್ಟ್​​!

ಚಿಕ್ಕಬಳ್ಳಾಪುರ: ಬಸ್ ಟಾಪ್ ಕಿತ್ತುಹೋಗುವಂತೆ ಸೀಟಿಗಾಗಿ ಮಹಿಳೆಯರ ಕಿತ್ತಾಟ -ಉಚಿತ ಪ್ರಯಾಣದ ಶಕ್ತಿ ಯೋಜನೆ ಎಫೆಕ್ಟ್​​!

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಸಾಧು ಶ್ರೀನಾಥ್​

Updated on: Oct 02, 2023 | 6:42 PM

ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಕುಳಿತಿದ್ದ ಮಹಿಳೆಯನ್ನು ದಬಾಯಿಸಿ ಆಕೆಯನ್ನು ಪಕ್ಕಕ್ಕೆ ಎಳೆದು ಹಾಕಿ, ಆಕೆಯ ಸೀಟು ಆಕ್ರಮಿಸಿಕೊಂಡ ಪ್ರಸಂಗ ಚಿಕ್ಕಬಳ್ಳಾಪುರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ನಿಂತಿರುವ ಬಸ್ ನಲ್ಲಿ ಕಂಡುಬಂದಿದೆ. ಚಿಕ್ಕಬಳ್ಳಾಫುರದಿಂದ ಬೆಂಗಳೂರಿಗೆ ಹೋಗುವ ಬಸ್ ನಲ್ಲಿ, ಸೀಟು ತನಗೆ ಬೇಕು ತಮ್ಮವರಿಗೆ ಬೇಕು ಅಂತ ಪರಸ್ಪರ ಕಿತ್ತಾಟ ನಡೆಸಿದ್ರು, ಇದೆ ವೇಳೆ ಪರಸ್ಪರ ವಾಗ್ವಾದ ನಡೆಸಿ ಸೀಟಿನಲ್ಲಿ ಕುಳಿತಿದ್ದ ಮಹಿಳೆಯನ್ನು ಮತ್ತೊರ್ವ ಮಹಿಳೆ ಎಳೆದು ಬಿಸಾಡಿದ ಪ್ರಸಂಗ ನಡೆಯಿತು.

ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಶಕ್ತಿ ಯೋಜನೆ ಜಾರಿಗೆ ಬಂದಿದ್ದೆ ತಡ… ವೀಕೆಂಡ್ ಹಾಗೂ ರಜೆ ದಿನಗಳು ಬಂದರೆ ಸಾಕು ಮಹಿಳೆಯರು ಬಸ್ ಗಳನ್ನು ಹತ್ತಿ ಪ್ರವಾಸಕ್ಕೆ ಹೊಗ್ತಿದ್ದಾರೆ. ಆದ್ರೆ ಹೌಸ್ ಫುಲ್ ಆದ ಬಸ್ ಗಳಲ್ಲಿ ಸೀಟಿಗಾಗಿ ಪರಸ್ಪರ ವಾಗ್ವಾದ ಗಲಾಟೆಗಳು ನಡೆಯುತ್ತಿರುವುದು ದುರದೃಷ್ಟಕರ. ಇದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ ನೋಡಿ!

ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಕುಳಿತಿದ್ದ ಮಹಿಳೆಯನ್ನು ದಬಾಯಿಸಿ ಆಕೆಯನ್ನು ಪಕ್ಕಕ್ಕೆ ಎಳೆದು ಹಾಕಿ, ಆಕೆಯ ಸೀಟು ಆಕ್ರಮಿಸಿಕೊಂಡ ಪ್ರಸಂಗ ಚಿಕ್ಕಬಳ್ಳಾಪುರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ನಿಂತಿರುವ ಬಸ್ ನಲ್ಲಿ ಕಂಡುಬಂದಿದೆ. ಚಿಕ್ಕಬಳ್ಳಾಫುರದಿಂದ ಬೆಂಗಳೂರಿಗೆ ಹೋಗುವ ಬಸ್ ನಲ್ಲಿ, ಸೀಟು ತನಗೆ ಬೇಕು ತಮ್ಮವರಿಗೆ ಬೇಕು ಅಂತ ಪರಸ್ಪರ ಕಿತ್ತಾಟ ನಡೆಸಿದ್ರು, ಇದೆ ವೇಳೆ ಪರಸ್ಪರ ವಾಗ್ವಾದ ನಡೆಸಿ ಸೀಟಿನಲ್ಲಿ ಕುಳಿತಿದ್ದ ಮಹಿಳೆಯನ್ನು ಮತ್ತೊರ್ವ ಮಹಿಳೆ ಎಳೆದು ಬಿಸಾಡಿದ ಪ್ರಸಂಗ ನಡೆಯಿತು. ಇನ್ನು ಈಶಾ ಫೌಂಡೇಷನ್ ಗೆ ಆಗಮಿಸಿ ವಾಪಸ್ ಬೆಂಗಳೂರಿಗೆ ಹೋಗಲು ಮಹಿಳಾ ಪ್ರಯಾಣಿಕರು ಎರಡು ಮೂರು ಗಂಟೆಗಳ ಕಾಲ ಪರದಾಡಿದ್ರು.

ಚಿಕ್ಕಬಳ್ಳಾಪುರದ ಬಳಿ ಈಶಾ ಫೌಂಡೇಷನ್ ನಲ್ಲಿ 112 ಅಡಿಗಳ ಆದಿಯೋಗಿ ಪ್ರತಿಮೆ ಪ್ರತಿಷ್ಠಾಪನೆ ಆಗಿದ್ದೆ ತಡ, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ್ಯಾಂತ ಪ್ರಯಾಣಿಕರು ಈಶಾ ಗೆ ಆಗಮಿಸುತ್ತಿದ್ದಾರೆ, ಆದ್ರೆ ನಿರೀಕ್ಷೆಯಷ್ಟು ಬಸ್ ಗಳು ಲಬ್ಯವಿಲ್ಲದ ಕಾರಣ ವಾಪಸ್ ಹೋಗಲು ಮಹಿಳಾ ಪ್ರಯಾಣಿಕರು ಹರಸಾಹಸ ಮಾಡಬೇಕಾಗಿದೆ. ಜೊತೆಗೆ ಸಾಲು ಸಾಲು ರಜೆಗಳು ಬಂದಿದ್ದ ಕಾರಣ ರಾಜಧಾನಿ ಬೆಂಗಳೂರಿನ ಜನ ಸೇರಿದಂತೆ ರಾಜ್ಯಾದ್ಯಂತ ಮೂಲೆ ಮೂಲೆಗಳಿಂದ ಜನರು ಆದಿಯೋಗಿ ಕ್ಷೇತ್ರ ಹಾಗೂ ನಂದಿಗಿರಿಧಾಮಕ್ಕೆ ಆಗಮಿಸುತ್ತಿದ್ದಾರೆ. ಆದ್ರೆ ವಾಪಸ್ ಹೋಗಲು ಸಕಾಲಕ್ಕೆ ಬಸ್ ಗಳು ಸಿಗದೆ ಪರದಾಡುವಂತಾಗಿದೆ.