ಕೋಲಾರದಲ್ಲಿ ಅದ್ದೂರಿ ಶೌರ್ಯ ಜಾಗರಣಾ ರಥಯಾತ್ರೆ; ಬಜರಂಗ ದಳದ ಸಾವಿರಾರು ಕಾರ್ಯಕರ್ತರು ಭಾಗಿ
ರಸ್ತೆಗಳಲೆಲ್ಲ ಜೈ ಶ್ರೀರಾಮ್ ಜೈ ಜೈ ಶ್ರೀರಾಮ್, ಬೊಲೋ ಭಾರತ್ ಮಾತಾಕೀ ಜೈ ಘೋಷಣೆಗಳು ಮೊಳಗಿದವು. ರಥಯಾತ್ರೆಯಲ್ಲಿ ಸಾವಿರಾರು ಬೈಕ್ ಸವಾರರು ಬಾಗಿಯಾಗಿದ್ದರು ಮತ್ತು ಎಲ್ಲರ ಕೈಗಳಲ್ಲಿ ಭಗ್ವಾ ಧ್ವಜಗಳು. ರಥಯಾತ್ರೆಯ ಸಂದರ್ಭದಲ್ಲಿ ಯಾವುದೇ ಆಹಿತಕರ ಘಟನೆ ಜರುಗಿಲ್ಲ.
ಕೋಲಾರ: ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಸದಸ್ಯರು (Bajrang Dal activists ) ಇಂದು ಕೋಲಾರದಲ್ಲಿ ಶೌರ್ಯ ಜಾಗರಣಾ ರಥಯಾತ್ರೆಯನ್ನು (Shourya Jagran Ratha Yatre) ಆದ್ದೂರಿಯಾಗಿ ನಡೆಸಿದರು. ನಗರದ ಸೋಮೇಶ್ವರ ದೇವಾಲಯದಿಂದ (Someshwara temple) ಶುರುವಾದ ಶೌರ್ಯಯಾತ್ರೆ ಎಲ್ಲ ಪ್ರಮುಖ ಬೀದಿಗಳ ಮೂಲಕ ಹಾದುಹೋಯಿತು. ಮೆರವಣಿಗೆಯಲ್ಲಿ ವೀರ್ ಸಾವರ್ಕರ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಕೇಶವ್ ಬಲಿರಾಮ್ ಹೆಡ್ಗೆವಾರ್, ಬಾಲಗಂಗಾಧರ್ ತಿಲಕ್, ಝಾನ್ಸಿ ರಾಣಿ ಲಕ್ಷ್ಮಿಬಾಯಿ ಮೊದಲಾದವರ ಭಾವಚಿತ್ರಗಳನ್ನು ವಿವಿಧ ವಾಹನಗಳಿಗೆ ಕಟ್ಟಿ, ಹಿಂದೂ ಕಾರ್ಯಕರ್ತರು ಜೈಕಾರ ಹಾಕುತ್ತಿರುವುದನ್ನು ನೋಡಬಹುದು. ರಸ್ತೆಗಳಲೆಲ್ಲ ಜೈ ಶ್ರೀರಾಮ್ ಜೈ ಜೈ ಶ್ರೀರಾಮ್, ಬೊಲೋ ಭಾರತ್ ಮಾತಾಕೀ ಜೈ ಘೋಷಣೆಗಳು ಮೊಳಗಿದವು. ರಥಯಾತ್ರೆಯಲ್ಲಿ ಸಾವಿರಾರು ಬೈಕ್ ಸವಾರರು ಬಾಗಿಯಾಗಿದ್ದರು ಮತ್ತು ಎಲ್ಲರ ಕೈಗಳಲ್ಲಿ ಭಗ್ವಾ ಧ್ವಜಗಳು. ರಥಯಾತ್ರೆಯ ಸಂದರ್ಭದಲ್ಲಿ ಯಾವುದೇ ಆಹಿತಕರ ಘಟನೆ ಜರುಗಿಲ್ಲ.
ಮತ್ತಷ್ಟು ವಿಡಿಯೋ ಸುದ್ದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ