‘ನಮ್ಮ ಅಣ್ಣನ ಸಿನಿಮಾ ನೋಡಿ ಅಂತ ಎಲ್ಲ ತಾಯಂದಿರಲ್ಲಿ ಮನವಿ ಮಾಡ್ತೀನಿ’: ಧ್ರುವ ಸರ್ಜಾ
‘ಪ್ರತಿ ಕ್ಷಣವೂ ಅಣ್ಣನನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ. ಕಳೆದ ಮೂರು ವರ್ಷದಿಂದ ನಾನು ಜನ್ಮದಿನ ಆಚರಿಸಿಕೊಂಡಿಲ್ಲ. ಎಷ್ಟೇ ಖುಷಿ ಸಿಕ್ಕರೂ ಅಣ್ಣ ಇಲ್ಲದೇ ಅಪೂರ್ಣ ಎನಿಸುತ್ತದೆ. ಈ ವರ್ಷದ ನನ್ನ ಬರ್ತ್ಡೇಗೆ ಸಿಗುತ್ತಿರುವ ಬೆಸ್ಟ್ ಉಡುಗೊರೆ ಎಂದರೆ ಅದು ರಾಜಮಾರ್ತಾಂಡ ಸಿನಿಮಾ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
ನಟ ಚಿರಂಜೀವಿ ಸರ್ಜಾ (Chiranjeevi Sarja) ಅವರು ಅಭಿನಯಿಸಿದ ಕೊನೇ ಸಿನಿಮಾ ‘ರಾಜಮಾರ್ತಾಂಡ’ ಈಗ ಬಿಡುಗಡೆ ಆಗುತ್ತಿದೆ. ಅಕ್ಟೋಬರ್ 6ರಂದು ಈ ಚಿತ್ರ ತೆರೆಕಾಣಲಿದೆ. ಆ ಪ್ರಯುಕ್ತ ಸುದ್ದಿಗೋಷ್ಠಿ ನಡೆಸಲಾಗಿದ್ದು, ಅದರಲ್ಲಿ ಧ್ರುವ ಸರ್ಜಾ ಭಾಗಿ ಆಗಿದ್ದಾರೆ. ಚಿರು ನಿಧನದ ಬಳಿಕ ಈ ಸಿನಿಮಾಗೆ ಧ್ರುವ ಅವರೇ ಡಬ್ಬಿಂಗ್ ಮಾಡಿಕೊಟ್ಟರು. ಈಗ ‘ರಾಜಮಾರ್ತಾಂಡ’ (Rajamarthanda) ಸಿನಿಮಾದ ಕೆಲಸಗಳು ಪೂರ್ಣಗೊಂಡಿವೆ. ಪ್ರೇಕ್ಷಕರ ಎದುರು ಬರುತ್ತಿರುವ ಈ ಸಂದರ್ಭದಲ್ಲಿ ಎಲ್ಲ ಪ್ರೇಕ್ಷಕರಿಗೂ ಧ್ರುವ ಸರ್ಜಾ ಒಂದು ಮನವಿ ಮಾಡಿಕೊಂಡಿದ್ದಾರೆ. ‘ಎಲ್ಲ ಮಕ್ಕಳು ಮತ್ತು ತಾಯಂದಿರು ದಯವಿಟ್ಟು ಎರಡು ಗಂಟೆ ಬಿಡುವು ಮಾಡಿಕೊಂಡು ನಮ್ಮ ಅಣ್ಣನ ಸಿನಿಮಾ ನೋಡಿ’ ಎಂದು ಧ್ರುವ ಸರ್ಜಾ (Dhruva Sarja) ಹೇಳಿದ್ದಾರೆ. ಅಣ್ಣನ ಪಾತ್ರಕ್ಕೆ ಧ್ವನಿ ನೀಡಿದ ಅನುಭವ ಹೇಗಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ. ಈ ಸಿನಿಮಾಗೆ ರಾಮ್ ನಾರಾಯಣ್ ನಿರ್ದೇಶನ ಮಾಡಿದ್ದು, ಶಿವಕುಮಾರ್ ನಿರ್ಮಾಣ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

