ಶಿವಮೊಗ್ಗದಲ್ಲಿ ಈದ್ ಮಿಲಾದ್ ಗಲಾಟೆ; ಯಾರೋ ಕಿಡಿಗೇಡಿಗಳು ಸ್ವಾರ್ಥಕ್ಕಾಗಿ ಇದನ್ನು ಮಾಡಿರಬಹುದು -ಸಚಿವ ಮಧು ಬಂಗಾರಪ್ಪ
ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ನಡೆದ ಪ್ರಕರಣಕ್ಕೆ ಸಂಬಂಧಿಸಿ ದೇವನಹಳ್ಳಿಯಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಯಾರೋ ಕಿಡಿಗೇಡಿಗಳು ಸ್ವಾರ್ಥಕ್ಕಾಗಿ ಇದನ್ನು ಮಾಡಿರಬಹುದು. ರಾಜಕೀಯ ಉದ್ದೇಶಕ್ಕಾಗಿ ಗಲಾಟೆ ಆಗಿದೆ ಎಂದು ಹೇಳುವುದಿಲ್ಲ ಎಂದರು.
ದೇವನಹಳ್ಳಿ, ಅ.02: ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ನಡೆದ ಪ್ರಕರಣಕ್ಕೆ ಸಂಬಂಧಿಸಿ ದೇವನಹಳ್ಳಿಯಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಯಾರೋ ಕಿಡಿಗೇಡಿಗಳು ಸ್ವಾರ್ಥಕ್ಕಾಗಿ ಇದನ್ನು ಮಾಡಿರಬಹುದು. ರಾಜಕೀಯ ಉದ್ದೇಶಕ್ಕಾಗಿ ಗಲಾಟೆ ಆಗಿದೆ ಎಂದು ಹೇಳುವುದಿಲ್ಲ ಎಂದರು. ನಾನು ನಿನ್ನೆ ಮಡಿಕೇರಿಯಲ್ಲಿ ಇದ್ದೆ. ಇದು ಯಾರೋ ಕಿಡಿಗೇಡಿಗಳು ಸ್ವರ್ಥಕ್ಕಾಗಿ ಮಾಡಿರಬಹುದು. ಇದನ್ನು ನಾನು ರಾಜಕೀಯ ಉದ್ದೇಶ ಎಂದು ಹೇಳಲ್ಲ. ಗಣೇಶ ವಿಸರ್ಜನೆಯನ್ನು ಬಹಳ ಅದ್ಬುತವಾಗಿ ಮಾಡಿದರು. ಈದ್ ಮಿಲಾದನ್ನು ಮುಸ್ಲಿಂ ಬಾಂಧವರು ಮೂರು ದಿನ ಮುಂದಕ್ಕೆ ಹಾಕಿದರು. ಒಟ್ಟಿಗೆ ಆಚರಿಸಿದರೆ ತೊಂದರೆ ಆಗುತ್ತೆ ಎಂದು ಪ್ಲಾನ್ ಮಾಡಿದರು. ಎಲ್ಲರೂ ಸೇರಿ ಮಾಡುವುದು ಹಬ್ಬ.
ಒಂದು ಕಡೆ ಕಿಡಿಗೇಡಿಗಳು ತಲೆ ಹರಟೆ ಕೆಲಸವನ್ನು ಮಾಡಿದ್ದಾರೆ. ಕಾನೂನು ಹುಡುಕಿಕೊಂಡು ಹೋಗುತ್ತೆ, ಅದರಲ್ಲಿ ಕಾನೂನೇ ಗೆಲ್ಲೋದು. ಇವೆಲ್ಲವನ್ನು ಬಿಡಬೇಕು, ಕಾನೂನಿಗೆ ಎಲ್ಲರೂ ತಲೆಬಾಗಬೇಕು. ಕಾನೂನು ಪ್ರಕ್ರಿಯೆಗಳು ಈಗ ಪ್ರಾರಂಭ ಆಗಿವೆ. ಆದಷ್ಟು ಬೇಗ ನಿಷೇಧಾಜ್ಞೆ ಹಿಂಪಡೆಯುತ್ತೇವೆ ಎಂದರು. ಇನ್ನು ಇದೇ ವೇಳೆ ಕಾಂಗ್ರೆಸ್ ಕುಮ್ಮಕ್ಕಿನಿಂದ ಗಲಭೆ ಆಗಿದೆ ಎಂಬ ಕೆ.ಎಸ್.ಈಶ್ವರಪ್ಪ ಆರೋಪಕ್ಕೆ ಸಚಿವ ಮಧು ಬಂಗಾರಪ್ಪ ತಿರುಗೇಟು ಕೊಟ್ಟಿದ್ದಾರೆ. ಅದಕ್ಕೆ ಕೆ.ಎಸ್.ಈಶ್ವರಪ್ಪ 67 ವರ್ಷಕ್ಕೆ ಕುಳಿತುಕೊಂಡಿರುವುದು ಎಂದರು.
ಈದ್ ಮಿಲಾದ್ ಗಲಾಟೆ: 24 ಎಫ್ಐಆರ್, 60 ಆರೋಪಿಗಳ ಬಂಧನ – ಎಸ್‌ಪಿ ಮಿಥುನ್
ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಪ್ರಕರಣ ಸಂಬಂಧ ಈವರೆಗೂ 24 ಎಫ್ಐಆರ್ ದಾಖಲಿಸಲಾಗಿದೆ ಎಂದು ಶಿವಮೊಗ್ಗದಲ್ಲಿ ಎಸ್‌ಪಿ ಜಿ.ಕೆ.ಮಿಥುನ್ ಕುಮಾರ್ ಹೇಳಿದ್ದಾರೆ. ಈವರೆಗೆ 60 ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ. ಕೆಲ ಆರೋಪಿಗಳನ್ನು ಚಿತ್ರದುರ್ಗ ಕಾರಾಗೃಹಕ್ಕೆ ಶಿಫ್ಟ್ ಮಾಡಿದ್ದೇವೆ. ಬಂಧಿತರಿಂದ 1 ಕಾರು, 1 ತ್ರಿಚಕ್ರ ವಾಹನ, 2 ಬೈಕ್ ಜಪ್ತಿ ಮಾಡಿದ್ದೇವೆ. ಗಲಾಟೆ ವೇಳೆ ಕಲ್ಲೆಸೆತದಿಂದ 7 ಮನೆಗಳ ಗಾಜು ಪುಡಿಪುಡಿಯಾಗಿವೆ. ಬೆಳಗ್ಗೆಯಿಂದ ಈವರೆಗೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. 144 ಸೆಕ್ಷನ್ ಜಾರಿ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯುತ್ತಿಲ್ಲ ಎಂದು ಶಿವಮೊಗ್ಗದಲ್ಲಿ ಎಸ್‌ಪಿ ಜಿ.ಕೆ.ಮಿಥುನ್ ಕುಮಾರ್ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್ಬಾಸ್ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್ಮಿಸ್

