Bangalore Power Cut: ಬೆಂಗಳೂರಿನ ಈ ನಗರಗಳಲ್ಲಿ ಎರಡು ದಿನ ವಿದ್ಯುತ್​ ವ್ಯತ್ಯಯ

|

Updated on: Dec 14, 2024 | 8:29 AM

ತುರ್ತು ನಿರ್ವಹಣಾ ಕಾರ್ಯದಿಂದಾಗಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಡಿಸೆಂಬರ್ 14 ಮತ್ತು 15 ರಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಘೋಷಿಸಿದೆ. ರಾಜರಾಜೇಶ್ವರಿನಗರ, ಬಾಪೂಜಿನಗರ ಮತ್ತು ಆನೇಕಲ್ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್​ ಕಡಿತವಾಗಲಿದೆ. ವಿದ್ಯುತ್ ಕಡಿತದ ಅವಧಿ ಮತ್ತು ಕಡಿತವಾಗುವ ಪ್ರದೇಶಗಳ ಸಂಪೂರ್ಣ ವಿವರಗಳನ್ನು ಬೆಸ್ಕಾಂ ತಿಳಿಸಿದೆ.

Bangalore Power Cut: ಬೆಂಗಳೂರಿನ ಈ ನಗರಗಳಲ್ಲಿ ಎರಡು ದಿನ ವಿದ್ಯುತ್​ ವ್ಯತ್ಯಯ
ಸಾಂಧರ್ಭಿಕ ಚಿತ್ರ
Follow us on

ಬೆಂಗಳೂರು, ಡಿಸೆಂಬರ್​ 14: ತುರ್ತು ನಿರ್ವಹಣಾ ಕೆಲಸ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರಿನ (Bengaluru) ಹಲವು ನಗರಗಳಲ್ಲಿ ಎರಡು ದಿನಗಳ ಕಾಲ ವಿದ್ಯುತ್​ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್​ ಸರಬರಾಜು ಕಂಪನಿ (BESCOM) ತಿಳಿಸಿದೆ. ಶನಿವಾರ (ಡಿಸೆಂಬರ್​ 14) ಮತ್ತು ರವಿವಾರ (ಡಿಸೆಂಬರ್​ 15) ರಂದು ಬೆಳಗ್ಗೆಯಿಂದ ಸಂಜೆಯವರೆಗೆ ವಿದ್ಯುತ್​ ಕಡಿತವಾಗಲಿದೆ.

ವಿದ್ಯುತ್​ ವ್ಯತ್ಯಯವಾಗುವ ಪ್ರದೇಶಗಳು

ರಾಜರಾಜೇಶ್ವರಿನಗರ ಹಾಗೂ ಬಾಪೂಜಿ ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ. ಬಾಪೂಜಿ ನಗರ, ಕವಿಕಾ ಲೇಔಟ್, ರಂಗನಾಥ ಕಾಲೋನಿ, ಬ್ಯಾಟರಾಯನಪುರ, ಐಯ್ಯಣ್ಣ ಶೆಟ್ಟಿ ಲೇಔಟ್, ಗಣಪತಿನಗರ, ಪ್ರೈಡ್ ಅಪಾ ರ್ಟ್‌ಮೆಂಟ್, ದೀಪಾಂಜಲಿನಗರ, ಪಟೇಲ್ ಪುಟ್ಟಯ್ಯ ಕೈಗಾರಿಕಾ ಪ್ರದೇಶ, ಬಿಎಚ್‌ ಇಎಲ್, ಮುತ್ತಾಚಾರಿ ಕೈಗಾರಿಕಾ ಪ್ರದೇಶ, ಜ್ಯೋತಿ ನಗರ, ಗಂಗೊಂಡನಹಳ್ಳಿ, ಅಜಿತ್ ಸೇತ್ ಕೈಗಾರಿಕಾ ಪ್ರದೇಶ, ವಿನಾಯಕ ಲೇಔಟ್, ಮೆಟ್ರೋ ಲೇಔಟ್, ನಾಯಂಡನಹಳ್ಳಿ, ಬ್ಯಾಟರಾಯನ ಪುರದ ಮೈಸೂರು ರಸ್ತೆ, ಶೋಭಾ ಟೆಂಟ್ ರೋಡ್, ಗುಡ್ಡದಹಳ್ಳಿ ಎಕ್ಸಟನ್ನನ್, ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್. ಆರ್‌ಆರ್‌ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆಯಿಂದಾಗುವ ಹಾನಿ ತಡೆಗಟ್ಟಲು ಶಾಶ್ವತ ಯೋಜನೆ

ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಅತ್ತಿಬೆಲೆ, ಆನೆಕಲ್ ಪಟ್ಟಣ, ಆನೇಕಲ್​ ಗ್ರಾಮಾಂತರ, ಪಾಲ್ಡೇನಹಳ್ಳಿ, ಹೊಂಪಲಘಟ್ಟ, ಚೂಡೇನಹಳ್ಳಿ, ಹೊನ್ನಕಳಶಾಪುರ, ಕರ್ಪೂರು, ಅವಡದೇನಹಳ್ಳಿ, ಬ್ಯಾಗಡದೇನಹಳ್ಳಿ, ವಿಬಿಹೆಚ್​ಸಿ ಅಪಾರ್ಟ್​ಮೆಂಟ್​, ಕಾಡಅಗ್ರಹಾರ, ಚಿಕ್ಕಹಾಗಡೆ, ದೊಡ್ಡಪಾಗಡೆ, ಸಮಂದೂರು ವ್ಯಾಪ್ತಿಯ ರಾಚಮಾನ ಹಳ್ಳಿ, ಗುಡ್ಡನಹಳ್ಳಿ, ಅರವಂಟಿಗೆಪುರ, ಪಿ ಗೊಲ್ಲಹಳ್ಳಿ, ತೆಲಗರಹಳ್ಳಿ, ವಣಕನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ಮತ್ತು ಭಾನುವಾರ ಎರಡೂ ದಿನವೂ ವಿದ್ಯುತ್​ ವ್ಯತ್ತಯವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:24 am, Sat, 14 December 24