ಬೆಂಗಳೂರು: ಇತ್ತೀಚೆಗಷ್ಟೇ ಕುಂದಾಪುರದಲ್ಲಿ ಹಿಂದೂ ಯುವತಿ ಜೊತೆ ಮುಸ್ಲಿಂ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ ಪ್ರಕರಣದ ಬೆನ್ನಲ್ಲೇ ಇದೀಗ ಬೆಂಗಳೂರು (Bengaluru) ನಗರದಲ್ಲಿ ಲವ್ ಜಿಹಾದ್ಗೆ (Love Jihad) ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಯುವಕನ ಮೋಸದ ಬಗ್ಗೆ ತಿಳಿದು ದೂರವಾದ ಯುವತಿ ಮತ್ತು ಕುಟುಂಬವನ್ನು ಮುಗಿಸುವ ಬೆದರಿಕೆ ಹಾಕಿದ ಮತಾಂಧನೊಂದಿಗೆ ಆಕೆಯನ್ನು ಕೆಲಸದಿಂದ ತೆಗೆದು ಆಕೆ ಕೆಲಸ ಮಾಡುತ್ತಿದ್ದ ಕಂಪನಿಯೇ ಕೈಜೋಡಿಸಿದೆ. ಸದ್ಯ ಕಿರಾತಕನಿಂದ ರಕ್ಷಣೆ ಕೋರಿ ಹಿಂದೂ ಯುವತಿ ಠಾಣೆಗೆ ಮೆಟ್ಟಿಲೇರಿದ್ದಾಳೆ. ಅಷ್ಟಕ್ಕೂ ಯುವಕನ ಲವ್ ಜಿಹಾದ್ ಯತ್ನ ಹೇಗಿತ್ತು? ಕಂಪನಿ ಮಾಡಿದ್ದೇನು? ಇಲ್ಲಿದೆ ನೋಡಿ..
ಲವ್ ಜಿಹಾದ್ಗೆ ಯತ್ನಿಸಿದ ಅಸ್ಸಾಂ ಮೂಲದ ಅಲ್ ಮೆಹಪ್ಯೂಸ್ ಬರಪೂಯಾ ಗಾರ್ಮೆಂಟ್ಸ್ ರಿಟೇಲ್ನಲ್ಲಿ ಕೆಲಸ ಮಾಡಿಕೊಂಡಿದ್ದು, ವಂಚನೆಗೊಳಗಾದ ಮಹಾರಾಷ್ಟ್ರ ಮೂಲದ ಯುವತಿ ಬ್ಲಾಕ್ ಬೆರಿಸ್ನಲ್ಲಿ ಕೆಲಸ ಮಾಡುತ್ತಿದ್ದಾಳೆ. ಕೆಲಸದ ಪ್ರಯುಕ್ತ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಯುವತಿ ಹಾಗೂ ಕೊರಮಂಗಲದಲ್ಲಿ ಯುವಕ ವಾಸವಾಗಿದ್ದರು.
ಪ್ರಾರಂಭದಲ್ಲಿ ಹಿಂದೂ ಯುವತಿಗೆ ತನ್ನ ಹೆಸರು ಮೆಲ್ಬಿನ್, ತಾನೊಬ್ಬ ಕ್ರಿಶ್ಚಿಯನ್ ಎಂದು ಅಲ್ ಮೆಹಪ್ಯೂಸ್ ಪರಿಚಯ ಮಾಡಿಕೊಂಡಿದ್ದನು. ನಂತರ ಇವರ ನಡುವೆ ನಡೆದ ಒಡನಾಟ ಪ್ರೀತಿಗೆ ತಿರುಗಿ ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ಆದರೆ ಆಕಸ್ಮಿಕವಾಗಿ ಅಲ್ ಮೆಹಪ್ಯೂಸ್ನ ಆಧಾರ್ ಕಾರ್ಡ್ ಯುವತಿಯ ಕಣ್ಣಿಗೆ ಬಿದ್ದಿದೆ. ಈ ವೇಳೆ ಆತ ಕ್ರಿಶ್ಚಿಯನ್ ಅಲ್ಲ, ಮುಸ್ಲಿಂ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Kundapur News: ಕುಂದಾಪುರದಲ್ಲಿ ವಿದ್ಯಾರ್ಥಿನಿ ಜತೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಗೆ ಬಿತ್ತು ಚಪ್ಪಲಿಯೇಟು, ವಿಡಿಯೋ ನೋಡಿ
ಕೂಡಲೇ ಎಚ್ಚೆತ್ತ ಯುವತಿ, ಬ್ರೇಕಪ್ ಮಾಡಿಕೊಂಡಿದ್ದಾಳೆ. ಮನೆಯವರಿಗೆ ವಿಚಾರ ಪ್ರಸ್ತಾಪಿಸಿದಾಗಲೂ ಪೋಕಷರು ತಿರಸ್ಕಾರ ಮಾಡಿ ಬುದ್ಧಿವಾದ ಹೇಳಿದ್ದಾರೆ. ಇತ್ತ ಅಲ್ ಮೆಹಪ್ಯೂಸ್ ಯುವತಿಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ರಾತ್ರಿ ವೇಳೆ ಮನೆ ಬಳಿ ಬಂದು ಗಲಾಟೆ ಕೊಲೆ ಬೆದರಿಕೆ ಹಾಕಿದ್ದಲ್ಲದೆ, ಯುವತಿ ಮತ್ತು ಕುಟುಂಬವನ್ನು ಮುಗಿಸುವ ಬೆದರಿಕೆ ಹಾಕಿದ್ದಾನೆ.
ಅಷ್ಟು ಮಾತ್ರವಲ್ಲದೆ, ಯುವತಿ ಕೆಲಸ ಮಾಡುತ್ತಿದ್ದ ಕಂಪನಿ ಮಾಲೀಕರಿಗೆ ಇಲ್ಲಸಲ್ಲದ ಆರೋಪ ಮಾಡಿದ್ದಾನೆ. ನಯವಂಚಕ ಅಲ್ ಮೆಹಪ್ಯೂಸ್ ಬರಪೂಯಾ ಜೊತೆ ಯುವತಿ ಸಹೋದ್ಯೋಗಿಗಳು ಕೂಡ ಸೇರಿರುವುದು ವಿಪರ್ಯಾಸವೇ ಸರಿ. ಕೊರಮಂಗಲ ಬ್ಲಾಕ್ ಬೇರಿಸ್ ಸ್ಟೋರ್ ಟೀಮ್ ಮಹಮದ್ ಸಕ್ಕೈನ್, ಸೈಯ್ಯದ್, ಮುಜಿಬ್ ಸೈಫ್ ಶೇಖ್, ಅಸ್ಲಂ ತಬ್ರೆಜ್ ಇವರೆಲ್ಲರು ಸೇರಿ ಯುವತಿ ವೃತ್ತಿ ಜೀವನವನ್ನು ಹಾಳು ಮಾಡಿದ್ದಾರೆ.
ಕಂಪನಿ ಜಿಎಂ ಸಾಯಾಕ್ ಅರೋರಾ ಅವ್ಯಾಚ ಶಬ್ದಗಳಿಂದ ನಿಂದನೆ ಮಾಡಿದ್ದಲ್ಲದೆ, ನಾಲ್ಕು ಲಕ್ಷ ನೀಡಿ ಕಾಂಪ್ರೊಮೈಸ್ ಮಾಡಿಕೊಳ್ಳುವಂತೆ ಒತ್ತಡ ಹೇರಿದ್ದಾನೆ. ಮೊದಲೇ ಟೈಪ್ ಮಾಡಿದ್ದ ಪ್ರತಿಯನ್ನು ಮುಂದಿಟ್ಟು ಸಹಿ ಹಾಕುವಂತೆ ಹಾಗೂ ಹಣ ನೀಡದಿದ್ದರೆ ಕೆಲಸದಿಂದ ತೆಗೆಯುವುದಾಗಿ ಹೆಚ್ಆರ್ ಅಂಕುಷ್ ಠಾಕೂರ್, ಎಂಐಎಸ್ ಅವಿನಾಶ್ ವರ್ಮ, ಜಿಎಂ ಸಯಾಕ್ ಆರೋರಾ, ಪ್ರಾಂಚೈಸಿ ಹರೀಶ್ ಎಂಬವರು ಬ್ಲಾಕ್ ಮೇಲ್ ಮಾಡಿದ್ದಾರೆ.
ಕಿರುಕುಳ ಹಾಗೂ ಬ್ಲಾಕ್ ಮೇಲ್ನಿಂದ ಮನನೊಂದಿರುವ ಯುವತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಮತಾಂಧನ ವಿರುದ್ಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಂಪನಿ ಆಡಳಿತ ಮಂಡಳಿ ವಿರುದ್ಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮುಸ್ಲಿಂ ಯುವಕನಿಂದ ರಕ್ಷಣೆ ಹಾಗೂ ನ್ಯಾಯ ನೀಡುವಂತೆ ದೂರಿನಲ್ಲಿ ಯುವತಿ ಮನವಿ ಮಾಡಿದ್ದಾಳೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ