Bengaluru News: ಮಹಿಳೆ ಸ್ನಾನ ಮಾಡುವುದನ್ನು ಕಿಟಕಿ ಮೂಲಕ ಕದ್ದು ನೋಡಿದ ಯುವಕ ಅರೆಸ್ಟ್

ಮಹಿಳೆ ಕಿರುಚುತ್ತಿದ್ದಂತೆ ಯುವಕ ಎಸ್ಕೇಪ್ ಆಗಿ ತನ್ನ ಮನೆ ಸೇರಿಕೊಂಡಿದ್ದಾನೆ. ಆದ್ರೆ ಕಿರುಚುವಾಗ ಮುಖ ಗಮನಿಸಿದ್ದ ಮಹಿಳೆ ತನ್ನ ಸೋದರ ಮಾವ ಮತ್ತು ಇತರರೊಂದಿಗೆ ನಿತಿನ್ ಮನೆಗೆ ತೆರಳಿ ಆತನನ್ನು ಪ್ರಶ್ನಿಸಿದ್ದಾಳೆ.

Bengaluru News: ಮಹಿಳೆ ಸ್ನಾನ ಮಾಡುವುದನ್ನು ಕಿಟಕಿ ಮೂಲಕ ಕದ್ದು ನೋಡಿದ ಯುವಕ ಅರೆಸ್ಟ್
ಸಾಂದರ್ಭಿಕ ಚಿತ್ರ
Follow us
ಆಯೇಷಾ ಬಾನು
|

Updated on: Jun 12, 2023 | 7:55 AM

ಬೆಂಗಳೂರು: ಮಹಿಳೆ ಸ್ನಾನ ಮಾಡುವುದನ್ನು ಕದ್ದು ನೋಡಿದ ಎಂಬ ಆರೋಪದ ಮೇಲೆ ಪೊಲೀಸರು ಯುವಕನನ್ನು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶುಕ್ರವಾರ ಮಹಿಳೆಯೊಬ್ಬರು ಸ್ನಾನ(Woman Bath) ಮಾಡುತ್ತಿದ್ದುದನ್ನು ನೋಡಲು ಯುವಕ ನೆರೆಮನೆಯ ಕಿಟಕಿಯಿಂದ ಇಣುಕಿ ನೋಡಿದ್ದಾನೆ ಎನ್ನಲಾಗಿದ್ದು ಮಹಿಳೆ ದಾಖಲಿಸಿದ ಕೇಸ್ ಆಧಾರದ ಮೇಲೆ 23 ವರ್ಷದ ಯುವಕನನ್ನು ಬಂಧಿಸಲಾಗಿದೆ(Sexual Assault). ಆರೋಪಿ ಖಾಸಗಿ ಸಂಸ್ಥೆಯ ಉದ್ಯೋಗಿ ನಿತಿನ್ ಎಂದು ತಿಳಿದು ಬಂದಿದೆ.

38 ವರ್ಷದ ಗೃಹಿಣಿ ವಿನುತಾ (ಹೆಸರು ಬದಲಿಸಲಾಗಿದೆ) ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆತನ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. ತನ್ನ ಮನೆಕೆಲಸಗಳನ್ನು ಮುಗಿಸಿ ಮಧ್ಯಾಹ್ನ 1.35ಕ್ಕೆ ವಾಶ್‌ರೂಮ್‌ಗೆ ಹೋಗಿದ್ದೆ ಎಂದು ವಿನುತಾ ಪೊಲೀಸರಿಗೆ ತಿಳಿಸಿದ್ದಾರೆ. ನಾನು ಸ್ನಾನ ಮಾಡುವಾಗ ಕಿಟಕಿಯಿಂದ ಯಾರೋ ಇಣುಕಿ ನೋಡುತ್ತಿರುವುದನ್ನು ಗಮನಿಸಿದೆ ಆಗ ಸಹಾಯಕ್ಕಾಗಿ ಕಿರುಚಿದೆ ಎಂದು ಮಹಿಳೆ ತಿಳಿಸಿದ್ದಾರೆ.

ಇದನ್ನೂ ಓದಿ: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ, ಪಾದಾಚಾರಿ ಸ್ಥಳದಲ್ಲೇ ಸಾವು: ಸ್ಥಳೀಯರಿಂದ ಹೆದ್ದಾರಿ ತಡೆದು ಪ್ರತಿಭಟನೆ

ಮಹಿಳೆ ಕಿರುಚುತ್ತಿದ್ದಂತೆ ಯುವಕ ಎಸ್ಕೇಪ್ ಆಗಿ ತನ್ನ ಮನೆ ಸೇರಿಕೊಂಡಿದ್ದಾನೆ. ಆದ್ರೆ ಕಿರುಚುವಾಗ ಮುಖ ಗಮನಿಸಿದ್ದ ಮಹಿಳೆ ತನ್ನ ಸೋದರ ಮಾವ ಮತ್ತು ಇತರರೊಂದಿಗೆ ನಿತಿನ್ ಮನೆಗೆ ತೆರಳಿ ಆತನನ್ನು ಪ್ರಶ್ನಿಸಿದ್ದಾಳೆ. ಬಳಿಕ ಎಲ್ಲರೂ ಸೇರಿ ಹಿಗ್ಗಾಮುಗ್ಗಾ ಥಳಿಸಿದ್ದು ಯುವಕ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಪೊಲೀಸರು ಲೈಂಗಿಕ ಕಿರುಕುಳ ಆರೋಪದ ಮೇಲೆ ಯುವಕನನ್ನು ಬಂಧಿಸಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ