Karnataka Breaking Kannada News Highlights: ಬೆಂಗಳೂರಿನ ಹಲವೆಡೆ ವರುಣನ ಆರ್ಭಟ: ಹೆಚ್‌ಎಎಲ್ ಏರ್‌ಪೋರ್ಟ್‌ ರಸ್ತೆಯಲ್ಲಿ ಭಾರಿ ಟ್ರಾಫಿಕ್‌ಜಾಮ್

ಆಯೇಷಾ ಬಾನು
| Updated By: ಗಂಗಾಧರ​ ಬ. ಸಾಬೋಜಿ

Updated on:Jun 12, 2023 | 11:02 PM

ಇಂದಿನ ತಾಜಾ ಸುದ್ದಿ ಬ್ರೇಕಿಂಗ್​ ನ್ಯೂಸ್​ ಲೈವ್​​: ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಗೆ ನಾರಿ ಮಣಿಗಳು ಫುಲ್ ಖುಷ್ ಆಗಿದ್ದು ಸರ್ಕಾರಿ ಬಸ್​ಗಳು ಫುಲ್ ಆಗಿವೆ. ಟಿವಿ9 ಕನ್ನಡ ಡಿಜಿಟಲ್ ಮೂಲಕ ದಿನದ ಪ್ರಮುಖ ಸುದ್ದಿಗಳ ಅಪ್ಡೇಟ್ಸ್​ ಪಡೆಯಿರಿ.

Karnataka Breaking Kannada News Highlights: ಬೆಂಗಳೂರಿನ ಹಲವೆಡೆ ವರುಣನ ಆರ್ಭಟ: ಹೆಚ್‌ಎಎಲ್ ಏರ್‌ಪೋರ್ಟ್‌ ರಸ್ತೆಯಲ್ಲಿ ಭಾರಿ ಟ್ರಾಫಿಕ್‌ಜಾಮ್
ಮಳೆಯಿಂದಾಗಿ ಟ್ರಾಫಿಕ್‌ಜಾಮ್‌

ಕರ್ನಾಟಕ ಕಾಂಗ್ರೆಸ್ ಸರ್ಕಾರದ (Karnataka Congress Government) ಮಹತ್ವಾಕಾಂಕ್ಷಿ ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ(Siddaramaiah) ಚಾಲನೆ ನೀಡಿದ್ದು ರಾಜ್ಯಾದ್ಯಂತ ಮಹಿಳೆಯರು ಫುಲ್ ಖುಷ್ ಆಗಿದ್ದಾರೆ. ಶಕ್ತಿ ಯೋಜನೆ (Free Bus Travel For Women Scheme) ಎರಡನೇ ದಿನಕ್ಕೆ ಕಾಲಿಟ್ಟು ಮಹಿಳೆಯರು, ಯುವತಿಯರು, ವಿದ್ಯಾರ್ಥಿಗಳು ಹಣ ಖರ್ಚು ಮಾಡದೆ ಓಡಾಡುತ್ತಿದ್ದಾರೆ. ಬಹುತೇಕ ಕೆಎಸ್​ಆರ್​ಟಿಸಿ, ಸರ್ಕಾರಿ ಬಸ್​ಗಳು ಫುಲ್ ಆಗಿದ್ದು ಖಾಸಗಿ ಬಸ್​ಗಳು ಖಾಲಿ ಖಾಲಿಯಾಗಿವೆ. ಸರ್ಕಾರದ ಫ್ರೀ ಬಸ್ ಯೋಜನೆಗೆ ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಮತ್ತೊಂದೆಡೆ ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಇಂದು ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಲಿದ್ದಾರೆ. ಕುಡಿಯುವ ನೀರು, ಜಲಜೀವನ್ ಮಿಷನ್, ಇಂದಿರಾ ಕ್ಯಾಂಟೀನ್ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಬಗ್ಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದೆ. ಇನ್ನು ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜಕೀಯ ಮತ್ತು ಮಳೆಯ ಲೈವ್​ ಅಪ್ಡೇಟ್ಸ್​ಗಳಿಗಾಗಿ ಟವಿ9 ಡಿಜಿಟಲ್ ಫಾಲೋ ಮಾಡಿ.

LIVE NEWS & UPDATES

The liveblog has ended.
  • 12 Jun 2023 11:01 PM (IST)

    Karnataka Breaking Kannada News Live: ಮಳೆಯಿಂದಾಗಿ ಹಲವು ಕಡೆ ರಸ್ತೆ ಜಲಾವೃತ

    ಸಿಲಿಕಾನ್ ಸಿಟಿಯಲ್ಲಿ ಸಂಜೆ ವೇಳೆಗೆ ಮಳೆ ಸುರಿದ್ದು, ಹಲವು ಕಡೆ ರಸ್ತೆ ಜಲಾವೃತಗೊಂಡಿವೆ. ಮಾರತ್ತಹಳ್ಳಿ ವರ್ತೂರು ಭಾಗದಲ್ಲಿ ರಸ್ತೆಗಳು ಜಲಾವೃತಗೊಂಡಿದ್ದು, ಬಳಗೆರೆ ರಸ್ತೆ ಮತ್ತು ಕರಿಯಮ್ಮನ ಅಗ್ರಹಾರದ ರಸ್ತೆ ಮೇಲೆ ನೀರು ನಿಂತಿವೆ. ರಸ್ತೆ ಜಲಾವೃತ ಆಗಿದ್ದರಿಂದ ವಾಹನ ಸವಾರರು ಪರದಾಡಿದ್ದಾರೆ.

  • 12 Jun 2023 10:15 PM (IST)

    Karnataka Breaking Kannada News Live: ಮನೆಗಳಿಗೆ ನುಗ್ಗಿದ್ದ ನೀರು: ನಿವಾಸಿಗಳು ಪರದಾಟ

    ಬೆಂಗಳೂರು ಮಹಾನಗರದ ಹಲವೆಡೆ ವರುಣನ ಆರ್ಭಟ ಜೋರಾಗಿದ್ದು, ವರ್ತೂರಿನಲ್ಲಿ ಮಳೆಯಿಂದ ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿದೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ಸ್ಥಳೀಯ ನಿವಾಸಿಗಳು ಪರದಾಡಿದ್ದಾರೆ.

  • 12 Jun 2023 09:41 PM (IST)

    Karnataka Breaking Kannada News Live: ವರ್ಗಾವಣೆ ಆದೇಶ ಪ್ರಶ್ನಿಸಿ ಸಿಎಟಿ ಮೊರೆ

    ರಾಜ್ಯ ಸರ್ಕಾರದ ವರ್ಗಾವಣೆ ಆದೇಶ ಪ್ರಶ್ನಿಸಿ ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್​​ ಸಿಎಟಿ ಮೊರೆ ಹೋಗಿದ್ದರು. ಸಿಎಟಿಯಿಂದ ರವಿ ಡಿ.ಚನ್ನಣ್ಣನವರ್​ ವರ್ಗಾವಣೆ ಆದೇಶಕ್ಕೆ ತಡೆ

  • 12 Jun 2023 08:48 PM (IST)

    Karnataka Breaking Kannada News Live: ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್​ ವರ್ಗಾವಣೆ ಆದೇಶಕ್ಕೆ ತಡೆ

    ಬೆಂಗಳೂರು: ಜೂನ್ 8ರಂದು ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್​ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದ ಸರ್ಕಾರ ಸದ್ಯ ಅದನ್ನು ತಡೆ ಹಿಡಿದೆ. ಕಿಯೋನಿಕ್ಸ್ ಎಂಡಿ ಹುದ್ದೆಯಿಂದ ಐಎಸ್​ಡಿಗೆ ವರ್ಗಾವಣೆ ಮಾಡಿತ್ತು. ಆಂತರಿಕ ಭದ್ರತಾ ವಿಭಾಗದ ಡಿಐಜಿಪಿ ಆಗಿ ವರ್ಗಾವಣೆ ಮಾಡಿತ್ತು.

  • 12 Jun 2023 08:37 PM (IST)

    Karnataka Breaking Kannada News Live: ಕರ್ನಾಟಕದಾದ್ಯಂತ ಉಗ್ರ ಹೋರಾಟ

    ಬೆಳಗಾವಿಯಿಂದ 13 ಕೀಮಿ ಮಹಾರಾಷ್ಟ್ರ ಗಡಿ ಇದೆ ಹೀಗಾಗಿ ಎಲ್ಲರೂ ಅಲ್ಲಿಗೆ ಹೋಗುತ್ತಾರೆ. ವಿದ್ಯುತ್ ದರ ಏರಿಕೆ ನಿಯಂತ್ರಿಸದಿದ್ದರೆ ಕರ್ನಾಟಕದಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತೆ. ನಮ್ಮ ವಿನಂತಿ ಪುರಸ್ಕರಿಸದಿದ್ದರೆ ಒಂದು ದಿನ ಕರ್ನಾಟಕದಲ್ಲಿ ಕೈಗಾರಿಕೆ ಬಂದ್ ಮಾಡುತ್ತೇವೆ. ಇದಕ್ಕೂ ಮೀರಿ ಕ್ರಮ ಜರುಗಿಸದಿದ್ದರೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

  • 12 Jun 2023 08:01 PM (IST)

    Karnataka Breaking Kannada News Live: ವಿದ್ಯುತ್ ದರ ಹೆಚ್ಚಳ ಮಾಡುತ್ತಾ ಹೋದರೆ ಮಹಾರಾಷ್ಟ್ರಕ್ಕೆ ಹೋಗಬೇಕಾಗುತ್ತೆ

    ವಿದ್ಯುತ್ ದರ ಹೆಚ್ಚಳ ಮಾಡುತ್ತಾ ಹೋದರೆ ಮಹಾರಾಷ್ಟ್ರಕ್ಕೆ ಹೋಗಬೇಕಾಗುತ್ತೆ ಎಂದು ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಹೇಮಂತ್ ಪೋರವಾಲ್​ ಹೇಳಿದರು. ಉದ್ಯಮಿಗಳ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯ ಉದ್ಯಮಭಾಗ ಕೈಗಾರಿಕಾ ಪ್ರದೇಶದಲ್ಲಿ 50 ರಿಂದ 60 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಾರೆ. ಮಹಾರಾಷ್ಟ್ರದವರ ಪ್ರೊಡಕ್ಷನ್ ಜಾಸ್ತಿ ಇದೆ ಅವರು ಈ ಅವಕಾಶ ಬಳಸಿಕೊಳ್ಳುತ್ತಾರೆ ಎಂದರು.

  • 12 Jun 2023 07:12 PM (IST)

    Karnataka Breaking Kannada News Live: ಇದೀಗ ಮತ್ತೆ ಟೋಲ್ ದರ ಏರಿಕೆ

    • ಕಾರ್, ವ್ಯಾನ್‌, ಜೀಪ್‌ಗಳ ಏಕಮುಖ ಸಂಚಾರಕ್ಕೆ ₹135 ರಿಂದ ₹165ಕ್ಕೆ ಏರಿಕೆ (30 ರೂ ಹೆಚ್ಚಳ)
    • ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಟೋಲ್‌ ₹220ರಿಂದ ₹270ಕ್ಕೆ ಏರಿಕೆ(50ರೂ ಹೆಚ್ಚಳ)
    • ಟ್ರಕ್‌, ಬಸ್, 2 ಆಕ್ಸೆಲ್‌ ವಾಹನಗಳ ಏಕಮುಖ ಸಂಚಾರಕ್ಕೆ ₹460 ರಿಂದ ₹565ಕ್ಕೆ ಏರಿಕೆ.(105 ಹೆಚ್ಚಳ)
    • 3 ಆಕ್ಸೆಲ್ ವಾಣಿಜ್ಯ ವಾಹನಗಳ ಏಕಮುಖ ಸಂಚಾರ ₹ 500 ರಿಂದ ₹615ಕ್ಕೆ ಏರಿಕೆ (115 ರೂ ಹೆಚ್ಚಳ)
    • ಭಾರಿ ವಾಹನಗಳ ಏಕಮುಖ ಸಂಚಾರ ₹ 720ರಿಂದ ₹885ಕ್ಕೆ ಏರಿಕೆ (165 ಹೆಚ್ಚಳ)
    • 7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್‌ ವಾಹನಗಳ ಎಕಮುಖ ಸಂಚಾರ ₹880ರಿಂದ ₹1,080ಕ್ಕೆ ಏರಿಕೆ (₹200 ಹೆಚ್ಚಳ)

    ಈ ಹಿಂದೆ ಏಪ್ರಿಲ್ 1ರಂದೇ ಹೆದ್ದಾರಿ ಪ್ರಾಧಿಕಾರ ದರ ಏರಿಕೆ ಮಾಡಿತ್ತು. ಸಾರ್ವಜನಿಕ ಆಕ್ರೋಶ ಹಿನ್ನೆಲೆ ದರ ಹೆಚ್ಚಳ ವಾಪಸ್ಸ್ ಪಡೆದಿತ್ತು. ಆದರೆ ಇದೀಗ ಮತ್ತೆ ಏರಿಕೆ ಮಾಡಿದೆ.

  • 12 Jun 2023 07:10 PM (IST)

    Karnataka Breaking Kannada News Live: ದಶಪಥ ಹೆದ್ದಾರಿಯಲ್ಲಿ ಸಂಚಾರ ಮತ್ತಷ್ಟು ದುಬಾರಿ

    ರಾಮನಗರ: ಬೆಂಗಳೂರು-ಮೈಸೂರು ದಶಪಥ ರಸ್ತೆಯ ಟೋಲ್‌ ದರ ಮತ್ತೆ ಹೆಚ್ಚಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ. ಶೇ.22ರಷ್ಟು ಟೋಲ್ ದರವನ್ನು ಹೆದ್ದಾರಿ ಪ್ರಾಧಿಕಾರ ಏರಿಕೆ ಮಾಡಿದೆ. ಜೂನ್ 1ರಿಂದಲೇ ದುಬಾರಿ ಶುಲ್ಕ ಅನ್ವಯವಾಗಲಿದೆ.

  • 12 Jun 2023 06:52 PM (IST)

    Karnataka Breaking Kannada News Live: ನರ್ಸಿಂಗ್ ವೃತ್ತಿ ಬಹಳ ಪವಿತ್ರವಾದ ವೃತ್ತಿ: ಸಿಎಂ ಸಿದ್ದರಾಮಯ್ಯ

    ನರ್ಸಿಂಗ್ ವೃತ್ತಿ ಬಹಳ ಪವಿತ್ರವಾದ ವೃತ್ತಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ನರ್ಸಿಂಗ್​ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಬಹಳ ದೀರ್ಘಕಾಲ ನರ್ಸಿಂಗ್ ವೃತ್ತಿ ಮಾಡಿದವರಿಗೆ ಪ್ರಶಸ್ತಿ ಸಿಕ್ಕಿದೆ ಎಂದು ಹೇಳಿದರು.

  • 12 Jun 2023 06:14 PM (IST)

    Karnataka Breaking Kannada News Live: ವಿದ್ಯುತ್ ದರ ಏರಿಕೆಗೆ ಮಾಜಿ ಸಚಿವ ರೇಣುಕಾಚಾರ್ಯ ಆಕ್ರೋಶ

    ದಾವಣಗೆರೆ: ವಿದ್ಯುತ್ ದರ ಹೆಚ್ಚಿಸಿದ್ದಾರೆ, ಯಾರೂ ಕರೆಂಟ್​ ಬಿಲ್ ಕಟ್ಟಬೇಡಿ ಎಂದು ಮಾಜಿ ಸಚಿವ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು. 20 ಸಾವಿರ ರೂ. ಕೋಟಿ ಕಾಮಗಾರಿ ಹಣ ವಾಪಸ್ ಪಡೆದಿದ್ದಾರೆ. ನಮ್ಮ ಅವಧಿಯ ಕಾಮಗಾರಿ ಹಣ ವಾಪಸ್​ ಪಡೆಯಲು ಆಗುತ್ತದೆ. ವಿದ್ಯುತ್ ಬೆಲೆ ಏರಿಕೆ ಆದೇಶ ವಾಪಸ್ ಪಡೆಯುವುದಕ್ಕೆ ಬರಲ್ವಾ ಎಂದು ಪ್ರಶ್ನಿಸಿದರು.

  • 12 Jun 2023 05:51 PM (IST)

    Karnataka Breaking Kannada News Live: ಬಿಜೆಪಿಯವರ ಹೇಳಿಕೆ ಬಾಲಿಶವಾದುದು: ಹೆಚ್​ಡಿ ಕುಮಾರಸ್ವಾಮಿ

    ಸರ್ಕಾರ ಸರಿಯಾಗಿ ವ್ಯವಸ್ಥೆ ಮಾಡಿಕೊಂಡರೆ ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರ್ಕಾರ ಹಣ ಹೊಂದಿಸಬಹುದು. ಆದರೆ ಬಿಜೆಪಿಯವರ ಹೇಳಿಕೆ ಬಾಲಿಶವಾದುದು ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಹೇಳಿದರು.

  • 12 Jun 2023 05:40 PM (IST)

    Karnataka Breaking Kannada News Live: ಹಣ ಹೊಂದಿಸಲು ಸರ್ಕಾರಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ

    ರಾಮನಗರ: ಗ್ಯಾರಂಟಿ ಯೋಜನೆ ಜಾರಿಗೆ ಸರ್ಕಾರ ಹಣ ಒದಗಿಸುವ ವಿಚಾರವಾಗಿ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ಗ್ಯಾರೆಂಟಿಗೆ ಹಣ ಒದಸಲಿಕ್ಕೆ ಆಗಲ್ಲ ಅಂತ ನಾನು ಹೇಳುವುದಿಲ್ಲ. ಸರ್ಕಾರ ಮನಸ್ಸು ಮಾಡಿದ್ರೆ ಹಣ ಹೊಂದಿಸುವುದು ಕಷ್ಟ ಆಗಲ್ಲ. ನಾನು ಸ್ವಲ್ಪ ದಿನ ಸರ್ಕಾರ ನಡೆಸಿದ್ದೇನೆ. ಹಣವನ್ನ ಹೊಂದಿಸಲು ಸರ್ಕಾರಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದರು.

  • 12 Jun 2023 04:57 PM (IST)

    Karnataka Breaking Kannada News Live: ಸ್ಥಾನ ಮಾನದ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ

    ಚುನಾವಣೆ ಬಳಿಕ ಸುರ್ಜೇವಾಲ ರಾಜ್ಯಕ್ಕೆ ಬಂದಿದ್ದಾರೆ. ಬಂದು ಭೇಟಿ ಮಾಡಲು ಹೇಳಿದ್ರು. ಸೌಹಾರ್ದ ಭೇಟಿ ಸುರ್ಜೇವಾಲ ಜೊತೆ ಆಗಿದೆ. ಮೊದಲಿನಿಂದ ಹೇಳುತ್ತ ಬಂದಿದ್ದೇನೆ. ಪಕ್ಷ ವಹಿಸಿದ ಜವಾಬ್ದಾರಿ ನಿರ್ವಹಣೆ ಮಾಡುತ್ತೇನೆ. ಸ್ಥಾನ ಮಾನದ ವಿಚಾರ ಯಾವುದೇ ಚರ್ಚೆ ಆಗಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

  • 12 Jun 2023 04:33 PM (IST)

    Karnataka Breaking Kannada News Live: ನಿನ್ನೆ ಒಂದೇ ದಿನ 5.71 ಲಕ್ಷ ಮಹಿಳೆಯರು ಸರ್ಕಾರಿ ಬಸ್​ನಲ್ಲಿ ಪ್ರಯಾಣ

    ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ನಿನ್ನೆ ಒಂದೇ ದಿನ 5.71 ಲಕ್ಷ ಮಹಿಳೆಯರು ಸರ್ಕಾರಿ ಬಸ್​ನಲ್ಲಿ ಪ್ರಯಾಣ ಮಾಡಿದ್ದು, ನಿನ್ನೆ ಮಧ್ಯಾಹ್ನ 1ರಿಂದ ರಾತ್ರಿ 12ರವರೆಗೆ 5.71 ಲಕ್ಷ, ಬಿಎಂಟಿಸಿ ಬಸ್​ನಲ್ಲಿ ಒಟ್ಟು 2,01,215, ವಾಯವ್ಯ ಸಾರಿಗೆ ಬಸ್​ನಲ್ಲಿ 1,22,354, ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 53,623, ಸಾರಿಗೆ ಬಸ್​ಗಳಲ್ಲಿ ಓಡಾಡಿರುವ ಒಟ್ಟು ಮಹಿಳೆಯರ ಸಂಖ್ಯೆ 5,71,023 ಮಹಿಳಾ ಪ್ರಯಾಣಿಕರ ಟಿಕೆಟ್​​ ವೆಚ್ಚ 1,40,22,878 ರೂ.

  • 12 Jun 2023 04:14 PM (IST)

    Karnataka Breaking Kannada News Live: ಇಂದಿರಾ ಕ್ಯಾಂಟೀನ್ ಪುನಾರಾಂಭಿಸಲು ಸಿಎಂ ಸಿದ್ಧರಾಮಯ್ಯ ನಿರ್ಧr

    ಬಿಜೆಪಿ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್ ಸರಿಯಾಗಿ ನಿರ್ವಹಣೆಯಾಗಲಿಲ್ಲ. ಬೆಂಗಳೂರಿನ ಬಹುತೇಕ ಕಡೆ ಇಂದಿರಾ ಕ್ಯಾಂಟೀನ್ ಮುಚ್ಚಿಹೋಗಿದೆ. ಈಗ ಮತ್ತೆ ತಮ್ಮ ಸರ್ಕಾರ ಬಂದ ಹಿನ್ನೆಲೆಯಲ್ಲಿ ತಮ್ಮ ಹಿಂದಿನ ಆಡಳಿತದಲ್ಲಿ ತಂದಿದ್ದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಪುನಾರಾಂಭಿಸಲು ಸಿಎಂ ಸಿದ್ಧರಾಮಯ್ಯ ನಿರ್ಧರಿಸಿದ್ದಾರೆ.

  • 12 Jun 2023 04:13 PM (IST)

    Karnataka Breaking Kannada News Live: ಇಂದಿರಾ ಕ್ಯಾಂಟೀನ್​ನಲ್ಲಿ ಗುಣಮಟ್ಟದ ಆಹಾರ ನೀಡಲು ಆದ್ಯತೆ

    ಬೆಂಗಳೂರು: ಇಂದಿರಾ ಕ್ಯಾಂಟೀನ್ ವಿಚಾರವಾಗಿ ಹೊಸ ಟೆಂಡರ್ ಕರೆಯುತ್ತೇವೆ. ಕ್ವಾಲಿಟಿ, ಕ್ವಾಂಟಿಟಿಗೂ ಹೆಚ್ಚಿನ ಒತ್ತು ಕೊಡುತ್ತೇವೆ. ಮತ್ತೊಮ್ಮೆ ಟೆಂಡರ್ ಆದ ಬಳಿಕ ರೀ ಲಾಂಚ್ ಮಾಡುತ್ತೇವೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ 250 ಇಂದಿರಾ ಕ್ಯಾಂಟೀನ್ ಆರಂಭಿಸಲು ಸೂಚನೆ ನೀಡಲಾಗಿದೆ.

  • 12 Jun 2023 03:34 PM (IST)

    Karnataka Breaking Kannada News Live: ಕಳಪೆ ಕಾಮಗಾರಿ ಬಗ್ಗೆ ಎಲ್ಲಾ ಶಾಸಕರು ಕೂಡ ಬರೆದುಕೊಟ್ಟಿದ್ದಾರೆ

    ಕಳಪೆ ಕಾಮಗಾರಿ ಬಗ್ಗೆ ಎಲ್ಲಾ ಶಾಸಕರು ಕೂಡ ಬರೆದುಕೊಟ್ಟಿದ್ದಾರೆ. ಪೈಪ್​ಲೈನ್​ ಲೋಪ, ಟೆಂಡರ್​ ಅಕ್ರಮ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಎಲ್ಲಾ ಕಡೆಯೂ ಅಕ್ರಮವಾಗಿದೆ ಎಂದು ಹೇಳುತ್ತಿಲ್ಲ. ಗುರುಮಠಕಲ್​, ತುಮಕೂರಿನಲ್ಲಿ ಲೋಪದ ಬಗ್ಗೆ ಮಾಹಿತಿ ಬಂದಿದೆ. ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ತನಿಖೆ ಮಾಡಿ ವರದಿ ಕೊಡುತ್ತಾರೆ. ಸಿಎಂ ಸಿದ್ದರಾಮಯ್ಯ ಕೂಡ ವರದಿ ನೀಡಲು ಸೂಚನೆ ನೀಡಿದ್ದಾರೆ ಎಂದು ಟಿವಿ9ಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ​ ಹೇಳಿದರು.

  • 12 Jun 2023 03:15 PM (IST)

    Karnataka Breaking Kannada News Live: ಮತ್ತೆ ಮುನ್ನಲೆಗೆ ಬಂದ ಲಿಂಗಾಯತ ಸ್ವತಂತ್ರ ಧರ್ಮ ವಿಚಾರ

    ಬೆಳಗಾವಿ: ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತ್ತು. ಇದೀಗ ವರದಿ ಬಗ್ಗೆ ಕೇಂದ್ರ ಸರ್ಕಾರವೂ ಉತ್ತರ ನೀಡಿದೆ. ಈಗ ಅದಕ್ಕೆ ಕರ್ನಾಟಕ‌ ಸರ್ಕಾರ ಮರು ಉತ್ತರ ಕೊಡಬೇಕಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಡಾ.ಶಿವಾನಂದ ಜಾಮದಾರ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಲಿಂಗಾಯತ ಧರ್ಮ ವಿಚಾರದಲ್ಲಿ ಏನೆಲ್ಲ ನಡೆದಿದೆ ಗೊತ್ತು. ಹೆಚ್​.ಡಿ ಕುಮಾರಸ್ವಾಮಿ ಲಿಂಗಾಯತ ಧರ್ಮದ ಫೈಲ್ ಮುಟ್ಟಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದರು ಎಂದು ಕಿಡಿಕಾರಿದ್ದಾರೆ.

    ಮತ್ತೆ ಮುನ್ನಲೆಗೆ ಬಂದ ಲಿಂಗಾಯತ ಸ್ವತಂತ್ರ ಧರ್ಮ: ಕಾರ್ಯಕಾರಿಣಿ ಸಭೆಯಲ್ಲಿ ನಾಲ್ಕು ನಿರ್ಣಯ

  • 12 Jun 2023 03:01 PM (IST)

    Karnataka Breaking Kannada News Live: ಇಬ್ಬರು IPS ಅಧಿಕಾರಿ ವರ್ಗಾವಣೆ: ಸರ್ಕಾರ ಆದೇಶ

    ಬೆಂಗಳೂರು: ಇಬ್ಬರು ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಡಾ.ಸಿಮಿ ಮರಿಯಂ ಜಾರ್ಜ್, ಎಐಜಿಪಿ, ಅಪರಾಧ ವಿಭಾಗ, ಬೆಂಗಳೂರು, ಅರುಣ್ ರಂಗರಾಜನ್, ಎಸ್​ಪಿ, ಐಎಸ್​ಡಿ, ಉತ್ತರ ವಿಭಾಗ, ಹುಬ್ಬಳ್ಳಿ ವರ್ಗಾವಣೆ ಮಾಡಲಾಗಿದೆ.

  • 12 Jun 2023 02:28 PM (IST)

    Karnataka Breaking Kannada News Live: ಸ್ನೇಹಿತನಾಗಿ ಡಿ.ಕೆ.ಶಿವಕುಮಾರ್​ಗೆ ಅಭಿನಂದನೆ ಸಲ್ಲಿಸಲು ಬಂದಿದ್ದೇನೆ

    ಬೆಂಗಳೂರು: ರಾಜ್ಯಸಭೆಯ ಬಿಜೆಪಿ ಸದಸ್ಯ ಜಗ್ಗೇಶ್​ ಅವರು ಇಂದು ಡಿಸಿಎಂ ಡಿಕೆ ಶಿವಕುಮಾರ್​ ಅವರನ್ನು ಭೇಟಿ ಮಾಡಿದ್ದಾರೆ. ನಗರದ ಕುಮಾರಕೃಪಾ ಅತಿಥಿಗೃಹದಲ್ಲಿ ಜಗ್ಗೇಶ್ ದಂಪತಿ​​​ ಭೇಟಿ ಮಾಡಿದ್ದಾರೆ. ಸ್ನೇಹಿತನಾಗಿ ಡಿ.ಕೆ.ಶಿವಕುಮಾರ್​ಗೆ ಅಭಿನಂದನೆ ಸಲ್ಲಿಸಲು ಬಂದಿದ್ದೇನೆ ಎಂದು ಜಗ್ಗೇಶ್​​ ಹೇಳಿದ್ದಾರೆ.

  • 12 Jun 2023 02:06 PM (IST)

    Karnataka Breaking Kannada News Live: ಬಿಜೆಪಿ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್​​​ ಘಟಕ ವಾಗ್ದಾಳಿ

    ಹಿಂದಿನ ಬಿಜೆಪಿ ಸರ್ಕಾರದ ಪಾಪದ ಕಲೆಗಳನ್ನು ತೊಳೆಯುತ್ತೇವೆ ಎಂದು ಬಿಜೆಪಿ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್​​​ ಘಟಕ ಟ್ವೀಟ್​ ಮಾಡಿದೆ. ಶಿಕ್ಷಣ ವಿಚಾರದಲ್ಲಿ ಬಿಜೆಪಿ ಮಕ್ಕಳಾಟವಾಡಿದ ಪರಿಣಾಮ ಸರ್ಕಾರಿ ಶಾಲೆ ತೊರೆಯುವವರ ಸಂಖ್ಯೆ ಹೆಚ್ಚಳವಾಗಿದೆ. ನಮ್ಮ ಸರ್ಕಾರ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಟ್ಟು ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಪ್ರಯತ್ನ ಮಾಡ್ತೇವೆ ಎಂದು ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಕಾಂಗ್ರೆಸ್ ಘಟಕ ವಾಗ್ದಾಳಿ ನಡೆಸಿದೆ.

  • 12 Jun 2023 01:48 PM (IST)

    Karnataka Breaking Kannada News Live: ಮಹಿಳಾ ಸಮಾನತೆ ವಿರೋಧಿಸಿದವರೇ ಶಕ್ತಿ ಯೋಜನೆ ವಿರೋಧಿಸ್ತಿದ್ದಾರೆ -ಡಾ.H​​.C.ಮಹದೇವಪ್ಪ

    ಕಾಂಗ್ರೆಸ್​ ಸರ್ಕಾರದ ಗ್ಯಾರಂಟಿ ಯೋಜನೆಗೆ ವಿಪಕ್ಷಗಳ ಟೀಕೆ ವಿಚಾರಕ್ಕೆ ಸಂಬಂಧಿಸಿ ಮಹಿಳಾ ಸಮಾನತೆ ವಿರೋಧಿಸಿದವರೇ ಶಕ್ತಿ ಯೋಜನೆ ವಿರೋಧಿಸ್ತಿದ್ದಾರೆ ಎಂದು ಮೈಸೂರಿನಲ್ಲಿ ಸಮಾಜ ಕಲ್ಯಾಣ ಸಚಿವ ಡಾ.H​​.C.ಮಹದೇವಪ್ಪ ವಾಗ್ದಾಳಿ ನಡೆಸಿದರು. ಅಂದು ಮನುವಾದಿಗಳು ಮಹಿಳೆಯರ ಸಮಾನತೆಯನ್ನ ವಿರೋಧಿಸಿದ್ದರು. ಇಂದು ಮಹಿಳೆಯರ ಉಚಿತ ಬಸ್ ಸೌಲಭ್ಯವನ್ನೂ ಟೀಕೆ ಮಾಡ್ತಿದ್ದಾರೆ. ಮಹಿಳೆಯರ ಉಚಿತ ಬಸ್ ಸೌಲಭ್ಯದ ಬಗ್ಗೆಯೂ ವ್ಯಂಗ್ಯವಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

  • 12 Jun 2023 01:45 PM (IST)

    Karnataka Breaking Kannada News Live: ಗೃಹಜ್ಯೋತಿ ಜಾರಿ ಹೊರೆಯನ್ನು ಗ್ರಾಹಕರ ಮೇಲೆ ಹಾಕುವುದಿಲ್ಲ -ಕೆ.ಜೆ.ಜಾರ್ಜ್

    ಹಿಂದಿನ ಸರ್ಕಾರದ ವಿದ್ಯುತ್ ದರ ಏರಿಕೆ ಆದೇಶ ಜಾರಿಯಾಗಿದೆ. ಕೆಇಆರ್​ಸಿ ಒಮ್ಮೆ ಆದೇಶ ಮಾಡಿದರೆ ಹಿಂಪಡೆಯಲು ಆಗುವುದಿಲ್ಲ ಎಂದು ವಿಧಾನಸೌಧದಲ್ಲಿ ಇಂಧನ ಇಲಾಖೆ ಸಚಿವ ಕೆ.ಜೆ.ಜಾರ್ಜ್​ ತಿಳಿಸಿದ್ದಾರೆ. ಕೆಇಆರ್​ಸಿ ಕಾಯ್ದೆ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ವಿದ್ಯುತ್ ಏರಿಕೆ ವಿಚಾರವನ್ನು ಕೇವಲ ಅಧಿಕಾರಿಗಳು ನಿರ್ಧರಿಸುವುದಿಲ್ಲ. ಸಿಎಂ, ಇಂಧನ ಇಲಾಖೆ ಸಚಿವರು ಸಭೆ ನಡೆಸಿ ನಿರ್ಧಾರ ಕೈಗೊಳ್ತಾರೆ. ನಾವು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಕೆಇಆರ್​ಸಿ ಮೇಲೆ ಹಾಕಲ್ಲ. ಹಿಂದಿನ ಬಿಲ್ ಪಾವತಿಸಲು ಗ್ರಾಹಕರಿಗೆ 3 ತಿಂಗಳ ಕಾಲಾವಕಾಶವಿದೆ. ಗೃಹಜ್ಯೋತಿ ಯೋಜನೆ ಅಡಿ ಹೊಸ ಮನೆಗಳಿಗೆ 53 ಯೂನಿಟ್ ಉಚಿತ. ಗೃಹಜ್ಯೋತಿ ಜಾರಿ ಹೊರೆಯನ್ನು ಗ್ರಾಹಕರ ಮೇಲೆ ಹಾಕುವುದಿಲ್ಲ. ಗೃಹಜ್ಯೋತಿ ಯೋಜನೆ ವೆಚ್ಚವನ್ನು ರಾಜ್ಯ ಸರ್ಕಾವೇ ಭರಿಸಲಿದೆ ಎಂದು ವಿಧಾನಸೌಧದಲ್ಲಿ ಇಂಧನ ಇಲಾಖೆ ಸಚಿವ ಕೆ.ಜೆ.ಜಾರ್ಜ್​ ತಿಳಿಸಿದರು.

  • 12 Jun 2023 01:38 PM (IST)

    Karnataka Breaking Kannada News Live: ಕಾಂಗ್ರೆಸ್​​ನ​ ಗ್ಯಾರಂಟಿಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ -ಹೆಚ್​ಡಿ ಕುಮಾರಸ್ವಾಮಿ

    ಕಾಂಗ್ರೆಸ್ ಸರ್ಕಾರದಿಂದ ಐದು ಗ್ಯಾರಂಟಿಗಳ ಜಾರಿ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್​​ನ​ ಗ್ಯಾರಂಟಿಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಆ ಬಗ್ಗೆ ಚರ್ಚೆ ಮಾಡುವುದಕ್ಕೆ ಇನ್ನೂ ಸಮಯವಿದೆ ಎಂದು ಹೆಚ್​ಡಿ ಕುಮಾರಸ್ವಾಮಿ ಹೇಳಿದರು. ಯಾವುದೇ ಕಾರ್ಯಕ್ರಮಕ್ಕೆ ಹಣ ಒದಗಿಸುವುದು ಕಷ್ಟವಲ್ಲ. ಫಲಾನುಭವಿಗಳಿಗೆ ಎಷ್ಟರಮಟ್ಟಿಗೆ ತಲುಪುತ್ತದೆ ಎಂಬುದು‌ ಮುಖ್ಯ. ಬಾಡಿಗೆದಾರರಿಗೆ ಅಗ್ರಿಮೆಂಟ್​ ಪೇಪರ್ ಕೊಡಲ್ಲವೆಂದು ಹೇಳ್ತಿದ್ದಾರೆ. ವಿದ್ಯುತ್ ದರ ಏರಿಕೆಗೆ 2 ರಾಷ್ಟ್ರೀಯ ಪಕ್ಷಗಳು ಕಾರಣ. 2017-18ರಲ್ಲೇ ಮುಂದೆ ಆಗುವ ಅನಾಹುತ ಬಗ್ಗೆ ನಾನು ಹೇಳಿದ್ದೆ ಎಂದರು.

  • 12 Jun 2023 01:21 PM (IST)

    Karnataka Breaking Kannada News Live: ಲೋಕಸಭಾಯಲ್ಲಿ ಬಿಜೆಪಿ ಜೊತೆ ಮೈತ್ರಿ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಸ್ಪಷ್ಟನೆ

    ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ JDS ಮೈತ್ರಿ ವಿಚಾರಕ್ಕೆ ಸಂಬಂಧಿಸಿ ರಾಜಕಾರಣದಲ್ಲಿ ಚರ್ಚೆ, ಊಹಾಪೋಹ ಹುಟ್ಟುವುದು ಸಹಜ. ಕೆಲವೊಮ್ಮೆ ಗಾಳಿ ಸುದ್ದಿಗಾಗಿ ಚರ್ಚೆ ಮಾಡ್ತಾರೆ ಎಂದು ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಇದಕ್ಕೆಲ್ಲ ಚುನಾವಣೆ ಪ್ರಕ್ರಿಯೆ ಆರಂಭವಾದಾಗ ಉತ್ತರ ಸಿಗಲಿದೆ. ಬಿಜೆಪಿ ಜೊತೆ ಮೈತ್ರಿ ವಿಚಾರವಾಗಿ ನನ್ನ ಮುಂದೆ ಚರ್ಚೆ ಆಗಿಲ್ಲ. ಸದ್ಯಕ್ಕೆ ಜಿಲ್ಲಾವಾರು ಜೆಡಿಎಸ್ ಮುಖಂಡರ ಸಭೆ‌ ಮಾಡಿದ್ದೇನೆ. ನಿಮ್ಮ ಜೊತೆ ನಿಲ್ಲುತ್ತೇವೆ ಎಂದು ಜೆಡಿಎಸ್ ಮುಖಂಡರು ಹೇಳಿದ್ದಾರೆ. ಏನು ಮಾಡಬೇಕೆಂದು ಆ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ. ನನಗೆ ರಾಜಕಾಣವೇ ಒಲವಿಲ್ಲ, ಕಾರ್ಯಕರ್ತರಿಗಾಗಿ ಇದ್ದೇನೆ. ಸಿಎಂ ಸ್ಥಾನದಿಂದ ಕೆಳಗಿಳಿದಾಗಲೇ ತೀರ್ಮಾನ ಮಾಡಬೇಕೆಂದಿದ್ದೆ. ಸಿಎಂ ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನ‌ ಗೆಲ್ತೇವೆ ಎಂದಿದ್ದಾರೆ ಎಂದು ಕಾಂಗ್ರೆಸ್​ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

  • 12 Jun 2023 01:18 PM (IST)

    Karnataka Breaking Kannada News Live: ಮೈಸೂರಿನಲ್ಲಿ ಅಧಿಕಾರಿಗಳ ಜೊತೆ ಸಚಿವ ಹೆಚ್.ಸಿ.ಮಹದೇವಪ್ಪ ಸಭೆ

    ಮೈಸೂರಿನ ಸರ್ಕಾರಿ ಅತಿಥಿಗೃಹದಲ್ಲಿ ಅಧಿಕಾರಿಗಳ ಜೊತೆ ಸಚಿವ ಹೆಚ್.ಸಿ.ಮಹದೇವಪ್ಪ ಸಭೆ ನಡೆಸಿದ್ದಾರೆ. ಸಚಿವರ ಸಭೆಯ ಪ್ರಾರಂಭದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಸಂವಿಧಾನದ ಪೀಠಿಕೆ ಬೋಧನೆ ಮಾಡಲಾಯಿತು. ಸಭೆಯಲ್ಲಿ ಶಾಸಕರಾದ ತನ್ವೀರ್​​ ಸೇಠ್, ಶ್ರೀವತ್ಸ, ಡಿಸಿ ಡಾ.ಕೆ.ವಿ.ರಾಜೇಂದ್ರ, ಪೊಲೀಸ್ ಆಯುಕ್ತ ರಮೇಶ್ ಬಾನೋತ್, SP ಸೀಮಾ ಲಾಟ್ಕರ್ ಉಪಸ್ಥಿತರಿದ್ದರು.

  • 12 Jun 2023 01:15 PM (IST)

    Karnataka Breaking Kannada News Live: ಹುಬ್ಬಳ್ಳಿಯಲ್ಲಿ ಆಟೋ ಚಾಲಕರ ಸಂಘದಿಂದ ಬೃಹತ್ ಪ್ರತಿಭಟನೆ

    ರಾಜ್ಯಾದ್ಯಂತ ಶಕ್ತಿ ಯೋಜನೆ ಜಾರಿ ಹಿನ್ನಲೆ ಮಹಿಳೆಯರಿಗೆ ಬಸ್ ನಲ್ಲಿ ಉಚಿತ ಪ್ರಯಾಣ ಇದೆ. ಹೀಗಾಗಿ ಹುಬ್ಬಳ್ಳಿಯಲ್ಲಿ ಆಟೋ ಚಾಲಕರ ಸಂಘ ಬೃಹತ್ ಪ್ರತಿಭಟನೆ ನಡೆಸುತ್ತಿದೆ. ಹುಬ್ಬಳ್ಳಿಯ ಚೆನ್ಮಮ್ಮ ಸರ್ಕಲ್ ನಿಂದ ಮಿನಿ ವಿಧಾನಸೌಧವರೆಗೂ ನೂರಾರು ಆಟೋ ಚಾಲಕರು ಪ್ರತಿಭಟನೆ ನಡೆಸಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • 12 Jun 2023 01:02 PM (IST)

    Karnataka Breaking Kannada News Live: ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು -ಸಿಎಂ ಸೂಚನೆ

    ರಾಜ್ಯದ ಎಂಟು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆ ಎಂಟು ಜಿಲ್ಲೆಗಳ ಡಿಸಿಗಳು, ಜಿ.ಪಂ. ಸಿಇಒಗಳ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ದಾರೆ. ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಮಾಡಿದ್ದು ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು ಎಂದು ಅಗತ್ಯ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

  • 12 Jun 2023 12:21 PM (IST)

    Karnataka Breaking Kannada News Live: ಉಚಿತ ಕೊಡುಗೆ ಕೊಡಲು ಜನರಿಗೆ ತೆರಿಗೆ ಬರೆ ಹಾಕಬಾರದು -ಶಾಸಕ ವಿಜಯೇಂದ್ರ

    ಕಾಂಗ್ರೆಸ್​​ಗೆ ಸಂಪೂರ್ಣ ‌ಬಹುಮತದ ನಂತರ ಗ್ಯಾರೆಂಟಿ ಅನುಷ್ಠಾನಕ್ಕೆ‌ ತರುತ್ತಿದ್ದಾರೆ. ನಾನು ಸರ್ಕಾರಕ್ಕೆ‌ ಆಗ್ರಹಿಸೋದು ಅಂದ್ರೆ ಕೊಟ್ಟಿರುವ ಭರವಸರ ಈಡೇರಿಸುವ ಭರದಲ್ಲಿ ಜನರಿಗೆ ಹೊರೆ ಆಗಬಾರದು. ಒಂದು ಕಡೆ ಹೊರೆ ಇನ್ನೊಂದು ಬರೆ ಕೊಡುವ ಕೆಲಸ ಆಗಬಾರದು, ಪೆಟ್ರೋಲ್ ಸೆಸ್ ಏರಿಕೆ ಮಾಡಬಾರದು. ವಿದ್ಯುಚ್ಛಕ್ತಿ ಬೆಲೆ ಏರಿಕೆಯಾಗಿದೆ ಬಿಜೆಪು ಮೇಲೆ‌ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಅಂತ ಶಾಸಕ ವಿಜಯೇಂದ್ರ ಹೇಳಿದ್ದಾರೆ.

  • 12 Jun 2023 12:17 PM (IST)

    Karnataka Breaking Kannada News Live: ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಜಾಥಾಗೆ ಸಿಎಂ ಚಾಲನೆ

    ಬೆಂಗಳೂರಿನ ಎಂ.ಜಿ ರಸ್ತೆ ಬಳಿಯ ಗಾಂಧಿ ಪ್ರತಿಮೆ ಬಳಿ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಜಾಥಾಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಜಾಥಾಗೆ ಚಾಲನೆ ನೀಡಿದ ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಯಾರಾದ್ರೂ ಬಾಲ ಕಾರ್ಮಿಕರು ಕಂಡರೆ ಕೆಲಸದಿಂದ ಬಿಡಿಸಿ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಜಾತಿ ವ್ಯವಸ್ಥೆ ಪದ್ಧತಿಯಿಂದಾಗಿ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಗುಲಾಮಗಿರಿ ಮನಸ್ಥಿತಿಯಿಂದ ಹೊರ ಬರಬೇಕು ಎಂದರು.

  • 12 Jun 2023 11:47 AM (IST)

    Karnataka Breaking Kannada News Live: ಫ್ರೀ ಕರೆಂಟ್ ಬೇಕಂದ್ರೆ ಜನರು ಬಾಕಿ ಬಿಲ್ ಕಟ್ಟಲೇ ಬೇಕು

    ಎಸ್ಕಾಂ ಅಧಿಕಾರಿಗಳು ಜನರಿಗೊಂದು, ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳಿಗೊಂದು ನಿಯಮ ಮಾಡಲು ಹೊರಟಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ. ಹೌದು ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳು ಎಸ್ಕಾಂಗಳಿಗೆ ಕಟ್ಟಬೇಕಾದ ಕೋಟಿ ಕೋಟಿ ಬಿಲ್​​ ಅನ್ನು ಬಾಕಿ ಉಳಿಸಿಕೊಂಡರೂ, ಅಧಿಕಾರಿಗಳು ಮಾತ್ರ ಧ್ವನಿ ಎತ್ತದೆ ಶಾಂತರೂಪಿಗಳಾಗಿದ್ದಾರೆ.

  • 12 Jun 2023 11:43 AM (IST)

    Karnataka Breaking Kannada News Live: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶಾಸಕ ಸುರೇಶ್ ಕುಮಾರ್ ಪತ್ರ

    ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶಾಸಕ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ. ಸಿದ್ದರಾಮಯ್ಯ ಬಳಿಯೇ ಇರುವ ಸಕಾಲ ಇಲಾಖೆ ಜವಾಬ್ದಾರಿಯನ್ನು ಸಚಿವರೊಬ್ಬರಿಗೆ ವಹಿಸುವಂತೆ ಪತ್ರ ಬರೆದಿದ್ದಾರೆ. ಶಾಸಕ ಸುರೇಶ್ ಕುಮಾರ್, ಬಿಜೆಪಿ ಸರ್ಕಾರದಲ್ಲಿ ಸಕಾಲ ಸಚಿವರಾಗಿದ್ದರು.

  • 12 Jun 2023 11:19 AM (IST)

    Karnataka Breaking Kannada News Live: ಸಿದ್ದರಾಮಯ್ಯ ಅವರಿಗೆ ಧನ್ಯವಾದ ಹೇಳಿದ ಅಜ್ಜಿ ನಿಂಗವ್ವಾ ಶಿಂಗಾಡಿ

    ಸಿದ್ದರಾಮಯ್ಯ ಅವರಿಗೆ ಅಜ್ಜಿ ನಿಂಗವ್ವಾ ಶಿಂಗಾಡಿ ಧನ್ಯವಾದ ಹೇಳಿದ್ದಾರೆ. ನಿಂಗವ್ವಾ ಶಿಂಗಾಡಿ ನಿನ್ನೆ ಬಸ್ ಹತ್ತುವ ವೇಳೆ ಶಿರಬಾಗಿ ನಮಸ್ಕರಿಸಿದ್ದರು. ಅಜ್ಜಿಯ ಫೋಟೋವನ್ನ ಹಾಕಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. ಸಿದ್ದರಾಮಯ್ಯ ಅವರ ಬಗ್ಗೆ ಮಾತಾಡಿದ್ದಕ್ಕೆ ಖುಷಿ ಆಗಿದೆ ಎಂದು ಅಜ್ಜಿ ಸಂತಸ ಹೊರ ಹಾಕಿದ್ದಾರೆ. ನಿನ್ನೆ ಧಾರವಾಡದಿಂದ ಸವದತ್ತಿಗೆ ಸಂಬಂಧಿಕರ ಮನೆ ವಾಸ್ತು ಶಾಂತಿಗೆ ಹೊರಟ್ಟಿದ್ದೆ. ಈ ವೇಳೆ ಉಚಿತ ಪ್ರಯಾಣಕ್ಕೆ ಬಿಟ್ಟಿದ್ದಕ್ಕೆ ಬಸ್‌ಗೆ ನಮಸ್ಕರಿಸಿ ಹತ್ತಿದೆ. ಎಲ್ಲ ಹೆಣ್ಣು ಮಕ್ಕಳಿಗೆ ಫ್ರೀ ಮಾಡಿದ್ದಕ್ಕೆ ಬಹಳ ಅನುಕೂಲ ಆಗಿದೆ ಎಂದರು.

  • 12 Jun 2023 10:45 AM (IST)

    Karnataka Breaking Kannada News Live: ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಬಸ್, ಖಾಸಗಿ ಬಸ್​ಗಳು ಖಾಲಿ ಖಾಲಿ

    ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಿನ್ನೆಲೆ ಮಹಿಳಾ ಪ್ರಯಾಣಿಕರು ಇಲ್ಲದೆ ಖಾಸಗಿ ಬಸ್​ಗಳು ಖಾಲಿ ಖಾಲಿಯಾಗಿವೆ. ಪ್ರತಿದಿನ 30 ರಿಂದ 40 ಜನ ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ನಿನ್ನೆ ಮಧ್ಯಾಹ್ನದಿಂದ ಮಹಿಳೆಯರು ಖಾಸಗಿ ಬಸ್ಸನ್ನ ಹತ್ತುತ್ತಿಲ್ಲ. ಇದರಿಂದ ಸಾಕಷ್ಟು ತೊಂದರೆ ಆಗುತ್ತಿದೆ ಎಂದು ಖಾಸಗಿ ಬಸ್ ಚಾಲಕರು, ನಿರ್ಹವಾಕರು ಅಳಲು ತೋಡಿಕೊಂಡಿದ್ದಾರೆ.

  • 12 Jun 2023 10:09 AM (IST)

    Karnataka Breaking Kannada News Live: ರಾಜ್ಯದಲ್ಲಿ ಇಂದಿನಿಂದ 4 ದಿನ ಭಾರಿ ಮಳೆ ನಿರೀಕ್ಷೆ

    ಕರಾವಳಿ ಭಾಗ ಸೇರಿ ರಾಜ್ಯದ ನಾನಾ ಭಾಗದಲ್ಲಿ ವರುಣಾರ್ಭಟ ಶುರುವಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಉಡುಪಿ, ಹಾಸನ, ಶಿವಮೊಗ್ಗ ಹಾಗೂ ಕೊಡಗು ಸೇರಿದಂತೆ ಬಹುತೇಕ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನ ಕೆಲವು ಭಾಗದಲ್ಲಿ ಭಾರಿ ಮಳೆಯಾಗಲಿದೆ. ಈ ಬಗ್ಗೆ ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಅಲರ್ಟ್ ಘೋಷಿಸಿದೆ.

  • 12 Jun 2023 09:59 AM (IST)

    Karnataka Breaking Kannada News Live: ಮಹಿಳೆಯರಿಗೆ ಫ್ರೀ ಬಸ್, ಕಂಡಕ್ಟರ್ ಪರಿಸ್ಥಿತಿ ಪಾಪ

    ರಾಜ್ಯದಲ್ಲಿ ಸ್ತ್ರೀ ಶಕ್ತಿ ಯೋಜನೆಗೆ ಚಾಲನೆಗೆ ಬಂದಿದ್ದು ಮಹಿಳೆಯರು ರಾಜ್ಯದ KSRTC ಹಾಗೂ ನಗರದ BMTC ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ನಿನ್ನೆ ಸಿಎಂ ಸಿದ್ದರಾಮಯ್ಯ ಇದಕ್ಕೆ ಚಾಲನೆ ಕೊಟ್ಟಿದ್ದು, ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಫ್ರೀ ಟಿಕೆಟ್ ನೀಡಲಾಗ್ತಿದೆ. ಹಾಸನದಲ್ಲಿ ಮಹಿಳೆಯ ಮಧ್ಯೆ ಕಂಡಕ್ಟರ್ ಸಿಲುಕಿದ್ದು ನೂಕುನುಗ್ಗಲಾದ ಘಟನೆ ನಡೆದಿದೆ.

  • 12 Jun 2023 09:48 AM (IST)

    Karnataka Breaking Kannada News Live: ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಇಂದು ಅಧಿಕಾರಿಗಳ ಜೊತೆ ಸಭೆ

    ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ವಿವಿಧ ಯೋಜನೆಗಳ ಪ್ರಗತಿ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ರಾಜ್ಯ ಕೆಲ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆ ಬೆಳಗ್ಗೆ 11ಕ್ಕೆ ಜಲಜೀವನ್ ಮಿಷನ್ ಬಗ್ಗೆ ಅಧಿಕಾರಿಗಳ ಜತೆ ಸಿಎಂ ಸಭೆ ನಡೆಸಲಿದ್ದಾರೆ. 8 ಜಿಲ್ಲೆಗಳ ಡಿಸಿಗಳ ಜತೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಿಎಂ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಇಂದಿರಾ ಕ್ಯಾಂಟೀನ್ ಸಂಬಂಧ ಗೃಹಕಚೇರಿ ಕೃಷ್ಣಾದಲ್ಲಿ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.

  • Published On - Jun 12,2023 9:44 AM

    Follow us
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
    ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
    ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
    ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
    ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
    ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
    ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
    ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
    ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
    ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
    ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
    ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
    ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
    ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
    ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
    ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್