ಬೆಂಗಳೂರಿನ ತೆರಿಗೆದಾರರನ್ನು ಹೊಗಳಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್; ಕಾರಣ ಏನು?

|

Updated on: Feb 29, 2024 | 7:51 AM

ಕೇಂದ್ರ ಸರ್ಕಾರವು ಅನುದಾನ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂಬ ರಾಜ್ಯ ಸರ್ಕಾರದ ಆರೋಪದ ನಡುವೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರಿನ ತೆರಿಗೆದಾರರನ್ನು ಹೊಗಳಿದ್ದಾರೆ. ಅಷ್ಟಕ್ಕೂ ಬೆಂಗಳೂರಿನ ತೆರಿಗೆದಾರರನ್ನು ಕೇಂದ್ರ ಹಣಕಾಸು ಸಚಿವೆ ಹೊಗಳಲು ಕಾರಣವೇನು? ಇಲ್ಲಿದೆ ನೋಡಿ.

ಬೆಂಗಳೂರಿನ ತೆರಿಗೆದಾರರನ್ನು ಹೊಗಳಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್; ಕಾರಣ ಏನು?
ಬೆಂಗಳೂರಿನ ತೆರಿಗೆದಾರರನ್ನು ಹೊಗಳಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
Follow us on

ಬೆಂಗಳೂರು, ಫೆ.29: ಕೇಂದ್ರ ಸರ್ಕಾರವು ಅನುದಾನ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂಬ ರಾಜ್ಯ ಸರ್ಕಾರದ ಆರೋಪದ ನಡುವೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಬೆಂಗಳೂರಿನ ತೆರಿಗೆದಾರರನ್ನು (Bengaluru taxpayers) ಹೊಗಳಿದ್ದಾರೆ.

ಆದಾಯ ತೆರಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಾಗಿ ನಿರ್ಮಿಸಲು ಯೋಜಿಸುರವ “ಹೊಂಗಿರಣ” ಸಂಕೀರ್ಣಕ್ಕೆ ಶಂಕುಸ್ಥಾಪನೆ ಮಾಡಿದ ನಂತರ ಮಾತನಾಡಿದ ಅವರು, ‘ವಿಕಸಿತ್ ಭಾರತ್’ ನಿರ್ಮಿಸಲು ಬೆಂಗಳೂರಿನ ತೆರಿಗೆ ಪಾವತಿದಾರರು ನಮಗೆ ಸಂಪೂರ್ಣವಾಗಿ ಉತ್ಸಾಹವನ್ನು ನೀಡುತ್ತಿದ್ದಾರೆ. ಈ ಪ್ರದೇಶದ ಎಲ್ಲಾ ವೈಯಕ್ತಿಕ ಮತ್ತು ಕಾರ್ಪೊರೇಟ್ ತೆರಿಗೆದಾರರಿಗೆ ಧನ್ಯವಾದಗಳು ಎಂದು ಹೇಳಿದರು. “ನಿಮ್ಮ ಕೊಡುಗೆ ಅವಿಶ್ರಾಂತವಾಗಿದೆ. ಯಾವತ್ತೂ ಕುಸಿತವಾಗಿಲ್ಲ. ಆ ವೇಗವನ್ನು ಮುಂದುವರಿಸಿದ್ದಕ್ಕಾಗಿ ಬೆಂಗಳೂರಿಗೆ ಧನ್ಯವಾದಗಳು” ಎಂದರು.

ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರ ಮಾಡುತ್ತಿರುವ ಹೂಡಿಕೆಗಳನ್ನು ಒತ್ತಿ ಹೇಳಿದ ನಿರ್ಮಲಾ ಸೀತಾರಾಮನ್, ತೆರಿಗೆ ಮೌಲ್ಯಮಾಪಕರಿಗೆ ಕಿರುಕುಳವಾಗದಂತೆ ನೋಡಿಕೊಳ್ಳಲು ಸರ್ಕಾರವು ಆದಾಯ ತೆರಿಗೆ ಮೌಲ್ಯಮಾಪನ ಮತ್ತು ವ್ಯವಹಾರವನ್ನು ಸುಲಭಗೊಳಿಸಲು ಸಂಪೂರ್ಣ ಆನ್​ಲೈನ್ ವ್ಯವಸ್ಥೆಯನ್ನು ತಂದಿದೆ ಎಂದರು.

ಇದನ್ನೂ ಓದಿ: BBMP: ಆಸ್ತಿ ತೆರಿಗೆ ಬಾಕಿದಾರರಿಗೆ ಒಟಿಎಸ್ ಜಾರಿ, ಏನಿದು? ಯಾರಿಗೆ ಲಾಭ? ಇಲ್ಲಿದೆ ವಿವರ

ಇಡೀ ದೇಶವನ್ನು ನಿಯಂತ್ರಿಸುವ ಡಿಜಿಟಲ್ ಸಂಸ್ಕರಣಾ ಘಟಕ ಬೆಂಗಳೂರಿನಲ್ಲಿದೆ. ಇಡೀ ರಾಷ್ಟ್ರಕ್ಕೆ ಆದಾಯ ತೆರಿಗೆ ವ್ಯವಸ್ಥೆಯನ್ನು ಮುನ್ನಡೆಸುತ್ತದೆ. ಆನ್​ಲೈನ್ ವ್ಯವಸ್ಥೆಯು ವ್ಯವಹಾರವನ್ನು ಸುಲಭಗೊಳಿಸುವಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಕರ್ನಾಟಕದಿಂದ ಹಣ ಮತ್ತೆ ರಾಜ್ಯಕ್ಕೇ ಹಿಂತಿರುಗುತ್ತದೆ. ಇದು ರಸ್ತೆಗಳ ಕಾಮಗಾರಿಗಳಿಗೆ ಹಿಂತಿರುಗುತ್ತದೆ, ಇದು ಸಂಪರ್ಕಕ್ಕಾಗಿ ಹಿಂತಿರುಗುತ್ತದೆ, ಇದು ಮೆಟ್ರೋಗೆ ಹಿಂತಿರುಗುತ್ತದೆ, ಇದು ರೈಲಿಗೆ ಹಿಂತಿರುಗುತ್ತದೆ, ಇದು ಉಪನಗರ ರೈಲ್ವೆ ವ್ಯವಸ್ಥೆಗೆ ಹಿಂತಿರುಗುತ್ತದೆ, ಮಂಗಳೂರು ಬಂದರಿಗೆ, ಇದು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಬರುತ್ತದೆ ಎಂದು ಕೇಂದ್ರ ವಿತ್ತ ಸಚಿವೆ ಹೇಳಿದರು.

ಕಂದಾಯ ಇಲಾಖೆಯ ಸಂಪೂರ್ಣ ರಾಷ್ಟ್ರೀಯ ಫೇಸ್​ಲೆಸ್​ ಸಿಸ್ಟಮ್ ಬೆಂಗಳೂರಿನಿಂದ ನಡೆಯುತ್ತದೆ ಎಂಬ ಅಂಶವನ್ನು ನಾನು ಹೈಲೈಟ್ ಮಾಡಲು ಬಯಸುತ್ತೇನೆ ಮತ್ತು ಅದಕ್ಕಾಗಿ ಆಗಬಹುದಾಗಿದ್ದ ಹೂಡಿಕೆಯ ಪ್ರಮಾಣವನ್ನು ನೀವು ಊಹಿಸಬಹುದು. ನನಗೆ ತುಂಬಾ ಸಂತೋಷವಾಗಿದೆ ಮತ್ತು ಮಾನವಶಕ್ತಿಯ ಬಗ್ಗೆ ಹೆಮ್ಮೆಯಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:45 am, Thu, 29 February 24