ಬೆಂಗಳೂರು: ಬಿಬಿಎಂಪಿ (BBMP) ವಾರ್ಡ್ ಪುನರ್ವಿಂಗಡಣೆಯಲ್ಲಿ ಲೋಪಗಳಿರುವುದರಿಂದ ಹೊಸದಾಗಿ ವಾರ್ಡ್ ಪುನರ್ವಿಂಗಡಣೆ ಅನಿವಾರ್ಯ ಎಂಬ ನಿರ್ಧಾರಕ್ಕೆ ಕರ್ನಾಟಕ ಸರ್ಕಾರ ಬಂದಿದೆ. ಈ ಬಗ್ಗೆ ಸರ್ಕಾರದ ಪರ ಎಜೆ ಶಶಿಕಿರಣ್ ಶೆಟ್ಟಿ ಅವರು ಕರ್ನಾಟಕ ಹೈಕೋರ್ಟ್ಗೆ (Karnataka High Court) ಹೇಳಿಕೆ ನೀಡಿದ್ದು, ಹೊಸದಾಗಿ ವಾರ್ಡ್ ಪುನರ್ವಿಂಗಡಿಸಲು ಕೋರ್ಟ್ 12 ವಾರಗಳ ಕಾಲಾವಕಾಶ ನೀಡಿದೆ. ಹೀಗಾಗಿ ಸದ್ಯಕ್ಕೆ ಬಿಬಿಎಂಪಿ ಚುನಾವಣೆ ನಡೆಯುವುದು ಅನುಮಾನ.
ಬಿಬಿಎಂಪಿ ವಾರ್ಡ್ ಪುನರ್ವಿಂಗಡಣೆಯಲ್ಲಿ ಲೋಪಗಳಿವೆ, ಲೋಪ ಸರಿಪಡಿಸಿ ಹೊಸದಾಗಿ ವಾರ್ಡ್ ಪುನರ್ವಿಂಗಡಣೆ ಮಾಡಬೇಕಿದೆ. ಹೀಗಾಗಿ ಹೊಸದಾಗಿ ವಾರ್ಡ್ ಪುನರ್ವಿಂಗಡಣೆಗೆ ಕಾಲಾವಕಾಶ ನೀಡುವಂತೆ ಎಜೆ ಶಶಿಕಿರಣ್ ಶೆಟ್ಟಿ ಕೋರಿದ್ದಾರೆ. ವಾದ ಆಲಿಸಿದ ಸಿಜೆ ಪ್ರಸನ್ನ ಬಿ ವರಾಳೆ, ನ್ಯಾ.ಎಂ.ಜಿ.ಎಸ್.ಕಮಲ್ ಅವರಿದ್ದ ವಿಭಾಗೀಯ ಪೀಠ, ವಾರ್ಡ್ ಪುನರ್ವಿಂಗಡಣೆಗೆ 12 ವಾರಗಳ ಕಾಲಾವಕಾಶ ನೀಡಿದ ನೀಡಿ ಆದೇಶಿಸಿತು.
ಬಿಬಿಎಂಪಿ ಚುನಾವಣೆ ನಡೆದು 8 ವರ್ಷಗಳು ತುಂಬುತ್ತಿದೆ. ಬಿಜೆಪಿ ಸರ್ಕಾರವಿದ್ದಾಗ ಪಾಲಿಕೆ ಚುನಾವಣೆಯನ್ನೇ ಗಮನದಲ್ಲಿ ಇಟ್ಟುಕೊಂಡು ವಾರ್ಡ್ ವಿಂಗಡಣೆ ಮಾಡಿದ್ದರು. ಆದರೆ ಇದು ಕ್ರಮಬದ್ಧವಾಗಿಲ್ಲ ಅಂತ ಕಾಂಗ್ರೆಸ್ ಶಾಸಕರು, ಮಾಜಿ ಕಾರ್ಪೊರೇಟರ್ಗಳು ಆರೋಪಿಸುತ್ತಿದ್ದರು. ಇದೀಗ, ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ರಾಜ್ಯದ ಚುಕ್ಕಾಣಿ ಹಿಡಿಯುತ್ತಿದ್ದಂತಯೇ ಕಾಂಗ್ರೆಸ್ ನಾಯಕರ ಕಣ್ಣು ಬಿಬಿಎಂಪಿ ಮೇಲೆ ಬಿದ್ದಿದೆ.
ಲೋಕಾಸಭಾ ಚುನಾವಣೆಗೂ ಮುನ್ನ ಪಾಲಿಕೆಯ ಚುನಾವಣೆ ನಡೆಸಿ ಅಧಿಕಾರ ಹಿಡಿಯಲು ಕೈ ನಾಯಕರು ಪ್ಲಾನ್ ಮಾಡಿದ್ದು ಬಿಜೆಪಿಗೆ ಪಾಲಿಕೆಯಲ್ಲಿ ಈ ಬಾರಿ ಠಕ್ಕರ್ ನೀಡಲು ರಣತಂತ್ರ ರೂಪಿಸುತ್ತಿದೆ. ವಾರ್ಡ್ ವಿಗಂಡಣೆ ಹಾಗೂ ಮೀಸಲಾತಿಗೆ ಅಂತ್ಯ ಹಾಡಿ ಅಧಿಕಾರಕ್ಕೇರುವ ಕನಸು ಕಾಣುತ್ತಿದೆ. ಐದು ಗ್ಯಾರಂಟಿಗಳ ಜಾರಿಗೆ ಹೆಜ್ಜೆ ಇಟ್ಟ ಕಾಂಗ್ರೆಸ್ ಸರ್ಕಾರದ ಮೇಲೆ ಜನರ ನಿರೀಕ್ಷೆ ಇದ್ದು, ಇದೇ ಅಲೆಯಲ್ಲಿ ಪಾಲಿಕೆಯನ್ನೂ ಗೆಲ್ಲಬಹುದು ಅಂತ ಕೈಕಲಿಗಳು ಯೋಚಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ