ಬೆಂಗಳೂರು: ಗೃಹಜ್ಯೋತಿ ಯೋಜನೆಯ (Gruha Jyothi Scheme) ಲಾಭ ಪಡೆಯಲು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸುವಂತೆ ಸರ್ಕಾರ ಸೂಚನೆ ನೀಡಿದೆ. ಆದರೆ ಇತ್ತ ಅರ್ಜಿ ಸಲ್ಲಿಸಲು ಅಪ್ಲಿಕೇಶನ್ ಓಪನ್ ಆಗುತ್ತಿಲ್ಲ ಎಂದು ಫಲಾನುಭವಿಗಳು ದೂರಿದ್ದರು. ಸದ್ಯ ಈ ಕುರಿತಾಗಿ ಸೇವಾ ಸಿಂಧು ಆ್ಯಪ್ (Seva Sindhu) ಡೈರೆಕ್ಟರ್ ದಿಲೀಶ್ ಶಶಿ ಸ್ಪಷ್ಟನೆ ನೀಡಿದ್ದಾರೆ. ಸದ್ಯ ಯಾವಾಗಿನಿಂದ ಅರ್ಜಿ ಸ್ವೀಕರಿಸಬೇಕು ಎನ್ನುವುದನ್ನು ತಿಳಿಸಿಲ್ಲ. ಸರ್ಕಾರದಿಂದ ಗೈಡ್ ಲೈನ್ಸ್ ಬಂದ ಕೂಡಲೇ ಅರ್ಜಿ ಸ್ವೀಕರಿಸಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.
ಸದ್ಯ ಅರ್ಜಿಗೆ ಆಧಾರ್ ಕಾರ್ಡ್, ಪಾನ್ ಕಾರ್ಡ್ ದಾಖಾಲೆಗಳನ್ನ ಕೊಡಬೇಕಾಗುತ್ತದೆ. ಒಂದೇ ದಾಖಾಲೆಯಲ್ಲಿ ಎಲ್ಲಾ ಸ್ಕೀಮ್ಗಳನ್ನ ಮಾಡುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಎಲ್ಲಾ ಸ್ಕೀಮ್ಗಳಿಗೆ ವಿವಿಧ ದಾಖಾಲೆಗಳನ್ನ ಪಡೆದುಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಲು ಬಂದಿಲ್ಲ ಅಧಿಕೃತ ಮಾಹಿತಿ: ಗೃಹಜ್ಯೋತಿ ಯೋಜನೆಗೆ ಬೇಕು ಕಾಲಾವಕಾಶ
ಬೆಂಗಳೂರಿನ ಜನರು ಬೆಂಗಳೂರು ಒನ್ ಕೇಂದ್ರಗಳಲ್ಲಿ ಮತ್ತು ಕರ್ನಾಟಕ ಒನ್ ಕೇಂದ್ರಗಳಲ್ಲಿಯೂ ಅರ್ಜಿ ಸಲ್ಲಿಸಬಹುದು. ಗ್ರಾಮ ಮಟ್ಟದಲ್ಲಿ ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಸೇವಾ ಸಿಂಧು ಆ್ಯಪ್ ಅನ್ನು ಮೊಬೈಲ್ನಲ್ಲಿಯೂ ಬಳಸಬಹುದು. ಸದ್ಯ ನಮ್ಮಹೆಲ್ಪ್ ಲೈನ್ಗೆ ಸಾಕಷ್ಟು ಕರೆಗಳು ಬರುತ್ತಿವೆ ಎಂದರು.
ಇದನ್ನೂ ಓದಿ: Gruha Jyothi Scheme: ಗೃಹಜ್ಯೋತಿಗೆ ಹೊಸ ನಿಬಂಧನೆ, ಉಚಿತ ವಿದ್ಯುತ್ಗಾಗಿ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಲು ಸೂಚನೆ
ಪ್ರತಿದಿನ 50 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನ ಹಾಕಬಹುದು. ಇದಕ್ಕೆ ತುಂಬ ಸಮಯ ಸಹ ಹಿಡಿಯೋದಿಲ್ಲ. ಸಾಧ್ಯವಾದಷ್ಟು ಸರ್ಕಾರದ ಅಧೀನದಲ್ಲಿರುವ ಸೆಂಟರ್ಗಳಲ್ಲಿ ಅರ್ಜಿ ಹಾಕುವುದು ಒಳಿತು. ಇಲ್ಲದಿದ್ದರೆ ಸೈಬರ್ ಸೆಂಟರ್ಗಳಲ್ಲಿ ಹೆಚ್ಚು ಹಣ ಪಡೆಯುತ್ತಾರೆ ಎಂದು ತಿಳಿಸಿದರು.
ಸರ್ಕಾರದಿಂದ ಸದ್ಯ ನಾಲ್ಕು ಸ್ಕೀಮ್ಗಳನ್ನ ನೋಂದಣಿ ಮಾಡುವುದಕ್ಕೆ ಹೇಳಿದ್ದಾರೆ. ರಿಜಿಸ್ಟ್ರೇಷನ್ ಮಾಡಲು ಸದ್ಯ ಆ್ಯಪ್ ಡೆವೆಲಪ್ ಮಾಡಲಾಗುತ್ತಿದೆ. ಎಲ್ಲಾರೂ ಸರ್ವೇ ಸಮಾನ್ಯವಾಗಿ ಬಳಸುವ ಐಡಿ ಡಿಟೇಲ್ಸ್ಗಳನ್ನ ಪಡೆದುಕೊಳ್ಳಲಾಗುತ್ತದೆ. ಸದ್ಯ ಈ ಆ್ಯಪ್ನಲ್ಲಿ 70 ಇಲಾಖೆಗಳು ಉಪಯೋಗ ಪಡೆದುಕೊಳ್ಳುತ್ತಿವೆ. ಈ ಆಧಾರದ ಮೇಲೆ ಈ ಸ್ಕೀಮ್ಗಳನ್ನ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.