Karnataka Rain: ಮುಳುಗುತ್ತಾ ಬೆಂಗಳೂರು? ದಾಖಲೆ ಮಳೆ ಮುನ್ಸೂಚನೆ ಇದ್ದರೂ ತಯಾರಾಗದ ಬಿಬಿಎಂಪಿ, ರಾಜಕಾಲುವೆ ಒತ್ತುವರಿ ತೆರವು ಬಾಕಿ

|

Updated on: Jun 10, 2023 | 9:46 AM

ಒಂದು ವಾರ ತಡವಾಗಿ ಕೇರಳಕ್ಕೆ ಮಾನ್ಸೂನ್ ಮಾರುತಗಳು ಪ್ರವೇಶ ಮಾಡಿದ್ದು, ರಾಜ್ಯದಲ್ಲೂ ಮಳೆರಾಯನ ಆರ್ಭಟ ಜೋರಾಗಲಿದೆ. ಕಳೆದ ವರ್ಷದಂತೆ ಈ ವರುಷವೂ ವರುಣ‌ ಅಬ್ಬರಿಸುವ ಸಾಧ್ಯತೆ ಇದ್ದು ದಾಖಲೆ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

Karnataka Rain: ಮುಳುಗುತ್ತಾ ಬೆಂಗಳೂರು? ದಾಖಲೆ ಮಳೆ ಮುನ್ಸೂಚನೆ ಇದ್ದರೂ ತಯಾರಾಗದ ಬಿಬಿಎಂಪಿ, ರಾಜಕಾಲುವೆ ಒತ್ತುವರಿ ತೆರವು ಬಾಕಿ
ಮಳೆ
Follow us on

ಬೆಂಗಳೂರು: ಒಂದು ವಾರ ತಡವಾಗಿ ಕೇರಳಕ್ಕೆ ಮಾನ್ಸೂನ್ (Monsoon) ಮಾರುತಗಳು ಪ್ರವೇಶ ಮಾಡಿದ್ದು, ರಾಜ್ಯದಲ್ಲೂ ಮಳೆರಾಯನ (Rain) ಆರ್ಭಟ ಜೋರಾಗಲಿದೆ. ಕಳೆದ ವರ್ಷದಂತೆ ಈ ವರುಷವೂ ವರುಣ‌ ಅಬ್ಬರಿಸುವ ಸಾಧ್ಯತೆ ಇದ್ದು ದಾಖಲೆ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಮಾನ ಇಲಾಖೆ (India Meteorology Department) ತಿಳಿಸಿದೆ. ವಾಡಿಕೆ ಪ್ರಕಾರ ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಮುಂಗಾರು ಅಬ್ಬರ ಜೋರಾಗಿರುತ್ತದೆ. ಆದರೆ ಈ ವರ್ಷ ಈ ನಾಲ್ಕು ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯಾತೆ ಇದೆ.

ಈ 4 ತಿಂಗಳಲ್ಲಿ ಬೆಂಗಳೂರಲ್ಲಿ ಬರೋಬ್ಬರಿ 65 ಸೆಂ.ಮೀ ನಷ್ಟು ಮಳೆಯಾಗಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಒಂದು ವರ್ಷದಲ್ಲಿ ಬೆಂಗಳೂರಲ್ಲಿ ಜನವರಿಯಿಂದ ಡಿಸೆಂಬರ್​​ವರೆಗೂ 108 ಸೆಂ‌. ಮೀ ನಷ್ಟು‌ ಮಳೆಯಾಗುವುದು ವಾಡಿಕೆ, ಆದರೆ ಕಳೆದ ವರ್ಷ ಬರೋಬ್ಬರಿ 195 ಸೆಂ.ಮೀ ಮಳೆಯಾಗಿತ್ತು.

ಈ ವರ್ಷ ನಾಲ್ಕು ತಿಂಗಳಲ್ಲಿ 65 ಸೆಂ‌ಮೀ‌‌ ಮಳೆಯಾದರೇ, ಇನ್ನುಳಿದ ಅಕ್ಟೋಬರ್, ನವೆಂಬರ್, ಡೆಸೆಂಬರ್ ತಿಂಗಳಲ್ಲಿ ಮಳೆಯ ಅಬ್ಬರ ಇನ್ನು ಜಾಸ್ತಿಯಾಗಿಯೇ ಇರುತ್ತದೆ. ಹೀಗಾಗಿ ಈ ವರ್ಷವು 108 ಸೆಂ.ಮೀ ಮಳೆಯ ದಾಖಾಲೆಯನ್ನ ಮುರಿಯುವ ಸಾಧ್ಯಾತೆ ಇದ್ದು ಮಳೆಗಾಲಕ್ಕೆ ಮುನ್ನೇಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.

ಇದನ್ನೂ ಓದಿ: Belagavi News: ಮಳೆ ಬರಲೆಂದು ಕತ್ತೆಗಳಿಗೆ ಮದುವೆ ಮಾಡಿಸಿದ ಗ್ರಾಮಸ್ಥರು; ವಿಡಿಯೋ ವೈರಲ್

ಬಿಬಿಎಂಪಿ ಮಳೆಗಾಲಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳೇನು

  1. ರಾಜಕಾಲುವೆಗಳ‌ ಒತ್ತುವರಿಯನ್ನ ತೆರವುಗೊಳಿಸಬೇಕು
  2. ಮಳೆಯಿಂದ ಹಾನಿಯಾಗುವ ಸೂಕ್ಷ್ಮ ಪ್ರದೇಶಗಳನ್ನ ಗುರುತಿಸಬೇಕು
  3. ತಗ್ಗು ಪ್ರದೇಶದಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು
  4. ಶಿಥಿಲಾ ವ್ಯವಸ್ಥೆಯಲ್ಲಿರುವ ಮನೆಗಳು ಹಾಗೂ ಕಟ್ಟಡಗಳ‌ ಮೇಲೆ ನಿಗಾ ಇರಸಬೇಕು
  5. ನೀರು ನಿಲ್ಲುವ ಅಂಡರ್​​ಪಾಸ್​ಗಳನ್ನು ಗುರುತಿಸಬೇಕು
  6. ರಾಜಾಕಾಲುವೆ ಅಕ್ಕಪಕ್ಕದಲ್ಲಿ ವಾಸಿಸುವ ಜಾಗದಲ್ಲಿ ಕ್ರಮ ವಹಿಸಬೇಕು.
  7. ಮಳೆ ನೀರು ಹೋಗುವುದಕ್ಕೆ ವ್ಯವಸ್ಥೆ ಕಲ್ಪಿಸಬೇಕು

ಬೆಂಗಳೂರಿನಲ್ಲಿ ಸದ್ಯ 847 ಕಿಮೀ ಉದ್ದದ ರಾಜಕಾಲುವೆ ಇದ್ದು, ಕೇವಲ 400 ಕಿಮೀ ನಷ್ಟು ಮಾತ್ರ ಹೂಳೆತ್ತಲಾಗಿದೆ. ಇನ್ನು 447 ಕಿಮೀ ನಷ್ಟು ಹೂಳೆತ್ತುವುದು ಬಾಕಿ ಇದೆ. ಈ ಬಾರಿಯು ರಾಜಾಕಾಲುವೆಗಳಿಂದ ಸಮಸ್ಯೆ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.

ಬೆಂಗಳೂರಿನಲ್ಲಿ 485 ಕಡೆ ಒತ್ತುವರಿ ತೆರವು ಬಾಕಿ

  • ಮಹದೇವಪುರ – 146
  • ದಾಸರಹಳ್ಳಿ – 124
  • ಪೂರ್ವ ವಲಯದಲ್ಲಿ – 88
  • ಯಲಹಂಕದಲ್ಲಿ – 79
  • ಆರ್‌ ಆರ್ ನಗರ – 33‌
  • ಬೊಮ್ಮನಹಳ್ಳಿ ವಲಯದಲ್ಲಿ – 8
  • ಪಶ್ಚಿಮ ವಲಯದಲ್ಲಿ- 4
  • ದಕ್ಷಿಣ ವಲಯದಲ್ಲಿ – 3

ಇನ್ನು ನಗರದಲ್ಲಿ 226 ಮಳೆಯಿಂದ ಹಾನಿಯಾಗುವ ಸೂಕ್ಷ್ಮ ಪ್ರದೇಶಗಳಿವೆ. ಅದರಲ್ಲಿ ಬಿಬಿಎಂಪಿ 198 ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಿದೆ. ಈ ಪ್ರದೇಶಗಳಲ್ಲಿ ಇಂದಿಗೂ ಮಳೆ ನೀರು ಸರಿಯಾಗಿ ಹೋಗಲು ವ್ಯವಸ್ಥೆ ಇಲ್ಲ.
ಯಾವಯಾವ ಜೋನ್​ನಲ್ಲಿ ಎಷ್ಟೇಷ್ಡು ಸೂಕ್ಷ್ಮ ಪ್ರದೇಶಗಳಿವೆ

  • ಪೂರ್ವ – 61
  • ಪಶ್ಚಿಮ – 40
  • ದಕ್ಷಿಣ – 40
  • ಮಹದೇವಪುರ – 24
  • ಆರ್‌.ಆರ್‌.ನಗರ – 23
  • ದಾಸರಹಳ್ಳಿ – 03
  • ಯಲಹಂಕ – 11
  • ಬೊಮ್ಮನಹಳ್ಳಿ – 24
  • ಒಟ್ಟು = 226

ಇನ್ನು ನಗರದಲ್ಲಿ ಒಟ್ಟು 629 ಹೆಚ್ಚು ಶಿಥಿಲಾ ವ್ಯವಸ್ಥೆಯಲ್ಲಿರುವ ಕಟ್ಟಡಗಳಿದ್ದು, ಅದರಲ್ಲಿ 423 ಕಟ್ಟಡಗಳಿ ಬಿಬಿಎಂಪಿ ನೋಟಿಸ್ ಜಾರಿ ಮಾಡಿ ಕೈ ತೊಳೆದುಕೊಂಡಿದೆ. ಈ ಕಟ್ಟಡಗಳನ್ನು ಇಂದಿಗೂ ತೆರವು ಮಾಡುವ ಘೋಜಿಗೆ ಬಿಬಿಎಂಪಿ ಮುಂದಾಗಿಲ್ಲ. ಈ ವರ್ಷವು ಗಾಳಿ-ಮಳೆಗೆ ಶಿಥಿಲಾ ವ್ಯವಸ್ಥೆಯಲ್ಲಿರುವ ಕಟ್ಟಡಗಳು ಬೀಳುವ ಸಾಧ್ಯಾತೆ‌ ಇದೆ.

ಶಿಥಿಲಾ ವ್ಯವಸ್ಥೆಯ ಕಟ್ಟಡಗಳು

  • ಪೂರ್ವ ವಲಯದಲ್ಲಿ – 101
  • ಪಶ್ಚಿಮ ವಲಯದಲ್ಲಿ – 160
  • ದಕ್ಷಿಣ ವಲಯದಲ್ಲಿ – 216
  • ಬೊಮ್ಮನಹಳ್ಳಿ ವಲಯದಲ್ಲಿ – 11
  • ದಾಸರಹಳ್ಳಿ ವಲಯದಲ್ಲಿ – 11
  • ಮಹದೇವಪುರ ವಲಯದಲ್ಲಿ – 37
  • ರಾಜರಾಜೇಶ್ವರಿ ವಲಯದಲ್ಲಿ – 9
  • ಯಲಹಂಕ ವಲಯದಲ್ಲಿ – 84

ಈ ಬಾರಿ ಅಂಡರ್ ಪಾಸ್​​ಗಳ ಮೇಲೆ ನಿಗಾ ಇಡಬೇಕಿದ್ದು, ನಗರದಲ್ಲಿ ಒಟ್ಟು ನಾಲ್ಕು ಅಪಾಯಕಾರಿ ಅಂಡರ್ ಪಾಸ್​ಗಳಿವೆ. ಅದರಲ್ಲಿ ಶಿವಾನಂದ ಸರ್ಕಲ್‌ ಬಳಿ ಇರುವ ಅಂಡರ್ ಪಾಸ್, ಕಿಮೋ ಟಾಕೀಸ್ ಬಳಿ ಇರುವ ಅಂಡರ್ ಪಾಸ್, ಕೆ ಅರ್ ಸರ್ಕಲ್ ಬಳಿ ಇರುವ ಅಂಡರ್ ಪಾಸ್ ಹಾಗೂ ಸಿಎಂ ಕಛೇರಿ ರಸ್ತೆಯಲ್ಲಿರುವ ಅಂಡರ್ ಪಾಶ್​ಗಳ ಬಗ್ಗೆ ನಿಗಾ ವಹಿಸಬೇಕಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:42 am, Sat, 10 June 23