ಬೆಂಗಳೂರು: ನೈಸ್ ರಸ್ತೆಯಲ್ಲಿ ಲೇಡಿ ಬೈಕ್ ರೈಡರ್ಸ್ ಮತ್ತು ಸ್ಥಳೀಯನ ನಡುವೆ ಕಿರಿಕ್! ದೂರು-ಪ್ರತಿದೂರು ದಾಖಲು

|

Updated on: Mar 05, 2023 | 10:41 PM

Womens day 2023: ಮಹಿಳಾ ದಿನದ ಪ್ರಯುಕ್ತ ಬೈಕ್ ರೈಡ್ ತೆರಳಿದ ಯುವತಿಯರ ತಂಡ ಮತ್ತು ಸ್ಥಳೀಯರೊಬ್ಬರ ನಡುವೆ ಕಿರಿಕ್ ನಡೆದ ಘಟನೆ ಬೆಂಗಳೂರಿನ ನೈಸ್​ ರೋಡ್​ನಲ್ಲಿ ನಡೆದಿದೆ. ಪ್ರಕರಣ ಸಂಬಂಧ ದೂರು-ಪ್ರತಿದೂರು ದಾಖಲಾಗಿದೆ.

ಬೆಂಗಳೂರು: ನೈಸ್ ರಸ್ತೆಯಲ್ಲಿ ಲೇಡಿ ಬೈಕ್ ರೈಡರ್ಸ್ ಮತ್ತು ಸ್ಥಳೀಯನ ನಡುವೆ ಕಿರಿಕ್! ದೂರು-ಪ್ರತಿದೂರು ದಾಖಲು
ನೈಸ್ ರಸ್ತೆಯಲ್ಲಿ ಲೇಡಿ ಬೈಕ್ ರೈಡರ್ಸ್ ಮತ್ತು ಸ್ಥಳೀಯನ ನಡುವೆ ಕಿರಿಕ್
Follow us on

ಬೆಂಗಳೂರು: ಮಹಿಳಾ ದಿನದ (International Women’s Day 2023) ಪ್ರಯುಕ್ತ ಬೈಕ್ ರೈಡ್ (Bike Riding) ತೆರಳಿದ ಯುವತಿಯರ ತಂಡ ಮತ್ತು ಸ್ಥಳೀಯನೊಂದಿಗೆ ಕಿರಿಕ್ ನಡೆದ ಘಟನೆ ಇಂದು (ಮಾರ್ಚ್ 5) ಮಧ್ಯಾಹ್ನ ಬೆಂಗಳೂರಿನ ನೈಸ್​ ರೋಡ್​ನಲ್ಲಿ ನಡೆದಿದ್ದು, ದೂರು-ಪ್ರತಿ ದೂರು ದಾಖಲಾಗಿದೆ. ಯುವತಿಯರ ತಂಡವೊಂದು ಮಹಿಳಾ ದಿನದ ಪ್ರಯುಕ್ತ ಬೈಕ್ ರೈಡ್​ ಆರಂಭಿಸಿದ್ದಾರೆ. ಅದರಂತೆ ನಗರದ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ನೈಸ್​ ರಸ್ತೆ ಬಳಿ ತೆರಳುತ್ತಿದ್ದಾಗ ಒಂದೆಡೆ ಬೈಕ್ ನಿಲ್ಲಿಸಿದ್ದು, ಈ ವೇಳೆ ಬಳಿ ಬಂದ ಸ್ಥಳೀಯ, ಗಾಡಿಗಳನ್ನು ತೆಗೆದುಕೊಂಡು ಹೋಗುವಂತೆ ನಿಂದಿಸಿದ್ದಾಗಿ ಆರೋಪಿಸಲಾಗಿದೆ. ಈ ವೇಳೆ ಉಂಟಾದ ಕಿರಿಕ್ ಕೋಣನಕುಂಟೆ ಠಾಣೆ ಮೆಟ್ಟಿಲೇರಿದೆ.

ಬೈಕ್​ಗಳನ್ನು ತೆಗೆದುಕೊಂಡು ಹೋಗುವಂತೆ ನಿಂದಿಸಿದ್ದಲ್ಲದೆ ಯುವತಿಯೊಬ್ಬಳ ಬೈಕ್ ಕೀಯನ್ನು ಬಲವಂತವಾಗಿ ತೆಗೆದುಕೊಂಡು ಹೋಗಿದ್ದಾರೆ. ಈ ಸಂಬಂಧ ಯುವತಿಯರು ಕೋಣನಕುಂಟೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಅದರಂತೆ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ. ಮತ್ತೊಂದೆಡೆ ಆರೊಪಕ್ಕೊಳಗಾದ ವ್ಯಕ್ತಿಯೂ ಠಾಣೆಗೆ ತೆರಳಿ ಪ್ರತಿದೂರು ದಾಖಲಿಸಿದ್ದು, ಪೊಲೀಸರು ಎರಡನೇ ಎಫ್​ಐಆರ್ ದಾಖಲಿಸಿದ್ದಾರೆ.

ಇದನ್ನೂ ಓದಿ: International Women’s Day 2023: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಇತಿಹಾಸ, ಮಹತ್ವ ಹಾಗೂ ಧ್ಯೇಯದ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ

ತನ್ನ ವಿರುದ್ಧ ಯುವತಿಯರು ದೂರು ದಾಖಲಿಸುತ್ತಿದ್ದಂತೆ ಪ್ರತಿದೂರು ದಾಖಲಿಸಿದ ಸ್ಥಳೀಯ, ರಸ್ತೆಯ ಪಕ್ಕದಲ್ಲೇ ತನಗೆ ಸೇರಿದ ಜಾಗವಿದೆ. ಈ ಹಿನ್ನಲೆ ಯುವತಿಯರಿಗೆ ತೆರಳಲು ಸೂಚಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಎರಡು ದೂರುಗಳನ್ನು ಪಡೆದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ, ಕೋಣನಕುಂಟೆ ಪೊಲೀಸ್ ಠಾಣೆಯ ಮುಂದೆ ಕೆಲವು ಬೈಕ್ ರೈಡರ್ಸ್ ಜಮಾಯಿಸಿದ್ದು, ಸುಬ್ರಹ್ಮಣ್ಯಪುರ ಎಸಿಪಿಯಿಂದ ಯುವತಿಯರನ್ನು ವಿಚಾರಣೆ ನಡೆಸಲಾಗುತ್ತಿದೆ. ಜೊತೆಗೆ ಕಿರಿಕ್ ಮಾಡಿದ ವ್ಯಕ್ತಿ ಹಾಗೂ ಆತನ ತಂದೆಯನ್ನೂ ವಿಚಾರಿಸಲಾಗುತ್ತಿದೆ. ಸದ್ಯ ಎರಡು ಕಡೆಯವರೂ ಠಾಣೆಯಲ್ಲೇ ಇದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:17 pm, Sun, 5 March 23