ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: NIA ಮೋಸ್ಟ್ ವಾಂಟೆಡ್ ಆಗಿದ್ದ ಬಂಧಿತ ತುಫೈಲ್ ಹಿಸ್ಟರಿ ಇಲ್ಲಿದೆ
ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಎನ್ಐಎ, ಮಾರ್ಚ್ 4ರಂದು ಮೋಸ್ಟ್ ವಾಂಟೆಡ್ ಆರೋಪಿ ತುಫೈಲ್ನನ್ನು ಬಂಧಿಸಿತ್ತು. ಈತ ಪ್ರಶಾಂತ್ ಪೂಜಾರಿ ಹಾಗೂ ಗಣೇಶ್ ಹತ್ಯೆ ಪ್ರಕರಣದ ಆರೋಪಿಯೂ ಆಗಿದ್ದಾನೆ ಎಂದು ತಿಳಿದುಬಂದಿದೆ.
ಬೆಂಗಳೂರು: ಬಿಜೆಪಿ ಯುವ ಕಾರ್ಯಕರ್ತ (BJP Youth Activist) ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ (Parveen Nettaru Murder Case) ಸಂಬಂಧಿಸಿದಂತೆ ಮಾರ್ಚ್ 4ರಂದು ರಾತ್ರಿ ಅರೆಸ್ಟ್ ಆಗಿದ್ದ ಆರೋಪಿ ತುಫೈಲ್, ಎನ್ಐಎ ಮೋಸ್ಟ್ ವಾಂಟೆಡ್ ಆಗಿದ್ದ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳಿಗೆ ಕೊಪ್ಪದ ಮನೆಯಲ್ಲಿ ಆಶ್ರಯ ನೀಡಿದ್ದ. ಜೊತೆಗೆ 2016ರ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣ ಹಾಗೂ 2012 ರಲ್ಲಿ ನಡೆದಿದ್ದ ವಿಹೆಚ್ಪಿ ಮುಖಂಡ ಗಣೇಶ್ ಹತ್ಯೆ ಯತ್ನ ಪ್ರಕರಣದ ಆರೋಪಿಯೂ ಆಗಿದ್ದಾನೆ. ನಿಷೇಧಿತ ಪಿಎಫ್ಐನ ಹಿಟ್ ಟೀಮ್ನಲ್ಲಿ ಬಹಳ ಪ್ರಮುಖವಾದ ಪಾತ್ರವಹಿಸುತ್ತಿದ್ದನು. ಬೇರೆ ಧರ್ಮದ ಮುಖಂಡರನ್ನ ಗುರುತಿಸಿ ಹತ್ಯೆ ಮಾಡುವ ತಂಡವೇ ಈ ಹಿಟ್ ಟೀಮ್. ಹೀಗಾಗಿಯೇ ಎನ್ಐಎ ಮೋಸ್ಟ್ ವಾಂಟೆಡ್ ಲಿಸ್ಟ್ನಲ್ಲಿದ್ದ ತುಫೈಲ್ನ ಸುಳಿವು ನೀಡಿದವರಿಗೆ 5 ಲಕ್ಷ ಘೋಷಣೆ ಮಾಡಿತ್ತು. ಸದ್ಯ ಅರೆಸ್ಟ್ ಆಗಿರುವ ಈತನ ವಿಚಾರಣೆ ತೀವ್ರಗೊಂಡಿದೆ.
ಎನ್ಐಎ ಅಧಿಕಾರಿಗಳು ನಿನ್ನೆ (ಮಾ.4) ರಂದು ರಾತ್ರಿ 9.30 ಕ್ಕೆ ಅಮೃತಹಳ್ಳಿ ಠಾಣೆ ವ್ಯಾಪ್ತಿಯ ದಾಸರಹಳ್ಳಿ ಬಳಿ ತುಫೈಲ್ನನ್ನು ಬಂಧಿಸಿದ್ದರು. ಖಚಿತ ಮಾಹಿತಿ ಮೇರೆಗೆ ಸುಮಾರು 10ಕ್ಕೂ ಹೆಚ್ಚು ಎನ್ಐಎ ಅಧಿಕಾರಿಗಳು ತುಫೈಲ್ ಮನೆ ಬಳಿಗೆ ಹೋಗಿದ್ದಾರೆ. ನಂತರ ಮೊದಲಿಗೆ ಇಬ್ಬರು ಅಧಿಕಾರಿಗಳು ಫ್ಲಂಬರ್ ಅಂತ ಕೈಯಲ್ಲಿ ರಿಂಚ್ ಹಿಡಿದು ಮನೆ ಒಳಗೆ ಹೋಗಿದ್ದಾರೆ. ಈ ವೇಳೆ ತುಫೈಲ್ ಮಟನ್ ಕತ್ತರಿಸುತ್ತಿದ್ದನು. ಇಬ್ಬರು ಅಧಿಕಾರಿಗಳು ಒಳಗಡೆ ಬಂದದ್ದನ್ನು ನೋಡಿದ ತುಫೈಲ್ ಚಾಕುವಿನಿಂದ ಹಲ್ಲೆ ಮಾಡಲು ಮುಂದಾಗಿದ್ದನು. ಈ ವೇಳೆ ಉಳಿದ ಅಧಿಕಾರಿಗಳೂ ಮನೆಯೊಳಗೆ ದಾಳಿ ನಡೆಸಿ ತುಫೈಲ್ನನ್ನು ಲಾಕ್ ಮಾಡಿದ್ದರು.
ಇದನ್ನೂ ಓದಿ: ಕೊಲೆಯನ್ನೂ ಮೀರಿಸೋ ರೀತಿಯಲ್ಲಿ ವ್ಯಕ್ತಿ ಸೂಸೈಡ್; ಚಾಕುವಿನಿಂದ ಎರ್ರಾಬಿರ್ರಿ ಇರಿದುಕೊಂಡು ಆತ್ಮಹತ್ಯೆ
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ 2022ರ ಜುಲೈ 26 ರಂದು ಬಿಜೆಪಿ ಯುವ ಮುಂಖಡ ಪ್ರವೀಣ್ ನೆಟ್ಟಾರುನನ್ನು ಆತನ ಕೋಳಿ ಅಂಗಡಿ ಬಳಿ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿತ್ತು. ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಪ್ರವೀಣ್ ನೆಟ್ಟಾರು ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ದುಷ್ಕರ್ಮಿಗಳು ಕೃತ್ಯದ ನಂತರ ವಿವಿಧ ಕಡೆಗಳಿಗೆ ಪರಾರಿಯಾಗಿದ್ದರು. ಈ ಹತ್ಯೆ ಪ್ರಕರಣ ರಾಜ್ಯ ಬಿಜೆಪಿ ಸರ್ಕಾರದ ಬುಡವನ್ನೇ ಅಲುಗಾಡಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:25 pm, Sun, 5 March 23