Bengaluru: ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ವೇಳೆ ಸಿಲಿಂಡರ್ ಸ್ಫೋಟ: 13 ವರ್ಷದ ಬಾಲಕ ದುರ್ಮರಣ
ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ವೇಳೆ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಬಾಲಕ ದುರ್ಮರಣ ಹೊಂದಿರುವಂತಹ ದಾರಣ ಘಟನೆ ನಗರದ ಹೆಬ್ಬಾಳದ ಗುಡ್ಡದಹಳ್ಳಿಯಲ್ಲಿ ನಡೆದಿದೆ. ಮಹೇಶ್(13) ಮೃತ ಬಾಲಕ.
ಬೆಂಗಳೂರು: ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ವೇಳೆ ಸಿಲಿಂಡರ್ (illegal gas refilling) ಸ್ಫೋಟಗೊಂಡ ಪರಿಣಾಮ ಬಾಲಕ ದುರ್ಮರಣ ಹೊಂದಿರುವಂತಹ ದಾರಣ ಘಟನೆ ನಗರದ ಹೆಬ್ಬಾಳದ ಗುಡ್ಡದಹಳ್ಳಿಯಲ್ಲಿ ನಡೆದಿದೆ. ಮಹೇಶ್(13) ಮೃತ ಬಾಲಕ. ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಬಳಿ ನಿಂತುಕೊಂಡಿದ್ದಾಗ ದುರ್ಘಟನೆ ನಡೆದಿದ್ದು, ಘಟನೆಯಲ್ಲಿ ಬಾಲಕ ಗಂಭೀರ ಗಾಯಗೊಂಡಿದ್ದ. ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಬಾಲಕ ಕೊನೆಯುಸಿರೆಳೆದಿದ್ದಾನೆ. ಬಾಲಕ ಮಹೇಶ್ ಮೂಲತಃ ಯಾದಗಿರಿ ಜಿಲ್ಲೆಯ ರಾಮಸಮುದ್ರ ಗ್ರಾಮದವನು. ಕೂಲಿ ಕಾರ್ಮಿಕ ದಂಪತಿ ಮಲ್ಲಪ್ಪ, ಸರಸ್ವತಿಯವರ 2ನೇ ಪುತ್ರ. ಸದ್ಯಬ್ಯಾಪ್ಟಿಸ್ಟ್ ಆಸ್ಪತ್ರೆ ಎದುರು ಮಹೇಶ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಬಾಲಕ ಮಹೇಶ್ ಚೋಳನಾಯಕನಹಳ್ಳ ಅಲ್ಲಿರುವ ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದ. ಕಳೆದ ಎಂಟು ವರ್ಷಗಳಿಂದ ಮೃತರ ಪೊಷಕರು ಕೂಲಿ ಕೆಲಸ ಮಾಡುತ್ತಿದ್ದರು. ದೇವರಾಜ್ ಎಂಬುವರಿಗೆ ಸೇರಿದ ಸಿಲಿಂಡರ್ ರೀಫಿಲ್ಲಿಂಗ್ ಮಾಡುವ ಗೋಡೌನ್ನಲ್ಲಿ ಲಿಯಾಕತ್ ಎಂಬುವನು ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ. ಈ ವೇಳೆ ಮನೆಯ ಪಕ್ಕದಲ್ಲಿ ಆಟವಾಡುತ್ತಿದ್ದ ಸಿಲಿಂಡರ್ ಸ್ಫೋಟಗೊಂಡಿದೆ. ಸಿಲಿಂಡರ್ ಬ್ಲಾಸ್ಟ್ ರಭಸಕ್ಕೆ ಬಾಲಕನ ದೇಹ ಛಿದ್ರವಾಗಿ ಎನ್ನಲಾಗುತ್ತಿದೆ. ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಘಟನೆ ನಡೆದಿದೆ. ಸದ್ಯ ಘಟನೆಯ ಬೆನ್ನೆಲೆ ಲಿಯಾಕತ್ ಎಸ್ಕೇಪ್ ಆಗಿದ್ದು, ಆತನ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: Mangaluru: ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಕೊನೆಗೂ ಸ್ಫೋಟದ ಹೊಣೆ ಹೊತ್ತ ISIS ಉಗ್ರ ಸಂಘಟನೆ
ಬೆಂಗಳೂರಿನಲ್ಲಿ ಪೊಲೀಸರು ಸೀಜ್ ಮಾಡಿದ್ದ 50ಕ್ಕೂ ವಾಹನಗಳು ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಪೊಲೀಸರು ಸೀಜ್ ಮಾಡಿದ್ದ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, 50ಕ್ಕೂ ಹೆಚ್ಚು ವಾಹನಗಳು ಸುಟ್ಟು ಭಸ್ಮವಾಗಿರುವಂತಹ ಘಟನೆ ನಗರದ ಕೊಡಗೆಹಳ್ಳಿ ಪೊಲೀಸ್ ಠಾಣೆ ಬಳಿ ನಡೆದಿದೆ. ಟ್ರಾನ್ಸ್ಫಾರ್ಮರ್ ಬಳಿ ವಾಹನಗಳನ್ನು ಪೊಲೀಸರು ನಿಲ್ಲಿಸಿದ್ದರು. ಆ ವೇಳೆ ಟ್ರಾನ್ಸ್ಫಾರ್ಮರ್ ಬಳಿ ಸ್ಪಾರ್ಕ್ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕಸಕ್ಕೆ ಬೆಂಕಿ ಬಿದ್ದು ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿರುವುದಾಗಿ ಅನುಮಾನ ವ್ಯಕ್ತವಾಗಿದೆ. ಬೆಂಕಿ ಹೊತ್ತಿಕೊಂಡ 20-25 ನಿಮಿಷದ ಬಳಿಕ ಪೊಲೀಸರು ಬಂದಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವಲ್ಲಿ ಸಿಬ್ಬಂದಿಗಳು ಯಶಸ್ವಿಯಾದರು.
ಇದನ್ನೂ ಓದಿ: ಡಿ.ಜೆ.ಹಳ್ಳಿ ಪೊಲೀಸರ ಭರ್ಜರಿ ಕಾರ್ಯಚರಣೆ, ಅಜ್ಜು, ನವಾಜ್ ಅರೆಸ್ಟ್,: 2.47 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ
ಪ್ರಕರಣದಿಂದ ನುಣಿಚ್ಚಿಕೊಳ್ಳಲು ಕೋಡಿಗೆಹಳ್ಳಿ ಪೊಲೀಸರ ಯತ್ನ
2002 ರಿಂದ 2017 ರತನಕ ವಿವಿಧ ಪ್ರಕರಣದಲ್ಲಿ ಬೈಕ್ಗಳನ್ನು ಸೀಜ್ ಮಾಡಲಾಗಿದೆ. 20 ವರ್ಷ ಕಳೆದ್ರೂ ಕೂಡ ಬೈಕ್ಗಳನ್ನು ವಿಲೇವಾರಿ ಮಾಡದೆ ಕೋಡಿಗೆಹಳ್ಳಿ ಪೊಲೀಸರು ಹಾಗೇ ಧೂಳು ಹಿಡಿಯುವವರೆಗೂ ಬಿಟ್ಟಿದ್ದಾರೆ. ಬಿಬಿಎಂಪಿ ಜಾಗದಲ್ಲಿ ಸೀಜ್ ಮಾಡಿದ ವಾಹನಗಳನ್ನು ಕೋಡಿಗೆಹಳ್ಳಿ ಪೊಲೀಸರು ನಿಲ್ಲಿಸಿದ್ದ ಜಾಗದಲ್ಲಿ ವಾಹನಗಳ ಸುತ್ತಾ ಗಿಡಗಳು ಬೆಳೆದುಕೊಂಡಿದೆ. ಒಂದೂವರೆ ತಿಂಗಳು ಕೂಡ ಸೀಜಿಂಗ್ ಮಾಡಿದ ವಾಹನ ಪಕ್ಕದಲ್ಲೇ ಬೆಂಕಿ ಅವಘಡ ನಡೆದಿತ್ತು. ಇಷ್ಟಾದ್ರೂ ಎಚ್ಚೆತ್ತುಗೊಳ್ಳದೇ ಪೊಲೀಸರ ನಿರ್ಲ್ಯಕ್ಷವೇ ಬೆಂಕಿ ಅವಘಡಕ್ಕೆ ಕಾರಣವೆನ್ನಲಾಗುತ್ತಿದೆ. ಇದೀಗ ಈ ಪ್ರಕರಣದಿಂದ ನುಣಿಚ್ಚಿಕೊಳ್ಳಲು ಯತ್ನಿಸುತ್ತಿರುವ ಕೋಡಿಗೆಹಳ್ಳಿ ಪೊಲೀಸರು ಬೇಸ್ಕಾಂ ಕಡೆ ಬೆಳ್ಳು ಮಾಡಿ ತೋರಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:22 pm, Sun, 5 March 23