ಲಾಕ್​ಡೌನ್ ನಡುವೆ ಗ್ರಾಹಕರಿಗೆ ಬೆಸ್ಕಾಂನಿಂದ ಬಿಗ್ ಶಾಕ್

ಬೆಂಗಳೂರು: ಮಹಾಮಾರಿ ಕೊರೊನಾದಿಂದ ಕಂಗಾಲಾಗಿರುವ ಮಂದಿಗೆ ಬೆಸ್ಕಾಂ ಶಾಕ್ ನೀಡಿದೆ. ಲಾಕ್​ಡೌನ್ ನಡುವೆ ಜನರು ಆದಾಯವಿಲ್ಲದೆ ಒದ್ದಾಡುತ್ತಿದ್ದಾರೆ. ಈ ನಡುವೆ ಬೆಸ್ಕಾಂ ಎರಡು ತಿಂಗಳ ಬಿಲ್‌ ಒಮ್ಮೆಲೆ ನೀಡಿದೆ. ಮಾರ್ಚ್ ಹಾಗೂ ಏಪ್ರಿಲ್‌ ತಿಂಗಳ ಬಿಲ್‌ಗಳನ್ನು ಸೇರಿಸಿ ವಿದ್ಯುತ್‌ ನಿಗಮ ಈಗ ಬಿಲ್‌ ನೀಡುತ್ತಿದೆ. ಅದರಲ್ಲೂ ಎರಡು ತಿಂಗಳಿಗೆ ಬರಬೇಕಿದ್ದ ಬಿಲ್​ಗಿಂತ ಹೆಚ್ಚು ಹಣ ಪಾವತಿಸಬೇಕಾಗಿದೆ. ಬೆಸ್ಕಾಂನಲ್ಲಿ 61 ಯೂನಿಟ್ ವರೆಗೆ ಒಂದು‌ ಸ್ಲಾಬ್, 142 ಯೂನಿಟ್ ವರಿಗೆ ಮತ್ತೊಂದು ದರ. ಈ ರೀತಿ ಪ್ರತಿ ಯೂನಿಟ್ […]

ಲಾಕ್​ಡೌನ್ ನಡುವೆ ಗ್ರಾಹಕರಿಗೆ ಬೆಸ್ಕಾಂನಿಂದ ಬಿಗ್ ಶಾಕ್

Updated on: May 10, 2020 | 9:54 AM

ಬೆಂಗಳೂರು: ಮಹಾಮಾರಿ ಕೊರೊನಾದಿಂದ ಕಂಗಾಲಾಗಿರುವ ಮಂದಿಗೆ ಬೆಸ್ಕಾಂ ಶಾಕ್ ನೀಡಿದೆ. ಲಾಕ್​ಡೌನ್ ನಡುವೆ ಜನರು ಆದಾಯವಿಲ್ಲದೆ ಒದ್ದಾಡುತ್ತಿದ್ದಾರೆ. ಈ ನಡುವೆ ಬೆಸ್ಕಾಂ ಎರಡು ತಿಂಗಳ ಬಿಲ್‌ ಒಮ್ಮೆಲೆ ನೀಡಿದೆ. ಮಾರ್ಚ್ ಹಾಗೂ ಏಪ್ರಿಲ್‌ ತಿಂಗಳ ಬಿಲ್‌ಗಳನ್ನು ಸೇರಿಸಿ ವಿದ್ಯುತ್‌ ನಿಗಮ ಈಗ ಬಿಲ್‌ ನೀಡುತ್ತಿದೆ. ಅದರಲ್ಲೂ ಎರಡು ತಿಂಗಳಿಗೆ ಬರಬೇಕಿದ್ದ ಬಿಲ್​ಗಿಂತ ಹೆಚ್ಚು ಹಣ ಪಾವತಿಸಬೇಕಾಗಿದೆ.

ಬೆಸ್ಕಾಂನಲ್ಲಿ 61 ಯೂನಿಟ್ ವರೆಗೆ ಒಂದು‌ ಸ್ಲಾಬ್, 142 ಯೂನಿಟ್ ವರಿಗೆ ಮತ್ತೊಂದು ದರ. ಈ ರೀತಿ ಪ್ರತಿ ಯೂನಿಟ್ ಹೆಚ್ಚಳವಾದಂತೆ ಮತ್ತೊಂದು ದರ ಹೆಚ್ಚಳವಾಗುತ್ತೆ. ಬೆಸ್ಕಾಂ ಎರಡು ತಿಂಗಳ ಬಿಲ್ ಜೆನರೆಟ್ ಮಾಡುವುದರಿಂದ. ಸ್ಲಾಬ್​ಗಳ ಆಧಾರದ ಮೇಲೆ ಗ್ರಾಹಕರು ಹೆಚ್ಚಿನ ಹಣ ಪಾವತಿ ಮಾಡಬೇಕು.

ಮಾರ್ಚ್ ತಿಂಗಳು ಬಳಸಿದ ಕರೆಂಟ್ ಬಿಲ್ಲನ್ನು ಏಪ್ರಿಲ್​ನಲ್ಲಿ ಪಾವತಿ ಮಾಡಬೇಕು. ಅದ್ರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಸ್ಕಾಂ ಮೀಟರ್ ರಿಡಿಂಗ್ ಮಾಡಲು ಬಂದಿಲ್ಲ. ಸರಾಸರಿ ಬಿಲ್ಲನ್ನು ನೀಡಿ ಪಾವತಿ ಮಾಡುವಂತೆ ಹೇಳಿದ್ರು. ಏಪ್ರಿಲ್ ತಿಂಗಳು ಯೂಸ್ ಮಾಡಿದ ಬಿಲ್ಲನ್ನು ಮೇ ಪಾವತಿ ‌ಮಾಡಬೇಕು. ಈ ತಿಂಗಳು ಬೆಸ್ಕಾಂ ಮಾರ್ಚ್ ಹಾಗೂ ಏಪ್ರಿಲ್ ತಿಂಗಳು ಬಳಸಿದ ಯೂನಿಟ್​ಗಳನ್ನು ಸೇರಿಸಿ ಬಿಲ್ ನೀಡಿದ್ದಾರೆ. ಹೆಚ್ಚಿನ ಯೂನಿಟ್ ಬಳಕೆ ಮಾಡಿದ್ದಾರೆ ಅಂತ ಒನ್ ಟೂ ಡಬಲ್ ಹಾಗೂ ತ್ರಿಬಲ್ ಬಿಲ್ ನೀಡುತ್ತಿದ್ದಾರೆ.

ತಿಂಗಳಿಗೆ 30 ಯುನಿಟ್‌ವರೆಗಿನ ಬಳಕೆಗೆ ಪ್ರತಿ ಯುನಿಟ್‌ಗೆ 3.75 ರೂ. ಇದೆ. 70 ಯುನಿಟ್‌ವರೆಗಿನ ಬಳಕೆಗೆ ಪ್ರತಿ ಯುನಿಟ್‌ಗೆ 5.20 ರೂ. ಇದ್ದು, 100 ಯುನಿಟ್‌ಗಳವರೆಗಿನ ಬಳಕೆಗೆ ಪ್ರತಿ ಯುನಿಟ್‌ಗೆ 6.75 ರೂ. ಇದ್ದರೆ, 100 ಕ್ಕಿಂತ ಹೆಚ್ಚು ಯುನಿಟ್‌ ವಿದ್ಯುತ್‌ ಬಳಕೆಗೆ ಪ್ರತಿ ಯುನಿಟ್‌ಗೆ 7.80 ರೂ. ಇದೆ. ಆದರೆ, ಮಾರ್ಚ್ ಹಾಗೂ ಏಪ್ರಿಲ್‌ ಬಿಲ್‌ಗಳನ್ನು ಪ್ರತ್ಯೇಕವಾಗಿ ನೀಡದೆ ಅವುಗಳನ್ನು ಒಟ್ಟಾಗಿ ಪರಿಗಣಿಸಿ ಹೆಚ್ಚಿನ ಬಿಲ್‌ ನೀಡಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ. ಲಾಕ್​ಡೌನ್ ಸಂದರ್ಭದಲ್ಲಿ ಹೆಚ್ಚಿನ ಬಿಲ್ ನೀಡಿ ಗ್ರಾಹಕರ ಅಕ್ರೋಶಕ್ಕೆ ಬೆಸ್ಕಾಂ ಕಾರಣವಾಗಿದೆ.