ನಿಯಮ ಉಲ್ಲಂಘಿಸಿ ಕೇರಳಕ್ಕೆ ಕಾರ್ಮಿಕರ ಸಾಗಾಟ ಯತ್ನ, ಮೂವರು ಅರೆಸ್ಟ್
ಮಡಿಕೇರಿ: ನಿಯಮ ಉಲ್ಲಂಘಿಸಿ ಕೊಡಗು ಜಿಲ್ಲೆಯಿಂದ ಕೇರಳಕ್ಕೆ ಕಾರ್ಮಿಕರನ್ನ ಕಳುಹಿಸಲು ಯತ್ನಿಸಿದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆ.ಬಾಡಗ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬೋಪಣ್ಣ, ಕೇರಳ ಮೂಲದ ಮಟ್ಟನೈಲ್ ಅನೂಪ್, ಸತ್ಯ ಬಂಧಿತರು. ವಿರಾಜಪೇಟೆ ತಾಲೂಕಿನ ಕುಟ್ಟದ ಹಳೆ ಚೆಕ್ ಪೋಸ್ಟ್ ಮೂಲಕ ಕೇರಳಕ್ಕೆ ಕಾರ್ಮಿಕರನ್ನ ಸಾಗಿಸಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಹಾಗಾಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸೇರಿ ಮೂವರುನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಸಂಬಂಧ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಡಿಕೇರಿ: ನಿಯಮ ಉಲ್ಲಂಘಿಸಿ ಕೊಡಗು ಜಿಲ್ಲೆಯಿಂದ ಕೇರಳಕ್ಕೆ ಕಾರ್ಮಿಕರನ್ನ ಕಳುಹಿಸಲು ಯತ್ನಿಸಿದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆ.ಬಾಡಗ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬೋಪಣ್ಣ, ಕೇರಳ ಮೂಲದ ಮಟ್ಟನೈಲ್ ಅನೂಪ್, ಸತ್ಯ ಬಂಧಿತರು.
ವಿರಾಜಪೇಟೆ ತಾಲೂಕಿನ ಕುಟ್ಟದ ಹಳೆ ಚೆಕ್ ಪೋಸ್ಟ್ ಮೂಲಕ ಕೇರಳಕ್ಕೆ ಕಾರ್ಮಿಕರನ್ನ ಸಾಗಿಸಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಹಾಗಾಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸೇರಿ ಮೂವರುನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಸಂಬಂಧ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




