ಫುಟ್​ಪಾತ್​ ಟ್ರಾನ್ಸ್​ಫಾರ್ಮರ್​ಗಳನ್ನು ತೆರವುಗೊಳಿಸಲು ಸಾಧ್ಯವಿಲ್ಲ -BESCOM

| Updated By: ಸಾಧು ಶ್ರೀನಾಥ್​

Updated on: Jan 29, 2021 | 5:52 PM

ಫುಟ್​​ಪಾತ್​​ಗಳ ಮೇಲೆ ಅಳವಡಿಸಲಾಗಿರುವ ಟ್ರಾನ್ಸ್​ಫಾರ್ಮರ್​ಗಳ ತೆರವು ಕೋರಿ ಸಲ್ಲಿಕೆಯಾಗಿದ್ದ PILನ ಇಂದು ಹೈಕೋರ್ಟ್​ ವಿಚಾರಣೆ ನಡೆಸಿತು. ವಿಂಗ್ ಕಮಾಂಡರ್ ಜಿ.ಬಿ.ಅತ್ರಿ ಸಲ್ಲಿಸಿದ್ದ PILನ ವಿಚಾರಣೆ ನಡೆಯಿತು.

ಫುಟ್​ಪಾತ್​ ಟ್ರಾನ್ಸ್​ಫಾರ್ಮರ್​ಗಳನ್ನು ತೆರವುಗೊಳಿಸಲು ಸಾಧ್ಯವಿಲ್ಲ -BESCOM
ಫುಟ್​ಪಾತ್​ ಟ್ರಾನ್ಸ್​ಫಾರ್ಮರ್​ಗಳನ್ನು ತೆರವುಗೊಳಿಸಲು ಸಾಧ್ಯವಿಲ್ಲ -BESCOM
Follow us on

ಬೆಂಗಳೂರು: ಫುಟ್​​ಪಾತ್​​ಗಳ ಮೇಲೆ ಅಳವಡಿಸಲಾಗಿರುವ ಟ್ರಾನ್ಸ್​ಫಾರ್ಮರ್​ಗಳ ತೆರವು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಹೈಕೋರ್ಟ್​ ಇಂದು ವಿಚಾರಣೆ ನಡೆಸಿತು. ವಿಂಗ್ ಕಮಾಂಡರ್ ಜಿ.ಬಿ.ಅತ್ರಿ ಸಲ್ಲಿಸಿದ್ದ PILನ ವಿಚಾರಣೆ ನಡೆಯಿತು.

ವಿಚಾರಣೆ ವೇಳೆ, ಪಾದಚಾರಿಗಳಿಗೆ ತೊಂದರೆಯಾಗದಂತೆ ಟ್ರಾನ್ಸ್​ಫಾರ್ಮರ್​ಗಳನ್ನು ವಿನ್ಯಾಸಗೊಳಿಸಲಾಗಿದೆ. 3,196 ಕಡೆ ಇಂತಹ ಟ್ರಾನ್ಸ್​​ಫಾರ್ಮರ್​ಗಳನ್ನು ಅಳವಡಿಸಲಾಗಿದೆ. ಹೀಗಾಗಿ, ಫುಟ್​ಪಾತ್​ಗಳಿಂದ ಇವುಗಳನ್ನು ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಬೆಸ್ಕಾಂ ಪರ ವಕೀಲ ಹೈಕೋರ್ಟ್​​ಗೆ ಹೇಳಿದ್ದಾರೆ.

ಈ ವೇಳೆ, ಫುಟ್​​ಪಾತ್​​ಗಳಲ್ಲಿ ಟ್ರಾನ್ಸ್​ಫಾರ್ಮರ್ ಅಳವಡಿಸಲು ಅನುಮತಿ ಇದೆಯೇ? ಬಿಬಿಎಂಪಿಯಿಂದ ಬೆಸ್ಕಾಂ ಅನುಮತಿ ಪಡೆದಿದೆಯೇ? ಎಂದು ಪ್ರಶ್ನಿಸಿದ  ಹೈಕೋರ್ಟ್​, ಈ ಬಗ್ಗೆ ಮಾಹಿತಿ ನೀಡಲು ಬೆಸ್ಕಾಂಗೆ ಸೂಚಿಸಿತು.

ಟ್ರಾಫಿಕ್ ಸಿಗ್ನಲ್ ಗೆರೆ ದಾಟಿಲ್ಲವೆಂದು ಸವಾರ ತಕರಾರು ಎತ್ತಿದ್ದಕ್ಕೆ.. ಕೇಂದ್ರ, ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್

Published On - 5:30 pm, Fri, 29 January 21