ಬೆಂಗಳೂರು: ತೈಲ ಬೆಲೆಗಳ ಏರಿಕೆಯಿಂದ ತತ್ತರಿಸಿರುವ ಲಾರಿ ಮಾಲೀಕರು ತಮ್ಮ ಹಲವು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಾಳೆ (ಫೆಬ್ರವರಿ 25) ರಂದು ದೇಶವ್ಯಾಪ್ತಿ ಲಾರಿ ಮುಷ್ಕರ ಘೋಷಿಸಿದ್ದು, ರಾಜ್ಯದ ಲಾರಿ ಮಾಲೀಕರ ಸಂಘ ಲಾರಿ ಮುಷ್ಕರಕ್ಕೆ ಈಗಾಗಲೇ ಬೆಂಬಲ ಘೋಷಿಸಿದೆ. ಇಂದು 11.30ಕ್ಕೆ ಪತ್ರಿಕಾಗೋಷ್ಠಿ ಕರೆದಿರುವ ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್ ಶಣ್ಮುಗಪ್ಪ, ನಾಳೆಯ ಬಂದ್ ಕುರಿತು ಮಾಹಿತಿ ನೀಡಲಿದ್ದಾರೆ. ಈಗಾಗಲೇ ನಾಳೆ ರಾಜ್ಯದಲ್ಲಿ ಲಾರಿಗಳು ರಸ್ತೆಗಿಳಿಯುವುದಿಲ್ಲ ಎಂಬುದಂತೂ ಖಚಿತವಾಗಿದೆ.
ಜಿಎಸ್ಆಟಿ (GST) ವಿರೋಧಿಸಿಯೂ ನಾಳೆ ಬಂದ್
ಜಿಎಸ್ಆಟಿ (GST) ವಿರೋಧಿಸಿ ಆಲ್ ಇಂಡಿಯಾ ಟ್ರೇಡರ್ಸ್ ಸಂಸ್ಥೆಯು ಈ ಮುಂಚೆಯೇ ನಾಳೆಯ ಬಂದ್ಗೆ ಕರೆ ಕೊಟ್ಟಿದ್ದು ಈ ಬಂದ್ಗೆ ರಾಜ್ಯ ಲಾರಿ ಮಾಲೀಕರ ಸಂಘ ಈ ಬಂದ್ಗೆ ಬೆಂಬಲ ಘೋಷಿಸಿದಂತಾಗಿದೆ.
ಮುಷ್ಕರಕ್ಕೆ ರಾಜ್ಯದ ಲಾರಿಗಳು ಸ್ತಬ್ಧಗೊಳ್ಳಲಿದ್ದು, ತಮ್ಮ ವಹಿವಾಟು ಸ್ಥಗಿತಗೊಳಿಸಿ ಬಂದ್ ಮಾಡಲು ಲಾರಿ ಮಾಲೀಕರು ನಿರ್ಧಾರ ಕೈಗೊಂಡಿದ್ದಾರೆ. ಸರ್ಕಾರ ಬೇಡಿಕೆಗಳನ್ನು ಈಡೇರಿಸದಿದ್ದರೆ ಅನಿರ್ದಿಷ್ಟವಾಧಿ ಮುಷ್ಕರಕ್ಕೆ ಚಿಂತನೆ ನಡೆಸಲಾಗಿದೆ. ನಾಳೆ ಬೆಳಗ್ಗೆಯಿಂದ ಲಾರಿ ಸಂಚಾರ ಬಂದ್ ಆಗಲಿದ್ದು, ಲಾರಿ ಸಂಚಾರ ಸ್ಥಗಿತದಿಂದ ಅಗತ್ಯ ವಸ್ತುಗಳ ಪೂರೈಕೆ ವ್ಯತ್ಯಯವಾಗುವ ಎಲ್ಲ ಸಾಧ್ಯತೆಗಳೂ ದಟ್ಟವಾಗಿವೆ. ದೇಶಾದ್ಯಂತ The All India Transporters Welfare Association (AITWA) ಸಂಸ್ಥೆ ಲಾರಿಗಳನ್ನು ರಸ್ತೆಗೆ ಇಳಿಸದಂತೆ ನಿರ್ಧರಿಸಿದೆ. ದೇಶದ ಎಲ್ಲ ರಾಜ್ಯಗಳ ಲಾರಿ ಮಾಲೀಕರ ಸಂಘಗಳೂ The All India Transporters Welfare Association ತಳೆದ ಬಂದ್ ನಿರ್ಧಾರಕ್ಕೆ ಬೆಂಬಲ ಘೋಷಿಸಿವೆ.
ಏಕೆ ಬಂದ್ ನಡೆಸಲಿದ್ದಾರೆ?
ಈಗಾಗಲೇ ತೈಲ ಬೆಲೆಗಳ ದರ ಗಗನ ಮುಟ್ಟಿದೆ. ಪೆಟ್ರೋಲ್ ಬೆಲೆ ಶತಕ ಬಾರಿಸಿದೆ. ಅಲ್ಲದೇ ಲಾರಿಗಳಲ್ಲಿ ಹೆಚ್ಚಾಗಿ ಬಳಸುವ ಡೀಸೆಲ್ ಬೆಲೆ 80 ಮೀರಿದೆ. ಈ ತೈಲ ಬೆಲೆಗಳಲ್ಲಿ ಲಾರಿ ಮಾಲೀಕರು ತಮ್ಮ ವಹಿವಾಟನ್ನು ನಡೆಸುವುದು ದುಸ್ತರವಿದ್ದು ತೈಲ ಬೆಲೆಗಳ ದರ ಇಳಿಕೆ ಮಾಡುವಂತೆ ಬೇಡಿಕೆ ಮುಂದಿರಿಸಿ ದೇಶಾದಾದ್ಯಂತ ಲಾರಿ ಮಾಲೀಕರ ಸಂಘ ಬಂದ್ ಘೋಷಣೆ ಮಾಡಿದೆ.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಫೆಬ್ರವರಿ 26ರಂದು ದೇಶಾದ್ಯಂತ ಧರಣಿ; ಲಾರಿ ಮಾಲೀಕರ ಬೆಂಬಲ
ಜೈ ಕಿಸಾನ್ ಎಂದ ಲಾರಿ ಮಾಲೀಕರು; ಸೆ. 25ರಂದು ಲಾರಿ ಓಡಾಟ ಇರುತ್ತಾ, ಇಲ್ವಾ?