ಬೀದರ್​: ಡ್ರ್ಯಾಗನ್‌ ಫ್ರೂಟ್‌ ಬೆಳೆದು ಯಶಸ್ಸು ಕಂಡ ರೈತ; ಹೇಗೆ, ಯಾವ ತಳಿ? ಇಲ್ಲಿದೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 19, 2023 | 10:14 PM

ಬೀದರ್​ ಜಿಲ್ಲೆಯ ರೈತರು ಒಂದಿಲ್ಲೊಂದು ಸಂಕಷ್ಟಕ್ಕೆ ಸಿಲುಕುತ್ತಲೆ ಇರುತ್ತಾರೆ. ಸದಾ ಸಂಕಷ್ಟದಲ್ಲಿ ಬದುಕು ಸಾಗಿಸುವ ಇಲ್ಲಿನ ರೈತರ ಗೋಳು ಹೇಳತೀರದು. ಜೊತೆಗೆ ಆಗಾಗ ಸಾಲದ ಬಾಧೆಗೆ ನೇಣಿಗೆ ಕೊರಳು ಕೋಡೋ ಇಲ್ಲಿನ ರೈತರ ಗೋಳು ಮಾತ್ರ ಯಾರಿಗೂ ಕೇಳಿಸೋದೆ ಇಲ್ಲ. ಆದ್ರೆ, ಇಲ್ಲೊಬ್ಬ ರೈತ ಇಂಥಹ ಹತ್ತಾರು ಸಮಸ್ಯೆಗಳ ನಡುವೆ ಡ್ರ್ಯಾಗನ್ ಫ್ರೂಟ್ ಬೆಳೆಯುವುದರ ಮೂಲಕ ಸೈ ಎನಿಸಿಕೊಂಡಿದ್ದು, ತಿಂಗಳಿಗೆ ಸಾವಿರಾರು ರೂಪಾಯಿ ಗಳಿಸುವ ನೀರಿಕ್ಷೆಯಲ್ಲಿದ್ದಾನೆ.

ಬೀದರ್​: ಡ್ರ್ಯಾಗನ್‌ ಫ್ರೂಟ್‌ ಬೆಳೆದು ಯಶಸ್ಸು ಕಂಡ ರೈತ; ಹೇಗೆ, ಯಾವ ತಳಿ? ಇಲ್ಲಿದೆ
ಡ್ರ್ಯಾಗನ್‌ ಫ್ರೂಟ್‌
Follow us on

ಬೀದರ್​, ಆ.18: ನಗರದ ಮಂದಕನಳ್ಳಿ ಗ್ರಾಮದ ರಮೇಶ್ ಕಲಕರ್ಣ ಎಂಬವರು ಸುಮಾರು ವರ್ಷಗಳ ಕಾಲ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿದಂತೆ ನಾಲ್ಕು ಎಕರೆಯಷ್ಟು ಜಮೀನನ್ನು ಖರೀಧಿಸಿ ಅದಕ್ಕೆ ಕೆರೆಯ ಮಣ್ಣನ್ನು ತಂದು ಹಾಕಿಸಿ, ವಿದೇಶಿ ಥಳಿಯ ಡ್ರ್ಯಾಗನ್ ಪ್ರೋಟ್(Dragon Fruit)ಬೆಳೆದು ಯಶಸ್ಸು ಕಂಡಿದ್ದಾರೆ. ಸುಮಾರು ಎರಡೂವರೆ ಎಕರೆಯಷ್ಟು ಜಮೀನಿನಲ್ಲಿ ಸುಮಾರು 12 ಸಾವಿರ ರೆಡ್ ತಳಿಯ ಡ್ರ್ಯಾಗನ್ ಸಸಿಗಳನ್ನು ತಂದು ನಾಟಿ ಮಾಡಿದ್ದರು. ಇದಾದ ಒಂದು ವರ್ಷದಲ್ಲಿಯೇ ಮೊದಲ ಸಲ ಹಣ್ಣು ಕೊಡಲು ಆರಂಭಿಸಿದ್ದು, ಆ ಹಣ್ಣನ್ನ ಮಾರಾಟ ಮಾಡದೆ ಗ್ರಾಮಸ್ಥರು, ಸಂಬಂಧಿಕರಿಗೆ ಕೊಡುತ್ತಿದ್ದಾರೆ. ಇನ್ನು ಎರಡನೇ ಕ್ರಾಪ್ ಬಂದ ನಂತರ ಅದನ್ನು ಮಾರಾಟ ಮಾಡಲಾಗುತ್ತದೆಂದು ರೈತ ರಮೇಶ್ ಕುಲಕರ್ಣ ಹೇಳುತ್ತಿದ್ದಾರೆ.

ಒಂದು ಹಣ್ಣು 400 ರಿಂದ 800 ಗ್ರಾಂ ತೂಕ

ಇನ್ನು ಮೊದಲ ಸಲವೇ ಉತ್ತಮವಾಗಿ ಫಸಲು ಬಂದಿದ್ದು, ಒಂದು ಹಣ್ಣು 400 ರಿಂದ 8 ಗ್ರಾಂವರೆಗೆ ತೂಕ ಬರುತ್ತಿದೆ. ಡ್ರ್ಯಾಗನ್ ಹಣ್ಣು ಬಿಳಿ, ಪಿಂಕ್​ಗೆ ಹೋಲಿಸಿದರೆ ಇವರು ಬೆಳೆಸಿರುವ ರೆಡ್ ಡ್ರ್ಯಾಗನ್ ಹಣ್ಣು ಗಾತ್ರದಲ್ಲಿ ಹಾಗೂ ಸ್ವಿಟ್​ನಲ್ಲಿಯೂ ಕೂಡ ತುಂಬಾ ಚೆನ್ನಾಗಿದೆ. ಇವರು ಬೆಳೆಸಿರುವ ಹಣ್ಣುಗಳನ್ನು ಸ್ಥಳೀಯವಾಗಿಯೇ ಕೆಲವು ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದಾರೆ.

ಇದನ್ನೂ ಓದಿ:ರೈತರ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಬರಲಿದೆ ಎಐ ಆ್ಯಪ್; ಸಚಿವ ಚಲುವರಾಯಸ್ವಾಮಿ ಸುಳಿವು

ಜಪಾನ್‌ ದೇಶದ ದೇಶಿ ತಳಿ ಈ ರೆಡ್ ಡ್ರ್ಯಾಗನ್ ಹಣ್ಣು

ಇದು ಮೂಲತಃ ಜಪಾನ್‌ ದೇಶದ ದೇಶದ ತಳಿಯಾಗಿದ್ದು, ಗಡೀ ಜಿಲ್ಲೆ ಬೀದರ್​ನ ಬರಡು ಭೂಮಿಯ ವಾತಾವರಣದಲ್ಲಿ, ಸಾವಯವ ಪದ್ಧತಿಯ ನೆರಳಿನಲ್ಲಿ ಹುಲುಸಾಗಿ ಬೆಳೆದು ಫ‌ಲ ನೀಡುತ್ತಿದೆ. ವಿದೇಶಿ ತಳಿಯಾದರೂ ಅನ್ನದಾತರ ಬದುಕಿಗೆ ಆರ್ಥಿಕತೆಯ ಬಲ ನೀಡಬಲ್ಲುದು ಎಂಬುದನ್ನು ಕೃಷಿಕ ರಮೇಶ್ ಸಾಬೀತುಪಡಿಸುತ್ತಿದ್ದಾರೆ.

ಇವರು ಡ್ರ್ಯಾಗನ್‌ ಪ್ರೂಟ್ ಬೆಳೆದ ರೀತಿ ಇಲ್ಲಿದೆ

ರಮೇಶ್ ಅವರು ಕಂಬದ ಮ್ಯಾಲೆ ಡ್ರ್ಯಾಗನ್‌ ಬೆಳೆದಿದ್ದು, ಕಂಬದಿಂದ ಕಂಬಕ್ಕೆ 7 ಅಡಿ ಅಂತರ. ಜೊತೆಗೆ ಸಾಲಿನಿಂದ ಸಾಲಿಗೆ 10 ಅಡಿ ಅಂತರದಲ್ಲಿ ಸಿಮೆಂಟ್‌ ಕಂಬಗಳನ್ನು ನಿಲ್ಲಿಸಿದ್ದು, ಒಂದು ಸಿಮೆಂಟ್‌ ಕಂಬದ ನಾಲ್ಕು ದಿಕ್ಕಿನಲ್ಲಿ ನಾಲ್ಕು ಡ್ರ್ಯಾಗನ್‌ ಸಸಿಗಳನ್ನು ನೆಟ್ಟಿದ್ದಾರೆ. ಎರಡೂವರೆ ಎಕರೆಗೆ 1 ಸಾವಿರ ಸಿಮೆಂಟ್‌ ಕಂಬಗಳಿದ್ದು, 12 ಸಾವಿರ ಡ್ರ್ಯಾಗನ್‌ ಫ್ರೂಟ್‌ ಸಸಿಗಳನ್ನು ನೆಟ್ಟಿದ್ದಾರೆ. ಅವುಗಳಿಗೆ ಹನಿ ನೀರಾವರಿ ಮೂಲಕ ನೀರು ಸರಬರಾಜು ಮಾಡಿದ್ದು, ಸಂಪೂರ್ಣ ಸಾವಯವದಿಂದಲೇ ಡ್ರ್ಯಾಗನ್‌ ಫ್ರೂಟ್‌ ಬೆಳೆಸಿದ್ದಾರೆ. ಇದರಿಂದ ಉತ್ತಮ ಇಳುವರಿ ಕೂಡ ಬಂದಿದೆ.

ಇದನ್ನೂ ಓದಿ:ಭದ್ರಾ ನೀರು ನಿಲ್ಲಿಸುವ ಪ್ರಶ್ನೆಯೇ ಇಲ್ಲ, ರೈತರು ಆತಂಕ ಪಡಬೇಕಾಗಿಲ್ಲ: ಶಾಸಕ ಬಸವರಾಜು ಶಿವಗಂಗಾ

ಮಹಾರಾಷ್ಟ್ರದಿಂದ ತಂದಿದ್ದ ಹಣ್ಣಿನ ಸಸಿಗಳು

ಮಹಾರಾಷ್ಟ್ರದ ಫಂಡರಪುರದಿಂದ ಕೆಂಪು ಬಣ್ಣದ ಹಣ್ಣಿನ ತಳಿಯ ಡ್ರ್ಯಾಗನ್‌ ಫ್ರೂಟ್‌ ಸಸಿಗಳನ್ನು ತಂದು ನೆಡಲಾಗಿದ್ದು, ಡ್ರ್ಯಾಗನ್‌ ಫ್ರೂಟ್‌ ಸಸಿ 5ರಿಂದ 6 ತಿಂಗಳಲ್ಲಿ ಬರೊಬ್ಬರಿ 6 ಅಡಿ ಎತ್ತರದ ಸಿಮೆಂಟ್‌ ಕಂಬದ ವರೆಗೂ ಪ್ಲೇಟ್‌ಗಳ ತನಕ ಬೆಳೆದು ಗಿಡವಾಗುತ್ತದೆ. ನಂತರ ಪ್ಲೇಟ್‌ನಿಂದ ಕಾರಂಜಿಯಾಕಾರದಲ್ಲಿ ವೃತ್ತಾಕಾರವಾಗಿ ಇಳಿಜಾರಾಗಿ ಬೆಳೆದ ಕಾಂಡದಲ್ಲಿ ಮೊದಲಿಗೆ ಹೂವು ಬಿಟ್ಟ ಬಳಿಕ, ನಂತರ ಡ್ರ್ಯಾಗನ್‌ ಫ್ರೂಟ್‌ ಹಣ್ಣಿನ ಇಳುವರಿ ಬರುತ್ತದೆ.

ಇನ್ನು ಡ್ರ್ಯಾಗನ್‌ ಫ್ರೂಟ್‌ ಬೆಳೆ ಬೆಳೆಯಲು ಖರ್ಚು ಕಡಿಮೆ, ನಿರ್ವಹಣೆಯೂ ಸುಲಭವಾಗಿದೆ ಎಂಥಹ ಭೂಮಿಯಲ್ಲಿಯೂ ಕೂಡ ಇದು ಬೆಳೆಯಬಲ್ಲದ್ದಾಗಿದೆ. ಕಡಿಮೆ ನೀರಿದ್ದರೂ ಸಾಕು ಡ್ರ್ಯಾಗನ್‌ ಫ್ರೂಟ್‌ ಗಿಡವನ್ನು 25 ವರ್ಷಗಳ ಕಾಲ ಬೆಳೆಯಬಹುದು. ಮಳೆಗಾಲದಲ್ಲಿ ನೀರು ಹೆಚ್ಚಾದರೆ ಕೊಳೆ ರೋಗ ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಕೊಂಚಮಟ್ಟಿಗೆ ನಿಗಾ ವಹಿಸಿದರೆ ಸಾಕು ಉತ್ತಮ ಇಳುವರಿ ಪಡೆಯಲು ಸಾಧ್ಯ. ರೈತ ರಮೇಶ್ ಅವರು ಈಗ ಎರಡನೇ ಸಲ ಡ್ರ್ಯಾಗನ್‌ ಫ್ರೂಟ್‌ ಕಟಾವು ಮಾಡಿದ್ದಾರೆ. ಇವರ ಬಳಿಯೇ ಬಂದು ಚಿಕ್ಕಪುಟ್ಟ ವ್ಯಾಪಾರಿಗಳು ಕೇಜಿಗೆ 150 ರೂಪಾಯಿ ಕೊಟ್ಟು ಖರಿಧಿಮಾಡಿಕೊಂಡು ಹೋಗುತ್ತಿದ್ದಾರೆ. ಇವರು ಬೆಳೆಸಿರುವ ಹಣ್ಣು ನೋಡಿ ನಾವು ಕೂಡ ಸೋಯಾ, ಉದ್ದು, ಬೇಳೆಯ ಬದಲಾಗಿ ಏನಾದರೂ ಬೆರೆ ಬೆಳೆಯನ್ನು ಬೆಳೆಯಬೇಕೆಂದು ಬೇರೆ ರೈತರು ಅಂದುಕೊಂಡಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ