Bidar Fort: ಬೀದರ್ ಕೋಟೆ ಮೇಲೆ ಗಿಡ-ಗಂಟಿಗಳ ಆಕ್ರಮಣ; ಕೋಟೆ ಶಿಥಿಲಗೊಳ್ಳುವ ಆತಂಕದಲ್ಲಿ ಜನ

Edited By: ಆಯೇಷಾ ಬಾನು

Updated on: Aug 20, 2023 | 3:11 PM

ಬೀದರ್ ಕೋಟೆಯ ಮೇಲ್ಭಾಗದಲ್ಲಿ ಗಿಡಗಳು ಸಮೃದ್ಧವಾಗಿ ಬೆಳೆದು ನಿಂತು, ಬೇರು ಬಿಟ್ಟಿವೆ. ಇದರಿಂದ ಗೋಡೆ ಬಿರುಕು ಬಿಡುವ ಸಾಧ್ಯತೆ ಹೆಚ್ಚಿದೆ. ಗೋಡೆ ಬಿರುಕು ಬಿಟ್ಟರೆ ಮತ್ತೆ ಅದರ ದುರಸ್ತಿ ಕಾರ್ಯ ಅಸಾಧ್ಯವಾಗಲಿದೆ. ಅಧಿಕಾರಿಗಳು ಎಚ್ಚೆತ್ತುಕೊಳ್ಳುವ ಅಗತ್ಯವಿದ್ದು ಕೂಡಲೆ ಗಿಡಗಳನ್ನ ಕಟ್ ಮಾಡಿ ಎಂದು ಇಲ್ಲಿನ ಜನರು ಮನವಿ ಮಾಡಿದ್ದಾರೆ.

1 / 9
ಬೀದರ್ ಕೋಟೆಯನ್ನ ಪುರಾತತ್ವ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಐತಿಹಾಸಿಕ ಬೀದರ್‌ ಕೋಟೆಯ ಒಂದು ಕಡೆಯ ಬೃಹದಾಕಾರದ ಗೋಡೆಯ ಮೇಲೆ ಗಿಡ- ಗಂಟಿಗಳು ಬೆಳೆದು ನಿಂತಿದ್ದು, ಇಡೀ ಗೋಡೆಯೇ ಶಿಥಿಲಗೊಳ್ಳುವ ಆತಂಕ ಎದುರಾಗಿದೆ.

ಬೀದರ್ ಕೋಟೆಯನ್ನ ಪುರಾತತ್ವ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಐತಿಹಾಸಿಕ ಬೀದರ್‌ ಕೋಟೆಯ ಒಂದು ಕಡೆಯ ಬೃಹದಾಕಾರದ ಗೋಡೆಯ ಮೇಲೆ ಗಿಡ- ಗಂಟಿಗಳು ಬೆಳೆದು ನಿಂತಿದ್ದು, ಇಡೀ ಗೋಡೆಯೇ ಶಿಥಿಲಗೊಳ್ಳುವ ಆತಂಕ ಎದುರಾಗಿದೆ.

2 / 9

ಎತ್ತರದ ಗೋಡೆಯ ಮೇಲ್ಭಾಗದಲ್ಲಿ ಗಿಡಗಳು ಸಮೃದ್ಧವಾಗಿ ಬೆಳೆದು ನಿಂತು, ಬೇರು ಬಿಟ್ಟಿವೆ. ಇದರಿಂದ ಗೋಡೆ ಬಿರುಕು ಬಿಡುವ ಸಾಧ್ಯತೆ ಹೆಚ್ಚಿದೆ.

3 / 9

ಜಿಲ್ಲಾಧಿಕಾರಿ ನಿವಾಸದಿಂದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕಡೆಗೆ ಸಾಗುವ ಮಾರ್ಗದ ಕೋಟೆಯ ಬೃಹತ್‌ ಗೋಡೆಯ ಮೇಲೆ ಗಿಡಗಳು ಹುಲುಸಾಗಿ ಪೊದೆಯಂತೆ ಬೆಳೆದಿದ್ದರಿಂದ ಇಡೀ ಗೋಡೆ ಹಸುರಿನಿಂದ ಕಂಗೊಳಿಸುವಂತಾಗಿದೆ.

4 / 9

ಗಿಡ- ಗಂಟಿಗಳಿಂದ ಐತಿಹಾಸಿಕ ಸ್ಮಾರಕವಾದ ಕೋಟೆ ಸೌಂದರ್ಯಕ್ಕೆ ಧಕ್ಕೆ ಎದುರಾಗುವ ಅಪಾಯವೂ ಇದೆ.

5 / 9

ಗೋಡೆ ಬಿರುಕು ಬಿಟ್ಟರೆ ಮತ್ತೆ ಅದರ ದುರಸ್ತಿ ಕಾರ್ಯ ಅಸಾಧ್ಯವಾಗಲಿದೆ. ಅಧಿಕಾರಿಗಳು ಎಚ್ಚೆತ್ತುಕೊಳ್ಳುವ ಅಗತ್ಯವಿದ್ದು ಕೂಡಲೆ ಗಿಡಗಳನ್ನ ಕಟ್ ಮಾಡಿ ಎಂದು ಇಲ್ಲಿನ ಜನರು ಮನವಿ ಮಾಡುತ್ತಿದ್ದಾರೆ.

6 / 9

ಬೀದರ್ ಕರ್ನಾಟಕದ ಉತ್ತರದ ತುದಿಯಲ್ಲಿರುವ ಕರ್ನಾಟಕದ ಕಿರೀಟ ಎಂದು ಕರೆಯಲ್ಪಡುವ ಜಿಲ್ಲೆ. ಬೀದರ್, ಕೋಟೆ ಮತ್ತು ಗುರುದ್ವಾರಕ್ಕೆ ಹೆಸರುವಾಸಿಯಾಗಿದೆ.

7 / 9

ಬೀದರ್ ಕೋಟೆಯಲ್ಲಿ ಇಸ್ಲಾಮಿಕ್ ಮತ್ತು ಪರ್ಷಿಯನ್ ವಾಸ್ತುಶಿಲ್ಪ, ಮಸೀದಿಗಳು ಮತ್ತು ಮಹಲ್‌ಗಳು, ಮೂವತ್ತಕ್ಕೂ ಹೆಚ್ಚು ಇಸ್ಲಾಮಿಕ್ ಸ್ಮಾರಕಗಳನ್ನು ನೋಡಬಹುದು.

8 / 9

ಬೀದರ್​ಗೆ ರೈಲು, ರಸ್ತೆ ಹಾಗು ವಿಮಾನ ಮಾರ್ಗದ ಮೂಲಕ ಸುಲಭವಾಗಿ ಭೇಟಿ ಕೊಡಬಹುದು. ಬೆಂಗಳೂರಿನಿಂದ ಬೀದರ್​ 690 ಕಿ.ಮೀ ದೂರದಲ್ಲಿದೆ.

9 / 9

ಬೀದರ್​ಗೆ ಅತಿ ಸಮೀಪದ ವಿಮಾನ ನಿಲ್ದಾನವೆಂದರೆ ಹೈದ್ರಾಬಾದ್‍ನ ರಾಜೀವ್‍ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ.

ಸುರೇಶ್ ನಾಯಕ್

ಸುರೇಶ ನಾಯಕ ಮೂಲತಃ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದರು. ಓದಿದ್ದು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009 ರಿಂದ ಅಂದರೆ ಕಳೆದ 16 ವರ್ಷದಿಂದ ದೃಷ್ಯ ಮಾಧ್ಯಮ ಕ್ಷೇತ್ರದಲ್ಲಿದ್ದು ಸಮಯ ಸುದ್ದಿ ವಾಹಿನಿಯ ಇನ್ ಪೂಟ್ ವಿಭಾಗದಲ್ಲಿ, ಜೊತೆಗೆ ಕಸ್ತೂರಿ ಸುದ್ದಿವಾಹಿನಿಯ ಹುಬ್ಬಳ್ಳಿ ವರದಿಗಾರನಾಗಿ ನಾಲ್ಕು ವರ್ಷ ಕೆಲಸ ಮಾಡಿದ ಅನುಭವವಿದೆ. 2014 ಪೆಬ್ರುವರಿ 01 ರಿಂದ ಟಿವಿ9 ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, 10 ವರ್ಷ ಪೂರೈಸಿದ್ದಾರೆ. ಟಿವಿ9 ನ ಆರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ವರದಿಗಾರನಾಗಿ ಸಧ್ಯ ಬೀದರ್ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ, ಮಾನವೀಯ ಕಳಕಳಿಯ ವರದಿ, ರೈತರ ಸಮಸ್ಯೆಗಳ ಕುರಿತು ಹೆಚ್ಚಿನ ಒತ್ತು ಕೊಟ್ಟು ತಮ್ಮ ಸುದ್ದಿಯ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಕಾಡು ಸುತ್ತೋದು, ಸಂಗೀತ ಕೇಳೋದು, ಇವರ ಹವ್ಯಾಸವಾಗಿದೆ...

Read More
Loading...
Unable to load recommendations.
Follow Us