ಕೊಡಗು: ನಿಯಂತ್ರಣ ತಪ್ಪಿ ಪಲ್ಸರ್ ಬೈಕ್ನಿಂದ ಬಿದ್ದ ಹಿಂಬದಿ ಸವಾರ ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ ಗ್ರಾಮದ ಬಳಿ ನಡೆದಿದೆ. ನಲ್ವತೇಕ್ರೆಯ ಮನು(21) ಮೃತ ಬೈಕ್ ಸವಾರ.
ಇನ್ನು, ಬೈಕ್ ಚಾಲನೆ ಮಾಡುತ್ತಿದ್ದ ಎಂ.ಜಿ ಕಾಲೋನಿಯ ವಿಷ್ಣು ಎಂಬ ಯುವಕನಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಆದರೆ, ತಲೆಗೆ ಗಂಭೀರ ಗಾಯವಾಗಿದ್ದ ಮನು ಮೃತಪಟ್ಟಿದ್ದಾನೆ. ಸವಾರರು ನೆಲ್ಯಹುದಿಕೇರಿಯಿಂದ ಸಿದ್ದಾಪುರಕ್ಕೆ ಬೈಕಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಅವಘಡ ಸಂಭವಿಸಿದೆ.
ಕಂಚಿನ ಬಾಗಿಲು ಬಳಿ ಅಗ್ನಿ ದುರಂತ: ನೋಡನೋಡುತ್ತಿದ್ದಂತೆ ಬೀಡಿ ಎಲೆ ತುಂಬಿದ್ದ ಲಾರಿ ಬೆಂಕಿಗಾಹುತಿ
Published On - 8:40 pm, Mon, 1 February 21