ಬೆಂಗಳೂರು: ಡಿಸೆಂಬರ್ 5ರಂದು 15 ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗೆ ಬಿಜೆಪಿ 13 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಬೆಳಗ್ಗೆಯಷ್ಟೇ ಅನರ್ಹ ಶಾಸಕರಿಗೆ ಪಕ್ಷದ ಬಾವುಟ ನೀಡಿ ಬಿಜೆಪಿಗೆ ಬರಮಾಡಿಕೊಳ್ಳಲಾಗಿತ್ತು.
ಈ ಮಧ್ಯೆ ಆರ್.ರೋಷನ್ ಬೇಗ್ ಮತ್ತು ಆರ್.ಶಂಕರ್ ಅವರಿಗೆ ಸದ್ಯಕ್ಕೆ ಟಿಕೆಟ್ ಲಭಿಸಿಲ್ಲ. ಶಿವಾಜಿನಗರದಿಂದ ರೋಷನ್ ಬೇಗ್ ಮತ್ತು , ರಾಣೆಬೆನ್ನೂರು ಕ್ಷೇತ್ರದಿಂದ ಆರ್.ಶಂಕರ್ ಅವರ ಹೆಸರನ್ನು ಹೈಕಮಾಂಡ್ ಘೋಷಿಸಿಲ್ಲ.
15 ಕ್ಷೇತ್ರಗಳಿಗೆ 13 ಅಭ್ಯರ್ಥಿಗಳ ಪಟ್ಟಿ ಹೀಗಿದೆ:
ಅಥಣಿ ವಿಧಾನಸಭಾ ಕ್ಷೇತ್ರ-ಮಹೇಶ್ ಕುಮಟಳ್ಳಿ
ಕಾಗವಾಡ ವಿಧಾನಸಭಾ ಕ್ಷೇತ್ರ-ಶ್ರೀಮಂತಗೌಡ ಪಾಟೀಲ
ಗೋಕಾಕ್ ವಿಧಾನಸಭಾ ಕ್ಷೇತ್ರ-ರಮೇಶ್ ಜಾರಕಿಹೊಳಿ
ಯಲ್ಲಾಪುರ ವಿಧಾನಸಭಾ ಕ್ಷೇತ್ರ-ಶಿವರಾಮ್ ಹೆಬ್ಬಾರ್
ಹಿರೇಕೆರೂರು ವಿಧಾನಸಭಾ ಕ್ಷೇತ್ರ-ಬಿ.ಸಿ.ಪಾಟೀಲ್
ವಿಜಯನಗರ ವಿಧಾನಸಭಾ ಕ್ಷೇತ್ರ-ಆನಂದ್ ಸಿಂಗ್
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ-ಡಾ.ಕೆ.ಸುಧಾಕರ್
ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ-ಭೈರತಿ ಬಸವರಾಜ್
ಯಶವಂತಪುರ ವಿಧಾನಸಭಾ ಕ್ಷೇತ್ರ-ಎಸ್.ಟಿ.ಸೋಮಶೇಖರ್
ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರ-ಕೆ.ಗೋಪಾಲಯ್ಯ
ಹೊಸಕೋಟೆ ವಿಧಾನಸಭಾ ಕ್ಷೇತ್ರ-ಎಂಟಿಬಿ ನಾಗರಾಜ್
ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರ-ಕೆ.ಸಿ.ನಾರಾಯಣಗೌಡ
ಹುಣಸೂರು ವಿಧಾನಸಭಾ ಕ್ಷೇತ್ರ-ಹೆಚ್.ವಿಶ್ವನಾಥ್
Published On - 2:45 pm, Thu, 14 November 19