ತವರಿನಿಂದ ವಾಪಸ್ ಬಾರದ ಪತ್ನಿ! ಪತಿರಾಯ ಆತ್ಮಹತ್ಯೆ ಮಾಡ್ಕೊಂಡ್ಬಿಟ್ಟ..
ಹುಬ್ಬಳ್ಳಿ: ತವರಿಂದ ಪತ್ನಿ ವಾಪಸ್ ಬಾರದ ಕಾರಣ ಮನನೊಂದು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. 31 ವರ್ಷದ ಹಬೀಬ್ ಮುಲ್ಲಾ ಅತ್ಮಹತ್ಯೆ ಮಾಡಿಕೊಂಡ ದುರ್ದೈವಿ. ದಾವಣಗೆರೆ ಮೂಲದ ಹಬೀಬ್ ಹುಬ್ಬಳ್ಳಿಯ ರೈಲ್ವೆಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದರು. ಕಳೆದ 15 ದಿನಗಳ ಹಿಂದೆ ಪತಿ ಪತ್ನಿಯ ನಡುವೆ ಜಗಳವಾಗಿದೆ. ಪತ್ನಿ ತಸ್ಮಿಯಾ ಕೋಪಿಸಿಕೊಂಡು ತನ್ನ ಎರಡು ಮುದ್ದಾದ ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದಾಳೆ. ಪತಿ ಹಬೀಬ್ ಎಷ್ಟೇ ಕರೆದ್ರು ಬಂದಿಲ್ಲ. 15 ದಿನಗಳಿಂದಲೂ ಸಮಸ್ಯೆ ಬಗೆಹರಿಸಲು ಹಬೀಬ್ […]
ಹುಬ್ಬಳ್ಳಿ: ತವರಿಂದ ಪತ್ನಿ ವಾಪಸ್ ಬಾರದ ಕಾರಣ ಮನನೊಂದು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
31 ವರ್ಷದ ಹಬೀಬ್ ಮುಲ್ಲಾ ಅತ್ಮಹತ್ಯೆ ಮಾಡಿಕೊಂಡ ದುರ್ದೈವಿ. ದಾವಣಗೆರೆ ಮೂಲದ ಹಬೀಬ್ ಹುಬ್ಬಳ್ಳಿಯ ರೈಲ್ವೆಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದರು. ಕಳೆದ 15 ದಿನಗಳ ಹಿಂದೆ ಪತಿ ಪತ್ನಿಯ ನಡುವೆ ಜಗಳವಾಗಿದೆ. ಪತ್ನಿ ತಸ್ಮಿಯಾ ಕೋಪಿಸಿಕೊಂಡು ತನ್ನ ಎರಡು ಮುದ್ದಾದ ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದಾಳೆ. ಪತಿ ಹಬೀಬ್ ಎಷ್ಟೇ ಕರೆದ್ರು ಬಂದಿಲ್ಲ. 15 ದಿನಗಳಿಂದಲೂ ಸಮಸ್ಯೆ ಬಗೆಹರಿಸಲು ಹಬೀಬ್ ಪರದಾಡಿದ್ದಾನೆ.
ಕೊನೆಗೆ ಮನನೊಂದು ಕಾರವಾರ ರಸ್ತೆಯ ರೈಲ್ವೆ ಕ್ವಾಟಸ್೯ನಲ್ಲಿದ್ದ ತನ್ನ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾನೆ. ವಿಷಯ ತಿಳಿದ ನಂತರ ಪತ್ನಿ ಮನೆಗೆ ಧಾವಿಸಿದ್ದಾಳೆ. ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಪ್ರಕರಣ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Published On - 3:29 pm, Thu, 14 November 19